ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಕುರಿತ ಸಂಪೂರ್ಣ ವಿವರ

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ವೆಲ್ ಕಮ್ ಆಫರ್ ಹೆಸರಿನಲ್ಲಿ ನೀಡಿದ ಉಚಿತ ಕೊಡುಗೆಗಳು ಇತರೆ ಟೆಲಿಕಾಮ್ ಸಂಸ್ಥೆಗಳಿಗೆ ನಡುಕ ಹುಟ್ಟಿಸಿದಂತು ಸುಳ್ಳಲ್ಲ. ಸದ್ಯ ಜಿಯೋ ನೀಡಿದ್ದ ಮೂರು ತಿಂಗಳ ಉಚಿತ ಕರೆ ಮತ್ತು ಡೇಟಾ ಸೇವೆಯು 2016ರ ಡಿಸೆಂಬರ್ 31ಕ್ಕೆಕೊನೆಯಾಗಿದ್ದು, ಜನವರಿ 01 ಒಂದರಿಂದ ನ್ಯೂ ಇಯರ್ ಆಫರ್ ಶುರುವಾಗಿದೆ.

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಕುರಿತ ಸಂಪೂರ್ಣ ವಿವರ

ಅಮೆಜಾನ್ ನಲ್ಲಿ ಕೊಳ್ಳುವುದು ಮಾತ್ರವಲ್ಲ ನಿಮ್ಮ ಹಳೇ ವಸ್ತುಗಳನ್ನು ಸಹ ಮಾರಾಟ ಮಾಡಬಹುದು...!

ಜಿಯೋ ವೆಲ್ ಕಮ್ ಆಫರ್ ಮತ್ತು ನ್ಯೂ ಇಯರ್ ಆಫರ್ ನಡುವೆ ಸಾಕಷ್ಟು ವ್ಯತ್ಯಾಸವಿದ್ದು, ಎರಡರಲ್ಲೂ ಉಚಿತ ಕೊಡುಗೆಗಳಿದ್ದರೂ ಅದಕ್ಕೊಂದು ಮಿತಿ ಇದೆ. ಈ ಎರಡು ಆಫರ್ ಗಳ ಬಹುಮುಖ್ಯ ವ್ಯತ್ಯಾಸ ಎಂದರೆ ಫೇರ್ ಯುಸೆಜ್ ಪಾಲಿಸಿ. ಅಂದರೆ ವೆಲ್‌ಕಮ್ ಆಫರ್ ನಲ್ಲಿ ಪ್ರತಿ ನಿತ್ಯ 4GB ಉಚಿತ 4G ಡೇಟಾವನ್ನು ಬಳಕೆದಾರರು ಪಡೆಯಬಹುದುತ್ತಿತ್ತು. ಆದರೆ ನ್ಯೂ ಇಯರ್ ಆಫರ್ ನಲ್ಲಿ ಈ ಪ್ರಮಾಣ ಕಡಿಮೆಯಾಗಿದ್ದು, 1GB ಮಾತ್ರ ಉಚಿತ 4G ಡೇಟಾ ದೊರೆಯಲಿದ್ದು, ಹೆಚ್ಚಿನ ಪ್ರಮಾಣದ ಡೇಟಾ ಬೇಕಿದ್ದರೆ ಹಣ ಪಾವತಿ ಮಾಡಬೇಕಿದೆ.

ಟ್ರಾಯ್ ನಿಯಮದ ಪ್ರಕಾರ ಕೇವಲ 90 ದಿನಗಳ ಕಾಲ ಮಾತ್ರ ತಮ್ಮ ಪ್ರಮೋಷನ್ ಗಾಗಿ ಉಚಿತ ಸೇವೆಯನ್ನು ನೀಡಬಹುದಾಗಿದ್ದು, ನಂತರ ದಿನದಲ್ಲಿ ಅದನ್ನು ಮುಂದುವರೆಸುವಂತಿಲ್ಲ. ಈ ಹಿನ್ನಲೆಯಲ್ಲಿ ಜಿಯೋ ತನ್ನ ಉಚಿತ ಕೊಡುಗೆಯನ್ನು ಮೂರು ತಿಂಗಳ ಕಾಲ ವಿಸ್ತರಿಸಿದರೂ ಕೊಡುಗೆಯ ಪ್ರಮಾಣವನ್ನು ಕಡಿಮೆ ಮಾಡಿದೆ. ಉಚಿತ ಕರೆ ಮತ್ತು ಮೇಸೆಜ್ ಗಳನ್ನು ಮುಂದುವರೆಸಿದ್ದು, ಡೇಟಾಗೆ ಮಾತ್ರ ಕತ್ತರಿ ಹಾಕಿದೆ.

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಕುರಿತ ಸಂಪೂರ್ಣ ವಿವರ

ಭೀಮ್ ಆಪ್ ಬಳಸುವುದು ಹೇಗೆ..? ಯಾವ ಬ್ಯಾಂಕುಗಳು ಸಪೋರ್ಟ್ ಮಾಡುತ್ತವೆ..? ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..

ಸದ್ಯ ನ್ಯೂ ಇಯರ್ ಆಫರ್ ನಲ್ಲಿ ಗ್ರಾಹಕರಿಗೆ ಯಾವ ಲಾಭಗಳು ದೊರೆಯಲಿದೆ ಎಂಬುದನ್ನು ನೋಡುವುದಾದರೆ, ಪ್ರತಿ ನಿತ್ಯ ಜಿಯೋ ಗ್ರಾಹಕರು 1 GB ಉಚಿತ 4G ವೇಗದ ಇಂಟರ್ನೆಟ್ ಸೇವೆಯನ್ನು ಉಚಿತವಾಗಿ ಪಡೆಯಲಿದ್ದಾರೆ. ಈ ಒಂದು GB ಡೇಟಾ ಖಾಲಿಯಾದ ನಂತರದಲ್ಲಿ ಇಂಟರ್ ನೆಟ್ ವೇಗವು 128KB/ps ಗೆ ಕುಸಿಯಲಿದೆ. ಮತ್ತೆ ಇಂಟರ್ ನೆಟ್ ವೇಗವನ್ನು ಹೆಚ್ಚಿಸಿಕೊಳ್ಳಲು ಗ್ರಾಹಕರು ಹಣವನ್ನು ನೀಡಬೇಕಿದೆ.

ವಲ್ ಕಮ್ ಆಫರ್ ನಲ್ಲಿ 4G ಡೇಟಾ ಮುಗಿದ ನಂತರ ಕಡಿಮೆ ವೇಗದಲ್ಲಿಯೇ ಕಾರ್ಯನಿರ್ವಹಿಸಬೇಕಿತ್ತು, ಆದರೆ ಈ ಬಾರಿ ವೇಗವನ್ನು ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಸದ್ಯ 51 ರೂಗಳಿಗೆ ಒಂದು ಜಿಬಿ ಡೇಟಾವನ್ನು ಜಿಯೋ ನೀಡುತ್ತಿದೆ. ಅಲ್ಲದೇ 301 ರೂ.ಗಳಿಗೆ 28 ದಿನಗಳ ವ್ಯಾಲಿಡಿಟಿಯೊಂದಿಗೆ 6GB ಡೇಟಾವನ್ನು ಕೊಡುತ್ತಿದೆ.

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಕುರಿತ ಸಂಪೂರ್ಣ ವಿವರ

ಡಿಜಿಟಲ್ ಬ್ಯಾಂಕಿಗ್ ಪ್ರೋತ್ಸಾಹಕ್ಕೆ ಬಿಡುಗಡೆ ಆಯ್ತು 'ಭೀಮ್' ಆಪ್

ನ್ಯೂ ಇಯರ್ ಆಫರ್ ನಲ್ಲಿ ಡೇಟಾ ಕಡಿತ ಮಾಡಿರುವ ಬಗ್ಗೆ ಮಾಹಿತಿ ನೀಡಿರುವ ಜಿಯೋ, ಜನರು ಉಚಿತ ಡೇಟಾವನ್ನು ಮಿಸ್ ಯೂಸ್ ಮಾಡಿಕೊಳ್ಳುವುದು ಜಾಸ್ತಿಯಾದ ಹಿನ್ನಲೆಯಲ್ಲಿ ಈ ಬಾರಿ ಕಡಿಮೆ ಡೇಟಾವನ್ನು ನೀಡುತ್ತಿರುವುದಾಗಿ ತಿಳಿಸಿದೆ. ಸದ್ಯ ಜಿಯೋ ಪ್ರಿಪೇಯ್ಡ್ ಆಫರ್ ಗಳು 19 ರೂ ನಿಂದ ಹಿಡಿದು 1499 ರೂಗಳ ವೆರೆಗೂ ಇದೆ. ಅಲ್ಲದೇ ಪೊಸ್ಟ್‌ ಪೇಯ್ಡ್ ಪ್ಲಾನ್ ಗಳ 149 ರೂ. ಗಳಿಂದ 4999 ರೂ. ವರೆಗೂ ಇದೆ.

Read more about:
English summary
Reliance Jio’s Welcome Offer, which gave users unlimited data, voice and video calls and messaging access on the Jio SIM is now over. The Welcome Offer has been replaced by the Happy New Year offer. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot