ಸ್ಯಾಮಸಂಗ್ ಜೊತೆಗೂಡಿ 5G ನೆಟ್‌ವರ್ಕ್ ತರುತ್ತಿದೆ ಜಿಯೋ!!

ಜಿಯೋ ಮತ್ತು ಸ್ಯಾಮ್‌ಸಂಗ್ ಕಂಪನಿಗಳು ಯಶಸ್ವಿಯಾಗಿ ವಿಶ್ವದ ಅತಿದೊಡ್ಡ ಗ್ರೀನ್‌ಫಿಲ್ಡ್ LTE ನೆಟ್ವರ್ಕ್ ಸ್ಥಾಪಿಸಲಿವೆ.!!

|

4G ನೆಟ್‌ವರ್ಕ್ ಮೂಲಕ ಟೆಲಿಕಾಂನಲ್ಲಿ ಸದ್ದು ಮಾಡುತ್ತಿರುವ ರಿಲಾಯನ್ಸ್ ಜಿಯೋ ಸ್ಯಾಮಸಂಗ್ ಜೊತೆಗೂಡಿ ಭಾರತದಲ್ಲಿ 5G ನೆಟ್‌ವರ್ಕ್ ತರುತ್ತಿದೆ.!! ಈ ಬಗ್ಗೆ ಸ್ಯಾಮ್‌ಸಂಗ್ ಮಾಹಿತಿ ನೀಡಿದ್ದು, ಜಿಯೋ ಜೊತೆ ಸೇರಿ "I&G ಪ್ರಾಜೆಕ್ಟ್"( infill & Growth) ಎಂಬ ನೂತನ ಯೋಜನೆಯನ್ನು ಹೊರತರುವುದಾಗಿ ಹೇಳಿದೆ.

ಈ ಯೋಜನೆ ಮೂಲಕ ಸ್ಯಾಮ್‌ಸಂಗ್ ಮತ್ತು ಜಿಯೋ ಸೇರಿ ಗ್ರಾಮೀಣ ಪ್ರದೇಶದಲ್ಲಿಯೂ ಅತ್ಯುತ್ತಮ ನೆಟ್‌ವರ್ಕ್ ತರುವಲ್ಲಿ ಪ್ರಯತ್ನ ನಡೆಸುತ್ತವೆ ಎನ್ನಲಾಗಿದೆ. ದೇಶದಾಧ್ಯಂತ ಶೇಕಡ 90 ಪರ್ಸೆಂಟ್ ಜನರಿಗೆ ಜಿಯೋ ನೆಟ್‌ವರ್ಕ್ ತಲುಪಿದ್ದು, ದೇಶದೆಲ್ಲೆಡೆ ತಡೆರಹಿತ ನೆಟ್‌ವರ್ಕ್ ಸೇವೆಯನ್ನು ನೀಡಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಜಿಯೋ ಹೇಳಿದೆ.

ಸ್ಯಾಮಸಂಗ್ ಜೊತೆಗೂಡಿ 5G ನೆಟ್‌ವರ್ಕ್ ತರುತ್ತಿದೆ ಜಿಯೋ!!

ಜಿಯೋ ಜೊತೆ ಸೇರಿದ ಸಿಸ್ಕೋ!..ಇನ್ನು ಸೆಟ್‌ವರ್ಕ್ ಸ್ಲೋ ಆಗಲ್ಲ!!

ಈ ಬಗ್ಗೆ ಮಾತನಾಡಿರುವ ಜಿಯೋ ಟೆಲಿಕಾಂ ಅಧ್ಯಕ್ಷ ಜ್ಯೋತೀಂದ್ರ ಥ್ಯಾಕರ್ ಆವರು, ಜಿಯೋ ಕೇವಲ 170 ದಿವಸಗಳಲ್ಲಿಯೇ 100 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಅತ್ಯುತ್ತಮ ಡಿಜಿಟಲ್ ಸೇವೆಗಳನ್ನು ನೀಡಲು ಜಿಯೋ ಯಾವಾಗಲೂ ಸನ್ನದ್ದವಾಗಿದೆ ಎಂದು ಹೇಳಿದರು.

ಸ್ಯಾಮಸಂಗ್ ಜೊತೆಗೂಡಿ 5G ನೆಟ್‌ವರ್ಕ್ ತರುತ್ತಿದೆ ಜಿಯೋ!!

ಜಿಯೋ ಮತ್ತು ಸ್ಯಾಮ್‌ಸಂಗ್ ಕಂಪನಿಗಳು ವಿಶ್ವದ ಅತಿದೊಡ್ಡ ಗ್ರೀನ್‌ಫಿಲ್ಡ್ LTE ನೆಟ್ವರ್ಕ್ ಸ್ಥಾಪಿಸಲಿದ್ದು, ಇಡೀ ದೇಶದಾದ್ಯಂತ ಗುಣಮಟ್ಟದ LTE ನೆಟ್‌ವರ್ಕ್ ಸೇವೆಯನ್ನು ಒದಗಿಸಲು ಸಾಧ್ಯವಿದೆ. ಸ್ಯಾಮ್‌ಸಂಗ್ ಜಿಯೋಗೆ ಅಗತ್ಯವಿರುವ ಪರಿಕರಗಳನ್ನು ಹಾಗೂ ನಿಯೋಜನೆ ಸೇವೆಗಳನ್ನು ಒದಗಿಸುತ್ತದೆ ಎಂದು ಥ್ಯಾಕರ್ ತಿಳಿಸಿದರು.

ಜಿಯೋ-ಏರ್‌ಟೆಲ್ ಫೈಟ್!..ಮತ್ತೊಂದು ಟೆಲಿಕಾಂ ದರಸಮರ ಗ್ಯಾರಂಟಿ!!?

Best Mobiles in India

English summary
samsung on Tuesday announced its innovative "I&G (Infill & Growth) Project" for Reliance Jio. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X