ಇಂದು ಪೊಕೊ C50 ಖರೀದಿಗೆ ಲಭ್ಯ; ಬೆಲೆ ಕೇಳಿ, ಫೋನ್‌ ಪ್ರಿಯರು ಫುಲ್‌ ಖುಷ್!

|

ಪೊಕೊ ಮೊಬೈಲ್ ಸಂಸ್ಥೆಯು ಇತ್ತೀಚಿಗಷ್ಟೆ ಹೊಸದಾಗಿ ಪರಿಚಯಿಸಿರುವ ಪೊಕೊ C50 ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಜ. 10) ಮಧ್ಯಾಹ್ನ 12 ರಿಂದ ಇ-ಕಾಮರ್ಸ್‌ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಫಸ್ಟ್‌ ಸೇಲ್ ಆರಂಭವಾಗಲಿದೆ. ಇನ್ನು ಇದೊಂದು ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ ಆಗಿದ್ದು, 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರುವುದು ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ.

ಇಂದು ಪೊಕೊ C50 ಖರೀದಿಗೆ ಲಭ್ಯ; ಬೆಲೆ ಕೇಳಿ, ಫೋನ್‌ ಪ್ರಿಯರು ಫುಲ್‌ ಖುಷ್!

ಹೌದು, ಪೊಕೊ C50 ಸ್ಮಾರ್ಟ್‌ಫೋನ್ ಇಂದು ಮೊದಲ ಮಾರಾಟ ನಡೆಯಲಿದೆ. ಈ ಫೋನ್ ಡ್ಯುಯಲ್‌ ಕ್ಯಾಮೆರಾ ಹೊಂದಿದ್ದು, ಮುಖ್ಯ ಸೆನ್ಸಾರ್ 8 ಮೆಗಾ ಪಿಕ್ಸಲ್‌ ಆಗಿದೆ. ಹಾಗೆಯೇ ಈ ಫೋನ್ 2GB + 32GB ಮತ್ತು 3GB + 32GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ 10W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಆರಂಭಿಕ ವೇರಿಯಂಟ್‌ ಬೆಲೆಯು 6499ರೂ ಆಗಿದ್ದು, ಫಸ್ಟ್‌ ಸೇಲ್‌ನ ಕೊಡುಗೆಯಲ್ಲಿ 6,249ರೂ. ಗೆ ಖರೀದಿಸಬಹುದಾಗಿದೆ. ಇನ್ನುಳಿದಂತೆ ಈ ಫೋನಿನ ಬೆಲೆ ಎಷ್ಟು ಮತ್ತು ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಇಂದು ಪೊಕೊ C50 ಖರೀದಿಗೆ ಲಭ್ಯ; ಬೆಲೆ ಕೇಳಿ, ಫೋನ್‌ ಪ್ರಿಯರು ಫುಲ್‌ ಖುಷ್!

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಪೊಕೊ C50 ಸ್ಮಾರ್ಟ್‌ಫೋನ್‌ 6.52 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,600x700 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಡಿಸ್‌ಪ್ಲೇ 120Hz ಟಚ್‌ ಸ್ಯಾಂಪ್ಲಿಂಗ್‌ ರೇಟ್‌ನೊಂದಿಗೆ ಬರಲಿದ್ದು, ವಾಟರ್‌ ಡ್ರಾಪ್‌ ಶೈಲಿಯ ನಾಚ್‌ ಹೊಂದಿದೆ.

ಪ್ರೊಸೆಸರ್‌ ಸಾಮರ್ಥ್ಯ ಏನಿದೆ?
ಪೊಕೊ C50 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ A22 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 (Go Edition) ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 3GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಬಳಸಿ ಸಂಗ್ರಹ ಸಾಮರ್ಥ್ಯವನ್ನು 512GB ವರೆಗೆ ವಿಸ್ತರಿಸಬಹುದು.

ಇಂದು ಪೊಕೊ C50 ಖರೀದಿಗೆ ಲಭ್ಯ; ಬೆಲೆ ಕೇಳಿ, ಫೋನ್‌ ಪ್ರಿಯರು ಫುಲ್‌ ಖುಷ್!

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?
ಪೊಕೊ C50 ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು, AI ಸೆನ್ಸಾರ್‌ ಬೆಂಬಲಿಸಲಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಹಿಂದಿನ ಮತ್ತು ಮುಂಭಾಗದ ಎರಡೂ ಕ್ಯಾಮೆರಾಗಳು 1080p ವೀಡಿಯೊಗಳನ್ನು 30fps ನಲ್ಲಿ ಚಿತ್ರೀಕರಿಸುವ ಸಾಮರ್ಥ್ಯವನ್ನು ಹೊಂದಿವೆ.

ಬ್ಯಾಟರಿ ಮತ್ತು ಇತರೆ
ಪೊಕೊ C50 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11/b/g/n, ಬ್ಲೂಟೂತ್‌ v5, GPS/ A-GPS, ಗ್ಲೋನಾಸ್‌, Beidou, ಮೈಕ್ರೋ-USB ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಅನ್ನು ಒಳಗೊಂಡಿದೆ. ಇದಲ್ಲದೆ ಅಕ್ಸಿಲೆರೊಮೀಟರ್ ಮತ್ತು ರಿಯರ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಪೊಕೊ C50 ಸ್ಮಾರ್ಟ್‌ಫೋನ್‌ ಭಾರತದಲ್ಲಿ 2GB + 32GB ಮತ್ತು 3GB + 32GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಈ ಫೋನ್‌ ಕಂಟ್ರಿ ಗ್ರೀನ್ ಮತ್ತು ರಾಯಲ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದು ಫ್ಲಿಪ್‌ಕಾರ್ಟ್‌ ಮೂಲಕ ಇದೇ ಜನವರಿ 10 ರಿಂದ ಸೇಲ್‌ ಆಗಲಿದೆ.

Best Mobiles in India

English summary
POCO C50 Goes for First Sale Today at Flipkart: Price in India, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X