ಭಾರತದಲ್ಲಿ ಲೆನೊವೊ ಯೋಗ 9i ಲ್ಯಾಪ್‌ಟಾಪ್‌ ಲಾಂಚ್‌; 13ನೇ ಜನ್ ಇಂಟೆಲ್ CPU ಆಯ್ಕೆ!

|

ಲೆನೊವೊ ಇತ್ತೀಚೆಗಂತೂ ತನ್ನ ವಿಶೇಷವಾದ ಡಿವೈಸ್‌ಗಳನ್ನು ಅನಾವರಣ ಮಾಡುವ ಮೂಲಕ ಇಡೀ ಟೆಕ್‌ ವಲಯವನ್ನು ನಿಬ್ಬೆರಗಾಗುವಂತೆ ಮಾಡುತ್ತಿದೆ. ಇದರ ಭಾಗವಾಗಿಯೇ ವಿವಿಧ ಶೈಲಿಯ ಲ್ಯಾಪ್‌ಟಾಪ್‌ ಹಾಗೂ ಇನ್ನಿತರೆ ಸ್ಮಾರ್ಟ್‌ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ಹೊಸ ಲ್ಯಾಪ್‌ಟಾಪ್‌ ಟೆಕ್‌ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಮುಂದಾಗಿದೆ. ಈ ಲ್ಯಾಪ್‌ಟಾಪ್‌ 13 ನೇ ಜನ್‌ ಇಂಟೆಲ್‌ ಸಿಪಿಯು ನೊಂದಿಗೆ ಕಾರ್ಯನಿರ್ವಹಿಸುವ ಮೊದಲ ಡಿವೈಸ್‌ ಆಗಿರುವುದು ವಿಶೇಷ.

ಭಾರತದಲ್ಲಿ ಲೆನೊವೊ ಯೋಗ 9i ಲ್ಯಾಪ್‌ಟಾಪ್‌ ಲಾಂಚ್‌; 13ನೇ ಜನ್ ಇಂಟೆಲ್ CPU ಆಯ್ಕೆ

ಹೌದು, ಲೆನೊವೊ ಭಾರತದಲ್ಲಿ ಮೊದಲ 13 ನೇ ಜನ್‌ ಇಂಟೆಲ್‌ ಲ್ಯಾಪ್‌ಟಾಪ್ ಅನ್ನು ಅಧಿಕೃತವಾಗಿ ಲಾಂಚ್‌ ಮಾಡಿದ್ದು, ಇದಕ್ಕೆ ಲೆನೊವೊ ಯೋಗ 9i (Lenovo Yoga 9i) ಎಂದು ಹೆಸರಿಡಲಾಗಿದೆ. ಈ ಲ್ಯಾಪ್‌ಟಾಪ್ OLED ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ವೈ-ಫೈ 6E, ಥಂಡರ್ಬೋಲ್ಟ್ 4 ಹಾಗೂ ಪ್ರೀಮಿಯಂ ಬಿಲ್ಡ್ ಕ್ವಾಲಿಟಿ ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಏನು? ಭಾರತದಲ್ಲಿ ಈ ಡಿವೈಸ್‌ನ ಬೆಲೆ ಏನು? ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಡಿಸ್‌ಪ್ಲೇ ವಿವರ
ಯೋಗ 9i 10 ಪಾಯಿಂಟ್ ಮಲ್ಟಿ ಟಚ್ ಸಪೋರ್ಟ್‌ನೊಂದಿಗೆ 14 ಇಂಚಿನ 4K OLED ಪ್ಯೂರ್‌ಸೈಟ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ HDR 500 ಮತ್ತು ಡಾಲ್ಬಿ ವಿಷನ್ ಜೊತೆಗೆ 100 ಪ್ರತಿಶತ DCI-P3 ಬಣ್ಣದ ಕವರೇಜ್ ಅನ್ನು ನೀಡುತ್ತಿರುವುದು ವಿಶೇಷ.

ಭಾರತದಲ್ಲಿ ಲೆನೊವೊ ಯೋಗ 9i ಲ್ಯಾಪ್‌ಟಾಪ್‌ ಲಾಂಚ್‌; 13ನೇ ಜನ್ ಇಂಟೆಲ್ CPU ಆಯ್ಕೆ

ಪ್ರೊಸೆಸರ್‌ ವಿವರ
ಲೆನೊವೊ ಯೋಗ 9i ನಾಲ್ಕು ಕಾರ್ಯಕ್ಷಮತೆ (P) ಕೋರ್‌ಗಳು ಮತ್ತು ಎಂಟು ದಕ್ಷತೆ (E) ಕೋರ್‌ಗಳೊಂದಿಗೆ 13 ನೇ ಜನ್ ಇಂಟೆಲ್‌ ಕೋರ್‌ i7-1360P ಸಿಪಿಯುನಿಂದ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಸಂಯೋಜಿತ ಇಂಟೆಲ್‌ ಐರಿಸ್‌ ಎಕ್ಸ್‌ಇ ಗ್ರಾಫಿಕ್ಸ್ ಅನ್ನು ಈ ಪ್ರೊಸೆಸರ್ ಪಡೆದುಕೊಂಡಿದೆ ಮತ್ತು 16GB RAM ಮತ್ತು 1TB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಈ ಲ್ಯಾಪ್‌ಟಾಪ್‌ನಲ್ಲಿದೆ.

ಬ್ಯಾಟರಿ ಹಾಗೂ ಇತರೆ ಫೀಚರ್ಸ್‌
ಈ ಡಿವೈಸ್‌ನ ಬ್ಯಾಟರಿಯನ್ನು ಒಂದು ಬಾರಿ ಪೂರ್ಣ ಚಾರ್ಜ್‌ ಮಾಡಿದರೆ ಬರೋಬ್ಬರಿ 12 ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಈ ಲ್ಯಾಪ್‌ಟಾಪ್‌ 100W ಯುಎಸ್‌ಬಿ ಟೈಪ್‌ ಸಿ ಚಾರ್ಜಿಂಗ್ ಅಡಾಪ್ಟರ್‌ನೊಂದಿಗೆ ಪ್ಯಾಕ್‌ ಆಗಿದೆ.

ಇನ್ನು ಈ ಯೋಗ ಲ್ಯಾಪ್‌ಟಾಪ್ ಬ್ಯಾಕ್‌ಲಿಟ್ ಕೀಬೋರ್ಡ್, ToF ಸೆನ್ಸರ್‌ 1080p IR ವೆಬ್‌ಕ್ಯಾಮ್, ಗೌಪ್ಯತೆ ಕ್ಯಾಮೆರಾ ಶಟರ್ ಮತ್ತು ಪ್ರಿಸಿಶನ್ ಪೆನ್‌ ಪೆನ್ 2 ಆಯ್ಕೆ ಪಡೆದುಕೊಂಡಿದ್ದು, ಒಟ್ಟಾರೆಯಾಗಿ 15.25mm ದಪ್ಪ ಇದ್ದು, ಈ ಮೂಲಕ 1.4 ಕೆಜಿ ತೂಕ ಹೊಂದಿದೆ. ಹಾಗೆಯೇ ಇದರ ಬಾಡಿ ಅಲ್ಯೂಮಿನಿಯಂನಿಂದ ಕೂಡಿದ್ದು, ಪ್ರೀಮಿಯಂ ನೋಟದೊಂದಿಗೆ ಹೆಚ್ಚು ರಕ್ಷಣಾತ್ಮಕವಾಗಿದೆ.

ಡಾಲ್ಬಿ ಅಟ್ಮಾಸ್ ಬೆಂಬಲ
ಇದಿಷ್ಟೇ ಅಲ್ಲದೆ, ಈ ಯೋಗ 9i ನಲ್ಲಿರುವ ಆಡಿಯೋ ಬೋವರ್ಸ್ ಮತ್ತು ವಿಲ್ಕಿನ್ಸ್ ಸ್ಪೀಕರ್‌ಗಳಿಂದ ಚಾಲಿತವಾಗಲಿದ್ದು, ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಪಡೆದುಕೊಂಡಿದೆ. ಈ ಮೂಲಕ ಚಲನಚಿತ್ರ ಅಥವಾ ಇತರೆ ವಿಡಿಯೋಗಳನ್ನು ವೀಕ್ಷಣೆ ಮಾಡುವಾಗ ಉತ್ತಮ ಅನುಭವ ಪಡೆದುಕೊಳ್ಳಬಹುದು.

ಭಾರತದಲ್ಲಿ ಲೆನೊವೊ ಯೋಗ 9i ಲ್ಯಾಪ್‌ಟಾಪ್‌ ಲಾಂಚ್‌; 13ನೇ ಜನ್ ಇಂಟೆಲ್ CPU ಆಯ್ಕೆ

ಬೆಲೆ ಹಾಗೂ ಲಭ್ಯತೆ
ಭಾರತದಲ್ಲಿ ಲೆನೊವೊ ಯೋಗ 9i ಲ್ಯಾಪ್‌ಟಾಪ್‌ಗೆ 1,74,990 ರೂ.ಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಈ ಲ್ಯಾಪ್‌ಟಾಪ್‌ ಓಟ್‌ಮೀಲ್ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.ಇನ್ನು ಪ್ರೀ ಬುಕ್ಕಿಂಗ್‌ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಜನವರಿ 29 ರಿಂದ ಲೆನೊವೊ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು, ಅಮೆಜಾನ್‌, ಕ್ರೋಮಾ ಹಾಗೂ ರಿಲಯನ್ಸ್‌ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Lenovo Yoga 9i laptop launched in India is the first laptop to get 13th Gen Intel CPU. Information about Lenovo Yoga 9i has been given in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X