ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S20, S20+ ಮತ್ತು S20 ಅಲ್ಟ್ರಾ ಬೆಲೆ ಎಷ್ಟು?

|

ಸ್ಯಾಮ್‌ಸಂಗ್ ಸಂಸ್ಥೆಯು ಮೊನ್ನೆಯಷ್ಟೆ ತನ್ನ ಬಹುನಿರೀಕ್ಷಿತ ಗ್ಯಾಲಕ್ಸಿ S20 ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಗ್ಯಾಲಕ್ಸಿ S20, ಗ್ಯಾಲಕ್ಸಿ S20 ಪ್ಲಸ್ ಮತ್ತು ಗ್ಯಾಲಕ್ಸಿ S20 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳ ಮೂರು ಮಾದರಿಗಳನ್ನು ಒಳಗೊಂಡಿದೆ. ಭಾರತದಲ್ಲಿ ಇದೀಗ ಈ ಸ್ಮಾರ್ಟ್‌ಗಳಿಗೆ ಬೆಲೆ ಎಷ್ಟಾಗಬಹುದು ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಅಧಿಕೃತ ದರ ಬಿಡುಗಡೆ ಆಗಿದ್ದು, ಪ್ರಿ ಬುಕ್ಕಿಂಗ್ ಸಹ ಶುರುವಾಗಿದೆ.

ಸ್ಯಾಮ್‌ಸಂಗ್ ಸಂಸ್ಥೆಯ ಗ್ಯಾಲಕ್ಸಿ

ಹೌದು, ಸ್ಯಾಮ್‌ಸಂಗ್ ಸಂಸ್ಥೆಯ ಗ್ಯಾಲಕ್ಸಿ S20 ಸ್ಮಾರ್ಟ್‌ಫೋನ್ ಸರಣಿಯು ಗ್ಯಾಲಕ್ಸಿ S20, ಗ್ಯಾಲಕ್ಸಿ S20 ಪ್ಲಸ್ ಮತ್ತು ಗ್ಯಾಲಕ್ಸಿ S20 ಅಲ್ಟ್ರಾ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಭಾರತದಲ್ಲಿ ಈ ಸರಣಿ ಫೋನ್‌ಗಳ ಆರಂಭಿಕ ವೇರಿಯಂಟ್ ಬೆಲೆಗಳು ಕ್ರಮವಾಗಿ ಗ್ಯಾಲಕ್ಸಿ S20 ಬೆಲೆ 66,999ರೂ, ಗ್ಯಾಲಕ್ಸಿ S20 ಪ್ಲಸ್ 73,999ರೂ. ಮತ್ತು ಗ್ಯಾಲಕ್ಸಿ S20 ಅಲ್ಟ್ರಾ 92,999ರೂ. ಆಗಿವೆ.

ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌

ಸದ್ಯ ಈ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಇಚ್ಚಿಸುವ ಗ್ರಾಹಕರು ಪ್ರಿ-ಬುಕ್ಕಿಂಗ್ ಮಾಡಬಹುದಾಗಿದೆ. ಇನ್ನು ಭಾರತೀಯ ಗ್ರಾಹಕರು ಇದೇ ಮಾರ್ಚ್ 6, 2020ರ ಒಳಗಾಗಿ ಬುಕ್ಕಿಂಗ್ ಮಾಡಿರುವ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇನ್ನು ಈ ಮೂರು ಫೋನ್‌ಗಳು ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಮತ್ತು ಡಿಸೈನ್‌ ಫೀಚರ್ಸ್‌ಗಳಿಂದ ಹೆಚ್ಚು ಗಮನ ಸೆಳೆದಿವೆ.

ಪ್ರಿ-ಬುಕ್ಕಿಂಗ್ ಆಫರ್ ಏನಿದೆ?

ಪ್ರಿ-ಬುಕ್ಕಿಂಗ್ ಆಫರ್ ಏನಿದೆ?

ಗ್ಯಾಲಕ್ಸಿ S20, ಗ್ಯಾಲಕ್ಸಿ S20 ಪ್ಲಸ್ ಮತ್ತು ಗ್ಯಾಲಕ್ಸಿ S20 ಅಲ್ಟ್ರಾ ಈ ಮೂರು ಸ್ಮಾರ್ಟ್‌ಫೋನ್‌ಗಳಿಗೂ ಪ್ರಿ-ಬುಕ್ಕಿಂಗ್ ಆಫರ್‌ಗಳು ಇವೆ.

* ಗ್ಯಾಲಕ್ಸಿ S20 ಅಲ್ಟ್ರಾ ಫೋನ್‌ ಪ್ರಿ-ಬುಕ್ಕಿಂಗ್‌ ಗ್ರಾಹಕರಿಗೆ 1999ರೂ. ಮೌಲ್ಯದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಇಯರ್‌ಬಡ್ಸ್‌ ಪ್ಲಸ್‌ ಮತ್ತು 1999ರೂ. ಮೌಲ್ಯದ ಸ್ಯಾಮ್‌ಸಂಗ್ ಕೇರ್ ಪ್ಲಸ್ ಸೌಲಭ್ಯ ದೊರೆಯಲಿದೆ.

* ಗ್ಯಾಲಕ್ಸಿ S20 ಪ್ಲಸ್ ಫೋನಿನಗೂ ಸಹ 1999ರೂ. ಮೌಲ್ಯದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಇಯರ್‌ಬಡ್ಸ್‌ ಪ್ಲಸ್‌ ಮತ್ತು 1999ರೂ. ಮೌಲ್ಯದ ಸ್ಯಾಮ್‌ಸಂಗ್ ಕೇರ್ ಪ್ಲಸ್ ಸೌಲಭ್ಯ ದೊರೆಯಲಿದೆ.

* ಗ್ಯಾಲಕ್ಸಿ S20 ಫೋನ್‌ ಪ್ರಿ-ಬುಕ್ಕಿಂಗ್‌ಗೆ 2999ರೂ. ಮೌಲ್ಯದ ಗ್ಯಾಲಕ್ಸಿ ಇಯರ್‌ಬಡ್ಸ್‌ ಪ್ಲಸ್‌ ಮತ್ತು 1999ರೂ. ಮೌಲ್ಯದ ಸ್ಯಾಮ್‌ಸಂಗ್ ಕೇರ್ ಪ್ಲಸ್ ಸೌಲಭ್ಯ ದೊರೆಯಲಿದೆ.

ಸ್ಯಾಮ್‌ಸಂಗ್ ಕೇರ್ ಪ್ಲಸ್‌ ಸೌಲಭ್ಯ ಏನಿರುತ್ತೆ?

ಸ್ಯಾಮ್‌ಸಂಗ್ ಕೇರ್ ಪ್ಲಸ್‌ ಸೌಲಭ್ಯ ಏನಿರುತ್ತೆ?

ಸ್ಯಾಮ್‌ಸಂಗ್ ಕೇರ್ + ನಲ್ಲಿ ಸ್ಮಾರ್ಟ್‌ಫೋನ್‌ ರಿಪೇರಿ ಸೌಲಭ್ಯ ಇರಲಿದೆ. ಇದರಲ್ಲಿ ಆಕ್ಸಿಡೆಂಟಲ್ & ಲಿಕ್ವಿಡ್ ಡ್ಯಾಮೇಜ್ ಪ್ರೊಟೆಕ್ಷನ್ ರಕ್ಷಣೆ ದೊರೆಯಲಿದೆ. ಫೋನ್ ಖರೀದಿಸಿದ ಒಂದು ವರ್ಷದ ಅವಧಿಯೊಳಗೆ ಆಕಸ್ಮಿಕವಾಗಿ ಸಂಭವಿಸುವ ಯಾವುದೇ ರೀತಿಯ ಫೋನಿನ ಬಾಹ್ಯ ಅಥವಾ ದ್ರವ ಹಾನಿಗೆ ರಿಪೇರಿ ಸೌಲಭ್ಯ ಇರುತ್ತದೆ.

ಟೆಲಿಕಾಂ ಸಂಸ್ಥೆಗಳ ಆಫರ್

ಟೆಲಿಕಾಂ ಸಂಸ್ಥೆಗಳ ಆಫರ್

ಜಿಯೋ- ಜಿಯೋ ಟೆಲಿಕಾಂ ಸಹ ಗ್ಯಾಲಕ್ಸಿ ಎಸ್‌20 ಸರಣಿ ಫೋನ್ ಪ್ರಿ-ಬುಕ್ಕಿಂಗ್‌ಗೆ ಆಕರ್ಷಕ ಆಫರ್ ತಿಳಿಸಿದೆ. ಗ್ರಾಹಕರಿಗೆ ಡಬಲ್ ಡೇಟಾ ಸೌಲಭ್ಯ (350GB+350GB) ಮತ್ತು 4,999ರೂ. ಮೌಲ್ಯದ ಒಂದು ವರ್ಷ ಹೆಚ್ಚುವರಿ ಅನಿಯಮಿತ ವಾಯಿಸ್ ಕರೆಗಳು ಮತ್ತು 700GB ಡೇಟಾ ಸೌಲಭ್ಯವನ್ನು ಇರಲಿದೆ. ಇವೆಲ್ಲ ಸೇರಿ ಒಟ್ಟು 14,997ರೂ ಮೌಲ್ಯದ ಪ್ರಯೋಜನ ಸಿಗಲಿದೆ.

ಪ್ರಿ-ಬುಕ್ಕಿಂಗ್

ಪ್ರಿ-ಬುಕ್ಕಿಂಗ್

ಗ್ರಾಹಕರು ಸ್ಯಾಮ್‌ಸಂಗ್ ಸಂಸ್ಥೆಯ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ ಫೋನ್ ಪ್ರಿ-ಬುಕ್ ಮಾಡಬಹುದು. ಹಾಗಾದರೆ ಗ್ಯಾಲಕ್ಸಿ S20, ಗ್ಯಾಲಕ್ಸಿ S20 ಪ್ಲಸ್ ಮತ್ತು ಗ್ಯಾಲಕ್ಸಿ S20 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S20

ಸ್ಯಾಮ್‌ಸಂಗ್ ಗ್ಯಾಲಕ್ಸಿ S20

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಫೋನ್ 6.2 ಇಂಚಿನ ಇನ್ಫಿನಿಟಿ-O ಡೈನಾಮಿಕ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಪಿಕ್ಸಲ್ ರೆಸಲ್ಯೂಶನ್ 1,440x3,200 ಆಗಿದೆ. ಡಿಸ್‌ಪ್ಲೇಯು HDR10 + ಹೊಂದಿದ್ದು, 120Hz ನ ರಿಫ್ರೆಶ್ ರೇಟ್ ಪಡೆದಿದೆ. ಇನ್ನು ಈ ಫೋನ್ 8GB / 12GB RAM ಮತ್ತು 128GB ಆಯ್ಕೆಯ ವೇರಿಯಂಟ್ ಇದೆ. 5G ವೇರಿಯಂಟ್ ಸಹ ಇರಲಿದೆ. ವಾಯರ್‌ಲೆಸ್‌ ಫಾಸ್ಟ್‌ ಚಾರ್ಜಿಂಗ್ ಬೆಂಬಲಿತ 4,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ.

ಇನ್ನು ಈ ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಪಡೆದಿವೆ. ಉಳಿದೆರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿವೆ. ಸೆಲ್ಫಿ ಕ್ಯಾಮೆರಾವು 10ಎಂಪಿ ಸೆನ್ಸಾರ್‌ನಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಪ್ಲಸ್ ಫೋನ್ 1,440x3,200 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.7 ಇಂಚಿನ ಡೈನಾಮಿಕ್ AMOLED ಫುಲ್‌ ಹೆಚ್‌ಡಿ ಪ್ಲಸ್‌ ಹೊಂದಿದೆ. ಈ ಫೋನ್ 8GB RAM ಮತ್ತು 128GB ಹಾಗೂ 12GB RAM+128GB/256GB/512GB ಸ್ಟೋರೇಜ್ ಸಾಮರ್ಥ್ಯ ಪಡೆದಿದೆ. ಹಾಗೆಯೇ 4,500mAh ಬ್ಯಾಟರಿ ಲೈಫ್ ಪಡೆದಿದ್ದು, ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಇನ್ನು ಈ ಫೋನ್ ಸಹ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಪಡೆದಿವೆ. ಉಳಿದೆರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿವೆ. ಸೆಲ್ಫಿ ಕ್ಯಾಮೆರಾವು 10ಎಂಪಿ ಸೆನ್ಸಾರ್‌ನಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಅಲ್ಟ್ರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಅಲ್ಟ್ರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಅಲ್ಟ್ರಾ ಫೋನ್ 1440x3200 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.90 ಇಂಚಿನ ಡೈನಾಮಿಕ್ AMOLED ಫುಲ್‌ ಹೆಚ್‌ಡಿ ಪ್ಲಸ್‌ ಹೊಂದಿದೆ. ಈ ಫೋನ್ 12GB/16GB RAM ಮತ್ತು 128GB, 256GB ಮತ್ತು 512GB ಸ್ಟೋರೇಜ್ ಸಾಮರ್ಥ್ಯ ಆಯ್ಕೆಯ ಪಡೆದಿದೆ. ಹಾಗೆಯೇ 5000mAh ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, 45W ಸಾಮರ್ಥ್ಯದ ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಗ್ಯಾಲಕ್ಸಿ S20 ಅಲ್ಟ್ರಾ ಫೋನ್ ಸಹ ಹಿಂಬದಿ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್ ಪಡೆದಿವೆ. ಸೆಕೆಂಡರಿ ಕ್ಯಾಮೆರಾ ಕ್ರಮವಾಗಿ 48ಎಂಪಿ, ತೃತೀಯ ಕ್ಯಾಮೆರಾ 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿವೆ. ಸೆಲ್ಫಿ ಕ್ಯಾಮೆರಾವು 40ಎಂಪಿ ಸೆನ್ಸಾರ್‌ನಲ್ಲಿದೆ.

Most Read Articles
Best Mobiles in India

English summary
Pre-booked consumers in India will receive their Galaxy S20 beginning March 6, 2020, being among the first set of consumers worldwide to own the stunning flagships.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X