ಸದ್ಯದಲ್ಲೇ ಅಪ್‌ಡೇಟ್‌ ಆವೃತ್ತಿಯಲ್ಲಿ ಲಾಂಚ್‌ ಆಗಲಿದೆ ರೆಡ್ಮಿ ನೋಟ್ 8 (2021)!

|

ಶಿಯೋಮಿ ಕಂಪನಿಯು ತನ್ನ ಜನಪ್ರಿಯ ನೋಟ್ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಈಗಾಗಲೇ ನೋಟ್ 7, ನೋಟ್ 8 ಹಾಗೂ ನೋಟ್ 9 ಮಾಡೆಲ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ನೋಟ್ 7, ನೋಟ್ 8 ಸರಣಿಯ ಫೋನ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡಿದವು. ಶಿಯೋಮಿ ಕಂಪನಿಯು ಈಗ ರೆಡ್ಮಿ ನೋಟ್ 8 (2021) ಆವೃತ್ತಿಯನ್ನು ಅನಾವರಣ ಮಾಡಲು ಸಜ್ಜಾಗಿದೆ. ಈ ಫೋನ್ ಫೀಚರ್ಸ್‌ಗಳು ಆಕರ್ಷಕ ಅನಿಸಿವೆ.

ಜನಪ್ರಿಯ

ಹೌದು, ಶಿಯೋಮಿಯು ನೂತನವಾಗಿ ಜನಪ್ರಿಯ ರೆಡ್ಮಿ ನೋಟ್ 8 (2021) ಸ್ಮಾರ್ಟ್‌ಫೋನಿನ ಅಪ್‌ಡೇಟ್ ಆವೃತ್ತಿಯನ್ನು ಲಾಂಚ್ ಮಾಡಲಿದೆ. ಈ ಫೋನ್ ಸಹ ನಾಲ್ಕು ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಹಾಗೆಯೇ 4,000mAh ಬ್ಯಾಟರಿ ಬಾಳಿಕೆಯನ್ನು ಹೊಂದಿರಲಿದ್ದು, ಇದಕ್ಕೆ ಪೂರಕವಾಗಿ 22.5.W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒದಗಿಸುವ ಸಾಧ್ಯತೆಗಳಿವೆ. ಹಾಗಾದರೇ ರೆಡ್ಮಿ ನೋಟ್ 8 (2021) ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ ಪಡೆದಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಶಿಯೋಮಿ ರೆಡ್ಮಿ ನೋಟ್ 8 (2021) ಸ್ಮಾರ್ಟ್‌ಫೋನ್ ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಹೊಂದಿರಲಿದ್ದು, 1080x2340 ಪಿಕ್ಸೆಲ್‌ಗಳು ರೆಸಲ್ಯೂಶನ್‌ ಇರಲಿದೆ ಎನ್ನಲಾಗಿದೆ. ಹಾಗೆಯೇ ಸ್ಕ್ರೀನ್‌ ರೀಫ್ರೇಶ್ ರೇಟ್ 120Hz ಆಗಿರಲಿದೆ.

ಪ್ರೊಸೆಸರ್ ವೇಗ ಹೇಗೆ

ಪ್ರೊಸೆಸರ್ ವೇಗ ಹೇಗೆ

ಶಿಯೋಮಿ ರೆಡ್ಮಿ ನೋಟ್ 8 (2021) ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G85 SoC ಪ್ರೊಸೆಸರ್‌ ಬಲ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್‌ ಇರಲಿದೆ. ಹಾಗೆಯೇ 4GB RAM ಜೊತೆಗೆ 64GB ಮತ್ತು 128GB ವೇರಿಯಂಟ್ ಆಯ್ಕೆಗಳು ಇರಲಿವೆ.

ನಾಲ್ಕು ಕ್ಯಾಮೆರಾ

ನಾಲ್ಕು ಕ್ಯಾಮೆರಾ

ಶಿಯೋಮಿ ರೆಡ್ಮಿ ನೋಟ್ 8 (2021) ಫೋನ್ ನಾಲ್ಕು ಕ್ಯಾಮೆರಾಗಳನ್ನು ಒಳಗೊಂಡಿರಲಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ. ಉಳಿದಂತೆ ಎರಡನೇಯದು 8 ಮೆಗಾ ಪಿಕ್ಸೆಲ್ ವೈಡ್-ಆಂಗಲ್ ಸೆನ್ಸಾರ್‌ ಹೊಂದಿರಲಿದೆದೆ. ಹಾಗೆಯೇ ಇನ್ನುಳಿದೆರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ನಲ್ಲಿರಲಿವೆ. ಇನ್ನು ಸೆಲ್ಫಿಗಾಗಿ 13 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸುವ ಸಾಧ್ಯತೆಗಳಿವೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

ಶಿಯೋಮಿ ರೆಡ್ಮಿ ನೋಟ್ 8 (2021) ಫೋನ್ 4,000mAh ಬ್ಯಾಟರಿ ಬಾಳಿಕೆಯನ್ನು ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 22.5.W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒದಗಿಸುವ ಸಾಧ್ಯತೆಗಳಿವೆ. ಇದರೊಂದಿಗೆ ಯುಎಸ್ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಆರ್ ಬ್ಲಾಸ್ಟರ್ ಅನ್ನು ಸ್ಮಾರ್ಟ್‌ಪೋನ್ ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ಸೌಲಭ್ಯಗಳಿರಲಿವೆ.

Best Mobiles in India

English summary
Redmi Note 8 (2021) Officially Teased by Xiaomi, Expected to Launch Soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X