Subscribe to Gizbot

'ಜಿಯೋ ಸಿಮ್, ಎಲ್‌ವೈಎಫ್ ಫೋನ್ ಕೇವಲ ರೂ 199 ಕ್ಕೆ' ಸಂದೇಶ ಬಂದಲ್ಲಿ ಎಚ್ಚರ

Written By:

ರಿಲಾಯನ್ಸ್ ಜಿಯೋ 4ಜಿ ಯು ಮೂರು ತಿಂಗಳುಗಳ ಕಾಲ ಉಚಿತ 4ಜಿ ಡೇಟಾವನ್ನು ಒದಗಿಸುತ್ತಿದ್ದು ಮತ್ತು ವಾಯ್ಸ್ ಕಾಲಿಂಗ್ ಸೌಲಭ್ಯವನ್ನು ಇದರೊಂದಿಗೆ ನೀಡುತ್ತಿದ್ದು ಭಾರತದಲ್ಲಿ ಇದು ಹೆಚ್ಚಿನ ಆಸಕ್ತಿಯನ್ನು ಹುಟ್ಟು ಹಾಕಿದೆ. ಆದರೆ ಇದರೊಂದಿಗೆ ಮೋಸಗಾರರ ತಮ್ಮ ಜಾಲವನ್ನು ಬೀಸುತ್ತಿದ್ದಾರೆ ಎಂಬುದು ಕಳವಳಕಾರಿಯಾದ ಸಂಗತಿಯಾಗಿದೆ. ವಾಟ್ಸಾಪ್‌ನಲ್ಲಿ ಒಂದು ಸುಳ್ಳು ಸಂದೇಶ ಹರಿದಾಡುತ್ತಿದ್ದು ಇದರಲ್ಲಿರುವ ಮಾಹಿತಿ ಏನೆಂದರೆ ರಿಲಾಯನ್ಸ್ ಜಿಯೋ ಮತ್ತು ಎಲ್‌ವೈಎಫ್ ಕೇವಲ ರೂ 199 ಕ್ಕೆ ಲಭ್ಯವಾಗುತ್ತಿದೆ ಎಂದಾಗಿದೆ.

ಓದಿರಿ: ರಿಲಾಯನ್ಸ್ ಜಿಯೋ 4ಜಿ ಸಿಮ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಳಸುವುದು ಹೇಗೆ?

ಜಿಯೋ ಸಿಮ್ ಮತ್ತು ಎಲ್‌ವೈಎಫ್ ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಅನ್ನು ರೂ 199 ಕ್ಕೆ ಪಡೆದುಕೊಳ್ಳಿ ಎಂಬ ಸಂದೇಶ ಇದರಲ್ಲಿದ್ದು ಯಾವುದೇ ಅಧಿಕೃತ ಘೋಷಣೆ ಇಲ್ಲದೆಯೇ ಈ ಸಂದೇಶ ವಾಟ್ಸಾಪ್‌ನಲ್ಲಿ ಈಗ ಹರಿದಾಡುತ್ತಿದೆ ಎಂಬುದಾಗಿ ಮೂಲವೊಂದು ತಿಳಿಸಿದೆ. ಈ ಕುರಿತು ಹೆಚ್ಚುವರಿ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬರೇ ರೂ 199

ಬರೇ ರೂ 199

ಎಲ್‌ವೈಎಫ್ ಫೋನ್ ಮೇಲೆ ಬ್ಲಾಕ್ ಬಸ್ಟರ್ ಸೇಲ್; ಬರೇ ರೂ 199 ಕ್ಕೆ 4ಜಿ ಎಲ್‌ವೈಎಫ್ ಸ್ಮಾರ್ಟ್‌ಫೋನ್ ಖರೀದಿಸಿ ಜೊತೆಗೆ ಅನಿಯಮಿತ 4ಜಿ ಇಂಟರ್ನೆಟ್, ಉಚಿತ ಕರೆ ಅದೂ ಮೂರು ತಿಂಗಳು ಕಾಲ ಎಂಬುದಾಗಿ ಈ ಸಂದೇಶದಲ್ಲಿರುವ ಮಾಹಿತಿ ತಿಳಿಸಿದೆ.

ವೆಬ್‌ಸೈಟ್

ವೆಬ್‌ಸೈಟ್

ವೆಬ್‌ಸೈಟ್ ಲಿಂಕ್ ಅನ್ನು ಇದರೊಂದಿಗೆ ನೀಡಲಾಗಿದ್ದು, "ರಿಲಾಯನ್ಸ್ 4g-lyf.com ಎಂಬುದು ವೆಬ್‌ಸೈಟ್ ಹೆಸರಾಗಿದೆ. ಇದು ಅಧಿಕೃತ ರಿಲಾಯನ್ಸ್ ಎಲ್‌ವೈಎಫ್ ಅಥವಾ ಜಿಯೋ ವೆಬ್‌ಸೈಟ್ ಅಲ್ಲ, ಅಂತೆಯೇ ಈ ಲಿಂಕ್ ಅನ್ನು ಯಾವುದೇ ಕಾರಣಕ್ಕೆ ನಿಮ್ಮ ವೈಯಕ್ತಿಕ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ತೆರೆಯಬೇಡಿ ಎಂಬುದಾಗಿ ಸುದ್ದಿಮೂಲ ಬಳಕೆದಾರರಿಗೆ ಮನವಿ ಮಾಡಿದೆ.

ವೆಬ್‌ಸೈಟ್ ಶೇರಿಂಗ್

ವೆಬ್‌ಸೈಟ್ ಶೇರಿಂಗ್

ಈ ಲಿಂಕ್ ಅನ್ನು ವೆಬ್‌ಸೈಟ್‌ನಲ್ಲಿ ತೆರೆದಾಗ ಇದು ಹೆಸರು, ಮೊಬೈಲ್ ಸಂಖ್ಯೆ ಮತ್ತು ಸ್ಮಾರ್ಟ್‌ಫೋನ್ ಬಣ್ಣವನ್ನು ಆರಿಸಲು ಮನವಿ ಮಾಡಿತ್ತು. 8 ವಾಟ್ಸಾಪ್ ಗುಂಪುಗಳಿಗೆ ಈ ಸಂದೇಶವನ್ನು ಕಳುಹಿಸುವಂತೆ ನಂತರದ ಕೋರಿಕೆಯಲ್ಲಿತ್ತು. ಈ ರೀತಿ ಮಾಡಿದ ನಂತರವೇ ವೆಬ್‌ಸೈಟ್ ಶೇರಿಂಗ್ ಅನ್ನು ಸ್ವೀಕರಿಸಿತ್ತು.

ದೋಷಪೂರಿತ ಲಿಂಕ್

ದೋಷಪೂರಿತ ಲಿಂಕ್

ನಂತರ ವೆಬ್‌ಸೈಟ್ ಕೂಪನ್ ಕೋಡ್ ಒಂದನ್ನು ನೀಡಿತ್ತು ಆದರೆ ಇದನ್ನು ಬಳಕೆದಾರರು ತಮ್ಮ ಫೋನ್‌ನಲ್ಲಿ ಟ್ರೈ ಮಾಡಲಿಲ್ಲ ಎಂದಾಗಿದೆ. ಆದರೆ ಇದು ದೋಷಪೂರಿತ ಲಿಂಕ್ ಆಗಿರುವ ಸಾಧ್ಯತೆ ಇದೆ ಎಂಬುದಾಗಿಯೇ ಬಳಕೆದಾರರು ತಿಳಿಸಿದ್ದಾರೆ.

ಡೊಮೇನ್ ಸರ್ಚ್

ಡೊಮೇನ್ ಸರ್ಚ್

ಡೊಮೇನ್ ಸರ್ಚ್ ಅನ್ನು ಮಾಡಿದಾಗ ಕೂಡ ರಿಜಿಸ್ಟರ್ ಆಗಿರುವ ಲಿಂಕ್ ಅಸಲಿಯೇ ನಕಲಿಯೇ ಎಂಬುದಾಗಿ ಪತ್ತೆಯಾಗುತ್ತಿಲ್ಲ. ಆಗಸ್ಟ್ 10 ರಂದು ವೆಬ್‌ಸೈಟ್ ರಚನೆಯಾಗಿರುವುದಾಗಿ ಸುದ್ದಿಗಳು ತಿಳಿಸಿವೆ. ಇಂತಹ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಲ್ಲ. ಇದು ನೀಡುತ್ತಿರುವ ಸಂದೇಶ ಸುಳ್ಳಾಗಿದೆ ಎಂಬುದಾಗಿ ಉನ್ನತ ಮೂಲಗಳು ತಿಳಿಸುತ್ತಿವೆ.

ಎಲ್‌ವೈಎಫ್ ಬ್ರ್ಯಾಂಡೆಡ್ ಫೋನ್‌

ಎಲ್‌ವೈಎಫ್ ಬ್ರ್ಯಾಂಡೆಡ್ ಫೋನ್‌

ಎಲ್‌ವೈಎಫ್ ಬ್ರ್ಯಾಂಡೆಡ್ ಫೋನ್‌ಗಳಿಗೂ ರಿಲಾಯನ್ಸ್ ಜಿಯೋ ಸಿಮ್ ಲಭ್ಯವಾಗುತ್ತಿದ್ದು ಫೋನ್ ಬೆಲೆ ರೂ 2,999 ರಿಂದ ಆರಂಭವಾಗಿ 20,000 ದವರೆಗಿನ ಫೋನ್‌ಗಳಿಗೆ ಈ ಕೊಡುಗೆ ದೊರೆಯಲಿದೆ. ಜಿಯೋಫೈ ಡಿವೈಸ್ ಅನ್ನು ಸಿಮ್‌ನೊಂದಿಗೆ ರಿಲಾಯನ್ಸ್ ನೀಡುತ್ತಿದ್ದು, ಇದು ವೈಯಕ್ತಿಕ ವೈಫೈ ಹಾಟ್‌ಸ್ಪಾಟ್‌ನಂತೆ ಕಾರ್ಯನಿರ್ವಹಿಸಲಿದೆ.

ರಿಲಾಯನ್ಸ್ ಜಿಯೋ ಆಫರ್ ಕೊಡುಗೆ

ರಿಲಾಯನ್ಸ್ ಜಿಯೋ ಆಫರ್ ಕೊಡುಗೆ

ಜಿಯೋ 4ಜಿ ಸಿಮ್ ಪ್ರಿವ್ಯೂ ಆಫರ್ ಅನ್ನು ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಫೋನ್‌ಗಳಿಗೆ ವಿಸ್ತರಿಸಲಾಗಿದ್ದು ಈಗ ಪ್ಯಾನಸೋನಿಕ್ ಫೋನ್‌ಗಳಿಗೂ ಈ ಕೊಡುಗೆ ಲಭ್ಯವಿದೆ. ಈ ಬ್ರ್ಯಾಂಡ್‌ನಲ್ಲಿರುವ ಎಲ್ಲಾ 4ಜಿ ಸಾಮರ್ಥ್ಯವುಳ್ಳ ಫೋನ್‌ಗಳು ರಿಲಾಯನ್ಸ್ ಜಿಯೋ ಆಫರ್ ಕೊಡುಗೆಯ ಭಾಗವೆಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio and Lyf phone at Rs 199? A message being shared on WhatsApp promises users the SIM and phone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot