ಭಾರತದ ರಾಜಕಾರಣಿಗಳ, ಪತ್ರಕರ್ತರ ಮೇಲೆ ಸ್ಪೈವೇರ್ ಪೆಗಾಸಸ್‌ ಕಣ್ಣು!

|

ಇಸ್ರೇಲಿ ಸ್ಪೈವೇರ್ ಪೆಗಾಸಸ್ ತಂತ್ರಾಂಶ ಬಳಸಿ ಭಾರತದ ಪ್ರಮುಖ ರಾಜಕಾರಣಿಗಳ, ಸಾಮಾಜಿಕ ಕಾರ್ಯಕರ್ತರ, ಸರ್ಕಾರಿ ಅಧಿಕಾರಿಗಳ ಹಾಗೂ ಪತ್ರಕರ್ತರ ಮೊಬೈಲ್‌ ಸಂಖ್ಯೆ ಹ್ಯಾಕ್ ಮಾಡಿ ಅವರ ಮೇಲೆ ಕಣ್ಣಿಡಲಾಗಿದೆ ಎನ್ನುವ ಸಂಗತಿಯನ್ನು ದಿ ವೈರ್ ವರದಿ ಮಾಡಿದೆ.

ನ್ಯಾಯಾಧೀಶ

ಇಸ್ರೇಲ್‌ನ ಎನ್‌ಎಸ್‌ಓ ಗ್ರೂಪ್‌ ಟೆಕ್ನಾಲಜೀಸ್ ಹರಿ ಬಿಟ್ಟಿರುವ ಕು-ತಂತ್ರಾಂಶ ಪೆಗಾಸಸ್‌ ಬಳಸಿ ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್‌ನ ಇಬ್ಬರು ಸಚಿವರು, ಮೂವರು ವಿಪಕ್ಷ ನಾಯಕರು, ಓರ್ವ ನ್ಯಾಯಾಧೀಶ, ಉದ್ಯಮಿಗಳು, ಚಳವಳಿಗಾರರು ಮತ್ತು 40ಕ್ಕೂ ಹೆಚ್ಚು ಪತ್ರಕರ್ತರು ಸೇರಿದಂತೆ 300ಕ್ಕೂ ಹೆಚ್ಚು ಮೊಬೈಲ್‌ ಸಂಖ್ಯೆಗಳು ಹ್ಯಾಕ್‌ ಆಗಿರುವ ಮಾಹಿತಿ ಬಯಲಾಗಿದೆ.

ಕೋರೆಗಾಂವ್

ಹಾಗೆಯೇ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದ ಎಂಟು ಕಾರ್ಯಕರ್ತರು, ವಕೀಲರು ಹಾಗೂ ಶಿಕ್ಷಣ ತಜ್ಞರ ಮೊಬೈಲ್‌ಗಳು ಹ್ಯಾಕ್ ಆಗಿರುವುದಾಗಿ ಬಗ್ಗೆ ವರದಿಗಳಿಂದ ತಿಳಿದುಬಂದಿದೆ. ಪತ್ರಕರ್ತರ ಪೈಕಿ ಸುಶಾಂತ್ ಸಿಂಗ್, ಜೆ. ಗೋಪಿಕೃಷ್ಣನ್, ಶಿಶಿರ್ ಗುಪ್ತಾ, ರಿತಿಕಾ ಛೋಪ್ರಾ, ಪ್ರಶಾಂತ್ ಝಾ, ಪ್ರೇಮ್ ಶಂಕರ್ ಝಾ, ಸ್ವಾತಿ ಚತುರ್ವೇದಿ, ರಾಹುಲ್ ಸಿಂಗ್, ಮುಜಾಮಿಲ್ ಜಲೀಲ್, ಇಫ್ತಿಯಾರ್ ಗಿಲಾನಿ, ಸಂದೀಪ್ ಉನ್ನಿತಾನ್, ಸಿದ್ಧಾರ್ಥ್ ವರದರಾಜನ್ ಹಾಗೂ ಎಂ.ಕೆ. ವೇಣು ಅವರ ಹೆಸರುಗಳು ಈ ಹ್ಯಾಕ್‌ ಆಗಿರುವ ಪಟ್ಟಿಯಲ್ಲಿರುವುದಾಗಿ ತಿಳಿದುಬಂದಿದೆ.

