ಅನಿವಾಸಿ ಭಾರತೀಯರು ಇನ್ನು ಪರದಾಡಬೇಕಿಲ್ಲ, UPI ಮೂಲಕ ಹಣ ಕಳುಹಿಸಬಹುದು!

|

ಇಷ್ಟು ದಿನ ಅನಿವಾಸಿ ಭಾರತೀಯರು ಹಣವನ್ನು ಕಳುಹಿಸಲು ತುಂಬಾ ಪರದಾಡಬೇಕಾಗುತ್ತಿತ್ತು. ಆದ್ರೆ, ಈಗ ಅವರು ತುಂಬಾ ಸುಲಭವಾಗಿ ಹಣವನ್ನು ಬೇಕಾದವರಿಗೆ ಕಳುಹಿಸಬಹುದಾಗಿದೆ. ಅದೂ ಕೂಡ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಪೇಸ್ ಅಥವಾ ಯಪಿಐ (UPI) ಮೂಲಕ. ಅಂದಹಾಗೆ ಈ ಹಣವನ್ನು ಪಾವತಿಸಲು ಯಾವುದೇ ರೀತಿಯ ಭಾರತೀಯ ಮೊಬೈಲ್‌ ನಂಬರ್‌ ಪಡೆಯುವ ಅವಶ್ಯಕತೆ ಸಹ ಇರುವುದಿಲ್ಲ. ಈ ಒಂದು ವ್ಯವಸ್ಥೆ 10 ದೇಶಗಳಲ್ಲಿರುವ ಎನ್‌ಆರ್‌ಐಗಳಿಗೆ ಲಭ್ಯವಿರಲಿದೆ.

ಅನಿವಾಸಿ

ಹೌದು, ಅನಿವಾಸಿ ಭಾರತೀಯರು ಇಂಡಿಯಾದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಈಗ ಯುಪಿಐ ಮೂಲಕ ಪಾವತಿಯನ್ನು ಮಾಡಬಹುದು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಮಾಹಿತಿ ನೀಡಿದೆ.

ಪೇಮೆಂಟ್ಸ್

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) 10 ದೇಶಗಳಲ್ಲಿರುವ ಅನಿವಾಸಿ ಭಾರತೀಯರಿಗೆ ಈ ಸೌಲಭ್ಯವನ್ನು ನೀಡಿದೆ. ಈ ದೇಶಗಳಲ್ಲಿರುವ ಎನ್‌ಆರ್ಐಗಳು ಯುಪಿಐ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಎನ್‌ಆರ್‌ಇ ಅಥವಾ ಎನ್‌ಆರ್ಒ ಮೂಲಕ ಹಣವನ್ನು ವರ್ಗಾಯಿಸಬಹುದಾಗಿದೆ. ಹಣವನ್ನು ಡಿಜಿಟಲ್‌ ರೂಪದಲ್ಲಿ ಮಾತ್ರ ವರ್ಗಾಯಿಸಲು ಅವಕಾಶ ನೀಡಲಾಗಿದ್ದು, ಈ ಮೂಲಕ ಎನ್‌ಪಿಸಿಐ ಅನಿವಾಸಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ.

ಎನ್‌ಆರ್‌ಇ

ಎನ್‌ಆರ್‌ಇ ಅಥವಾ ಎನ್‌ಆರ್‌ಒ ಖಾತೆಯನ್ನು ಹೊಂದಿರುವ 10 ದೇಶಗಳಲ್ಲಿರುವ ಅನಿವಾಸಿ ಭಾರತೀಯರು ಅಂತಾರಾಷ್ಟ್ರೀಯ ಮೊಬೈಲ್‌ ಸಂಖ್ಯೆಯನ್ನು ಬಳಸಿಕೊಂಡು ಯುಪಿಐ ಮೂಲಕ ತಮ್ಮ ವಹಿವಾಟನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಅನಿವಾಸಿಗಳು ಅಂತಾರಾಷ್ಟ್ರೀಯ ಮೊಬೈಲ್‌ ಸಂಖ್ಯೆಯನ್ನು ಬಳಸಿಕೊಂಡು ಯುಪಿಐನಲ್ಲಿ ವಹಿವಾಟು ನಡೆಸಲು ಅನುಮತಿ ನೀಡುವಂತೆ ಈಗಾಗಲೇ ಮನವಿಗಳು ಬರುತ್ತಿವೆ ಎಂದು ಎನ್‌ಪಿಸಿಐ ತಿಳಿಸಿದೆ.

