ಫೇಸ್‌ಬುಕ್ ತಾಣಕ್ಕೆ ಬರಲಿದೆ dislike ಬಟನ್

Written By:

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಡಿಸ್‌ಲೈಕ್ ಬಟನ್‌ ಅನ್ನು ಸೇರಿಸಲಾಗುತ್ತದೆ ಎಂದು ಸ್ಥಾಪಕ ಮಾರ್ಕ್ಸ್ ಜುಕರ್‌ ಬರ್ಗ್ ಹೇಳಿದ್ದಾರೆ.ಫೇಸ್‌ ಬುಕ್‌ ಹೋಮ್‌ಟೌನ್‌ ಕ್ಯಾಲಿಫೋರ್ನಿಯಾದ ಮೆನ್ಲೊ ಪಾರ್ಕ್‌ನ ಪಬ್ಲಿಕ್‌ ಟೌನ್‌ ಹಾಲ್‌ ಸಭೆಯಲ್ಲಿ ಈ ವಿಷಯವನ್ನು ತಿಳಿಸಿದ ಅವರು ಫೇಸ್‌ಬುಕ್‌ ಬಳಕೆದಾರರ ಆಗ್ರಹಕ್ಕೆ ಅನುಗುಣವಾಗಿ ಡಿಸ್‌ಲೈಕ್ ಬಟನ್ ಅನ್ನು ಸೇರಿಸಿರುವುದಾಗಿ ತಿಳಿಸಿದ್ದಾರೆ.

ಫೇಸ್‌ಬುಕ್ ತಾಣಕ್ಕೆ ಬರಲಿದೆ dislike ಬಟನ್

ಆನ್‌ಲೈನ್‌ ಮುಖಾಂತರ, like ಬಟನ್‌ ನಂತೆ ' I'm sorry, interesting ಅಥವಾ dislike' ನಂತಹ ಬಟನ್‌ಗಳು ಏಕಿಲ್ಲ ಮೊದಲಾದ ಪ್ರಶ್ನೆಗಳನ್ನು ಕೇಳಲಾಗಿತ್ತು. ಹಾಗೂ ಈ ಪ್ರಶ್ನೆಗೆ ಪೋಸ್ಟ್‌ಗಳ ಮುಖಾಂತರ ಸ್ನೇಹಿತರು, ಸ್ಟಾರ್‌ಗಳು ಮತ್ತು ಬ್ಯಾಂಡ್‌ಗಳು ಸಾಮಾಜಿಕ ಜಾಲತಾಣದಲ್ಲಿ ಬೆಂಬಲವನ್ನು ಸೂಚಿಸಿದ್ದವು.

ಓದಿರಿ: ಈ ವಿಶೇಷ ಅಪ್ಲಿಕೇಶನ್‌ಗಳು ಬರಿಯ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ

ಪ್ರಾಯಶಃ ನೂರಕ್ಕೂ ಹೆಚ್ಚು ಜನರು ಹೀಗೆ ಕೇಳಿದ್ದರು, ಈ ದಿನ ಅತಿ ವಿಶೇಷವಾಗಿರುವುದರಿಂದ ಈ ಘೋಷಣೆಯನ್ನು ನಾನು ಮಾಡುತ್ತಿದ್ದೇನೆ ಮತ್ತು ಫೇಸ್‌ಬುಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನಮಗೆ ಇದು ಒಂದು ರೀತಿಯ ಪರೀಕ್ಷೆಯಾಗಿದೆ ಎಂದು ಜುಕರ್‌ ಬರ್ಗ್ ತಿಳಿಸಿದ್ದಾರೆ.

ಫೇಸ್‌ಬುಕ್ ಅನ್ನು ನಾವು ಫೋರಂ ಆಗಿ ಬದಲಿಸಲು ಇಚ್ಛಿಸುವುದಿಲ್ಲ, ಆದ ಕಾರಣ ಈ ಪ್ರಶ್ನೆಗಳು ನಮ್ಮನ್ನು ಇಲ್ಲಿಗೆ ಕರೆತಂದಿದೆ. ಅಲ್ಲಿ ಜನರು ಇದಕ್ಕೆ ಮತ ಚಲಾಯಿಸಬಹುದು ಅಥವಾ ಜನರ ಪೋಸ್ಟ್‌ಗಳು ಬರಬಹುದು. ಅದು ಒಂದು ರೀತಿಯ ಜನರ ಸಮುದಾಯದಂತೆ ಕಾಣುವುದಿಲ್ಲವಾದ್ದರಿಂದ ನಾವೇ ರಚಿಸಬೇಕಾಗಿದೆ ಎಂದಿದ್ದಾರೆ.

ಓದಿರಿ:ವಿನಾಯಕ ಚತುರ್ಥಿ: ದುಬಾರಿ ಫೋನ್ಸ್ ಮೇಲೆ ಭರ್ಜರಿ ದರಕಡಿತ

ಸಾಮಾಜಿಕ ಘಟನೆಗಳು, ನಿರಾಶ್ರಿತರ ಬಿಕ್ಕಟ್ಟು ಸಮಸ್ಯೆ, ಹಾಗೂ ಸಾವುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹಾಗೂ ಕೆಲವು ವಿಷಯಗಳನ್ನು ತಿರಸ್ಕರಿಸಲು ಬಳಕೆದಾರರಿಗೆ ಇಂತಹ ಆಯ್ಕೆಗಳು ಅವಶ್ಯಕವಾಗಿದೆ ಎಂಬುದು ನನಗೆ ಅರ್ಥವಾಗಿದೆ ಎಂದಿದ್ದಾರೆ.
ನಾವು ಈ ಸಾಮಾಜಿಕ ಜಾಲತಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ ಈ ರೀತಿಯಲ್ಲಿ ಕಷ್ಟಕವಾಗಿರುವುದು ಆಶ್ಚರ್ಯಕರವಾಗಿದೆ. ಇದಕ್ಕೆ ನಮ್ಮಲ್ಲಿ ಒಂದು ಉಪಾಯವಿದ್ದು, ಶೀಘ್ರದಲ್ಲೇ ಪರೀಕ್ಷೆ ನಡೆಸಲಿದ್ದೇವೆ ಮತ್ತು ಈ ಚಟುವಟಿಕೆ ಹೇಗೆ ನಡೆಯುತ್ತದೆ ಎಂಬುದನ್ನು ಆಧರಿಸಿ ದೊಡ್ಡ ಮಟ್ಟದಲ್ಲಿಯೇ ಇದನ್ನು ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot