ಸ್ಯಾಮ್‌ಸಂಗ್‌ನ ಈ ಫೋನ್‌ಗೆ ಸಿಕ್ಕ ಡಿಸ್ಕೌಂಟ್‌ ತಿಳಿದ್ರೆ, ನೀವು ಬಿಡುವುದೇ ಇಲ್ಲ!

|

ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯು ಬಜೆಟ್‌ ರೇಂಜ್‌ನಿಂದ ಹೈ ಎಂಡ್‌ ಮಾದರಿಯ ಫೋನ್‌ಗಳಿಂದಲೂ ಮಾರುಕಟ್ಟೆಯಲ್ಲಿ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಆ ಪೈಕಿ ಗ್ಯಾಲಕ್ಸಿ ನೋಟ್‌ ಸರಣಿಯಲ್ಲಿನ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 10 ಲೈಟ್‌ (Samsung Galaxy Note 10 Lite) ಸ್ಮಾರ್ಟ್‌ಫೋನ್‌ ಈಗ ಭರ್ಜರಿ ಡಿಸ್ಕೌಂಟ್‌ ಪಡೆದಿದ್ದು, ಗ್ರಾಹಕರನ್ನು ಹಿಂತಿರುಗಿ ನೋಡುವಂತೆ ಮಾಡಿದೆ.

ಅಮೆಜಾನ್‌ ಪ್ಲಾಟ್‌ಫಾರ್ಮ್

ಹೌದು, ಇ ಕಾಮರ್ಸ್‌ ದೈತ್ಯ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 10 ಲೈಟ್‌ ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಅಮೆಜಾನ್‌ನಲ್ಲಿ 58% ರಿಯಾಯಿತಿ ಪಡೆದಿದ್ದು, 89,999ರೂ. ಬೆಲೆಯ ಫೋನ್ 37,449ರೂ. ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಫೋನಿಗೆ ಸುಮಾರು 22,000ರೂ. ವರೆಗೂ ಎಕ್ಸ್‌ಚೇಂಜ್ ಕೊಡುಗೆ (ನಿಮ್ಮ ಫೋನ್‌ ಸ್ಥಿತಿ ಆಧರಿಸಿ) ಸಿಗಲಿದೆ.

ಬ್ಯಾಂಕ್‌ಗಳಿಂದ

ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಲಭ್ಯವಿದ್ದು, ಹಾಗೆಯೇ ನೋ ಕಾಸ್ಟ್‌ ಇಎಮ್‌ಐ ಆಯ್ಕೆಗಳು ಸಹ ಖರೀದಿಸುವ ಗ್ರಾಹಕರಿಗೆ ದೊರೆಯಲಿವೆ. ಹಾಗಾದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 10 ಲೈಟ್‌ ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಗ್ಯಾಲಕ್ಸಿ ನೋಟ್‌ 10 ಲೈಟ್‌ ಸ್ಮಾರ್ಟ್‌ಫೋನ್ 1440 x 3040 ಪಿಕ್ಸಲ್‌ ಸಾಮರ್ಥ್ಯದೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಹೊಂದಿದ್ದು, ಡಿಸ್‌ಪ್ಲೇಯು ಎಡ್ಜ್ ಡು ಎಡ್ಜ್ ಇನ್‌ಫಿನಿಟಿ O ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 394ppi ಆಗಿದ್ದು, ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.88.3%ಆಗಿದೆ. ಇನ್ನು ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್‌ 6 ಒಳಗೊಂಡಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

ಗ್ಯಾಲಕ್ಸಿ ನೋಟ್‌ 10 ಲೈಟ್‌ ಸ್ಮಾರ್ಟ್‌ಫೋನ್ ಕಂಪನಿಯ Exynos 9810 ಚಿಪ್‌ಸೆಟ್‌ ಸಾಮರ್ಥ್ಯದ ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI 2.0 ಬೆಂಬಲಿತ ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್ ಇದೆ. ಇನ್ನು ಈ ಫೋನ್ 6GB RAM ಮತ್ತು 8GB RAM ಆಯ್ಕೆಯನ್ನು ಹೊಂದಿದ್ದು, 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಪಡೆದಿದೆ. ಎಸ್‌ಡಿ ಕಾರ್ಡ್‌ ಬಳಸಿ ಬಾಹ್ಯ ಮೆಮೊರಿಯನ್ನು 1TB ವರೆಗೂ ವಿಸ್ತರಿಸುವ ಅವಕಾಶ ಸಹ ಇದೆ.

ಸ್ಪೆಷಲ್ ಕ್ಯಾಮೆರಾ

ಸ್ಪೆಷಲ್ ಕ್ಯಾಮೆರಾ

ಗ್ಯಾಲಕ್ಸಿ ನೋಟ್‌ 10 ಲೈಟ್‌ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಅಲ್ಟ್ರಾ ವೈಲ್ಡ್‌ ಲೆನ್ಸ್ ಬೆಂಬಲದೊಂದಿಗೆ 12ಎಂಪಿ ಸೆನ್ಸಾರ್‌ ಹೊಂದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳೆರಡು ಸಹ ಕ್ರಮವಾಗಿ 12ಎಂಪಿಯ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 32ಎಂಪಿಯ ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡಿದೆ. OIS ಸೇರಿದಂತೆ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ಗಳನ್ನು ಪಡೆದಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಗ್ಯಾಲಕ್ಸಿ ನೋಟ್‌ 10 ಲೈಟ್‌ ಸ್ಮಾರ್ಟ್‌ಫೋನ್ 4,500 mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಹಾಗೆಯೇ ಗ್ಯಾಲಾಕ್ಸಿ ನೋಟ್ ಸರಣಿ ಫೋನ್‌ಗಳಂತೆ ಈ ಫೋನಿಗೂ S ಪೆನ್ ಸೌಲಭ್ಯವನ್ನು ನೀಡಲಾಗಿದ್ದು, ಈ ಎಸ್‌ ಪೆನ್ ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದುಕೊಂಡಿದೆ. ಸುಲಭವಾಗಿ ಮ್ಯೂಸಿಕ್, ವಿಡಿಯೊ, ಕ್ಯಾಮೆರಾ ನಿಯಂತ್ರಿಸಬಹುದಾಗಿದೆ. ಈ ಪೆನ್ ಆಯ್ಕೆ ಬಳಸಿ ನ್ಯಾವಿಗೇಶನ್ ಸಹ ಮ್ಯಾನೇಜ್ ಮಾಡಬಹುದು.

Best Mobiles in India

English summary
Samsung Galaxy Note 10 Lite available at big Discount on Amazon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X