ನೋಕಿಯಾ ಚೇತರಿಕೆ ಅಸಾಧ್ಯದ ಮಾತೇ? ಕಾರಣ ಇಲ್ಲಿದೆ

By Shwetha
|

ಬಳಕೆದಾರರ ಮನಗೆದ್ದ ನೋಕಿಯಾ ಎಂಬ ಪ್ರಬಲ ಕಂಪೆನಿ ನೆಲಕ್ಕಚ್ಚಿದ್ದಾದರೂ ಏಕೆ? ನೋಕಿಯಾ ನಷ್ಟದಲ್ಲಿ ನಡೆಯುತ್ತಿತ್ತೇ? ಅಥವಾ ಹೊಚ್ಚ ಹೊಸ ಫೋನ್‌ಗಳ ಲಾಂಚ್ ನೋಕಿಯಾ ಡಿವೈಸ್‌ಗಳಿಗೆ ಪ್ರಬಲ ಸ್ಪರ್ಧೆಯನ್ನು ಒಡ್ಡಿತೇ? ಈ ಎಲ್ಲಾ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡುವುದು ಸಹಜವೇ ಆಗಿದೆ. ಏಕೆಂದರೆ ಫೋನ್‌ ಕ್ಷೇತ್ರದಲ್ಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದ ಫೋನ್ ಪ್ರಿಯರ ಕಣ್ಮಣಿ ಇಷ್ಟು ಬೇಗ ಚಿರ ನಿದ್ದೆಗೆ ಜಾರುವುದು ಅರಗಿಸಿಕೊಳ್ಳಲು ಕಷ್ಟವಾದ ವಿಚಾರವೇ ಆಗಿರುತ್ತದೆ.

ಓದಿರಿ: ನೋಕಿಯಾ ಕಂಪೆನಿ ಕುರಿತ ಟಾಪ್ 10 ವಿಶೇಷತೆಗಳು

ತನ್ನ ಸಕಲ ಸ್ವತ್ತನ್ನು ಮೈಕ್ರೋಸಾಫ್ಟ್ ಕಂಪೆನಿಗೆ ಮಾರಿರುವ ನೋಕಿಯಾ ಸಂಸ್ಥೆಯ ಉದ್ದೇಶಕ್ಕೆ ಕಾರಣವಾದರೂ ಏನು? ಇಂದಿನ ಲೇಖನದಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ. ಫಿನ್ನಿಶ್ ಕಂಪೆನಿ ನೋಕಿಯಾ ತನ್ನ ಮೊಬೈಲ್ ಫೋನ್ ಯೂನಿಟ್ ಅನ್ನು ಮೈಕ್ರೋಸಾಫ್ಟ್‌ಗೆ ರೂ 5.44 ಬಿಲಿಯನ್ ಯೂರೋಗೆ ಮಾರಾಟ ಮಾಡಿದೆ.

ಓದಿರಿ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೇಲ್ಲಾರ 10 ಜೀವನ ರಹಸ್ಯಗಳು

ಇಂದಿನ ಲೇಖನದಲ್ಲಿ ಈ ಡೀಲ್‌ಗೆ ಕಾರಣ ಏನು ಮತ್ತು ಡೀಲ್‌ನಲ್ಲಿ ಏನೆಲ್ಲಾ ಅಂಶಗಳು ಒಳಗೊಂಡಿದೆ ಎಂಬುದನ್ನು ನೀವು ಅರಿತುಕೊಳ್ಳಲೇಬೇಕು.

ಡೀಲ್ ಯಾವುದರ ಬಗ್ಗೆ

ಡೀಲ್ ಯಾವುದರ ಬಗ್ಗೆ

ಒಟ್ಟಾರೆ 5.44 ಬಿಲಿಯನ್ ಯೂರೋಗಳಿಗೆ ಮೈಕ್ರೋಸಾಫ್ಟ್ ನೋಕಿಯಾ ಡಿವೈಸ್‌ಗಳನ್ನು ಮತ್ತು ಸೇವಾ ವ್ಯವಹಾರಗಳನ್ನು ಖರೀದಿಸಿದೆ. ಫೋನ್ ತಯಾರಿಕಾ ಯೂನಿಟ್‌ಗೆ ಮೈಕ್ರೋಸಾಫ್ಟ್ $5 ಬಿಲಿಯನ್ ವ್ಯಯಿಸಲಿದ್ದು, ಫೋನ್ ಮೇಕಿಂಗ್ ಯೂನಿಟ್‌ಗೆ $2.17 ಬಿಲಿಯನ್ ಅನ್ನು ವ್ಯಯಿಸಿದೆ.

