ವ್ಯೂಸಾನಿಕ್‌ನಿಂದ ಹೊಸ ಎರಡು ಮಾನಿಟರ್‌ ಲಾಂಚ್‌; ಪಾಪ್-ಅಪ್ ಕ್ಯಾಮೆರಾ ಆಯ್ಕೆ!

|

ಎಲೆಕ್ಟ್ರಾನಿಕ್ಸ್‌ ಡಿವೈಸ್‌ಗಳ ತಯಾರಿಕಾ ಕಂಪೆನಿಗಳಲ್ಲಿ ವ್ಯೂಸಾನಿಕ್‌ ಕಂಪೆನಿ ಜನಪ್ರಿಯ ಬ್ರ್ಯಾಂಡ್‌ ಎನಿಸಿಕೊಂಡಿದ್ದು, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಎರಡು ಹೊಸ ಸ್ಮಾರ್ಟ್‌ ಮಾನಿಟರ್‌ಗಳನ್ನು ಪರಿಚಯಿಸಿತ್ತು. ಇವುಗಳಿಗೆ ವ್ಯೂಸಾನಿಕ್‌ VA3209-MH ಮತ್ತು ವ್ಯೂಸಾನಿಕ್‌ VA3209-2K-MHD ಎಂದು ಹೆಸರಿಸಲಾಗಿದೆ. ಇದರ ನಡುವೆ ಮತ್ತೆ ವಿಭಿನ್ನ ಶೈಲಿಯ ಎರಡು ಮಾನಿಟರ್‌ಗಳನ್ನು ಅನಾವರಣ ಮಾಡಲಾಗಿದೆ.

ವ್ಯೂಸಾನಿಕ್‌ನಿಂದ ಹೊಸ ಎರಡು ಮಾನಿಟರ್‌ ಲಾಂಚ್‌; ಪಾಪ್-ಅಪ್ ಕ್ಯಾಮೆರಾ ಆಯ್ಕೆ!

ಹೌದು, ವ್ಯೂಸಾನಿಕ್‌ VG56V ಸರಣಿಯ ಎರಡು ಮಾನಿಟರ್‌ಗಳನ್ನು ಅನಾವರಣ ಮಾಡಲಾಗಿದ್ದು, ಇವು 2K ರೆಸಲ್ಯೂಶನ್ ಮತ್ತು ಪಾಪ್-ಅಪ್ ವೆಬ್‌ಕ್ಯಾಮ್‌ಗಳೊಂದಿಗೆ ಪ್ಯಾಕ್‌ ಆಗಿವೆ. ಇದರೊಂದಿಗೆ ಡ್ಯುಯಲ್ ಸ್ಪೀಕರ್‌ಗಳು ಮತ್ತು ಎರಡು ಮಾರ್ಗದ ಮೈಕ್ರೊಫೋನ್‌ಗಳನ್ನು ಸಂಯೋಜಿಸುತ್ತವೆ. ಹಾಗಿದ್ರೆ, ಇವುಗಳು ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಈ ಮಾನಿಟರ್‌ಗಳ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಪ್ರಮುಖ ಫೀಚರ್ಸ್‌
ವ್ಯೂಸಾನಿಕ್‌ನ VG56V ಸರಣಿಯ VG2456V ಮತ್ತು ಉನ್ನತ-ಮಟ್ಟದ VG2756V-2K ಮಾನಿಟರ್‌ಗಳು ಕ್ರಮವಾಗಿ FHD/2MP ಕ್ಯಾಮೆರಾ ಮತ್ತು 2K/5MP ಪಾಪ್‌ ಅಪ್‌ ಕ್ಯಾಮೆರಾ ಫೀಚರ್ಸ್‌ ಅನ್ನು ಪಡೆದುಕೊಂಡಿವೆ. ಈ ಮೂಲಕ ಹೊಸ ಮಾನಿಟರ್‌ಗಳು ಪಾಪ್-ಅಪ್ ಕ್ಯಾಮೆರಾದ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದು, ಮುಂಭಾಗದ ಕ್ಯಾಮೆರಾ ಕಟೌಟ್‌ಗಳನ್ನು ತೆಗೆದುಹಾಕಲು ಮತ್ತು ಹೊಸ ಅನುಭವವನ್ನು ನೀಡಲು ವ್ಯೂಸಾನಿಕ್‌ ಮುಂದಾಗಿದೆ ಎಂದು ಈ ಮೂಲಕ ಕಂಡುಕೊಳ್ಳಬಹುದು. ಈ ಹಿಂದೆ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಫೀಚರ್ಸ್‌ ಅನ್ನು ಪರಿಚಯಿಸಲಾಗಿತ್ತಾದರೂ ಇದನ್ನು ನಿರ್ವಹಿಸಲು ಕಷ್ಟವಾದ್ದರಿಂದ ಕೈ ಬಿಡಲಾಗಿದೆ.

ವ್ಯೂಸಾನಿಕ್‌ನಿಂದ ಹೊಸ ಎರಡು ಮಾನಿಟರ್‌ ಲಾಂಚ್‌; ಪಾಪ್-ಅಪ್ ಕ್ಯಾಮೆರಾ ಆಯ್ಕೆ!

ವ್ಯೂಸೋನಿಕ್‌ನ ಹೊಸ ಪಾಪ್-ಅಪ್ ಕ್ಯಾಮೆರಾಗಳು ಕೆಲವು ಆರಂಭಿಕ ಮೂಲ ಮಾದರಿಗಳನ್ನು ಮೀರಿ ಪ್ರಗತಿ ಸಾಧಿಸಿದ್ದು, ಎರಡೂ ಬದಿಗಳಲ್ಲಿ ಹೊಸ ರೀತಿಯ ಫಿಲ್-ಲೈಟ್ ಎಲ್‌ಇಡಿಗಳಿಂದ ಇನ್ನಷ್ಟು ಆಕರ್ಷಣೀಯ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡಲಿವೆ. ಹೆಚ್ಚುವರಿಯಾಗಿ ವಿಡಿಯೋ ರೆಕಾರ್ಡ್‌ ಮಾಡುವ ಅಥವಾ ಸಭೆಯಲ್ಲಿ ಭಾಗಿಯಾಗಿರುವಾಗ ಬಣ್ಣದಲ್ಲಿ ಹಾಗೂ ಇತರೆ ವಿಭಾಗದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ತಿರುಗಿಸಬಹುದು
ಇದಷ್ಟೇ ಅಲ್ಲದೆ ಈ ಡಾಕಿಂಗ್ ಕ್ಯಾಮೆರಾವನ್ನು ಯಾವುದೇ ದಿಕ್ಕಿನಲ್ಲಿ ಅಂದರೆ ಹಿಂದಕ್ಕೆ ಅಥವಾ ಮುಂದಕ್ಕೆ 5 ಡಿಗ್ರಿಗಳಷ್ಟು ತಿರುಗಿಸಬಹುದಾದ ಆಯ್ಕೆ ಸಹ ನೀಡಲಾಗಿದೆ. ಇದರೊಂದಿಗೆ ಡ್ಯುಯಲ್ ಸ್ಪೀಕರ್‌ಗಳು ಮತ್ತು ಎರಡು ಮಾರ್ಗದ ಮೈಕ್ರೊಫೋನ್‌ಗಳೊಂದಿಗೆ ಪ್ಯಾಕ್‌ ಆಗಿರುವ ಈ ಮಾನಿಟರ್ಸ್‌ಗಳು ಕಾನ್ಫರೆನ್ಸ್ ಸಂದರ್ಭದಲ್ಲಿ ಅನಗತ್ಯ ಹಿನ್ನೆಲೆ ಶಬ್ದವನ್ನು ತೆಗೆದುಹಾಕುವ ಮೂಲಕ ಸುಲಭವಾಗಿ ಭಾಗಿಯಾಗಲು ಅನುವು ಮಾಡಿಕೊಡುತ್ತವೆ. ಇನ್ನು ಕ್ಯಾಮೆರಾ ಬಳಕೆ ಮುಗಿದ ನಂತರ ಬಳಕೆದಾರರು ಮಾನಿಟರ್‌ಗಳ ಬಾಡಿಗೆ ಸುಲಭವಾಗಿ ಕ್ಯಾಮೆರಾವನ್ನು ನೂಕಬಹುದಾಗಿದೆ. ಈ ದೊಡ್ಡ ಡಿಸ್‌ಪ್ಲೇ ಆಯ್ಕೆ ಇರುವ ಮಾನಿಟರ್‌ನಲ್ಲಿ ಪಾಪ್‌ ಆಪ್ ಕ್ಯಾಮೆರಾ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತವೆ ಎಂದು ವ್ಯೂಸೋನಿಕ್ ಹೇಳಿಕೊಂಡಿದೆ.

ವ್ಯೂಸಾನಿಕ್‌ನಿಂದ ಹೊಸ ಎರಡು ಮಾನಿಟರ್‌ ಲಾಂಚ್‌; ಪಾಪ್-ಅಪ್ ಕ್ಯಾಮೆರಾ ಆಯ್ಕೆ!

ಇನ್ನು ಕನೆಕ್ಟಿವಿಟಿ ವಿಚಾರದಲ್ಲಿ ಈ ಮಾನಿಟರ್‌ಗಳು 90W ಟೈಪ್-ಸಿ ಸಂಪರ್ಕ ಮತ್ತು ಗಿಗಾಬಿಟ್ ಈಥರ್ನೆಟ್‌ಗಾಗಿ RJ-45 ಜ್ಯಾಕ್ ಸೇರಿದಂತೆ ಇತರೆ ಪೋರ್ಟ್‌ ಆಯ್ಕೆ ಹೊಂದಿವೆ. ಜೊತೆಗೆ ಹೆಚ್‌ಡಿಎಮ್‌ಐ 1.4 ಮತ್ತು ಡಿಸ್‌ಪ್ಲೇ ಪೋರ್ಟ್‌ನಲ್ಲಿ ಇನ್‌ಪುಟ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಇದರೊಂದಿಗೆ 100×100 ವೆಸಾ ಮೌಂಟ್‌ನೊಂದಿಗೆ ಬರುವ ಇವು ಎತ್ತರ ಹೊಂದಾಣಿಕೆಯ ಸ್ಟ್ಯಾಂಡ್‌ ಅನ್ನು ಪಡೆದಿರುವುದು ಇನ್ನಷ್ಟು ವಿಶೇಷ.

ವ್ಯೂಸಾನಿಕ್‌ನಿಂದ ಹೊಸ ಎರಡು ಮಾನಿಟರ್‌ ಲಾಂಚ್‌; ಪಾಪ್-ಅಪ್ ಕ್ಯಾಮೆರಾ ಆಯ್ಕೆ!

ಬೆಲೆ ಹಾಗೂ ಲಭ್ಯತೆ
VG246V ಮತ್ತು VG2756V-2K ಮಾನಿಟರ್‌ಗಳನ್ನು ಯುಎಸ್‌ನ ಆನ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ. VG246V ಮಾನಿಟರ್‌ಗೆ US$358.99 (ಸುಮಾರು 29,165.68 ರೂ. ಗಳು) ಹಾಗೂ VG2756V-2K ಗೆ US$480.99 (ಸುಮಾರು 39,079.33 ರೂ. ಗಳು) ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ VG2756V-2K ಸದ್ಯಕ್ಕೆ ಅಮೆಜಾನ್‌ನಲ್ಲಿ US$459.99 (ಸುಮಾರು 37,373.13 ರೂ. ಗಳಿಗೆ) ಲಭ್ಯವಾಗುತ್ತಿದೆ.

Best Mobiles in India

English summary
ViewSonic new monitor has been unveiled with a pop up camera option. details in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X