'ಜಿಯೋಫೋನ್' ಬಳಕೆದಾರರಿಗೆ ಮತ್ತೆ ಭರ್ಜರಿ ಸಿಹಿಸುದ್ದಿ!

|

ಹೊಸ ವರ್ಷದ ಅಂಗವಾಗಿ ಜಿಯೋ ಮತ್ತೆ ಮಾನ್ಸೂನ್ ಹಂಗಾಮ ಆಫರ್ ಅನ್ನು ಪ್ರಕಟಿಸಿ 'ಜಿಯೋಫೋನ್' ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ನೂತನ ಮಾನ್ಸೂನ್ ಆಫರ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೂ ಸಹ ಹೆಚ್ಚು ವ್ಯಾಲಿಡಿಟಿ ಆಫರ್ ಅನ್ನು ನೀಡುವ ಮೂಲಕ ತಾನು 4G ಮಾರುಕಟ್ಟೆಯ ಆಟಗಾರ ಎಂಬುದನ್ನು ಜಿಯೋ ಮತ್ತೊಮ್ಮೆ ಸಾಬೀತುಪಡಿಸಿದೆ.

ಜಿಯೋ ಹೊಸದಾಗಿ ಮಾನ್ಸೂನ್ ಹಂಗಾಮ ಹೆಸರಿನಲ್ಲಿ ಎರಡು ದೀರ್ಘವಧಿಯ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ್ದು, ಜಿಯೋಫೋನ್ ಬಳಕೆದಾರರಿಗೆ 594 ರೂ. ಮತ್ತು 297 ರೂ.ಗೆ ಎರಡು ಪ್ಲಾನ್‌ಗಳು ಹೊಸದಾಗಿ ಲಭ್ಯವಿವೆ. ಈ ಎರಡೂ ಆಫರ್‌ಗಳು ಕ್ರಮವಾಗಿ 168 ಮತ್ತು 84 ದಿನಗಳ ವ್ಯಾಲಿಡಿಟಿ ಹೊಂದುವ ಮೂಲಕ ಜಿಯೋ ಗ್ರಾಹಕರನ್ನು ಸೆಳೆಯಲು ತಯಾರಾಗಿವೆ.

'ಜಿಯೋಫೋನ್' ಬಳಕೆದಾರರಿಗೆ ಮತ್ತೆ ಭರ್ಜರಿ ಸಿಹಿಸುದ್ದಿ!

ಜಿಯೋವಿನ ಹೊಸ 594 ರೂ. ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್ ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ನಿತ್ಯ 0.5 GB ಡೇಟಾ ವನ್ನುಪಡೆದುಕೊಳ್ಳಬಹುದಾಗಿದೆ. 168 ದಿನಗಳ ವ್ಯಾಲಿಡಿಟಿಯ ಆಫರ್‌ನಲ್ಲಿ ಪ್ರತಿ ತಿಂಗಳು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

ಹಾಗೆಯೇ, 297 ರೂ. ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್ ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ನಿತ್ಯ 0.5 GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. 84 ದಿನಗಳ ವ್ಯಾಲಿಡಿಟಿಯ ಈ ಆಫರ್‌ನಲ್ಲೂ ಸಹಪ್ರತಿ ತಿಂಗಳು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

'ಜಿಯೋಫೋನ್' ಬಳಕೆದಾರರಿಗೆ ಮತ್ತೆ ಭರ್ಜರಿ ಸಿಹಿಸುದ್ದಿ!

ಇನ್ನು ಎರಡೂ ಆಫರ್‌ನಗಳಲ್ಲಿ ಪ್ರತದಿನದ ಡೇಟಾ ಮಿತಿ ಮುಗಿದ ನಂತರ ಕಡಿಮೆ ವೇಗದಲ್ಲಿ ಡೇಆವನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರತಿದಿನದ ಡೇಟಾ ಖಾಲಿಯಾದ ನಂತರದಲ್ಲಿ 64 Kbps ವೇಗದಲ್ಲಿ ಡೇಟಾವನ್ನು ಜಿಯೋ ಗ್ರಾಹಕರು ಪಡೆದುಕೊಳ್ಳಲಿದ್ದಾರೆ. ಹಾಗಾದರೆ, ಇನ್ನೇಕೆ ತಡ ಜಿಯೋಫೋನ್ ರೀಚಾರ್ಜ್ ಮಾಡಿಸಿಕೊಳ್ಳಲು ರೆಡಿಯಾಗಿ.

Best Mobiles in India

English summary
Reliance Jio Introduces Rs 594 And Rs 297 Long Validity Prepaid Plans For JioPhone Users. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X