ಮೈಕ್ರೋಮ್ಯಾಕ್ಸ್: 10 ನೇ ಸ್ಥಾನದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ಬ್ರ್ಯಾಂಡ್

Written By:

ಸಂಶೋಧನೆ ಸಂಸ್ಥೆಯೊಂದು ಬಿಡುಗಡೆ ಮಾಡಿದ ಡೇಟಾದ ಪ್ರಕಾರ ಮಾರುಕಟ್ಟೆ ಹಂಚಿಕೆಯ 1.8 ಶೇಕಡಾದೊಂದಿಗೆ ಪ್ರಥಮ ತ್ರೈಮಾಸಿಕದಲ್ಲಿ ಜಗತ್ತಿನಾದ್ಯಂತವಿರುವ ಮೊಬೈಲ್ ಫೋನ್‌ಗಳ ಮಾರಾಟದಲ್ಲಿ ಮೈಕ್ರೋಮ್ಯಾಕ್ಸ್ ಟಾಪ್ 10 ನೇ ಸ್ಥಾನವನ್ನು ಗಳಿಸಿಕೊಂಡಿದೆ. 2015 ರ ಪ್ರಥಮ ತ್ರೈಮಾಸಿಕದಲ್ಲೇ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಇಡೀ ವಿಶ್ವವೇ 19 ಶೇಕಡಾದಷ್ಟು ಬೆಳವಣಿಗೆಯನ್ನು ಕಂಡುಕೊಂಡಿದೆ.

ಓದಿರಿ: ಭೂಮಿಯ ಮೇಲಿರುವ ನಂಬಲು ಅಸಾಧ್ಯವಾದ ಗ್ಯಾಜೆಟ್ಸ್

ಮೈಕ್ರೋಮ್ಯಾಕ್ಸ್: 10 ನೇ ಸ್ಥಾನದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ಬ್ರ್ಯಾಂಡ್

ಕ್ಯಾನ್‌ವಾಸ್ ಸಿರೀಸ್ ಸೇರಿದಂತೆ, ಕ್ಯಾನ್‌ವಾಸ್ ಸ್ಪಾರ್ಕ್, ಕ್ಯಾನ್‌ವಾಸ್ ನೈಟ್, ಮತ್ತು ಕ್ಯಾನ್‌ವಾಸ್ ಫೈರ್ ಒಳಗೊಂಡಂತೆ ಮೈಕ್ರೋಮ್ಯಾಕ್ಸ್ ನಿಜಕ್ಕೂ ಅದ್ಭುತ ಸ್ಪಂದನೆಯನ್ನು ಪಡೆದುಕೊಂಡಿದೆ. ಇನ್ನು ಈ ಪಟ್ಟಿಗೆ ವೈಯು ಬ್ರ್ಯಾಂಡ್ ಫೋನ್ ಕೂಡ ಸೇರಿದೆಯೇ ಎಂಬುದು ತಿಳಿದು ಬಂದಿಲ್ಲ.

ಓದಿರಿ: ಹುರ್ರೇ! ಟಾಪ್ ಅಪ್ಲಿಕೇಶನ್‌ಗಳಿಂದ ಉಚಿತ ರೀಚಾರ್ಜ್

ಇನ್ನು ಸ್ಯಾಮ್‌ಸಂಗ್ 21.3 ಮಾರುಕಟ್ಟೆ ಷೇರಿನಲ್ಲಿ ಆಪಲ್‌ನ ಮಾರುಕಟ್ಟೆ 13.1 ಅನ್ನು ಹಿಂದಿಕ್ಕಿದ್ದು ಟಾಪ್ ಸ್ಥಾನದಲ್ಲಿದೆ. ಇನ್ನು ಮೈಕ್ರೋಸಾಫ್ಟ್ ಮತ್ತು ಎಲ್‌ಜಿ ಬ್ರ್ಯಾಂಡ್‌ಗಳು 7.2 ಮತ್ತು 4.3 ಮಾರುಕಟ್ಟೆ ಷೇರನ್ನು ಹಂಚಿಕೊಂಡಿವೆ. ಲೆನೊವೊ 4.2 ಮಾರುಕಟ್ಟೆ ಷೇರನ್ನು ಪಡೆದುಕೊಂಡಿದೆ. ಮೋಟೋರೋಲಾ ಹುವಾಯಿ 4.0 ಶೇಕಡಾವನ್ನು ಪಡೆದುಕೊಂಡಿದ್ದರೆ, ಶ್ಯೋಮಿ 3.2 ಶೇಕಡಾ ಮಾರುಕಟ್ಟೆ ಷೇರನ್ನು ಪಡೆದುಕೊಂಡಿದೆ.

ಮೈಕ್ರೋಮ್ಯಾಕ್ಸ್: 10 ನೇ ಸ್ಥಾನದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ಬ್ರ್ಯಾಂಡ್

2014 ರ ಇದೇ ಸಮಯಕ್ಕೆ ಹೋಲಿಸಿದಾಗ 2.5 ಶೇಕಡಾದಷ್ಟು ಹೆಚ್ಚಳವನ್ನು ಮೊಬೈಲ್ ಫೋನ್‌ಗಳ ಮಾರಾಟದಲ್ಲಿ ಕಾಣಬಹುದಾಗಿದೆ. ಇನ್ನು 2015 ರ ಪ್ರಥಮ ತ್ರೈಮಾಸಿಕದಲ್ಲೇ ಭಾರತೀಯ ಅಂತೆಯೇ ಚೀನಾದ ಫೋನ್ ಮಾರುಕಟ್ಟೆಗಳು ತಮ್ಮ ಹೆಜ್ಜೆಯನ್ನು ತುಸು ಆಳವಾಗಿಯೇ ಊರಿವೆ.

English summary
Micromax has made it to the top 10 vendors in terms worldwide mobile phone sales in the first quarter with 1.8 percent market share, according to data released by the research firm.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot