ಈ ಫೋನ್‌ ನೋಡಿದ್ರೆ ನಿಮಗೇನನಿಸುತ್ತೆ?; ಫೀಚರ್ಸ್‌, ಬೆಲೆ ಬಗ್ಗೆ ತಿಳಿದುಕೊಳ್ಳಿ!

|

ಆಪಲ್‌ ಸಂಸ್ಥೆಯ ಯಾವುದೇ ಡಿವೈಸ್‌ಗಳು ಯಾವಾಗಲೂ ಸಹ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ಸಹಜ. ಹಾಗೆಯೇ ಐಫೋನ್‌ಗಳಿಗೆ ಈ ಕ್ಷಣಕ್ಕೂ ಎಲ್ಲಿಲ್ಲದ ಬೇಡಿಕೆ ಇದೆ. ಇದರ ನಡುವೆ ಕೆಲವು ದಿನಗಳ ಹಿಂದಷ್ಟೇ ನಕಲಿ ಐಫೋನ್‌ಗಳ ಸಂಬಂಧ ಭಾರೀ ಸುದ್ದಿ ಹರಿದಾಡುತ್ತಿದ್ದದ್ದು ಬಹುಪಾಲು ಮಂದಿಗೆ ತಿಳಿದಿರುವ ವಿಷಯ. ಇದರ ಹೊರತಾಗಿ ಐಫೋನ್‌ಗೆ ಪೈಪೋಟಿ ನೀಡಲು ಹೊಸ ಮೊಬೈಲ್‌ ಮಾರುಕಟ್ಟೆಗೆ ಕಾಲಿಟ್ಟಿದೆ.

ದೇಶ

ಹೌದು, ಜಗತ್ತಿನಲ್ಲಿ ಎಲ್ಲಾ ದೇಶಗಳು ಒಂದು ರೀತಿಯಾದರೆ ಚೀನಾ ಮಾತ್ರ ವಿಶಿಷ್ಟವಾಗಿರುತ್ತದೆ. ಅಂದರೆ, ಯಾವುದೇ ಗ್ಯಾಜೆಟ್‌ ಅನ್ನು ನಕಲು ಮಾಡುವ ಸಾಮರ್ಥ್ಯ ಚೀನಿಯರಿಗೆ ಇದೆ. ಅದರಲ್ಲೂ ಚಂದ್ರನನ್ನೇ ನಕಲು ಮಾಡಲು ಮುಂದಾಗಿರುವ ಇವರಿಗೆ ಯಾವುದೇ ಮೊಬೈಲ್‌ ಅನ್ನು ಅದೇ ರೀತಿ ನಕಲು ಮಾಡುವುದು ದೊಡ್ಡ ಕೆಲಸವೇನಲ್ಲ. ಇದಕ್ಕಾಗಿಯೇ ಈಗ ಆಪಲ್‌ ಶೈಲಿಯಲ್ಲಿಯೇ ವಿಶೇಷವಾದ ಫೋನ್‌ ಅನ್ನು ಲಾಂಚ್ ಮಾಡಲಾಗಿದೆ.

ಐಫೋನ್‌

ಐಫೋನ್‌ ಕೆಲವು ದಿನಗಳ ಹಿಂದಷ್ಟೇ ಐಫೋನ್‌ 14 ಪ್ರೊ ಮತ್ತು 14 ಪ್ರೊ ಮ್ಯಾಕ್ಸ್ ಸದ್ಯಕ್ಕೆ ಆಪಲ್‌ ಪ್ರಿಯರ ನೆಚ್ಚಿನ ಫೋನ್‌ಗಳಾಗಿದ್ದು, ಈ ಫೋನ್‌ಗಳನ್ನೇ ಹೋಲುವ ಫೋನ್‌ ಒಂದನ್ನು ಲಾಂಚ್‌ ಮಾಡಲಾಗಿದೆ. ಹಾಗಿದ್ರೆ ಯಾವುದು ಆ ಫೋನ್‌?, ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

