Subscribe to Gizbot

ಎಗ್ಗಿಲ್ಲದೇ ಡೇಟಾ ಬಳಸುವ ಜಿಯೋ ಪ್ರೈಮ್ ಮೆಂಬರ್‌ಗಳ ಗಮನಕ್ಕೆ...!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಉಚಿತ ಸೇವೆಯನ್ನು ನಿಲ್ಲಿಸಿ, ದರ ವಿಧಿಸಲು ಶುರು ಮಾಡಿದೆ. ಅದಕ್ಕಾಗಿ ಫ್ರೈಮ್ ಮೆಂಬರ್ ಶಿಪ್ ಘೋಷಣೆ ಮಾಡಿದೆ. ಹಾಗಾಗಿ ಜಿಯೋ ಬಳಕೆದಾರರು ಇಷ್ಟು ದಿನ ಬೇಕಾಬಿಟ್ಟಿ ಡೇಟಾ ಬಳಕೆ ಮಾಡುತ್ತಿದ್ದರು, ಆದರೆ ಇನ್ನು ಮುಂದೆ ಅದು ನಡೆಯುವುದಿಲ್ಲ. ನಿಗಧಿತ ಡೇಟಾಗಿಂತ ಹೆಚ್ಚಿನ ಬಳಕೆ ಮಾಡಿದರೆ ಹಣ ಪಾವತಿ ಮಾಡಬೇಕಾಗಿದೆ.

ಎಗ್ಗಿಲ್ಲದೇ ಡೇಟಾ ಬಳಸುವ ಜಿಯೋ ಪ್ರೈಮ್ ಮೆಂಬರ್‌ಗಳ ಗಮನಕ್ಕೆ...!

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ಈ ಹಿನ್ನಲೆಯಲ್ಲಿ ಜಿಯೋ ಗ್ರಾಹಕರು ತಮ್ಮ ನಿಗಧಿತ ಡೇಟಾ ವನ್ನು ಬಳಕೆ ಮಾಡಲು ಸಹಾಯವಾಗುಂತೆ ಮತ್ತೆ ತಾವು ಬಳಸಿರುವ ಡೇಟಾದ ಮಾಹಿತಿಯನ್ನು ಪಡೆಯುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ. ವಿವಿಧ ರೀತಿಯಲ್ಲಿ ಈ ಮಾಹಿತಿಯನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈ ಜಿಯೋ ಆಪ್ ಬಳಸಿ:

ಮೈ ಜಿಯೋ ಆಪ್ ಬಳಸಿ:

ಮೈ ಜಿಯೋ ಆಪ್ ಬಳಿಸಿಕೊಂಡು ನೀವು ಬಳಸಿರುವ ಡೇಟಾದ ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ. ನೀವು ಬಳಿಸಿರುವ ಡೇಟಾ, ಬಳಸಬಹುದಾದ ಡೇಟಾ ಮತ್ತು ಅದಕ್ಕೆ ವಿಧಿಸಿರುವ ದರಗಳ ಕುರಿತು ಸಂಪೂರ್ಣ ಮಾಹಿತಿ ಇದರಲ್ಲಿ ಪಡೆಬಹುದಾಗಿದೆ. ಅಲ್ಲದೇ ಎಷ್ಟು ಡೇಟಾ ಉಳಿದಿದೆ ಎಂಬುದನ್ನು ತಿಳಿಯಬಹುದಾಗಿದೆ.

ಎಸ್‌ಎಂಎಸ್ ಮೂಲಕ:

ಎಸ್‌ಎಂಎಸ್ ಮೂಲಕ:

ನಿಮ್ಮ ಜಿಯೋದಲ್ಲಿ ಬಳಕೆ ಮಾಡಿರುವ ಡೇಟಾದ ಮಾಹಿತಿಯನ್ನು ಎಸ್‌ಎಂಎಸ್ ಮೂಲಕವು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಜಿಯೋ ನಂಬರ್ ನಲ್ಲಿ *333# ಡಯಲ್ ಮಾಡಬಹುದಾಗಿದೆ. ಇಲ್ಲಿ ನೀವು ಬಳಕೆ ಮಾಡಿರುವ ಡೇಟಾ ಕುರಿತ ಮಾಹಿತಿ ದೊರೆಯಲಿದೆ. ಅಲದ್ಲದೇ 'MBAL' ಎಂದು ಟೈಪ್ ಮಾಡಿ 55333ಗೆ ಮೇಸೆಜ್ ಕಳುಹಿಸಿದರೂ ಮಾಹಿತಿ ಪಡೆಯಬಹುದು.

ಪೋನಿನಲ್ಲಿ ನೋಡಬಹುದು:

ಪೋನಿನಲ್ಲಿ ನೋಡಬಹುದು:

ಈ ಎರಡು ವಿವಿಧವಲ್ಲದೇ ನಿಮ್ಮ ಫೋನಿನ ಸೆಟ್ಟಿಂಗ್ಸ್ ನಲ್ಲಿಯೂ ಇವು ಬಳಸಿರುವ ಮಾಹಿತಿಯನ್ನು ಕಲೆಹಾಕಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನಿನ ಸೆಟ್ಟಿಂಗ್ಸ್ ನಲ್ಲಿ ಡೇಟಾ ಯೂಸೆಜ್ ಆಯ್ಕೆಯನ್ನು ಓಪನ್ ಮಾಡಿದರೆ ಸಾಕು ಅಲ್ಲಿ ನೀವು ಬಳಕೆ ಮಾಡಿರುವ ಡೇಟಾ ಕುರಿತು ಮಾಹಿತಿ ದೊರೆಯಲಿದೆ ಅಲ್ಲದೇ, ಅದಕ್ಕೆ ಲಿಮಿಟ್ ಸಹ ಸೆಟ್ ಮಾಡಿಕೊಳ್ಳಬಹುದು.

ಜಿಯೋ, ಏರಟೆಲ್ ಸೇರಿದಂತೆ ಟೆಲಿಕಾಂಗೆ ಶಾಕ್ ನೀಡಿದ ಮೋದಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
After the extension period by Reliance Jio ends, there will be data charges on data usage. It will no longer be free nor be unlimited. Here's how to keep a track of the internet usage on your mobile phones. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot