ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

By Ashwath
|

ಸ್ಯಾಮ್‌ಸಂಗ್‌‌,ಗೂಗಲ್‌,ಎಲ್‌‌ಜಿ ಕಂಪೆನಿಗಳು ವೇರಬಲ್‌ ಗ್ಯಾಜೆಟ್‌ಗಳನ್ನು ತಯಾರಿಸಿ ಬಿಡುಗಡೆ ಮಾಡಿದ ಮೇಲೆ ಈಗ ಆಪಲ್‌ ಕಂಪೆನಿ ಸಹ ವೇರಬಲ್‌ ಗ್ಯಾಜೆಟ್‌ ತಯಾರಿಸಲು ಆಸಕ್ತಿ ತೋರಿಸಲಾರಂಭಿಸಿದೆ.

ಆಪಲ್‌ ಐವಾಚ್‌ ತಯಾರಿಸುತ್ತದೆ ಎನ್ನುವುದು ಬಹಳ ಹಳೇಯ ಸುದ್ದಿ.ಕಳೆದ ವರ್ಷವೇ ಈ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು ಮತ್ತು ಕೆಲವೊಂದು ವೆಬ್‌‌ಸೈಟ್‌‌ಗಳು ಐ ವಾಚ್‌ ಕಲ್ಪನೆಯ ಚಿತ್ರವನ್ನು ಸಹ ಪ್ರಕಟಿಸಿತ್ತು. ಆದರೆ ಈಗ ಆಪಲ್‌‌ ಐ ವಾಚ್‌ ನಿರ್ಮಾ‌ಣಕ್ಕೆ ತೊಡಗಿದ್ದು ಇದರ ಉತ್ಪದನಾ ಗುತ್ತಿಗೆಯನ್ನು ಎಲ್‌ಜಿ ಕಂಪೆನಿಗೆ ನೀಡಿದೆ ಎಂದು ವಿದೇಶಿ ಟೆಕ್‌ ಮಾಧ್ಯಮಗಳು ವರದಿ ಮಾಡಿವೆ.

ಆಪಲ್‌ ಎಲ್‌ಜಿ ಕಂಪೆನಿಗೆ ಉತ್ಪದನಾ ಗುತ್ತಿಗೆಯನ್ನು ನೀಡುವುದಕ್ಕೂ ಒಂದು ಕಾರಣವಿದೆ. ಎಲ್‌ಜಿ ಕಳೆದ ನವೆಂಬರ್‌‌ನಲ್ಲಿ ತನ್ನ ನೂತನ ವಕ್ರ ಸ್ಮಾರ್ಟ್‌‌ಫೋನ್‌ ಎಲ್‌ಜಿ ಜಿ ಫ್ಲೆಕ್ಸ್‌ನ್ನು ಬಿಡುಗಡೆ ಮಾಡಿತ್ತು.ಇದು ಎಲ್‌‌ಜಿಯ ಪ್ರಥಮ ವಕ್ರ ಸ್ಮಾರ್ಟ್‌‌ಫೋನ್‌ ಎಂಬ ಕಾರಣಕ್ಕೆ ಸುದ್ದಿಯಾಗುವುದರ ಜೊತೆಗೆ ಇದರ ಹಾರ್ಡ್‌ವೇರ್‌ ವಿಶೇಷತೆಯಿಂದಾಗಿ ಸುದ್ದಿಯಾಗಿತ್ತು. ಬಹುತೇಕ ಸ್ಮಾರ್ಟ್‌ಫೋನ್‌ ಕವರ್‌ ಹಿಂದೆ ಗೀರುಗಳಾಗುತ್ತದೆ.ನೀವು ಈ ಹಿಂದೆ ವಿಡಿಯೋ ವೀಕ್ಷಿಸಿರಬಹುದು ಈ ಸ್ಮಾರ್ಟ್‌‌ಫೋನಲ್ಲಿ ಹಿಂದೆ ಗೀರುಗಳಾದ್ರೂ ಎರಡೇ ನಿಮಿಷದಲ್ಲಿ ಮರೆಯಾಗುತ್ತದೆ. Self Healing & Durability ತಂತ್ರಜ್ಞಾನದಿಂದ ತಯಾರಾದ ಹೊಸ ದೇಹದ ಕವರ್‌ನ್ನು ಎಲ್‌ಜಿ ಈ ಸ್ಮಾರ್ಟ್‌ಫೋನಿಗಾಗಿ ಅಭಿವೃದ್ಧಿ ಪಡಿಸಿದೆ.ಆಪಲ್‌ ಈ ಸ್ಮಾರ್ಟ್‌‌ಫೋನ್‌ ಹಾರ್ಡ್‌ವೇರ್‌ ವಿಶೇಷತೆಯನ್ನು ಗಮನಿಸಿ ಎಲ್‌ಜಿ ಕಂಪೆನಿಗೆ ಗುತ್ತಿಗೆ ನೀಡಿದೆ ಎಂದು ಹೇಳಲಾಗುತ್ತಿದೆ.

ಆಪಲ್‌ ತನ್ನ ಐವಾಚ್‌ ಉತ್ಪಾದನೆಗಾಗಿ ಬೇರೆ ಬೇರೆ ಕಂಪೆನಿಗಳ ಉತ್ಪನ್ನವನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಿತ್ತು. ಈ ಪರೀಕ್ಷೆಯಲ್ಲಿ ಜಿ ಫ್ಲೆಕ್ಸ್‌ನ ಹಾರ್ಡ್‌ವೇರ್‌ ವಿಶೇಷತೆ ಆಪಲ್‌ ತಂತ್ರಜ್ಞನರಿಗೆ ಮೆಚ್ಚುಗೆಯಾಗಿ ಎಲ್‌ಜಿಗೆ ಸ್ಮಾರ್ಟ್‌ವಾಚ್‌ನ್ನು ತಯಾರಿಸಲು ಗುತ್ತಿಗೆ ನೀಡಿದೆ.ಈ ಹಿಂದೆ ಎಲ್‌ಜಿ ಕಂಪೆನಿಗೆ ಜಿ ಫ್ಲೆಕ್ಸ್‌ನಂತಿರುವ ಡಿಸ್ಪ್ಲೇ ಪ್ಯಾನೆಲ್‌ನ್ನು ತಯಾರಿಸಲು ಆಪಲ್‌‌ ಗುತ್ತಿಗೆ ನೀಡಿತ್ತು.ಈಗ ಇದರ ಸಂಪೂರ್ಣ‌ ಉತ್ಪಾದನೆಯ ಗುತ್ತಿಗೆಯನ್ನು ನೀಡಿದೆ ಎಂದು ಕೋರಿಯನ್ ಮಾಧ್ಯಮಗಳು ವರದಿ ಮಾಡಿದೆ.

ಐ ವಾಚ್‌ ಈ ವರ್ಷದ ಜು ಲೈ ಸೆಪ್ಟೆಂಬರ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಆಪಲ್‌‌ ಎಲ್‌ಜಿ ಕಂಪೆನಿಗೆ ಗುತ್ತಿಗೆ ನೀಡಿದ ಸುದ್ದಿಯೊಂದಿಗೆ ಈಗ ಹೊಸ ಐವಾಚ್‌ಗೆ ಸಂಬಂಧಿಸಿದಂತೆ ಕೆಲವು ಚಿತ್ರ,ವಿಡಿಯೋಗಳನ್ನು ಪ್ರಕಟಗೊಂಡಿದೆ. ಆ ಚಿತ್ರಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ಯಾಕೆ ನಿಮಗೆ ಯುಸಿ ಬ್ರೌಸರ್‌ ಇಷ್ಟ..? ವಿಶೇಷತೆ ತಿಳಿಸಿ ಗೂಗಲ್‌ ನೆಕ್ಸಸ್‌5 ಸ್ಮಾರ್ಟ್‌ಫೋನ್‌ ಗೆಲ್ಲಿ..

ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

ಆಪಲ್‌ ಐವಾಚ್‌ ಮಾದರಿ

ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

ಆಪಲ್‌ ಐವಾಚ್‌ ಹೋಮ್‌ ಸ್ಕ್ರೀನ್

ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

ಆಪಲ್‌ ಐವಾಚ್‌ ಫಿಟ್‌ನೆಸ್‌ ಆಪ್‌

ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

ಆಪಲ್‌ ಐವಾಚ್‌ ಅನ್‌ಲಾಕ್‌ ಸ್ಕ್ರೀನ್

ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

ಆಪಲ್‌ ಐವಾಚ್‌ ಮಾದರಿ

ಆಪಲ್‌ ಐವಾಚ್‌ ತಯಾರಿಸುವುದು ಎಲ್‌ಜಿ ಕಂಪೆನಿಯಂತೆ!

ವಿಡಿಯೋ ವೀಕ್ಷಿಸಿ

photo curtsy:toddham.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X