ಏಪ್ರಿಲ್‌ 30 ರ ವರೆಗೆ ಸಮಯ

ಏಪ್ರಿಲ್‌ 30 ರ ವರೆಗೆ ಸಮಯ

ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಅನಿವಾಸಿಗಳು ಎನ್‌ಆರ್‌ಇ ಅಥವಾ ಎನ್‌ಆರ್ಒ ಬ್ಯಾಂಕ್‌ ಖಾತೆಯನ್ನು ಬಳಸಿಕೊಂಡು ಹಣವನ್ನು ವರ್ಗಾಯಿಸಲು ಅನುಮತಿಸುವ ನಿರ್ದೇಶನಗಳನ್ನು ಅನುಸರಿಸಲು, ಎನ್‌ಪಿಸಿಐ ಪಾಲುದಾರ ಬ್ಯಾಂಕ್‌ಗಳಿಗೆ ಏಪ್ರಿಲ್ 30 ರವರೆಗೆ ಸಮಯವನ್ನು ನೀಡಿದೆ. ಅಲ್ಲದೇ ಹಣ ವರ್ಗಾವಣೆಗೆ ಕೆಲವು ಮಿತಿಗಳನ್ನು ನಿಗದಿಪಡಿಸಿದ್ದು, ಅದರೊಳಗೆ ಮಾತ್ರ ವ್ಯವಹಾರ ಮಾಡಲು ಸಾಧ್ಯ.

ಈ ಖಾತೆ ಹೊಂದಿರಬೇಕು

ಈ ಖಾತೆ ಹೊಂದಿರಬೇಕು

ಅನಿವಾಸಿ ಭಾರತೀಯರು ಈ ಸೌಲಭ್ಯವನ್ನು ಪಡೆಯಲು ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಹೊಂದಿರುವ ಎನ್‌ಆರ್‌ಇ ಅಥವಾ ಎನ್‌ಆರ್‌ಒ ಖಾತೆಯನ್ನು ಹೊಂದಿರಬೇಕು. ಈ ಖಾತೆ ಪ್ರಕಾರ ಯುಪಿಐನಲ್ಲಿ ಅನ್‌ಬೋರ್ಡ್‌/ವ್ಯವಹಾರವನ್ನು ನಡೆಸಲು ಅನುಮತಿಸಲಾಗುವುದು. ಇದರ ಜೊತೆಗೆ ಎನ್‌ಆರ್‌ಐಗಳು ಫೆಮಾ ನಿಬಂಧನೆಗಳನ್ನು ಉಲ್ಲಂಘಿಸಬಾರದು. ಜೊತೆಗೆ ಸದಸ್ಯ ಬ್ಯಾಂಕ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ ಎಂದು ಎನ್‌ಪಿಸಿಐ ತನ್ನ ಅಧಿಕೃತ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.

ಯುಪಿಐ ಮೂಲಕ ವಹಿವಾಟು ಮಾಡಬಹುದಾದ ದೇಶಗಳಿವು

ಯುಪಿಐ ಮೂಲಕ ವಹಿವಾಟು ಮಾಡಬಹುದಾದ ದೇಶಗಳಿವು

ಸಿಂಗಾಪುರ್, ಆಸ್ಟ್ರೇಲಿಯಾ, ಕೆನಡಾ, ಹಾಂಗ್ ಕಾಂಗ್, ಓಮನ್, ಕತಾರ್, ಯುಎಸ್‌ಎ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಈ ದೇಶಗಳ ಕೋಡ್‌ ಅನ್ನು ಹೊಂದಿರುವ ಮೊಬೈಲ್ ಸಂಖ್ಯೆಗಳಿಗೆ ವಹಿವಾಟನ್ನು ಮಾಡಲು ಎನ್‌ಪಿಸಿಐ ಅನುಮತಿಸಿದೆ. ಅಲ್ಲದೆ ಅನಿವಾಸಿಗಳ ಅಕೌಂಟ್‌ ನಂಬರ್‌ನನ್ನು ಭಾರತದ ಕೋಡ್‌ನೊಂದಿಗೆ ಸಕ್ರಿಯಗೊಳಿಸಲಾಗುತ್ತದೆ. ಅದರಂತೆ ಈ ಸೌಲಭ್ಯವು ಮೇಲಿನ 10 ದೇಶಗಳಲ್ಲಿರುವ ಎನ್‌ಆರ್‌ಐಗಳಿಗೆ ಮಾತ್ರ ಲಭ್ಯವಿರುತ್ತದೆ.

ದೇಶಗಳ

ಮೊದಲಿಗೆ ನಾವು ಈ 10 ದೇಶಗಳ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಗಳಿಂದ ವಹಿವಾಟನ್ನು ಆರಂಭಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಇತರ ದೇಶದ ಕೋಡ್‌ಗಳಿಗೂ ವಿಸ್ತರಿಸುತ್ತೇವೆ ಎಂದು ಯುಪಿಐ ಪ್ಲಾಟ್‌ಫಾರ್ಮ್‌ನನ್ನು ನಿರ್ವಹಿಸುವ ಎನ್‌ಪಿಸಿಐ ಹೇಳಿದೆ. ಅಂತೆಯೇ ಯುಪಿಐ ಖಾತೆಗಳನ್ನು ಅನುಮತಿಸುವಾಗ ಬ್ಯಾಂಕ್‌ಗಳು ಹೆಚ್ಚಿನ ಜವಬ್ದಾರಿಯನ್ನು ಹೊಂದಿರುತ್ತವೆ ಎಂದು ತಿಳಿಸಿದೆ.

ಯುಪಿಐ

ಯುಪಿಐ ಸುಮಾರು ಆರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಇದು ತ್ವರಿತವಾಗಿ ಡಿಜಿಟಲ್ ಪಾವತಿ ಮಾಡುವುದನ್ನು ಸುಗಮಗೊಳಿಸಿ, ಅನೇಕ ಭಾರತೀಯರಿಗೆ ಪ್ರಯೋಜನವನ್ನು ನೀಡಿದೆ. ಪೇಟಿಎಮ್‌, ಗೂಗಲ್‌ ಪೇ, ಫೋನ್‌ ಪೇ ಮತ್ತು ಇತರ ವೇದಿಕೆಗಳನ್ನು ಬಳಸಿಕೊಂಡು UPI ಖಾತೆಯನ್ನು ರಚಿಸಬಹುದಾಗಿದೆ.

ಕ್ಲಿಕ್‌

ಬಳಕೆದಾರರು ಕೆಲವೇ ಕ್ಲಿಕ್‌ಗಳಲ್ಲಿ ಸುಲಭವಾಗಿ ಹಣವನ್ನು ಇನ್ನೊಬ್ಬ ಬಳಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು. ಮತ್ತೊಂದೆಡೆ, RTGS ಅಥವಾ NEFT ಯಂತಹ ಸಾಂಪ್ರದಾಯಿಕ ವಿಧಾನಗಳ ಮೂಲಕ ಡಿಜಿಟಲ್ ಮೂಲಕ ಹಣವನ್ನು ಕಳುಹಿಸುವುದು ತೊಡಕಿನ ಮತ್ತು ಸಂಕೀರ್ಣವಾಗಿತ್ತು. ಆದರೆ ಈ ಡಿಜಿಟಲ್‌ ಪೇಮೆಂಟ್‌ ಬಹಳ ಸರಳ ವಿಧಾನದ ಮೂಲಕ ಹಣ ವರ್ಗಾವಣೆ ಮಾಡಲು ಅನುವು ಮಾಡಿಕೊಡುತ್ತದೆ.

Best Mobiles in India

English summary
NRIs from these countries will soon be able to make UPI payments.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X