LeEco ಬ್ರ್ಯಾಂಡ್‌

LeEco ಬ್ರ್ಯಾಂಡ್‌

ಅಗ್ಗದ ದರದಲ್ಲಿ ಐಫೋನ್‌ ಅನುಭವವನ್ನು ನೀಡುವ ಉದ್ದೇಶದಿಂದ LeEco ಸಂಸ್ಥೆಯು ಹೊಸ ಫೋನ್‌ ಅನ್ನು ಅನಾವರಣ ಮಾಡಲಾಗಿದ್ದು, ಈ ಫೋನ್‌ಗೆ LeEco S1 ಪ್ರೊ ಸ್ಮಾರ್ಟ್‌ಫೋನ್ ಎಂದು ಹೆಸರಿಡಲಾಗಿದೆ. ಹಾಗೆಯೇ ಈ ವಿಶೇಷ ಫೋನ್‌ ಐಫೋನ್ 14 ಪ್ರೊ ಶೈಲಿಯನ್ನೇ ಹೋಲಲಿದ್ದು, ಆಪಲ್‌ಗೆ ಒಂದು ಬದಿಯಿಂದ ತಲೆನೋವು ಶುರುವಾಗಿದೆ ಎಂದೇ ಹೇಳಬಹುದು.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಹೊಸ ಸ್ಮಾರ್ಟ್‌ಫೋನ್‌ 6.5 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 720x1600px ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ 60Hz ರಿಫ್ರೆಶ್‌ ರೇಟ್‌ ನೀಡುತ್ತಿರುವುದು ವಿಶೇಷವಾಗಿದೆ. ಅದೇ ರೀತಿ ಆಪಲ್‌ ಐಫೋನ್‌ 14 ಪ್ರೊ ಫೋನ್ 6.1 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಈ ಫೋನ್ 4K ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 120Hz ರಿಫ್ರೆಶ್ ರೇಟ್‌ ನೀಡಲಾಗಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಈ ಹೊಸ ಫೋನ್ 12nm ಜ್ಹಂರುಯ್ (Zhanrui) T7510 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, 8GB RAM ಮತ್ತು 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಲಭ್ಯ ಇರಲಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಪ್ರಮುಖವಾಗಿ ಈ ಕ್ಯಾಮೆರಾ ರಚನೆ ಮಾತ್ರ ನಿಜವಾದ ಆಪಲ್‌ ಫೋನ್‌ನಲ್ಲಿರುವಂತೆಯೇ ಗೋಚರಿಸುತ್ತದೆ. ಆಪಲ್‌ನಲ್ಲಿ ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಹಲವು ರೀತಿಯ ಫೀಚರ್ಸ್‌ ಹೊಂದಿದ್ದು, ಈ ಹೊಸ ಫೋನ್‌ ಟ್ರಿಪಲ್‌ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸರ್‌ ಅನ್ನು ಪಡೆದುಕೊಂಡಿದೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಈ LeEco S1 ಪ್ರೊ ಫೋನ್ 10W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಆದರೆ ಆಪಲ್‌ 14 ಪ್ರೊ ಫೋನ್‌ 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

LeEco S1 ಪ್ರೊ ಫೋನ್ ಗೆ CNY 899 (ಸುಮಾರು 10,900 ರೂ.) ಬೆಲೆ ನಿಗದಿ ಮಾಡಲಾಗಿದೆ. ಇದರಲ್ಲಿ ಗಮನಿಸಬೇಕಾದ ಅಂಶ ಎಂದರೆ ಥೇಟ್‌ ಆಪಲ್‌ ಫೋನ್‌ನಂತೆ ಕಾಣಿಸುವ ಈ ಫೋನ್‌ನ ಬೆಲೆ 10,900 ರೂ.ಗಳಾದರೆ ಐಫೋನ್‌ 14 ಪ್ರೊ ಬೆಲೆ 1,29,900 ರೂ. ಇದೆ . ಅಂದರೆ ಅಗ್ಗದ ದರದಲ್ಲಿ ನೀವು ಐಫೋನ್‌ ಶೈಲಿಯ ಫೋನ್‌ ಅನ್ನು ಬಳಕೆ ಮಾಡಬಹುದಾಗಿದೆ.

Best Mobiles in India

English summary
LeEco S1 Pro Looks Like iPhone 14 Pro launched in china.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X