ಅಗ್ಗದ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಇದು ಸೂಕ್ತ ಸಮಯ!

|

ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ C30s ಸ್ಮಾರ್ಟ್‌ಫೋನ್‌ ಪ್ರಮುಖ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನ್‌ ಅನ್ನು ಇನ್ನಷ್ಟು ಡಿಸ್ಕೌಂಟ್‌ ದರದಲ್ಲಿ ಪಡೆಯಲು ಇದೀಗ ಅವಕಾಶ ಲಭ್ಯವಾಗಿದೆ. 10,999ರೂ. ಪ್ರೈಸ್‌ ಟ್ಯಾಗ್‌ ಹೊಂದಿರುವ ಈ ಫೋನ್‌ ಅನ್ನು ಗ್ರಾಹಕರು ಇದೀಗ ಜಸ್ಟ್‌ 6,999ರೂ. ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳಬಹುದು.

ಕ್ರೋಮಾ ಪ್ಲಾಟ್‌ಫಾರ್ಮ್

ಹೌದು, ಜನಪ್ರಿಯ ಕ್ರೋಮಾ ಪ್ಲಾಟ್‌ಫಾರ್ಮ್ ನಲ್ಲಿ ರಿಯಲ್‌ಮಿ C30s (2GB RAM 32GB) ಸ್ಮಾರ್ಟ್‌ಫೋನ್‌ 36% ರಿಯಾಯಿತಿ ಪಡೆದಿದ್ದು, 6,999ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೆ ಸಿಟಿ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ, 750ರೂ, ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ. ಜೊತೆಗೆ ಆಕರ್ಷಕ ಇಎಮ್‌ಐ ಸೌಲಭ್ಯಗಳು ಸಹ ಸಿಗಲಿವೆ.

ರಿಯಲ್‌ಮಿ C30s ಸ್ಮಾರ್ಟ್‌ಫೋನ್‌

ಅಂದಹಾಗೆ ರಿಯಲ್‌ಮಿ C30s ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಯುನಿಸೋಕ್‌ SC9863A SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಈ ಫೋನ್‌ ಸ್ಟ್ರೈಪ್ ಬ್ಲ್ಯಾಕ್ ಮತ್ತು ಸ್ಟ್ರೈಪ್ ಬ್ಲೂ ಬಣ್ಣಗಳ ಆಯ್ಕೆ ಪಡೆದಿದೆ. ಹಾಗಾದರೆ ರಿಯಲ್‌ಮಿ C30s ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ರಿಯಲ್‌ಮಿ C30s ಸ್ಮಾರ್ಟ್‌ಫೋನ್‌ 6.5 ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಇದು 60Hz ರಿಫ್ರೆಶ್ ರೇಟ್ ಮತ್ತು 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 400 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, 88.7% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್‌ ಬಲವೇನು?

ಪ್ರೊಸೆಸರ್‌ ಬಲವೇನು?

ರಿಯಲ್‌ಮಿ C30s ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಯುನಿಸೋಕ್‌ SC9863A SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 12 ಬೆಂಬಲವನ್ನು ಪಡೆದಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಲಾಗಿದೆ.

ಕ್ಯಾಮೆರಾ ಸೆಟ್‌ಅಪ್‌ ಹೇಗಿದೆ?

ಕ್ಯಾಮೆರಾ ಸೆಟ್‌ಅಪ್‌ ಹೇಗಿದೆ?

ರಿಯಲ್‌ಮಿ C30s 8 ಮೆಗಾಪಿಕ್ಸೆಲ್ AI ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದರಲ್ಲಿ ಹಿಂಬದಿಯ ಕ್ಯಾಮೆರಾ ಸೆಟಪ್ 30fps ನಲ್ಲಿ ಫುಲ್‌ HD ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಮುಂಭಾಗದ ಕ್ಯಾಮೆರಾ 30fps ನಲ್ಲಿ HD ವೀಡಿಯೊಗಳನ್ನು ರೆಕಾರ್ಡ್ ಮಾಡುವುದಕ್ಕೆ ಅವಕಾಶ ನೀಡಲಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ ಸೌಲಭ್ಯ

ಬ್ಯಾಟರಿ ಮತ್ತು ಇತರೆ ಫೀಚರ್ಸ್‌ ಸೌಲಭ್ಯ

ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2.4GHz Wi-Fi, ಬ್ಲೂಟೂತ್ v4.2, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB 2.0 ಮೈಕ್ರೋ-ಯುಎಸ್‌ಬಿ ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ Dirac 3.0 ಟೆಕ್ನಾಲಜಿಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದ್ದು, ಮೈಕ್ರೋ-ಟೆಕ್ಸ್ಚರ್ ಸ್ಲಿಪ್-ರೆಸಿಸ್ಟೆಂಟ್ ವಿನ್ಯಾಸವನ್ನು ಹೊಂದಿದೆ.

ಮೆಮೊರಿ ಹಾಗೂ ಬೆಲೆ ಎಷ್ಟಿದೆ?

ಮೆಮೊರಿ ಹಾಗೂ ಬೆಲೆ ಎಷ್ಟಿದೆ?

ರಿಯಲ್‌ಮಿ C30s ಸ್ಮಾರ್ಟ್‌ಫೋನ್‌ 2GB RAM + 32GB ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆ ಹಾಗೂ 4GB RAM + 64GB ಸ್ಟೋರೇಜ್‌ ಆಯ್ಕೆ ಪಡೆದಿದೆ. ಇನ್ನು ಈ ಫೋನ್‌ ಸ್ಟ್ರೈಪ್ ಬ್ಲ್ಯಾಕ್ ಮತ್ತು ಸ್ಟ್ರೈಪ್ ಬ್ಲೂ ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದೆ.

Best Mobiles in India

English summary
Realme C30s phone can be yours from Croma at a discount of 36%.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X