ರಿಯೋ ಒಲಿಂಪಿಕ್ಸ್ 2016; ಗೂಗಲ್‌, ಯೂಟ್ಯೂಬ್, ಮ್ಯಾಪ್‌ನಿಂದ ಹೊಸ ಫೀಚರ್‌ಗಳು

By Suneel
|

ಬ್ರೆಜಿಲ್‌ನಲ್ಲಿ ಆಗಸ್ಟ್‌ 6 ರಿಂದ ಆರಂಭಗೊಳ್ಳಲಿರುವ ರಿಯೋ ಒಲಿಂಪಿಕ್ಸ್ ಜ್ವರ ಈಗ ಗೂಗಲ್‌ಗೆ ಬರುತ್ತಿದೆ. ಹೌದು, ರಿಯೋ ಒಲಿಂಪಿಕ್ಸ್‌ ಅಭಿಮಾನಿಗಳನ್ನು ಕುತೂಹಲಗೊಳಿಸಲು ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌, ಯೂಟ್ಯೂಬ್‌ ಮತ್ತು ಗೂಗಲ್‌ ಮ್ಯಾಪ್‌ ಹೊಸ ವೈಶಿಷ್ಟಗಳನ್ನು ಪರಿಚಯಿಸುತ್ತಿವೆ. ಇದರಿಂದ ಗೂಗಲ್‌ ಬಳಕೆದಾರರು ರಿಯೋ ಒಲಿಂಪಿಕ್ಸ್‌ನ ಈವೆಂಟ್‌ಗಳು ಮತ್ತು ಮೆಡಲ್‌ ಗೆದ್ದ ಬಗ್ಗೆ ಅಲರ್ಟ್ಸ್ ಮತ್ತು ಅಪ್‌ಡೇಟ್‌ಗಳನ್ನು ಪಡೆಯಬಹುದಾಗಿದೆ. ಈ ಹೊಸ ಫೀಚರ್‌ಗಳ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಗೂಗಲ್‌ ಪ್ಲೇ ಸ್ಟೋರ್‌'ನಲ್ಲಿ 8 ಹೊಸ ವಿಭಾಗಗಳ ಅಳವಡಿಕೆ

ಗೂಗಲ್‌ ಕಂಪನಿ

ಗೂಗಲ್‌ ಕಂಪನಿ

ಗೂಗಲ್‌ ಕಂಪನಿ ಪ್ರಕಾರ "ಹೊಸ ಫೀಚರ್‌ಗಳು ಅಭಿಮಾನಿಗಳಿಗೆ ರಿಯೋ ಒಲಿಂಪಿಕ್ಸ್ ನೆಚ್ಚಿನ ಕ್ರೀಡಾಪಟುಗಳ ಬಗ್ಗೆ ಮತ್ತು ಕ್ರೀಡೆಯ ವಿಭಾಗಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ" ಎನ್ನಲಾಗಿದೆ.

 ರಿಯೋ ಒಲಿಂಪಿಕ್ಸ್ ಪ್ರಯುಕ್ತ ಹೊಸ ಫೀಚರ್‌ಗಳು

ರಿಯೋ ಒಲಿಂಪಿಕ್ಸ್ ಪ್ರಯುಕ್ತ ಹೊಸ ಫೀಚರ್‌ಗಳು

ರಿಯೋ ಒಲಿಂಪಿಕ್ಸ್‌ ಪ್ರಯುಕ್ತ ಹೊಸ ಫೀಚರ್‌ಗಳು ಗೂಗಲ್‌ ಸರ್ಚ್‌, ಯೂಟ್ಯೂಬ್‌ ಮತ್ತು ಗೂಗಲ್‌ ಮ್ಯಾಪ್‌ಗೆ ಬರುತ್ತಿವೆ.

ಗೂಗಲ್‌

ಗೂಗಲ್‌

ಗೂಗಲ್‌ ಸರ್ಚ್ ಪೇಜ್‌ನಲ್ಲಿಯೇ ರಿಯೋ ಒಲಿಂಪಿಕ್ಸ್‌ ಸಂಬಂಧಿಸಿದ ಟಾಪಿಕ್‌ಗಳಿಗೆ ಮತ್ತು ಪ್ರಶ್ನೆಗಳಿಗೆ ಹೆಚ್ಚಿನ ಮಾಹಿತಿಯನ್ನು ನೀಡಲಿದೆಯಂತೆ. ಈ ಮಾಹಿತಿಯು ಸರ್ಚ್‌ ಪೇಜ್‌ನ ಮೇಲ್ಭಾಗದಲ್ಲಿ ಅಥವಾ ಗೂಗಲ್‌ ಆಪ್‌ನ ಒಳಭಾಗದಲ್ಲಿ ಪ್ರದರ್ಶನವಾಗಲಿದೆ.

ನಿರ್ಧಿಷ್ಟ ಮಾಹಿತಿ

ನಿರ್ಧಿಷ್ಟ ಮಾಹಿತಿ

ಗೂಗಲ್‌ನ ಹೊಸ ಫೀಚರ್‌ನಿಂದ 2016 ಒಲಿಂಪಿಕ್ ಮಾಹಿತಿಯನ್ನು ನಿರ್ಧಿಷ್ಟ ದೇಶ, ಕ್ರೀಡೆ, ಈವೆಂಟ್ ಮತ್ತು ಭಾಗವಹಿಸಿದ ಕ್ರೀಡಾಪಟು ಬಗ್ಗೆ ಪ್ರತ್ಯೇಕವಾಗಿ ತಿಳಿಯಬಹುದಾಗಿದೆ. ಅಲ್ಲದೇ ಬಳಕೆದಾರರು ತಾವು ಸರ್ಚ್‌ ಮಾಡುವ ನಿರ್ಧಿಷ್ಟ ಮಾಹಿತಿ ಬಗ್ಗೆ ಸ್ವಯಂಚಾಲಿತವಾಗಿ ಅಪ್‌ಡೇಟ್‌ ಪಡೆಯಲು ಫಾಲೋ ಮಾಡಬಹುದಾಗಿದೆ.

ಯೂಟ್ಯೂಬ್‌

ಯೂಟ್ಯೂಬ್‌

ಯೂಟ್ಯೂಬ್‌ನಲ್ಲಿ ಬಳಕೆದಾರರು 2016 ರ ರಿಯೋ ಒಲಿಂಪಿಕ್ಸ್‌ ಬಗ್ಗೆ ವೀಡಿಯೊ ಹೈಲೈಟ್ಸ್‌ಗಳನ್ನು ನೋಡಬಹುದಾಗಿದೆ. ಯೂಟ್ಯೂಬ್‌ನಲ್ಲಿನ ವೀಡಿಯೊಗಳು ಪ್ರಪಂಚದಾದ್ಯಂತದ 60 ದೇಶಗಳ ಈವೆಂಟ್‌ಗಳನ್ನು ಸಹ ಅಧಿಕೃತ ಬ್ರಾಡ್‌ಕಾಸ್ಟ್‌ ಸೆರೆಹಿಡಿದವುಗಳಾಗಿರುತ್ತವೆ.

 ಯೂಟ್ಯೂಬ್‌ ವೀಡಿಯೊ ರಚನೆಕಾರರು

ಯೂಟ್ಯೂಬ್‌ ವೀಡಿಯೊ ರಚನೆಕಾರರು

ಸರ್ಚ್‌ ದೈತ್ಯ ಗೂಗಲ್‌ ಟಾಪ್‌ 15 ಯೂಟ್ಯೂಬ್‌ ವೀಡಿಯೊ ರಚನೆಕಾರರನ್ನು ರಿಯೊ ಒಲಿಂಪಿಕ್ಸ್‌ಗೆ ಕಳುಹಿಸುತ್ತಿದ್ದು, ಮೊಬೈಲ್‌ ಸ್ಟ್ರೀಮಿಂಗ್‌ ಫೀಚರ್‌ ಸಬ್‌ಸ್ಕ್ರೈಬರ್‌ಗಳಿಗೆ ಈವೆಂಟ್ ದೃಶ್ಯ ದೊರೆಯಲಿದೆ.

ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌

ಇನ್ನೂ ಗೂಗಲ್‌ ಮ್ಯಾಪ್‌ ಫೀಚರ್ ಬಗ್ಗೆ ಹೇಳುವುದಾದರೆ, ಅಭಿಮಾನಿಗಳು ವಿವಿಧ ಒಲಿಂಪಿಕ್‌ ಸ್ಥಳಗಳನ್ನು ನೋಡಲು ಸ್ಟ್ರೀಟ್ ವ್ಯೂ ಫೀಚರ್‌ ಬಳಸಿಕೊಳ್ಳಬಹುದಾಗಿದೆಯಂತೆ.

ಗೂಗಲ್‌

ಗೂಗಲ್‌

ಒಟ್ಟಾರೆ ಗೂಗಲ್‌ ಒಲಿಂಪಿಕ್ಸ್‌ ಆಧಾರಿತ ಸರ್ಚ್‌ ಟ್ರೆಂಡ್, ಒಳನೋಟ ಮತ್ತು ಡಾಟಾ ದೃಶ್ಯ ಪ್ರದರ್ಶನ ಮಾಡಲಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಆಂಡ್ರಾಯ್ M, 4G 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.1' ರೂ 5,599 ಕ್ಕೆ ಲಾಂಚ್‌ಆಂಡ್ರಾಯ್ M, 4G 'ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.1' ರೂ 5,599 ಕ್ಕೆ ಲಾಂಚ್‌

ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
Rio Olympics 2016: Google Search, YouTube and Maps get new features. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X