ಬೆಂಗಳೂರಿನ ಸಂಡೇ ಬಜಾರ್‌ನಲ್ಲಿ ಮೊಬೈಲ್ ಖರೀದಿಸಿದವರಿಗೆ ಬಿತ್ತು ಬಗ್ನಿಗೂಟ!!

|

ಮೊಬೈಲ್ ಕಳ್ಳತನದ ಬಗ್ಗೆ ನಿರಂತರ ಪ್ರಕರಣಗಳು ದಾಖಲಾದ ನಂತರ ಒಂದು ಖಚಿತ ಮಾಹಿತಿ ಪಡೆದ ಬೆಂಗಳೂರು ಪೊಲೀಸರು ಸಂಡೇ ಬಜಾರ್‌ನ ಮೊಬೈಲ್ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ನಡೆಸಿದ ದಾಳಿಯಲ್ಲೇ ಇದೇ ಮೊದಲ ಬಾರಿಗೆ ಒಟ್ಟು 743 ಮೊಬೈಲ್‌ಗಳನ್ನು ಜಪ್ತಿಮಾಡಲಾಗಿದ್ದು, ಅಲ್ಲಿನ ಮೊಬೈಲ್ ಅಂಗಡಿ ಮಾಲಿಕರು, ಕಳ್ಳರೂ ಸೇರಿದಂತೆ ಅಲ್ಲಿ ಮೊಬೈಲ್ ಖರೀದಿದಿಸಿದ ಸಾರ್ವಜನಿಕರಿಗೂ ಸಂಕಷ್ಟ ಶುರುವಾಗಿದೆ.

ಹೌದು, ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಮೊಬೈಲ್ ಕಳ್ಳರ ದೊಡ್ಡ ಜಾಲವೇ ಬೇರುಬಿಟ್ಟಿದೆ. ಈ ಕಳ್ಳರು ದುಬಾರಿ ಸ್ಮಾರ್ಟ್‌ಫೋನ್‌ಗಳ ಕಳ್ಳತನ ಮತ್ತು ದರೋಡೆ ಮಾಡಿ ಸಂಡೇ ಬಜಾರ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಖಚಿತ ಮೂಲಗಳಿಂದ ಮಾಹಿತಿ ಪಡೆದ ಪೊಲೀಸರು ಅಲ್ಲಿನ ಬಹುತೇಕ ಅಂಗಡಿಗಳ ಮೇಲೆ ದಾಳಿ ಮಾಡಿ ಆಘಾತ ನೀಡಿದ್ದಾರೆ. ಇದರಿಂದ ಕಳ್ಳರಿಗಿಂತ ಮೊಬೈಲ್ ಖರೀದಿದಾರರಿಗೆ ಸಮಸ್ಯೆ ಎದುರಾಗಿದೆ.

ಬೆಂಗಳೂರಿನ ಸಂಡೇ ಬಜಾರ್‌ನಲ್ಲಿ ಮೊಬೈಲ್ ಖರೀದಿಸಿದವರಿಗೆ ಬಿತ್ತು ಬಗ್ನಿಗೂಟ!!

ಈಗ ಪೊಲೀಸರು ಜಪ್ತಿ ಮಾಡಿರುವ ಮೊಬೈಲ್ ಮಾಲಿಕರನ್ನು ಪತ್ತೆ ಮಾಡಲಾಗುತ್ತಿದೆ. ಹಾಗೆಯೇ ಸಂಡೇ ಬಜಾರ್‌ನಲ್ಲಿ ಕದ್ದ ಮಾಲ್‌ಗಳನ್ನು ಖರೀದಿಸಿದವರ ಬಗ್ಗೆ ಕೂಡ ಹುಡುಕಾಟ ನಡೆಯುತ್ತಿದೆ. ಹಾಗಾದರೆ, ಏನಿದು ಶಾಕಿಂಗ್ ಸ್ಟೋರಿ?, ಸಂಡೇ ಬಜಾರ್‌ನಲ್ಲಿ ಮೊಬೈಲ್ ಖರೀದಿಸಿದವರಿಗೆ ಎದುರಾಗಿರುವ ಸಂಕಷ್ಟ ಏನು? ಮತ್ತು ಈ ಬಗ್ಗೆ ಪೊಲೀಸರು ಸಲಹೆ ನೀಡಿರುವುದು ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಹಗಲು-ರಾತ್ರಿ ಕಳ್ಳತನ

ಹಗಲು-ರಾತ್ರಿ ಕಳ್ಳತನ

ಖದೀಮರು ಮೊಬೈಲ್ ಕಳ್ಳತನವನ್ನು ರಾತ್ರಿ ಮತ್ತು ಹಗಲು ಮಾಡುತ್ತಿದ್ದು, ರಾತ್ರಿ ರಸ್ತೆಯಲ್ಲಿ ಒಬ್ಬರೇ ಹೋಗುತ್ತಿರುವವರೇ ಇವರ ಟಾರ್ಗೆಟ್ ಅವರನ್ನು ಹೆದರಿಸಿ ಅವರ ದುಬಾರಿ ಸ್ಮಾರ್ಟ್‌ಫೋನ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗುವುದು. ಇನ್ನೂ ಹಗಲಲ್ಲಿ ಸಹ ಕಳ್ಳರು ತಮ್ಮ ಕೈಚಳಕ ತೊರಿಸುತ್ತಿದ್ದು, ಹಗಲಲ್ಲಿ ಫೋನ್‌ನಲ್ಲಿ ಮಾತನಾಡುತ್ತಾ ಹೋಗುತ್ತಿರುವವರ ಪೋನ್‌ ಕಿತ್ತುಕೊಂಡು ಹೋಗುವುದು, ಜನನಿಬಿಡ ಸ್ಥಳಾದ ಬಸ್, ಟ್ರೈನ್, ಮಾರ್ಕೆಟ್‌ಗಳಲ್ಲಿ ಪೋನ್ ಕಳ್ಳತನ ಮಾಡಿ ಅಲ್ಲಿಂದ ಕಾಲ್ಕೀಳುತ್ತಿದ್ದಾರೆ.

ನಕಲಿ ದಾಖಲೆ ರೆಡಿ!

ನಕಲಿ ದಾಖಲೆ ರೆಡಿ!

ಕಳ್ಳರು ಕದ್ದ ಅತವಾ ದರೋಡೆ ಮಾಡಿದ ಮೊಬೈಲ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿದೆ. ಖದೀಮರು ಕದ್ದ ಪೋನ್‌ಗಳನ್ನು ಮಾರಾಟ ಮಾಡುವಾಗ ಅವುಗಳಿಗೆ ನಕಲಿ ದಾಖಲೆಗಳನ್ನು ಅಂಗಡಿಗಳ ಮಾಲಿಕರು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೆಲವರು ಮೊಬೈಲ್ ಇಎಂಐ ನಂಬರ್ ಅನ್ನು ಬದಲಾಯಿಸಿ ಸ್ಮಾರ್ಟ್‌ಫೋನ್‌ಗಳನ್ನು ಮಾರುತ್ತಿದ್ದರೆ, ಇನ್ನು ಕೆಲವರು ಅವುಗಳ ಮುಖ್ಯ ಬಿಡಿಭಾಗಗಳನ್ನು ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

IMEI ನಂಬರ್ ಬದಲಾಗುತ್ತಿದೆ!

IMEI ನಂಬರ್ ಬದಲಾಗುತ್ತಿದೆ!

ಮೊಬೈಲ್ ಖದೀಮರು ಕದ್ದ ಮೊಬೈಲ್ ಫೋನ್‌ಗಳ IMEI ನಂಬರಗಳನ್ನು ಬದಲಿಸಿ ಮರು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಹೀಗೆ ಮಾಡಿದರೆ ಕದ್ದ ಮೊಬೈಲ್‌ಗಳನ್ನು ಹುಡುಕಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಕಳ್ಳರು ತಿಳಿದಿದ್ದಾರೆ. ಮಾರುಕಟ್ಟೆಯಲ್ಲಿ ಕದ್ದ ಮೊಬೈಲ್ ಮಾರಟಕ್ಕೆಂದೇ ಪ್ರತ್ಯೇಕ ಜಾಗವನ್ನು ಮಾಡಿಕೊಂಡಿರುವ ಖದೀಮರು ಸ್ಮಾರ್ಟ್‌ಫೋನ್‌ IMEI ನಂಬರಗಳನ್ನು ಬದಲಿಸಿ ಇಲ್ಲವೇ ತೆಗೆದಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಡಿಭಾಗಗಳು ಅದಲು ಬದಲು

ಬಿಡಿಭಾಗಗಳು ಅದಲು ಬದಲು

ಮೊಬೈಲ್‌ಗಳ IMEI ನಂಬರಗಳನ್ನು ಬದಲಿಸಿ ಮರು ಮಾರಾಟ ಮಾಡುವುದು ಸ್ವಲ್ಪ ತ್ರಾಸದಾಯಕವಾಗಿರುವುದರಿಂದ ಅವುಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಜಾಲ ಕೂಡ ಸಂಡೇ ಬಜಾರ್‌ನಲ್ಲಿದೆ ಎಂದು ತಿಳಿದುಬಂದಿದೆ. ರಿಪೇರಿಗಾಗಿ ಬರುವ ಸ್ಮಾರ್ಟ್‌ಫೋನ್‌ಗಳಿಗೆ ಕದ್ದ ಸ್ಮಾರ್ಟ್‌ಪೋನ್‌ಗಳ ಬಿಡಿಭಾಗಗಳನ್ನು ಹಾಕಿ ಹಣ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಪ್ರಮುಖ ಬ್ಯ್ರಾಂಡೆಡ್ ಮೊಬೈಲ್‌ಗಳಿಗೆ ಇನ್ಯಾವುದೊ ಕಂಪನಿಯ ಮದರ್ ಬೋರ್ಡ್‌ನ್ನು ಜೋಡಿಸುವುದು ಅವರ ಕಸುಬಾಗಿದೆಯಂತೆ.!

ಮೊಬೈಲ್ ಖರೀದಿಸಿದ್ದವರಿಗೆ ಬಗ್ನಿಗೂಟ!

ಮೊಬೈಲ್ ಖರೀದಿಸಿದ್ದವರಿಗೆ ಬಗ್ನಿಗೂಟ!

ಕಳ್ಳರು ಹೀಗೆ ಮಾರಾಟ ಮಾಡಿದ ಮೊಬೈಲ್‌ಗಳನ್ನು ಖರೀದಿಸಿದವರಿಗೂ ಈಗ ಸಂಕಷ್ಟ ಎದುರಾಗಿದೆ. ಒಟ್ಟು 16 ಅಂಗಡಿಗಳನ್ನು ರೇಡ್ ಮಾಡಿರುವ ಪೊಲೀಸರು ಅವರಿಂದ ಮಾರಾಟವಾಗಿರುವ ಮೊಬೈಲ್‌ಗಳ ಬಗ್ಗೆ ಕೂಡ ವಿಚಾರಣೆ ನಡೆಸುತ್ತಿದ್ದಾರೆ. ಮೊಬೈಲ್ ತಂದುಕೊಟ್ಟವರ ಬಗ್ಗೆ ಮತ್ತು ಮೊಬೈಲ್ ಖರೀದಿಸಿದವರ ಬಗ್ಗೆ ಮಾಹಿತಿ ನೀಡುವಂತೆ ಅಂಗಡಿಯ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ಮಾರಿರುವ ಮೊಬೈಲ್ ಈಎಂಇಐ ಬದಲಾವಣೆಗಳ ಬಗ್ಗೆ ಕೂಡ ಮಾಹಿತಿ ತೆಗೆದುಕೊಳ್ಳಲಾಗುತ್ತಿದೆ.

ಕಳಪೆ ಗುಣಮಟ್ಟದ ಜೊತೆಗೆ ಅಪಾಯ

ಕಳಪೆ ಗುಣಮಟ್ಟದ ಜೊತೆಗೆ ಅಪಾಯ

ಸಂಡೇ ಬಜಾರ್‌ನಲ್ಲಿ ಕಳಪೆ ಮಟ್ಟದ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದವರಿಗೆ ಅಪಾಯಗಳು ಕಾದಿವೆ. ಅವರು ಖರೀದಿಸಿರುವ ಪೋನ್‌ ಒಳಗಡೆ ಕೆಲವು ಭಾಗಗಳನ್ನು ಬದಲಿಸಿ ಇನ್ಯಾವುದೊ ಬೇರೆ ಕಂಪನಿಯ ಬಿಡಿಭಾಗಗಳನ್ನು ಜೋಡಿಸಿ ನೀಡಿರುವುದು ಅವರ ಫೋನ್ ಗುಣಮಟ್ಟವನ್ನು ಹಾಳು ಮಾಡಿದೆಯಲ್ಲದೇ, ಈಗ ಪೊಲೀಸರಿಂದ ಶಿಕ್ಷೆಯನ್ನು ಸಹ ಅನುಭವಿಸಬೇಕಾದ ಪ್ರಸಂಗ ಬಂದಿದೆ. ಹಾಗಾಗಿ, ಸಂಡೇ ಬಜಾರ್‌ನಲ್ಲಿ ಮೊಬೈಲ್ ಖರೀದಿಸಿದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಅಲ್ಲಿ ಮೊಬೈಲ್ ಖರೀದಿಸಲೇಬೇಡಿ!

ಅಲ್ಲಿ ಮೊಬೈಲ್ ಖರೀದಿಸಲೇಬೇಡಿ!

ಯಾವುದೇ ಕಾರಣಕ್ಕೂ ಸಂಡೇ ಬಜಾರ್‌ನಲ್ಲಿ ಬಿಲ್ ಹೊಂದಿರದ ಮೊಬೈಲ್‌ಗಳನ್ನು ಖರೀದಿಸಬೇಡಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಆ ಪೋನ್‌ ಒಳಗಡೆ ಕೆಲವು ಭಾಗಗಳನ್ನು ಬದಲಿಸಿ ಇನ್ಯಾವುದೊ ಬೇರೆ ಕಂಪನಿಯ ಬಿಡಿಭಾಗಗಳನ್ನು ಜೋಡಿಸಿರುತ್ತಾರೆ, ಅದರ ಗುಣಮಟ್ಟ ಚೆನ್ನಾಗಿರುವುದಿಲ್ಲ ಎಂಬ ಕಾರಣಕ್ಕಿಂತಲೂ ಈಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಪೊಲೀಸರು ತಂತ್ರಜ್ಞಾನದಲ್ಲಿ ಮತ್ತಷ್ಟು ಸ್ಪೀಡ್ ಆಗಿ ಮೊಬೈಲ್ ಕಳ್ಳತನಕ್ಕೆ ಫುಲ್ ಸ್ಟಾಪ್ ಹಾಕಲು ತಯಾರಾಗಿದ್ದಾರೆ.

ಮೊಬೈಲ್ ಕಳೆದುಕೊಂಡಿದ್ದವರ ಮುಖದಲ್ಲಿ ನಗು ಮೂಡಿಸಿತು ಈ ಆಪ್!!..ಹೇಗೆ ಗೊತ್ತಾ?

ಮೊಬೈಲ್ ಕಳೆದುಕೊಂಡಿದ್ದವರ ಮುಖದಲ್ಲಿ ನಗು ಮೂಡಿಸಿತು ಈ ಆಪ್!!..ಹೇಗೆ ಗೊತ್ತಾ?

ಬೆಂಗಳೂರು ನಗರದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದವರಿಗೆ ಈ ಆಪ್ ಒಂದು ಸಿಂಹಸ್ವಪ್ನವಾಗಿ ಕಾಡುತ್ತಿದೆ. ಯಾವುದೇ ದಾಖಲೆಗಳು ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿರುವುದರ ಬಗ್ಗೆ ದೂರು ಸಲ್ಲಿಸಲು ಇದ್ದ 'ಇ ಲಾಸ್ಟ್ ಅಂಡ್ ಫೌಂಡ್' ಎಂಬ ಆನ್‌ಲೈನ್ ಯೋಜನೆಯಿಂದ ಮೊಬೈಲ್ ಕಳೆದುಕೊಂಡಿದ್ದವರ ಮುಖದಲ್ಲಿ ನಗು ಮೂಡಿದೆ.

ಕಳೆದುಹೋದ/ಕಾಣೆಯಾದ ವಸ್ತುಗಳ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗದೆ ನೇರವಾಗಿ ಮೊಬೈಲ್ ಫೋನ್ ಮತ್ತು ವೆಬ್‌ಸೈಟ್ ಮುಖಾಂತರ ವರದಿಯನ್ನು ಸಲ್ಲಿಸಲು ಅವಕಾಶವರುವ ' ಇ ಲಾಸ್ಟ್ ಅಂಡ್ ಫೌಂಡ್' ಸೇವೆಯಿಂದ 300 ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಅಲ್ಪಕಾಲದಲ್ಲಿಯೇ ಕಳ್ಳರಿಂದ ಬಿಡಿಸಿ ಮಾಲಿಕರಿಗೆ ನೀಡಲಾಗಿದೆ.

ಈ ಬಗ್ಗೆ ಬೆಂಗಳೂರು ಸಿಟಿ ಪೊಲೀಸ್ ಟ್ವಿಟ್ಟರ್ ಅಕೌಂಟ್‌ನಲ್ಲಿ ಚಿತ್ರ ಸಮೇತ ಪ್ರಕಟಿಸಿದ್ದು, ಮೊಬೈಲ್ ಬಳಸುವುದರಲ್ಲಿರುವ ಒಲವು, ಅದನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರಲ್ಲಿಯೂ ಇರಲಿ! ಎಂದು ಸಲಹೆ ನೀಡಿದೆ. ಹಾಗಾದರೆ, 'ಇ ಲಾಸ್ಟ್ ಅಂಡ್ ಫೌಂಡ್ ಯೋಜನೆಯ ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ಇ-ಲಾಸ್ಟ್ ಅಂಡ್ ಫೌಂಡ್ ವೆಬ್‌ಸೈಟ್‌

ಇ-ಲಾಸ್ಟ್ ಅಂಡ್ ಫೌಂಡ್ ವೆಬ್‌ಸೈಟ್‌

ಆನ್‌ಲೈನ್ ಮುಖಾಂತರ ಕಳೆದುಕೊಂಡ ವಸ್ತುಗಳ ಬಗ್ಗೆ ಕರ್ನಾಟಕ ಪೊಲೀಸ್ ಇಲಾಖೆ 'ಇ-ಲಾಸ್ಟ್ ಅಂಡ್ ಫೌಂಡ್' (e-Lost & Found Report) ( ಆಪ್ ಲಿಂಕ್) ಎಂಬ ವೆಬ್‌ಸೈಟ್‌ ಮತ್ತು ಆಪ್ ಅನ್ನು ರಚಿಸಿದೆ.! ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ತೆರಳದೆ ಈ ವೆಬ್‌ಸೈಟ್ ಅಥವಾ ಆಪ್ ಮೂಲಕ ಕಳೆದುಹೋದ ವಸ್ತುಗಳ ಬಗ್ಗೆ ದೂರುದಾಖಲಿಸಬಹುದು.

ಇ-ಲಾಸ್ಟ್ ಅಂಡ್ ಫೌಂಡ್ ಕಾರ್ಯ ಹೇಗೆ?

ಇ-ಲಾಸ್ಟ್ ಅಂಡ್ ಫೌಂಡ್ ಕಾರ್ಯ ಹೇಗೆ?

ಪೊಲೀಸ್ ಇಲಾಖೆ ಅಳವಡಿಸಿಕೊಂಡಿರುವ ಲಾಸ್ಟ್ ಆಂಡ್‌ ಫೌಂಡ್' ವ್ಯವಸ್ಥೆಯ (eLost & Found Report) ವೆಬ್‌ಸೈಟ್‌ ತೆರೆದು ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ಪಾಸ್‌ಪೋರ್ಟ್‌, ಶೈಕ್ಷಣಿಕ ದಾಖಲೆ ದೂರುಗಳನ್ನು ಆನ್‌ಲೈನ್ ಮೂಲಕ ದಾಖಲಿಸಬಹುದು. ದೂರು ಸಲ್ಲಿಸಿರುವ ಬಗ್ಗೆ ಆನ್‌ಲೈನ್‌ನಲ್ಲಿಯೇ ನಿಮಗೆ ಸ್ವೀಕೃತಿ ಪತ್ರ ಕೂಡ ದೊರೆಯುತ್ತದೆ.

ದೂರು ನೀಡಿದ ನಂತರ ಏನಾಗುತ್ತದೆ ?

ದೂರು ನೀಡಿದ ನಂತರ ಏನಾಗುತ್ತದೆ ?

ದೂರು ಸಲ್ಲಿಸಿದ ನಂತರ ಕಳೆದುಹೋದ ವಸ್ತುಗಳ ಬಗ್ಗೆ ವರದಿ ಬಳಕೆದಾರರ ಮೊಬೈಲ್ ಪೋನ್ ಮತ್ತು ಇ-ಮೇಲ್ ಐಡಿಗೆ ರಾವನೆಯಾಗುತ್ತದೆ. ಕಳೆದುಹೋದ ದಾಖಲಾತಿ/ವಸ್ತುಗಳ ಬಗ್ಗೆ ದಾಖಲಾದ ವರದಿಗಳು ಎಸ್.ಸಿ.ಆರ್.ಬಿ ನಲ್ಲಿ ದಾಖಲಾಗುತ್ತವೆ. ಆದರೆ, ದಾಖಲಾದ ವರದಿಯ ಮೇಲೆ ಯಾವುದೇ ವಿಚಾರಣೆ/ ತನಿಖೆ ಕೈಗೊಳ್ಳಲಾಗುವುದಿಲ್ಲ.

ಯೋಜನೆಯಿಂದ ಗ್ರಾಹಕರಿಗೆ ಲಾಭವೇನು?

ಯೋಜನೆಯಿಂದ ಗ್ರಾಹಕರಿಗೆ ಲಾಭವೇನು?

ನೀವು ಕಳೆದುಕೊಂಡಿರುವ ವಸ್ತುಗಳೇನಾದರೂ ಪೊಲೀಸ್ ಇಲಾಖೆಗೆ ದೊರೆತರೆ ಅಂದರೆ, ನೀವು 'ಇ ಲಾಸ್ಟ್ ಅಂಡ್ ಫೌಂಡ್' ನಲ್ಲಿ ಆ ಬಗ್ಗೆ ದೂರು ದಾಖಲಿಸಿದ್ದರೆ ಪೊಲೀಸ್ ಇಲಾಖೆ ನಿಮ್ಮನ್ನು ಸಂಪರ್ಕಿಸುತ್ತದೆ. ನಂತರ ನೀವು ಸೂಕ್ತ ದಾಖಲೆಗಳನ್ನು ನೀಡಿ ನಿಮ್ಮ ವಸ್ತುಗಳನ್ನು ಇಲಾಖೆಯಿಂದ ವಾಪಸ್ ಪಡೆಯಬಹುದಾಗಿದೆ.

ವಿದ್ಯುನ್ಮಾನ ದಾಖಲೆಯಷ್ಟೆ

ವಿದ್ಯುನ್ಮಾನ ದಾಖಲೆಯಷ್ಟೆ

'ಇ ಲಾಸ್ಟ್ ಅಂಡ್ ಫೌಂಡ್' ನಲ್ಲಿ ದಾಖಲಿಸಿದ ದೂರು ಪೊಲೀಸರಿಗೆ ಕೇವಲ ಮಾಹಿತಿಯಾಗಿರುತ್ತದೆ. ಈ ಆಧಾರದ ಮೇಲೆ ಯಾವುದೇ ವಿಚಾರಣೆ/ತನಿಖೆಯನ್ನು ಕೈಗೊಳ್ಳುವುದಿಲ್ಲ. ಈ ವರದಿಯು ದೂರುದಾರರಿಗೆ ಮತ್ತು ಪೊಲೀಸ್ ಇಲಾಖೆ ಪರಿಶೀಲನೆಗಾಗಿ ಇರುವ ಕೇವಲ ವಿದ್ಯುನ್ಮಾನ ದಾಖಲೆಯಾಗಿರುತ್ತದೆ.!!

ಕಳೆದುಕೊಂಡರೆ ಮಾತ್ರ

ಕಳೆದುಕೊಂಡರೆ ಮಾತ್ರ

ನೀವು ನಿಮ್ಮಲ್ಲಿರುವ ಸಣ್ಣ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸುವುದು ಉತ್ತಮ.! ವಸ್ತುಗಳನ್ನು ಯಾರಾದರೂ ಕದ್ದಿದ್ದರೆ ಅಥವಾ ನಿಮ್ಮನ್ನು ಯಾರಾದರೂ ಬೆದರಿಸಿ ಕಿತ್ತುಕೊಂಡಿದ್ದರೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಎಚ್ಚರದಿಂದ ದೂರು ದಾಖಲಿಸುವುದನ್ನು ಮರೆಯದಿರಿ.

Best Mobiles in India

English summary
743 stolen phones seized from bengaluru Burma Bazaar shop. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X