ಮೊಟೊ G 5G (2023) ಫೋನ್‌ ಮೇಲೆ ಯಾಕಿಷ್ಟು ಕಾತುರ? ಏನೆಲ್ಲಾ ನಿರೀಕ್ಷೆ ?

|

ಮೊಟೊರೊಲಾ ಕಂಪೆನಿಯ ಫೋನ್‌ಗಳು ಬಿಡುಗಡೆಗೂ ಮುನ್ನವೇ ಭಾರಿ ಸೌಂಡ್‌ ಮಾಡುತ್ತವೆ. ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾದ ಮೊಟೊರೊಲಾ ಫೋನ್‌ಗಳಿಗೆ ಸಹಜವಾಗಿಯೇ ಭಾರಿ ಕ್ರೇಜ್‌ ಇದೆ. ಅದರಂತೆ ಮೊಟೊರೊಲಾ ಕಂಪೆನಿಯ ಮುಂದಿನ ಸ್ಮಾರ್ಟ್‌ಫೋನ್‌ ಮೊಟೊ G 5G (2023) ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಡಲಾಗಿದೆ. ಇದೇ ಕಾರಣಕ್ಕೆ ಈ ಫೋನ್‌ನ ಪ್ರತಿಯೊಂದು ಮಾಹಿತಿ ಕೂಡ ಆನ್‌ಲೈನ್‌ನಲ್ಲಿ ಸಾಕಷ್ಟು ಹಲ್‌ಚಲ್‌ ಸೃಷ್ಟಿಸುತ್ತಿದೆ. ಇದೀಗ ಈ ಫೋನ್‌ನ ಫೀಚರ್ಸ್‌ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿ ತನ್ನ ಜನಪ್ರಿಯ G ಸರಣಿಯ ಮುಂದಿನ ಫೋನ್‌ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಇದೇ ಸಂದರ್ಭದಲ್ಲಿ ಮೊಟೊ G 5G (2023) ಸ್ಮಾರ್ಟ್‌ಫೋನ್‌ನ ಇಮೇಜ್‌ ವಿನ್ಯಾಸ ಬಹಿರಂಗವಾಗಿದೆ. ಈ ಫೋನ್‌ ಹಿಂದಿನ ಆವೃತ್ತಿಯ ಮಾದರಿಯನ್ನೇ ಹೋಲುವಂತಿದೆಯಾದರೂ, ನವೀನ ಮಾದರಿಯ ಟೆಕ್ನಾಲಜಿ ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ ವಿಚಾರವಾಗಿ ಏನೆಲ್ಲಾ ಮಾಹಿತಿ ಬಹಿರಂಗವಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೇಗಿರಲಿದೆ ಮೊಟೊ G 5G (2023) ಫೋನ್‌?

ಹೇಗಿರಲಿದೆ ಮೊಟೊ G 5G (2023) ಫೋನ್‌?

ಸ್ಲಾಶ್‌ಲೀಕ್ಸ್ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ ಮೊಟೊ G 5G (2023) ಫ್ಲಾಟ್ ಬಾಡಿ ವಿನ್ಯಾಸವನ್ನು ಹೊಂದಿರಲಿದೆ. ಸ್ಕ್ರೀನ್‌ನ ಮೇಲ್ಭಾಗದ ಮಧ್ಯದಲ್ಲಿ ಹೋಲ್-ಪಂಚ್ ಕಟೌಟ್ ಹೊಂದಿರಲಿದ್ದು, ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನ ಸುಳಿವು ನೀಡಿದೆ. ಇನ್ನು ಈ ಡ್ಯುಯಲ್ ಕ್ಯಾಮೆರಾಗಳು ಒಂದು ಆಯತಾಕಾರದ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಇರಿಸಲಾಗಿರುತ್ತದೆ. ಜೊತೆಗೆ ಎಲ್‌ಇಡಿ ಪ್ಲ್ಯಾಶ್‌ ಕೂಡ ಹೊಂದಿರುವ ಸಾಧ್ಯತೆಯಿದೆ.

ಡಿಸೈನ್‌ ಹೇಗಿರಲಿದೆ?

ಡಿಸೈನ್‌ ಹೇಗಿರಲಿದೆ?

ಸೋರಿಕಯಾಗಿರುವ ಇಮೇಜ್‌ಗಳ ಪ್ರಕಾರ ಈ ಫೋನ್‌ ತೆಳುವಾದ ಬೆಜೆಲ್‌ಗಳನ್ನು ಹೊಂದಿದೆ. ಇದರ ಬಲಭಾಗದಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್‌ಗಳನ್ನು ಅಳವಡಿಸಲಾಗಿರುತ್ತದೆ. ಇದು ಲೋಹೀಯ ಬೆಳ್ಳಿಯ ವಿನ್ಯಾಸ ಮತ್ತು ಬಣ್ಣದ ರೂಪಾಂತರವನ್ನು ಒಳಗೊಂಡಿವೆ. ಈ ಫೋನ್‌ನ ವಿನ್ಯಾಸವು ಬಾಗಿದ ದೇಹ ವಿನ್ಯಾಸವನ್ನು ಒಳಗೊಂಡಿರುವ ಮೊಟೊ G 5G (2022) ಗಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ.

ಫೀಚರ್ಸ್‌ ನಿರೀಕ್ಷೆ ಏನು?

ಫೀಚರ್ಸ್‌ ನಿರೀಕ್ಷೆ ಏನು?

ಮೊಟೊ G 5G (2023) ಫೋನ್‌ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು HDR10 ಬೆಂಬಲವನ್ನು ಪಡೆದಿದ್ದು, 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 393 ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.

ಪ್ರೊಸೆಸರ್‌ ಕಾರ್ಯದಕ್ಷತೆ ಏನಿರಬಹುದು?

ಪ್ರೊಸೆಸರ್‌ ಕಾರ್ಯದಕ್ಷತೆ ಏನಿರಬಹುದು?

ಮೊಟೊ G 5G (2023) ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 778SoC ಪ್ರೊಸೆಸರ್‌ ವೇಗವನ್ನು ಪಡೆದಿರಬಹುದು. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಹಾಗೆಯೇ 6GB RAM ಮತ್ತು 128GB ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ನೀಡಲಿದೆ ಎಂದು ಅಂದಾಜಿಸಲಾಗಿದೆ.

ಬ್ಯಾಟರಿ ದಕ್ಷತೆಯ ಬಗ್ಗೆ ನಿರೀಕ್ಷೆ ಏನು?

ಬ್ಯಾಟರಿ ದಕ್ಷತೆಯ ಬಗ್ಗೆ ನಿರೀಕ್ಷೆ ಏನು?

ಮೊಟೊ G 5G (2023) ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ನಿರೀಕ್ಷೆಯಿದೆ. ಅಲ್ಲದೆ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುವ ಸಾಧ್ಯತೆ ಕೂಡ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಅನ್ನು ಪಡೆದಿರುವ ನಿರೀಕ್ಷೆಯನ್ನು ಇಡಲಾಗಿದೆ.

Best Mobiles in India

English summary
Motorola Moto G 5G (2023) leaks Hint at 50-Megapixel Camera

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X