ಮೊಟೊ G73 5G, ಮೊಟೊ G53 5G ಫೋನ್‌ ಲಾಂಚ್‌: ಬೆಲೆ ಎಷ್ಟು!?

|

ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳಲ್ಲಿ ಪ್ರಮುಖವಾಗಿರುವ ಮೊಟೊರೊಲಾ ಕಾಲಕಾಲಕ್ಕೆ ಸುಧಾರಿತ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿವಿಧ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬರುತ್ತಿದೆ. ಅದರಲ್ಲೂ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯೊಂದಿಗೆ ತನ್ನ G ಸರಣಿ ಶ್ರೇಣಿಯನ್ನು ರಿಫ್ರೆಶ್ ಮಾಡಿಕೊಂಡಿದೆ. ಈ ನಡುವೆ ಇದೇ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದ್ದು, ಇವು ಮೊಟೊದ ಪ್ರೀಮಿಯಂ ಕೊಡುಗೆಯಾಗಿವೆ.

ಮೊಟೊ

ಹೌದು, ಜಾಗತಿಕ ಮಾರುಕಟ್ಟೆಗಳಲ್ಲಿ ಮೊಟೊ G53 5G ಹಾಗೂ ಮೊಟೊ G73 5G ಸ್ಮಾರ್ಟ್‌ಫೋನ್‌ ಅನ್ನು ಅನಾವರಣಗೊಳಿಸಲಾಗಿದೆ. ಮೊಟೊ G73 5G ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ SoC ನಲ್ಲಿ ಕಾರ್ಯನಿರ್ವಹಿಸಿದರೆ, ಮೊಟೊ G53 5G ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ SoC ಮೂಲಕ ತನ್ನ ಶಕ್ತಿ ಪ್ರದರ್ಶಿಸಲಿದೆ. ಹಾಗಿದ್ರೆ, ಈ ಫೋನ್‌ಗಳ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಮೊಟೊ G73 5G ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌‌ HD+ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್‌ ನೀಡಲಿದೆ. ಹಾಗೆಯೇ 20:9 ಆಕಾರ ಅನುಪಾತವನ್ನು ಹೊಂದಿರುವ ಈ ಫೋನ್‌ ಡಿಸ್‌ಪ್ಲೇ ಮೇಲ್ಭಾಗದ ಮಧ್ಯದಲ್ಲಿ ಪಂಚ್ ಕಟೌಟ್ ಆಯ್ಕೆ ಪಡೆದಿಕೊಂಡಿದೆ. ಇದರೊಂದಿಗೆ ಎರಡನೇ ಫೋನ್‌ ಆದ ಮೊಟೊ G53 5G ಸ್ಮಾರ್ಟ್‌ಫೋನ್‌ ಫೋನ್ 6.5 ಇಂಚಿನ IPS LCD HD+ ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್‌ ನೀಡಲಿದೆ.

ಪ್ರೊಸೆಸರ್‌ ಮಾಹಿತಿ

ಪ್ರೊಸೆಸರ್‌ ಮಾಹಿತಿ

ಮೊಟೊ G73 5G ಸ್ಮಾರ್ಟ್‌ಫೋನ್‌ ಡೈಮೆನ್ಸಿಟಿ 930 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಮೊಟೊ G53 5G ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 480+ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಅದರಂತೆ ಮೊಟೊ G73 5G ಸ್ಮಾರ್ಟ್‌ಫೋನ್‌ 8GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದ್ದರೆ, G53 5G ಸ್ಮಾರ್ಟ್‌ಫೋನ್‌ 4GB + 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಕಂಡುಬಂದಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಮೊಟೊ G73 5G ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, ಇದರಲ್ಲಿ f/1.8 ಸೆನ್ಸರ್‌ನೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ ಹಾಗೂ ಆಟೋಫೋಕಸ್‌ ಬೆಂಬಲದೊಂದಿಗೆ 8MP ಅಲ್ಟ್ರಾ-ವೈಡ್ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 16MP ಸೆಲ್ಫಿ ಕ್ಯಾಮೆರಾ ಆಯ್ಕೆ ಸಹ ಇದರಲ್ಲಿದೆ. ಇನ್ನು ಮೊಟೊ G53 5G ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಇದ್ದು ಇದರಲ್ಲೂ ಸಹ 50MP ಪ್ರಾಥಮಿಕ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಆಯ್ಕೆ ಇದೆ. ಹಾಗೆಯೇ ಸೆಲ್ಫಿಗಾಗಿ 16MP ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಮೊಟೊ G73 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಜೊತೆಗೆ ಮೊಟೊ G53 5G ಸ್ಮಾರ್ಟ್‌ಫೋನ್‌ ಸಹ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 10W ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್‌ ಆಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಮೊಟೊ G73 5G ಸ್ಮಾರ್ಟ್‌ಫೋನ್ 8GB RAM ಮತ್ತು 256GB ನ ಒಂದೇ ಸ್ಟೋರೇಜ್‌ ವೇರಿಯಂಟ್‌ನಲ್ಲಿ ಕಂಡುಬರುತ್ತಿದ್ದು, EUR 299 (ಸುಮಾರು 26,500ರೂ.) ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಲ್ಯೂಸೆಂಟ್ ವೈಟ್ ಹಾಗೂ ಮಿಡ್‌ನೈಟ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಲಭ್ಯ. ಜೊತೆಗೆ ಮೊಟೊ G53 5G ಸ್ಮಾರ್ಟ್‌ಫೋನ್ ಸಹ 4GB + 128GB ಸ್ಟೋರೇಜ್‌ನ ಒಂದೇ ವೇರಿಯಂಟ್‌ನಲ್ಲಿ ಲಭ್ಯವಿದ್ದು, ಈ ಫೋನ್‌ಗೆ EUR 249 (ಸುಮಾರು 22,100 ರೂ.) ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಇಂಕ್ ಬ್ಲೂ, ಆರ್ಕ್ಟಿಕ್ ಸಿಲ್ವರ್ ಮತ್ತು ಪೇಲ್ ಪಿಂಕ್ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ.

Best Mobiles in India

English summary
Moto G73 5G, Moto G53 5G smartphones have been launched by Motorola company, the price and important features of these phones. Details in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X