ಡೀಲ್‌ನಲ್ಲಿ ಏನೇನಿದೆ?

ಡೀಲ್‌ನಲ್ಲಿ ಏನೇನಿದೆ?

ಲ್ಯೂಮಿಯಾ ಬ್ರ್ಯಾಂಡ್ ಮತ್ತು ಉತ್ಪನ್ನ ಸೇರಿದಂತೆ ಮೈಕ್ರೋಸಾಫ್ಟ್ ನೋಕಿಯಾದ ಸ್ಮಾರ್ಟ್ ಡಿವೈಸ್ ವ್ಯವಹಾರದ ಮೇಲೆ ಅಧಿಕಾರ ಚಲಾಯಿಸಿದೆ. ಇನ್ನು ನೋಕಿಯಾದ ಆಶಾ ಬ್ರ್ಯಾಂಡ್ ಅನ್ನು ಮೈಕ್ರೋಸಾಫ್ಟ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ನೋಕಿಯಾ ಅಧಿಕಾರಿಗಳು

ನೋಕಿಯಾ ಅಧಿಕಾರಿಗಳು

ನೋಕಿಯಾ ಸಿಇಒ ಸ್ಟೀಫನ್ ಇಲೋಪ್, ಪ್ರಸ್ತುತ ಕಂಪೆನಿಯ ಸಿಇಒ ಸ್ಟೀವ್ ಬಾಲ್‌ಮರ್‌ರ ನಿವೃತ್ತಿಯ ನಂತರ ಅವರ ಸ್ಥಾನವನ್ನಲಂಕರಿಸಲಿದ್ದು ಇಲೋಪ್ ಡಿವೈಸ್ ಯೂನಿಟ್ ಮುಖ್ಯಸ್ಥರಾಗಲಿದ್ದಾರೆ.

ಇತರ ಸ್ಥಾನಗಳಲ್ಲಿ

ಇತರ ಸ್ಥಾನಗಳಲ್ಲಿ

ಇಲೋಪ್ ಅಲ್ಲದೆಯೇ, ಸ್ಮಾರ್ಟ್ ಡಿವೈಸ್‌ಗಳ ತಂಡದ ನಾಯಕರಾಗಿ ಜೋ ಹಾರ್ಲೊ ಕಾರ್ಯನಿರ್ವಹಿಸಲಿದ್ದು, ಟಿಮೊ ಟೊಕಿಯಾನೆನ್ ಮೊಬೈಲ್ ಫೋನ್ ತಂಡಗಳ ನಾಯಕರಾಗಿ ಮುಂದುವರಿಯಲಿದ್ದಾರೆ.

ಮೈಕ್ರೋಸಾಫ್ಟ್ ಆಡಳಿತ ಯಾವುದರ ಮೇಲೆ

ಮೈಕ್ರೋಸಾಫ್ಟ್ ಆಡಳಿತ ಯಾವುದರ ಮೇಲೆ

ಇನ್ನು ಒಪ್ಪಂದ ನಿಯಮಗಳಿಗೆ ಅನುಸಾರವಾಗಿ, ಮೈಕ್ರೋಸಾಫ್ಟ್ ನೋಕಿಯಾ ಡಿವೈಸ್‌ಗಳು ಮತ್ತು ಸೇವಾ ವ್ಯವಹಾರ ಇದರಲ್ಲಿ ಮೊಬೈಲ್ ಫೋನ್‌ಗಳು ಸಣ್ಣ ಡಿವೈಸ್ ವ್ಯವಹಾರ ಕೂಡ ಸೇರಿದೆ. ಇನ್ನು ನೋಕಿಯಾ ಸಂಬಂಧಿತ ಎಲ್ಲಾ ಸೌಲಭ್ಯಗಳನ್ನು ಮೈಕ್ರೋಸಾಫ್ಟ್ ತನ್ನ ಕಕ್ಷೆಗೆ ತಂದುಕೊಳ್ಳಲಿದೆ.

ಮೈಕ್ರೋಸಾಫ್ಟ್ ಸಂಸ್ಥೆಗೆ ಯಾರೆಲ್ಲಾ

ಮೈಕ್ರೋಸಾಫ್ಟ್ ಸಂಸ್ಥೆಗೆ ಯಾರೆಲ್ಲಾ

ಅಂದಾಜು 32,000 ಜನರನ್ನು ಮೈಕ್ರೋಸಾಫ್ಟ್‌ಗೆ ವರ್ಗಾವಣೆ ಮಾಡಲಾಗುತ್ತಿದ್ದು, ಅದರಲ್ಲಿ ಫಿನ್‌ಲ್ಯಾಂಡ್‌ನ 4,700 ಜನರು ಮತ್ತು 18,300 ಉದ್ಯೋಗಿಗಳು ನೇರವಾಗಿ ತಯಾರಿಕೆ, ಅಸೆಂಬ್ಲಿ ಮತ್ತು ಉತ್ಪನ್ನ ಪ್ಯಾಕಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಪೇಟೆಂಟ್ ಲೈಸೆನ್ಸಿಂಗ್ ಒಪ್ಪಂದ

ಪೇಟೆಂಟ್ ಲೈಸೆನ್ಸಿಂಗ್ ಒಪ್ಪಂದ

ಇನ್ನು ವರ್ಗಾವಣೆಗೆ ಅನುಸಾರವಾಗಿ, ನೋಕಿಯಾ ಮೈಕ್ರೋಸಾಫ್ಟ್‌ಗೆ ದೀರ್ಘ ಪೇಟೆಂಟ್ ಲೈಸೆನ್ಸಿಂಗ್ ಒಪ್ಪಂದವನ್ನು ಕ್ವಾಲ್‌ಕಾಮ್ ಜೊತೆಗೆ ಮಾಡಿಕೊಂಡಿದೆ.

ಡೀಲ್ ಮುಖ್ಯಾಂಶ

ಡೀಲ್ ಮುಖ್ಯಾಂಶ

ಮೈಕ್ರೋಸಾಫ್ಟ್‌ನ ಪೇಟೆಂಟ್ ಹಕ್ಕುಗಳನ್ನು ನೋಕಿಯಾ ತನ್ನ HERE ಸೇವೆಗಳಿಗೆ ಬಳಸಿಕೊಳ್ಳಬಹುದಾಗಿದೆ.

ಹೊಸ ಡೇಟಾ ಕೇಂದ್ರ

ಹೊಸ ಡೇಟಾ ಕೇಂದ್ರ

ಇನ್ನು ಮೈಕ್ರೋಸಾಫ್ಟ್ ಫಿನ್‌ಲ್ಯಾಂಡ್ ಅನ್ನು ತನ್ನ ಹೊಸ ಡೇಟಾ ಕೇಂದ್ರವನ್ನಾಗಿ ಆಯ್ಕೆಮಾಡಿದ್ದು ಯುರೋಪ್‌ನ ಮೈಕ್ರೋಸಾಫ್ಟ್ ಗ್ರಾಹಕರಿಗೆ ಇದು ಸೇವೆಯನ್ನೊದಗಿಸಲಿದೆ.

ನೋಕಿಯಾ ಷೇರು ಹೋಲ್ಡರ್

ನೋಕಿಯಾ ಷೇರು ಹೋಲ್ಡರ್

ಇನ್ನು ನೋಕಿಯಾ ಷೇರು ಹೋಲ್ಡರ್‌ಗಳು ಈ ಒಪ್ಪಂದಕ್ಕೆ ಮತಚಲಾಯಿಸಲಿದ್ದು ಇದು ನವೆಂಬರ್ 19 ಕ್ಕೆ ನಡೆಯಲಿದೆ.

Best Mobiles in India

English summary
It is end of mobile giant Nokia's days as a phone maker. The struggling Finnish company has announced the sale of its mobile phone unit to Microsoft for 5.44 billion euros ($7.17 billion). Here are 10 key things you need to know about the deal.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X