Subscribe to Gizbot

ಇಂಟರ್ನೆಟ್ ವೇಗಗೊಳಿಸುವಲ್ಲಿ ಯಶಸ್ವಿಯಾದ ಹೊಸ ಸಂಶೋಧನೆ

Written By:

ತಂತ್ರಜ್ಞಾನ ಅಭಿವೃದ್ದಿಗೊಂಡಂತೆ ಇಂದು ಕೆಲವು ಗ್ಯಾಜೆಟ್ಸ್‌ಗಳ ಅನುಭವವನ್ನು ದಿನದಿಂದ ದಿನಕ್ಕೆ ಟೆಕ್‌ ಹೆಚ್ಚು ಮಾಡುತ್ತಿದೆ. ಅವುಗಳಲ್ಲಿ ವೈಫೈ ಬಳಕೆ, ಇಂಟರ್ನೆಟ್ ಬಳಕೆ, ಗ್ಯಾಜೆಟ್ಸ್‌ಗಳ ಬ್ಯಾಟರಿ ಸಾಮರ್ಥ್ಯ ಹೆಚ್ಚು ಮಾಡುವಿಕೆ ಹೀಗೆ ಹಲವು ಉಪಯುಕ್ತ ಅಭಿವೃದ್ದಿಗಳು ಆಗುತ್ತಲೇ ಇವೆ. ಅಂತಹ ಸಾಲಿನಲ್ಲಿ ಇಂದು ನಿಮಗೆ ಗಿಜ್‌ಬಾಟ್‌ ಇಂಟರ್ನೆಟ್‌ ವೇಗಗೊಳಿಸುವ ಸಂಶೋಧನೆ ಒಂದನ್ನು ಪರಿಚಯಿಸಲಿದೆ.

ಓದಿರಿ: ಏರ್‌ಟೆಲ್‌ 4G: ತಿಳಿಯಲೇ ಬೇಕಾದ ವಿಶೇಷ ಮಾಹಿತಿ

ಇಂಟರ್ನೆಟ್ ವೇಗಗೊಳಿಸುವಲ್ಲಿ ಯಶಸ್ವಿಯಾದ ಹೊಸ ಸಂಶೋಧನೆ

ಹೌದು, ಇದಕ್ಕೆ ನಿದರ್ಶನವಾಗಿ ಸಂಶೋಧಕರು ಇಂಟರ್ನೆಟ್ ವೇಗಗೊಳಿಸುವ ಒಂದು ಹೊಸ ಮಾರ್ಗ ಒಂದನ್ನು ಕಂಡುಹಿಡಿದಿದ್ದಾರೆ. ಆಪ್ಟಿಕಲ್‌ ಫೈಬರ್ಸ್ ಡಾಟಾ ಟ್ವಿಸ್ಟಿಂಗ್ ಮಾಡಿ, ಹಲವ ಡಾಟಾ ಸ್ಟ್ರೀಮ್ಸ್‌ ರವಾನೆಯಾಗಿ ಇಂಟರ್ನೆಟ್‌ ಡಾಟಾವನ್ನು ವೇಗಗೊಳಿಸಬಲ್ಲದು' ಎಂದು ನ್ಯೂಯಾರ್ಕ್‌ ಸಿಟಿ ಕಾಲೇಜ್‌ನ ಡಾಕ್ಟರಲ್ ವಿದ್ಯಾರ್ಥಿ ಜಿಯೋವಾನಿ ಮಿಲಿಯೊನೆ ಸಂಶೋಧನಾ ಸಂದರ್ಭದಲ್ಲಿ ಹೇಳಿದ್ದಾರೆ ಎಂದಿದ್ದಾರೆ.

' ಉತ್ತಮವಾದ ಆಪ್ಟಿಕಲ್‌ ಫೈಬರ್ಸ್‌ ಅನ್ನು ಬಳಸಿ ಇದು ಡಾಟಾ ತಿರುಚುವಿಕೆಯನ್ನು ಬಿಡಿಸಿದೆ. ಡಾಟಾ ಡಿಜಿಟಲಿ ರಿ-ಟ್ವಿಸ್ಟ್‌ ಆಗಿ, ನಂತರದಲ್ಲಿ ಸ್ವೀಕಾರವಾಗಿದೆ. ಇದು ನಂತರ ಪುನಃ ರಿಕವರ್‌ ಆಗಲಿದೆ ಎಂದು ಜಿಯೋವಾನಿ ಮಿಲಿಯೊನೆ ಹೇಳಿದ್ದಾರೆ. ಈ ರೀತಿ ಚಟುವಟಿಕೆ ನಿರ್ವಹಿಸಲು ಸಂಶೋಧಕರು ರೇಡಿಯೋ ಸಂವಹನ ಟೆಕ್ನಾಲಜಿ ಬಳಸಿಕೊಂಡಿದ್ದಾರೆ. ಇದನ್ನು 'MIMO' ಎಂದು ಹೆಸರಿಸಲಾಗಿದೆ. ಅಲ್ಲದೇ ಇದನ್ನು ಸೆಲ್‌ಫೋನ್‌ ಮತ್ತು ವೈಫೈ ರೂಟರ್‌ಗಳಿಂದ ದಿನನಿತ್ಯ ಬಳಸುತ್ತಿದ್ದಾರೆ.

ಓದಿರಿ: ಭಾರತೀಯರಿಗೆ ಈ ವಾರ ಸ್ಮಾರ್ಟ್‌ಫೋನ್ ಸುಗ್ಗಿ

ಇಂಟರ್ನೆಟ್ ವೇಗಗೊಳಿಸುವಲ್ಲಿ ಯಶಸ್ವಿಯಾದ ಹೊಸ ಸಂಶೋಧನೆ

ಈ ಅಭಿವೃದ್ದಿಯು ದಶಮಾಂಶ ಚಾಲಿತ ಅಗತ್ಯಗಳಿಗೆ ಪರಿಹಾರ ನೀಡಲಿದೆ. ಸಾಮಾಜಿಕ ಜಾಲತಾಣಗಳಾದ, ಫೇಸ್‌ಬುಕ್‌, ಯೂಟ್ಯೂಬ್‌ಗಳಲ್ಲಿ ಇಂಟರ್ನೆಟ್‌ ವೇಗಗೊಳಿಸಲು ಸಹಾಯಕವಾಗಿದೆ ಎನ್ನಲಾಗಿದೆ.

ಇಂಟರ್ನೆಟ್ ವೇಗಗೊಳಿಸುವಲ್ಲಿ ಯಶಸ್ವಿಯಾದ ಹೊಸ ಸಂಶೋಧನೆ
English summary
Researchers have demonstrated a new way to increase the data speeds of optical fibres which may lead to a faster internet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot