ಮೈಕ್ರೋಮ್ಯಾಕ್ಸ್ ಬೋಲ್ಟ್ D320 ಕಿಟ್‌ಕ್ಯಾಟ್ ಫೋನ್ ರೂ 4,299 ಕ್ಕೆ
ಮೈಕ್ರೋಮ್ಯಾಕ್ಸ್ ಬೋಲ್ಟ್ D320 ಪ್ರಥಮ ಬಾರಿಗೆ ಮಾರ್ಚ್‌ನಲ್ಲಿ ಅನವರಣಗೊಂಡಿದ್ದು ಕಪ್ಪು ಬಣ್ಣದಲ್ಲಿ ಬಂದಿತ್ತು ಅಂತೆಯೇ ಏಪ್ರಿಲ್ ಮಧ್ಯಭಾಗದಲ್ಲಿ ಇನ್‌ಫೀಬೀಮ್‌ನಲ್ಲಿ ಮಾತ್ರವೇ ಈ ಹ್ಯಾಂಡ್‌ಸೆಟ್ ಲಭ್ಯವಾಗುತ್ತಿತ್ತು. ಇದೊಂದು ಬಜೆಟ್ ಫೋನ್ ಆಗಿದ್ದು ಮೈಕ್ರೋಮ್ಯಾಕ್ಸ್ ಬೋಲ್ಟ್ ಎಸ್300 ನೊಂದಿಗೆ ಲಾಂಚ್ ಆದ ಫೋನ್ ಆಗಿದೆ.

ಮೈಕ್ರೋಮ್ಯಾಕ್ಸ್ ಬೋಲ್ಟ್ D320 ಪ್ರಮುಖ ವಿಶೇಷತೆಗಳು
ಇದು 4.5 ಇಂಚಿನ ಡಿಸ್‌ಪ್ಲೇ 854 x 480 ಪಿಕ್ಸೆಲ್‌ಗಳನ್ನು ಹೊಂದಿದ್ದು 1.2GHz ಮೀಡಿಯಾ ಟೆಕ್ MT6572M ಪ್ರೊಸೆಸರ್ ಜೊತೆಗೆ ಮಾಲಿ 400 ಜಿಪಿಯು 512 ಎಮ್‌ಬಿ RAM ಅನ್ನು ಹೊಂದಿದೆ.

ಓದಿರಿ: ಖರೀದಿಸಿ ಸ್ಕ್ರಾಚೇ ಆಗದ ಟಾಪ್ 10 ಗೋರಿಲ್ಲಾ ಗ್ಲಾಸ್ ಫೋನ್ಸ್
ಇನ್ನು ಆಂತರಿಕ ಸಂಗ್ರಹಣೆಯ ವಿಚಾರಕ್ಕೆ ಬಂದಾಗ ಫೋನ್ 4 ಜಿಬಿಯೊಂದಿಗೆ ಬಂದಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು. ಇನ್ನು ಕ್ಯಾಮೆರಾ ರಿಯರ್ 3.2 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗದಲ್ಲಿ 0.3 ಎಮ್‌ಪಿಯನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 ಇದರಲ್ಲಿದೆ.

ಓದಿರಿ: ವಜ್ರಕ್ಕಿಂತಲೂ ಕಠಿಣವಾದುದು ಆಪಲ್ ವಾಚ್‌ನಲ್ಲಿ ಏನಿದೆ?

ಇನ್ನು ಬೋಲ್ಟ್ D320 ಸಂಪರ್ಕ ವಿಶೇಷತೆಗಳಾದ 3 ಜಿ, ಎಚ್‌ಎಸ್‌ಪಿಎ + ವೈಫೈ, 802.11 b/g/n,Bluetooth 4.0, aGPS, 3.5ಎಮ್‌ಎಮ್ ಆಡಿಯೊ ಜಾಕ್, ಎಫ್ಎಮ್ ರೇಡಿಯೊವನ್ನು ಹೊಂದಿದೆ. 1600mAh ಬ್ಯಾಟರಿ ಡಿವೈಸ್‌ನಲ್ಲಿದ್ದು ಇನ್‌ಫಿಬೀಮ್‌ನಲ್ಲಿ ಮೈಕ್ರೋಮ್ಯಾಕ್ಸ್ ಬೋಲ್ಟ್ D320 ರೂ 4,299 ಕ್ಕೆ ಲಭ್ಯವಿದೆ.


Click it and Unblock the Notifications








