ಲೈಫೈಯಿಂದ ಲೈಫೇ ಬೇರೆ: ಮೂಲೆಗುಂಪಾದ ವೈಫೈ

By Shwetha
|

ವೈಫೈಗೆ ಪರ್ಯಾಪ್ತವಾಗಿ ಲೈಫೈ ಆಗಮನವಾಗುತ್ತಿದ್ದು, 1ಜಿಬಿಗಿಂತಲೂ ಹೆಚ್ಚಿನ ಡೇಟಾವನ್ನು ಕಳುಹಿಸುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ ಎಂಬುದಾಗಿ ಪತ್ತೆಯಾಗಿದೆ. ಪ್ರಸ್ತುತ ವೈಫೈ ತಂತ್ರಜ್ಞಾನಕ್ಕಿಂತಲೂ 100 ಪಟ್ಟು ವೇಗವಾಗಿರುವ ಲೈಫೈಯಿಂದ ಹೆಚ್ಚು ಡೆಫಿನೇಶನ್ ಚಿತ್ರಗಳನ್ನು ಸೆಕೆಂಡ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಓದಿರಿ: ವೈಫೈ ಬದಲಾಗಿ ಲೈಫೈ : ಸೆಕೆಂಡಿಗೆ 224ಜಿಬಿ ವೇಗ

ಹಾಗಿದ್ದರೆ ಇಂದಿನ ಲೇಖನದಲ್ಲಿ ಲೈಫೈ ಕುರಿತ ಸಮಗ್ರ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದು ವೈಫೈಯನ್ನು ಹಿಂದಿಕ್ಕಿರುವ ಇದರ ಸಾಮರ್ಥ್ಯವೇನು ಎಂಬುದನ್ನು ನಾವು ತಿಳಿಸಿಕೊಡಲಿದ್ದೇವೆ.

ಗಾಳಿಯ ಮೂಲಕ ಮಾಹಿತಿ

ಗಾಳಿಯ ಮೂಲಕ ಮಾಹಿತಿ

ಗಾಳಿಯ ಮೂಲಕ ಮಾಹಿತಿಯನ್ನು ಬೀಮ್ ಮಾಡಲು ಲೈಫೈ ಬೆಳಕನ್ನು ಬಳಸಿಕೊಳ್ಳುತ್ತದೆ. ಹೆಚ್ಚುವರಿ ವೇಗದಲ್ಲಿ ಫೈಬರ್ ಆಪ್ಟಿಕಲ್ ನೆಟ್‌ವರ್ಕ್‌ಗಳ ಮೂಲಕ ಡೇಟಾವನ್ನು ವರ್ಗಾಯಿಸಲು ಬೆಳಕನ್ನು ಈಗಾಗಲೇ ಬಳಸಿಕೊಳ್ಳಲಾಗುತ್ತಿದೆ. ಒಟ್ಟು ಇಂಟರ್ನಲ್ ರಿಫ್ಲೆಕ್ಶನ್ ಬಳಸಿಕೊಂಡು, ಆಪ್ಟಿಕಲ್ ಫೈಬರ್ ಮೂಲಕ ಬೆಳಕನ್ನು ಮಾರ್ಗದರ್ಶನ ಮಾಡುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ.

ಮಾಹಿತಿಯನ್ನು ವರ್ಗಾಯಿಸುವುದು

ಮಾಹಿತಿಯನ್ನು ವರ್ಗಾಯಿಸುವುದು

ಬೆಳಕಿನಿಂದ ಗಾಳಿಯನ್ನು ಬಳಸಿಕೊಂಡು ಮಾಹಿತಿಯನ್ನು ವರ್ಗಾಯಿಸುವುದು ತುಸು ಕಷ್ಟದ ಕೆಲಸವಾಗಿದ್ದು, ಬೆಳಕಿಗೆ ಮಾರ್ಗದರ್ಶನ ಮಾಡುವ ಮಾಧ್ಯಮಗಳು ಇಲ್ಲಿ ಇಲ್ಲದೇ ಇರುವುದು ತೊಂದರೆ ಎಂದೆನಿಸಿದೆ.

ಸಣ್ಣ ಲೈಟಿಂಗ್ ಪರಿಹಾರ

ಸಣ್ಣ ಲೈಟಿಂಗ್ ಪರಿಹಾರ

ವೆಲಮ್ನಿ ಕಂಪೆನಿ ಸಿಇಒ ದೀಪಕ್ ಸೋಲಂಕಿ ಹೇಳುವಂತೆ ವಿಎಲ್‌ಸಿ (ವಿಸಿಬಲ್ ಲೈಟ್ ಕಮ್ಯುನಿಕೇಶನ್) ಅನ್ನು ಬಳಸಬಹುದಾದ ಬೇರೆ ಬೇರೆ ಸಂಸ್ಥೆಗಳೊಂದಿಗೆ ನಾವು ಪ್ರಾಜೆಕ್ಟ್‌ಗಳನ್ನು ನಡೆಸುತ್ತಿದ್ದೇವೆ. ಪ್ರಸ್ತುತ ನಾವು ಸಣ್ಣ ಲೈಟಿಂಗ್ ಪರಿಹಾರವನ್ನು ವಿನ್ಯಾಸಪಡಿಸಿದ್ದು ಇದು ತಾಂತ್ರಿಕ ಪರಿಸರಕ್ಕೆ ಸೂಕ್ತವಾಗಿದೆ. ಇಲ್ಲಿ ಡೇಟಾ ಸಂವಹನವನ್ನು ಬೆಳಕಿನ ಮೂಲಕ ನಡೆಸಲಾಗುತ್ತದೆ.

ಲೈಫೈ ನೆಟ್‌ವರ್ಕ್

ಲೈಫೈ ನೆಟ್‌ವರ್ಕ್

ಲೈಫೈ ನೆಟ್‌ವರ್ಕ್ ಅನ್ನು ಹೊಂದಿಸಿಕೊಂಡು ಅವರುಗಳು ಕಚೇರಿ ಸ್ಥಳದಲ್ಲಿ ಇಂಟರ್ನೆಟ್ ಪ್ರವೇಶಿಸುವ ಪೈಲೆಟ್ ಪ್ರಾಜೆಕ್ಟ್ ಅನ್ನು ಖಾಸಗಿ ಸಹೋದ್ಯೋಗಿಗಳೊಂದಿಗೆ ಸಂಸ್ಥೆ ನಡೆಸುತ್ತಿದೆ ಎಂಬುದಾಗಿ ದೀಪಕ್ ತಿಳಿಸಿದ್ದಾರೆ.

2011

2011

ಲೈಫೈ ತಂತ್ರಜ್ಞಾನವನ್ನು 2011 ರಲ್ಲಿ ಪ್ರೊಫೆಸರ್ ಹೆರಾಲ್ಡ್ ಹಾಸ್ ಅನ್ವೇಷಿಸಿದ್ದಾರೆ. ಸಿಂಗಲ್ ಎಲ್‌ಇಡಿಯ ಮೂಲಕ ಸೆಲ್ಯುಲಾರ್ ಟವರ್‌ಗಿಂತಲೂ ಹೆಚ್ಚುವರಿ ಡೇಟಾವನ್ನು ಟ್ರಾನ್ಸ್‌ಮಿಟ್ ಮಾಡುವ ಪ್ರಯೋಗದಲ್ಲಿ ಅವರು ಯಶಸ್ವಿಯಾಗಿದ್ದರು.

ತಂತ್ರಜ್ಞಾನ

ತಂತ್ರಜ್ಞಾನ

2011 ರಲ್ಲಿ ತಮ್ಮ ತಂತ್ರಜ್ಞಾನವನ್ನು ಮಂಡಿಸಿದ್ದು, ಇದು 1.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿಕೊಂಡಿತ್ತು.

ಸುಭದ್ರ

ಸುಭದ್ರ

ಲೈಫೈ ತಂತ್ರಜ್ಞಾನವನ್ನು ಇನ್ನಷ್ಟು ಸುಭದ್ರಗೊಳಿಸುವ ಆವಿಷ್ಕಾರಗಳು ನಡೆಯುತ್ತಿದ್ದು ಇದು ತಂತ್ರಜ್ಞಾನ ಕ್ಷೇತ್ರಕ್ಕೆ ಬಂದರೆ ನಿಜಕ್ಕೂ ವೈಫೈಗೆ ಸೋಲು ಖಂಡಿತ.

1 ಜಿಬಿಪಿಎಸ್ ವೇಗ

1 ಜಿಬಿಪಿಎಸ್ ವೇಗ

1 ಜಿಬಿಪಿಎಸ್ ವೇಗದೊಂದಿಗೆ, ಹೈಡೆಫಿನೇಶನ್ ಚಲನಚಿತ್ರವನ್ನು ಸೆಕೆಂಡ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Li-Fi, a super-fast alternative to Wi-Fi, has been proven capable of sending data at up to 1GBps in real-world tests.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X