ಪೆಗಾಸಸ್‌

ಸರ್ಕಾರಕ್ಕೆ ಮಾತ್ರ ಮಾರಾಟ ಮಾಡಲಾಗುವ ಇಸ್ರೇಲ್‌ ಮೂಲದ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್‌ ಸಾಫ್ಟ್‌ವೇರ್‌ನಿಂದ ಈ ಮೊಬೈಲ್‌ ಸಂಖ್ಯೆಗಳು ಹ್ಯಾಕ್‌ ಆಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಒಕ್ಕೂಟ ವರದಿ ಮಾಡಿದೆ. ಆದರೆ ಯಾವುದೇ ವ್ಯಕ್ತಿಗಳ ಮೇಲೆ ಯಾವುದೇ ರೀತಿಯಲ್ಲಿ ಕಣ್ಗಾವಲು ವಹಿಸಿಲ್ಲ. ಎಂದು ಭಾರತ ಸರ್ಕಾರ ಹೇಳಿದೆ.

ಖಚಿತಪಡಿಸಿಕೊಳ್ಳಲು

ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ತನ್ನೆಲ್ಲಾ ಪ್ರಜೆಗಳ ಗೌಪ್ಯತೆಯ ಹಕ್ಕು ಮೂಲಭೂತ ಹಕ್ಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಜೊತೆಗೆ ಮಾಧ್ಯಮ ವರದಿಯನ್ನು ತನಿಖಾಧಿಕಾರಿ, ಪ್ರಾಸಿಕ್ಯೂಟರ್‌ ಮತ್ತು ತೀರ್ಪುಗಾರರ ಪಾತ್ರ ವಹಿಸುವ ಯತ್ನವನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ.

ವೆಬ್‌ಸೈಟ್‌

ವಾಷಿಂಗ್ಟನ್‌ ಪೋಸ್ಟ್‌, ದಿ ಗಾರ್ಡಿಯನ್‌ ಸೇರಿದಂತೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಭಾರತದ ದಿ ವೈರ್‌ ವೆಬ್‌ಸೈಟ್‌ ವಿಶ್ವಾದ್ಯಂತ 50 ಸಾವಿರ ಮೊಬೈಲ್‌ ಸಂಖ್ಯೆಗಳನ್ನು ಇಸ್ರೇಲ್‌ನ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್‌ ಸಾಫ್ಟ್‌ವೇರ್‌ನಿಂದ ಹ್ಯಾಕ್‌ ಮಾಡಲಾಗಿದೆ ಎಂದು ವರದಿ ಮಾಡಿದ್ದವು.

ಏನಿದು ಪೆಗಾಸಸ್ ತಂತ್ರಾಂಶ

ಏನಿದು ಪೆಗಾಸಸ್ ತಂತ್ರಾಂಶ

ಪೆಗಾಸಸ್ ಎನ್ನುವುದು ಒಂದು ನಿಗೂಢ ತಂತ್ರಾಂಶವಾಗಿದ್ದು, ಈ ತಂತ್ರಾಂಶವನ್ನು ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ( NSO Group) ಅಭಿವೃದ್ಧಿ ಪಡೆಸಿದೆ. ಜಗತ್ತಿನ ಪ್ರಮುಖ ಬಳಕೆದಾರರ ಮಾಹಿತಿ ದೋಚಲು ತಯಾರಿಸಲಾಗಿದ್ದು, ಬಳಕೆದಾರರಿಗೆ ತಿಳಿಯದಂತೆ ಅವರ ಸ್ಮಾರ್ಟ್‌ಫೋನ್ ಸೇರಿಕೊಳ್ಳುತ್ತದೆ. ಹಾಗೆಯೇ ಅವರ ಫೋನಿನ ಎಲ್ಲ ಮಾಹಿತಿಗಳನ್ನು ತನ್ನ ತಂಡಕ್ಕೆ ರವಾನಿಸುತ್ತದೆ.

Best Mobiles in India

English summary
Phones Of Indian Politicians, Journalists Hacked Using Pegasus: Few Facts On Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X