Subscribe to Gizbot

ರೂ 3,690 ಕ್ಕೆ ಪ್ಯಾನಸೋನಿಕ್ 3ಜಿ ಫೋನ್

Written By:

ಪ್ಯಾನಸೋನಿಕ್ ಹೊಸ ಸ್ಮಾರ್ಟ್‌ಫೋನ್ 21 ಭಾಷೆಗಳನ್ನು ಬೆಂಬಲಿಸುವ ಲವ್ ಟಿ10 ಅನ್ನು ಲಾಂಚ್ ಮಾಡಿದೆ. ಇದರ ಬೆಲೆ ರೂ 3,690 ಆಗಿದ್ದು ಸಣ್ಣ ನಗರಗಳಲ್ಲಿರುವ ಬಳಕೆದಾರರ ಬಯಕೆಗಳನ್ನು ಈಡೇರಿಸಲು ಮತ್ತು ಮುಂಬರಲಿರುವ ನಗರ ಮಾರುಕಟ್ಟೆಗೆ ಸೂಕ್ತ ಪೈಪೋಟಿಯನ್ನು ಒಡ್ಡುವುದಕ್ಕಾಗಿ ಈ 3ಜಿ ಸ್ಮಾರ್ಟ್‌ಫೋನ್ ಅನ್ನು ಕಂಪೆನಿ ಲಾಂಚ್ ಮಾಡಿದೆ. ವೇಗದ ಇಂಟರ್ನೆಟ್ ಸೌಲಭ್ಯವನ್ನು ಈ ಡಿವೈಸ್ ಹೊಂದಿದ್ದು ಫೋನ್ ಬಳಸುವ ಬಳಕೆದಾರರು ಹೊಸ ಪ್ರಪಂಚದಲ್ಲಿ ತೇಲುವುದಂತೂ ಸತ್ಯ.

ಓದಿರಿ: ಹೈ ಸ್ಪೀಡ್ ಇಂಟರ್ನೆಟ್ 4ಜಿ ಲಭ್ಯವಿರುವ ಬಜೆಟ್ ಫೋನ್‌ಗಳು

ರೂ 3,690 ಕ್ಕೆ ಪ್ಯಾನಸೋನಿಕ್ 3ಜಿ ಫೋನ್

ಇನ್ನು ಫೋನ್‌ನ ವೈಶಿಷ್ಟ್ಯತೆಗಳತ್ತ ನೋಡುವುದಾದರೆ ಇದು 3.5 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ. ಇನ್ನು 1GHZ ಡ್ಯುಯಲ್ ಕೋರ್ ಪ್ರೊಸೆಸರ್‌ಗೆ ಇದು ಬೆಂಬಲವನ್ನು ನೀಡುತ್ತಿದ್ದು, ಆಂಡ್ರಾಯ್ಡ್ 4.4.2 ಇದರಲ್ಲಿ ಚಾಲನೆಯಾಗುತ್ತಿದೆ. ಕ್ಯಾಮೆರಾ ಸಾಮರ್ಥ್ಯ 2 ಎಮ್‌ಪಿಯಾಗಿದ್ದು 1400mAh ಬ್ಯಾಟರಿ ಇದರಲ್ಲಿದೆ.

ರೂ 3,690 ಕ್ಕೆ ಪ್ಯಾನಸೋನಿಕ್ 3ಜಿ ಫೋನ್

ಲವ್ ಟಿ10, 21 ಭಾಷೆಗಳಿಗೆ ಬೆಂಬಲವನ್ನು ಒದಗಿಸುತ್ತಿದ್ದು ಹಿಂದಿ, ಗುಜರಾತಿ, ಪಂಜಾಬಿ, ಮಲಯಾಳಮ್, ತಮಿಳು, ತೆಲುಗು, ಕನ್ನಡ, ಒರಿಯಾ, ಬೆಂಗಾಳಿ, ಅಸ್ಸಾಮಿ, ಮರಾಠಿ, ನೇಪಾಳಿ, ಬೊಡೊ, ಡೋಗ್ರಿ, ಕೊಂಕಣಿ, ಉರ್ದು, ಮೈಥಿಲಿ, ಮಣಿಪುರಿ, ಸಂಸ್ಕೃತ, ಸಿಂಧಿ ಮತ್ತು ಸಂತೆಲ್ ಭಾಷೆಗಳಾಗಿವೆ.

ಓದಿರಿ: ಕೆಳದರ್ಜೆಯ ಉದ್ಯೋಗದಿಂದ ಮೇಲ್ದರ್ಜೆಗೇರಿದ ಟೆಕ್ ನಕ್ಷತ್ರಗಳು

ಗ್ರಾಹಕ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಹೆಸರುವಾಸಿಯವಾಗಿರುವ ಪ್ಯಾನಸೋನಿಕ್ ಎಲ್‌ಸಿಡಿ ಮತ್ತು ಪ್ಲಾಸ್ಮಾ ಟಿವಿ, ಡಿವಿಡಿ ಪ್ಲೇಯರ್, ಹೋಮ್ ಥಿಯೇಟರ್ ಸಿಸ್ಟಮ್ ಮೊದಲಾದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ.

English summary
PANASONIC LAUNCHES AFFORDABLE 3G SMARTPHONE SERIES “LOVE” WITH SMARTPHONE LOVE T10 SUPPORTING 21 INDIAN REGIONAL LANGUAGES.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot