Subscribe to Gizbot

ಆಧಾರ್ ಲೀಕ್‌ : ತಕ್ಷಣವೇ ಜಿಯೋ ಗ್ರಾಹಕರು ಮಾಡಬೇಕಾದೇನು...?

Written By:

ದೇಶಿಯ ಟೆಲಿಕಾಂ ವಲಯದಲ್ಲಿ ಹಲವು ಹೊಸತುಗಳಿಗೆ ಸಾಕ್ಷಿಯಾಗಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ ಸದ್ಯ ದೇಶದ ಅತೀ ಡೊಡ್ಡ ಆಧಾರ್ ಮಾಹಿತಿ ಸೋರಿಕೆಗೆ ಕಾರಣವಾಗಿದೆ ಎನ್ನಲಾಗಿದೆ. ಟೆಲಿಕಾಂ ಸುದ್ದಿ ಮೂಲ ಗಳ ಪ್ರಕಾರ ಈ ಹಿಂದೆ ಸರಕಾರಿ ಓಡೆತನದ ವೈಬ್ ಸೈಟ್ ಗಳು ಆಧಾರ್ ಮಾಹಿತಿಯನ್ನು ಲೀಕ್ ಮಾಡಿದ್ದಕ್ಕೀಂತ ಹೆಚ್ಚಿನ ಪ್ರಮಾಣದಲ್ಲಿ ಜಿಯೋ ಆಧಾರ್ ಮಾಹಿತಿ ಲೀಕ್ ಮಾಡಿದೆ ಎನ್ನಲಾಗಿದೆ.

 ದೇಶದ ಅತೀ ಡೊಡ್ಡ ಮಾಹಿತಿ ಲೀಕ್‌ಗೆ ಕಾರಣವಾಯ್ತು ಜಿಯೋ..!!

ಓದಿರಿ: ಪೇಟಿಎಂ ಮಾಲ್ ನಲ್ಲಿ ಸುಪರ್ ಆಫರ್: ಸ್ಮಾರ್ಟ್‌ಫೋನ್ ಮೇಲೆ ರೂ.20000 ಕ್ಯಾಷ್ ಬ್ಯಾಕ್..!!!

ಸಿಮ್ ಕಾರ್ಡ್ ಪಡೆಯಲು ಗ್ರಾಹಕರಿಗೆ ಬಯೋಮೆಟ್ರಿಕ್ ಮತ್ತು ಆಧಾರ್ ಮಾಹಿತಿಯನ್ನು ಪಡೆದುಕೊಂಡಿದ್ದ ಜಿಯೋ, ಹೊಸ ಮಾದರಿಯಲ್ಲಿ ಹಾಗೂ ಸೇಫ್ ಆಗಿ ಸಿಮ್ ವಿತರಿಸುವ ಕಾರ್ಯಕ್ಕೆ ಮುಂದಾಗಿತ್ತು. ನಂತರ ದಿನದಲ್ಲಿ ಇತರೆ ಕಂಪನಿಗಳು ಜಿಯೋ ಮಾದರಿಯನ್ನು ಅನುಸರಿಸಲು ಮುಂದಾಗಿದ್ದವು, ಆದರೆ ಈಗ ಉಂಟಾಗಿರುವ ಮಾಹಿತಿ ಸೋರಿಕೆಯೂ ಯಾವ ಪರಿಣಾಮವನ್ನು ಬೀರಲಿದೆ ಎಂಬುದು ಊಹೆಗೂ ನಿಲುಕದಾಗಿದೆ. ಈ ಹಿನ್ನಲೆಯಲ್ಲಿ ಗ್ರಾಹಕರು ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಲಾಂಚ್: ಅಚ್ಚರಿ ಬೆಲೆಗೆ ಬೊಂಬಾಟ್ ಫೋನ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಂದ್ ಆಗಿದೆ ಲೀಕ್ ಮಾಡಿದ ವೆಬ್ ಸೈಟ್:

ಬಂದ್ ಆಗಿದೆ ಲೀಕ್ ಮಾಡಿದ ವೆಬ್ ಸೈಟ್:

ಜಿಯೋ ಬಳಕೆದಾರ ಮಾಹಿತಿಯನ್ನು ಲೀಕ್ ಮಾಡಿದ್ದ magicapk.com ಸದ್ಯ ಬಂದ್ ಆಗಿದೆ. ಆಧಾರ ಮಾಹಿತಿಗಳು ಲೀಕ್ ಆಗಿದೆ ಎಂದ ಸಂದರ್ಭದಲ್ಲಿ ಈ ಸೈಟಿಗೆ ಭೇಟಿ ನೀಡುವವರ ಸಂಖ್ಯೆಯೂ ಅತೀಯಾದ ಹಿನ್ನಲೆಯಲ್ಲಿ ಮತ್ತು ಸುರಕ್ಷತೆಯ ಸಲುವಾಗಿ ವೆಬ್ ಸೈಟ್ ಅನ್ನು ಬಂದ್ ಮಾಡಲಾಗಿದೆ.

120 ಮಿಲಿಯನ್ ಮಂದಿಗೆ ಸಂಕಷ್ಟ:

120 ಮಿಲಿಯನ್ ಮಂದಿಗೆ ಸಂಕಷ್ಟ:

ಆಧಾರ್ ಕೊಟ್ಟು ಜಿಯೋ ಉಚಿತ ಸೇವೆ ಪಡೆದ ಗ್ರಾಹಕರಿಗೆ ಸಂಕಷ್ಟ ಎದುರಾಗಿದ್ದು, ಮತ್ತೊಮ್ಮೆ ಆಧಾರ್ ಕಾರ್ಡ್ ಸೇಫ್ ಅಲ್ಲ ಎಂಬುದು ಫ್ರೂ ಆಗಿದೆ. 120 ಮಿಲಿಯನ್ ಗೂ ಅಧಿಕ ಮಂದಿ ಈಗಾಗಲೇ ಜಿಯೋ ಸೇವೆಯನ್ನು ಪಡೆದುಕೊಂಡಿದ್ದು, ಅವರೆಲ್ಲ ಸಂಪೂರ್ಣ ಮಾಹಿತಿಯೂ ಲೀಕ್ ಆಗಿದೆ.

ಲೀಕ್ ಆಗಿದ್ದ ಮಾಹಿತಿಗಳೇನು...?

ಲೀಕ್ ಆಗಿದ್ದ ಮಾಹಿತಿಗಳೇನು...?

ಜಿಯೋ ಫೋನ್ ನಂಬರ್ ನಿಂದ ಹಿಡಿದು ನಿಮ್ಮ ಮೊದಲನೆ ಹೆಸರು, ಕೊನೆಯ ಹೆಸರು, ವಿಳಾಸಗಳು ಲೀಕ್ ಆಗಿದೆ ಎಂದು ಫೋನ್ ಅರೇನಾ ವೈಬ್‌ ಸೈಟ್ ವರದಿ ಮಾಡಿದೆ. ಆದರೆ ಈ ಬಗ್ಗೆ ಜಿಯೋ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಬದಲಿಗೆ ಆಧಾರ್ ಮಾಹಿತಿ ಸೇಫ್ ಆಗಿದೆ ಎನ್ನುವ ಅಂಶವನ್ನು ಒತ್ತಿ ಹೇಳುತ್ತಿದೆ.

ಜಿಯೋ ಬೇಕೆಂದೆ ಮಾಹಿತಿ ಲೀಕ್ ಮಾಡಿತೇ..?

ಜಿಯೋ ಬೇಕೆಂದೆ ಮಾಹಿತಿ ಲೀಕ್ ಮಾಡಿತೇ..?

ಜಿಯೋ ಹಣಕ್ಕಾಗಿ ಆಧಾರ್ ಮಾಹಿತಿಯನ್ನು ಲೀಕ್ ಮಾಡಿತೆ ಎನ್ನುವ ಮಾತೊಂದು ಸದ್ಯ ಹರಿದಾಡುತ್ತಿದ್ದು, ಈ ಹಿನ್ನಲೆಯಲ್ಲಿ ಜಿಯೋ ವಿರುದ್ಧ ತನಿಖೆಯನ್ನು ಆರಂಭಿಸಲಾಗಿದೆ. ಒಮ್ಮೆ ಜಿಯೋ ತಪ್ಪು ಸಾಬೀತದಲ್ಲಿ ಜಿಯೋ ಮೇಲೆ ನಿ‍ಷೇಧವನ್ನು ವಿಧಿಸುವ ಸಾಧ್ಯತೆಯೂ ಇದೆ. ಇದರಿಂದ ಗ್ರಾಹಕರಿಗೆ ಮತ್ತೊಂದು ರೀತಿಯಲ್ಲಿ ತೊಂದರೆ ಎದುರಾಗಲಿದೆ.

ಆಧಾರ್ ಬಳಕೆದಾರರು ಏನು ಮಾಡಬಹುದು..?:

ಆಧಾರ್ ಬಳಕೆದಾರರು ಏನು ಮಾಡಬಹುದು..?:

ತಮ್ಮ ಆಧಾರ್ ಮಾಹಿತಿಗಳನ್ನು ಇತರರು ಬಳಕೆ ಮಾಡಿಕೊಳ್ಳದೇ ಇರುವಂತೆ ಮಾಡಲು ಲಭ್ಯವಿದ್ದು, ಇದಕ್ಕಾಗಿ ಆಧಾರ್ ಬಳಕೆದಾರು ತಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಲಾಕ್ ಮಾಡಬಹುದಾಗಿದೆ. ಇದಕ್ಕಾಗಿ ಆಧಾರ್ ವೆಬ್ ಸೈಟಿನಲ್ಲಿ ಅವಕಾಶ ಮಾಡಿಕೊಡಲಿದೆ.

ಆಧಾರ್ ಮೊಬೈಲ್ ನಂಬರ್ ಲಿಂಕ್ ಮಾಡಿ:

ಆಧಾರ್ ಮೊಬೈಲ್ ನಂಬರ್ ಲಿಂಕ್ ಮಾಡಿ:

ನಿಮ್ಮ ಮಾಹಿತಿಯನ್ನು ಆನ್‌ಲೈನಿನಲ್ಲಿ ನೋಡಬೇಕಾದರೆ OTP ಬರುವಂತೆ ಮಾಡಿಕೊಳ್ಳಲು ಮೊದಲು ಮೊಬೈಲ್ ನಂ ಲಿಂಕ್ ಮಾಡಿ. ಇದರಿಂದ ಪ್ರತಿ ಬಾರಿ ನಿಮ್ಮ ಮಾಹಿತಿಯನ್ನು ಓಪನ್ ಮಾಡಬೇಕಾದರೆ ನಿಮ್ಮ ಮೊಬೈಲ್ ನಂಬರ್ ಅವಶ್ಯಕತೆ ಬರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio data breached and posted online at magicapk.com website, which has since then been taken down. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot