ಕನ್ನಡ ಭಾಷೆ ಬೆಂಬಲಿಸುವ ಮೈಕ್ರೋಮ್ಯಾಕ್ಸ್ ಫೋನ್ ರೂ 3,499 ಕ್ಕೆ

By Shwetha
|

ಭಾರತೀಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಮೈಕ್ರೋಮ್ಯಾಕ್ಸ್ ಇನ್ನೊಂದು ಬಜೆಟ್ ಫೋನ್ ಬೋಲ್ಟ್ ಡಿ303 ಅನ್ನು ಲಾಂಚ್ ಮಾಡಿದೆ. ಸ್ಥಳೀಯ ಭಾಷೆಗಳಿಗೆ ಬೆಂಬಲವನ್ನು ಈ ಡಿವೈಸ್ ನೀಡುತ್ತಿದ್ದು ಬಂಗಾಳಿ, ಹಿಂದಿ, ಗುಜರಾತಿ, ಕನ್ನಡ, ಮಲಯಾಳಮ್, ಪಂಜಾಬಿ, ತಮಿಳು ಮತ್ತು ತೆಲುಗು ಸೇರಿದಂತೆ 10 ಭಾಷೆಗಳನ್ನು ಪೂರ್ವ ಇನ್‌ಸ್ಟಾಲ್ ಮಾಡಿಕೊಂಡಿದೆ.

ಓದಿರಿ: ನಿಮ್ಮ ನೆರವಿಗೆ ಸದಾ ಸಿದ್ಧವಾಗಿರುವ ಟಾಪ್ 10 ಆಂಡ್ರಾಯ್ಡ್ ಕೋಡ್ಸ್

ಕನ್ನಡ ಭಾಷೆ ಬೆಂಬಲಿಸುವ ಮೈಕ್ರೋಮ್ಯಾಕ್ಸ್ ಫೋನ್ ರೂ 3,499 ಕ್ಕೆ

ಫೋನ್ ಬೆಲೆ ರೂ 3,499 ಆಗಿದೆ. ಸ್ವೈಪ್ ಫೀಚರ್‌ನೊಂದಿಗೆ ತಮ್ಮ ಆಯ್ಕೆಯ ಭಾಷೆಗೆ ಅನುವಾದ ಮತ್ತು ಲಿಪ್ಯಂತರ ಸೌಲಭ್ಯವನ್ನು ಇದು ಬಳಕೆದಾರರಿಗೆ ಒದಗಿಸಲಿದೆ. ಸ್ಥಳೀಯ ಭಾಷೆಗಳಲ್ಲಿ ಆಪ್ ಬಜಾರ್‌ನೊಂದಿಗೆ ಎಲ್ಲಾ ಹೊಸ ಮೈಕ್ರೋಮ್ಯಾಕ್ಸ್ ಫೋನ್‌ಗಳು ಬರುತ್ತಿದ್ದು ಸ್ಥಳೀಯ ಭಾಷೆಗಳಲ್ಲಿ 10,000 ಕ್ಕಿಂತಲೂ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಅನುಕೂಲತೆ ಇದರಲ್ಲಿದೆ.

ಕನ್ನಡ ಭಾಷೆ ಬೆಂಬಲಿಸುವ ಮೈಕ್ರೋಮ್ಯಾಕ್ಸ್ ಫೋನ್ ರೂ 3,499 ಕ್ಕೆ

ಇನ್ನು ಫೋನ್‌ನ ವೈಶಿಷ್ಟ್ಯತೆಯನ್ನು ಗಮನಿಸಿದಾಗ ಮೈಕ್ರೋಮ್ಯಾಕ್ಸ್ ಬೋಲ್ಟ್ ಡಿ303, 4 ಇಂಚಿನ 800x480 ಪಿಕ್ಸೆಲ್ ಉಳ್ಳ WVGA ಡಿಸ್‌ಪ್ಲೇಯೊಂದಿಗೆ ಬಂದಿದೆ. 1.3GHz ಡ್ಯುಯಲ್ ಕೋರ್ ಪ್ರೊಸೆಸರ್ ಇದರಲ್ಲಿದ್ದು 512MB RAM ಅನ್ನು ಫೋನ್ ಹೊಂದಿದೆ. 4 ಜಿಬಿ ಆಂತರಿಕ ಸಂಗ್ರಹಣೆಯನ್ನು ಡಿವೈಸ್ ಪಡೆದುಕೊಂಡಿದ್ದು, ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ಇದನ್ನು ವಿಸ್ತರಿಸಬಹುದಾಗಿದೆ.

ಓದಿರಿ: ನೋಕಿಯಾ ಚೇತರಿಕೆ ಅಸಾಧ್ಯದ ಮಾತೇ? ಕಾರಣ ಇಲ್ಲಿದೆ

ಇನ್ನು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4. ಡಿವೈಸ್‌ನಲ್ಲಿ ಚಾಲನೆಯಲ್ಲಿದ್ದು ರಿಯರ್ ಕ್ಯಾಮೆರಾ 3.2 ಎಮ್‌ಪಿ ಜೊತೆಗೆ ಎಲ್‌ಇಡಿ ಫ್ಕ್ಯಾಶ್, ಮುಂಭಾಗ ಕ್ಯಾಮೆರಾ 0.3 ಎಮ್‌ಪಿ ಇದರಲ್ಲಿದೆ. ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಸಂಪರ್ಕ ವೈಶಿಷ್ಟ್ಯ 3ಜಿ, ವೈ-ಫೈ 802.11 b/g/n, ಬ್ಲ್ಯೂಟೂತ್ 4.0 ಮತ್ತು A-GPS ಇದರಲ್ಲಿದೆ.

Best Mobiles in India

English summary
Indian smartphone brand Micromax has launched another entry-level smartphone Bolt D303. Similar to Micromax Unite series, Bolt D303 also offers regional language support...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X