ಎಳೆದಷ್ಟು ವಿಸ್ತರಿಸಿಕೊಳ್ಳುವ ಡಿಸ್‌ಪ್ಲೇ; ಸ್ಯಾಮ್‌ಸಂಗ್‌ನಿಂದ ಅನಾವರಣ!

|

ತಂತ್ರಜ್ಞಾನ ಯಾವ ಮಟ್ಟದಲ್ಲಿ ದಿನೇ ದಿನೇ ಅಭಿವೃದ್ಧಿಯಾಗುತ್ತಿದೆ ಎಂದರೆ ಜನಸಾಮಾನ್ಯರು ಊಹಿಸಿಕೊಳ್ಳಲು ಸಾಧ್ಯವಾಗದಷ್ಟು ಬೆಳವಣಿಗೆ ಕಂಡುಬಂದಿವೆ. ಯಾಕೆಂದರೆ ಸ್ಮಾರ್ಟ್‌ ಗ್ಯಾಜೆಟ್‌ಗಳಲ್ಲಿ ಡ್ಯುಯಲ್‌ ಸೈಡ್‌ ಡಿಸ್‌ಪ್ಲೇ ಆಯ್ಕೆ ಹಾಗೆಯೇ ಫೋಲ್ಡಬಲ್‌ ಡಿಸ್‌ಪ್ಲೇ ಆಯ್ಕೆ ಇರುವ ಲ್ಯಾಪ್‌ಟಾಪ್‌ ಹಾಗೂ ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇದರ ಹೊರತಾಗಿ ಮತ್ತೊಂದು ವಿಶೇಷ ಶೈಲಿಯ ಡಿಸ್‌ಪ್ಲೇಯನ್ನು ಸ್ಯಾಮ್‌ಸಂಗ್‌ ಪರಿಚಯಿಸಿದೆ.

ಬಹುಪಾಲು

ಹೌದು, ಬಹುಪಾಲು ಗ್ರಾಹಕರ ನೆಚ್ಚಿನ ಕಂಪೆನಿಯಾಗಿರುವ ಸ್ಯಾಮ್‌ಸಂಗ್‌ ಈಗಾಗಲೇ ಹಲವಾರು ರೀತಿಯ ಗ್ಯಾಜೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಆಕರ್ಷಕ ಎನಿಸಿವೆ. ಅದಾಗ್ಯೂ ಈಗ ಹೊಸ ಶೈಲಿಯ ಡಿಸ್‌ಪ್ಲೇ ಅನಾವರಣ ಮಾಡಲು ಮುಂದಾಗುತ್ತಿರುವುದು ಗ್ಯಾಜೆಟ್‌ ಪ್ರಿಯರಿಗೆ ತುಂಬಾ ಸಂತೋಷ ವಿಷಯ. ಹಾಗಿದ್ರೆ ಈ ಡಿಸ್‌ಪ್ಲೇ ವಿಶೇಷತೆ ಏನು?, ಬಳಕೆದಾರರಿಗೆ ಯಾವಾಗ ಇದು ಲಭ್ಯ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ವೇಗಾಸ್‌

ಲಾಸ್ ವೇಗಾಸ್‌ನಲ್ಲಿ ಸಿಇಎಸ್‌ (ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ) 2023 ಕಾರ್ಯಕ್ರಮ ಪ್ರಾರಂಭವಾದ್ದು, ಈ ವರ್ಷದ ಈವೆಂಟ್‌ನಲ್ಲಿ ವಿವಿಧ ನವೀನ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ. ಅನೇಕ ಉದ್ಯಮ ವೃತ್ತಿಪರರು ಮತ್ತು ಗ್ರಾಹಕರು ಸಿಇಎಸ್‌ 2023 ರಲ್ಲಿ ಯಾವ ಹೊಸ ಮತ್ತು ಉತ್ತೇಜಕ ಬೆಳವಣಿಗೆಗಳನ್ನು ಅನಾವರಣಗೊಳಿಸಲಾಗುವುದು ಎಂದು ಎದುರು ನೋಡುತ್ತಿದ್ದಾರೆ.

ವಿಚಿತ್ರ

ಈ ಸಮಾವೇಶದಲ್ಲಿ ವಿಚಿತ್ರವಾದ ತಾಂತ್ರಿಕ ವಿಚಾರಗಳು ಮತ್ತು ಉತ್ಪನ್ನಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಇವು ಯೂನಿಕ್‌ ಆಗಿರಲಿದ್ದು, ಇಲ್ಲಿ ಪ್ರದರ್ಶನ ಆದ ನಂತರವೇ ಇದರ ಬೆಲೆ, ಫೀಚರ್ಸ್‌ ಹಾಗೂ ಲಭ್ಯತೆ ಬಗ್ಗೆ ಕಂಪೆನಿಗಳು ಮಾಹಿತಿ ಬಹಿರಂಗಪಡಿಸುತ್ತವೆ.

ಮೂಕವಿಸ್ಮಿತರನ್ನಾಗಿ ಮಾಡಿದ ಸ್ಯಾಮ್‌ಸಂಗ್‌!

ಮೂಕವಿಸ್ಮಿತರನ್ನಾಗಿ ಮಾಡಿದ ಸ್ಯಾಮ್‌ಸಂಗ್‌!

ಇದರ ನಡುವೆ ಸ್ಯಾಮ್‌ಸಂಗ್‌ ಕಂಪೆನಿ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಲು ಮುಂದಾಗಿದೆ. ಈ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್ ಪರಿಚಯಿಸಿರುವ ಫ್ಲೆಕ್ಸಿಬಲ್ ಹೈಬ್ರಿಡ್ OLED ಡಿಸ್‌ಪ್ಲೇ ಬಗ್ಗೆ ಯಾರೂ ಸಹ ಊಹೆ ಕೂಡ ಮಾಡಿಕೊಂಡಿರಲಿಲ್ಲ. ಆದರೆ, ಇದನ್ನು ಪರಿಚಯಿಸಿದ ನಂತರ ಗ್ರಾಹಕರು ಹಾಗೂ ಇತರೆ ಸಂಸ್ಥೆಗಳು ಬೆರಗುಗಣ್ಣಿನಿಂದ ನೋಡಲು ಮುಂದಾಗಿದ್ದಾರೆ. ಯಾಕೆಂದರೆ ಈ ಡಿಸ್‌ಪ್ಲೇಯನ್ನು ಫೋಲ್ಡ್‌ ಮಾಡಬಹುದು ಅಥವಾ ವಿಸ್ತರಿಸಿಕೊಳ್ಳಬಹುದು.

ವಿಶ್ವದ ಮೊದಲ ಡಿಸ್‌ಪ್ಲೇ

ವಿಶ್ವದ ಮೊದಲ ಡಿಸ್‌ಪ್ಲೇ

ಫೋಲ್ಡ್-ಅಪ್ ಮತ್ತು ಸ್ಲೈಡ್ ಎರಡರಲ್ಲೂ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಡಿಸ್‌ಪ್ಲೇ ಇದಾಗಿದ್ದು, ಇದರ ಇನ್ನೊಂದು ಶ್ರೇಷ್ಠತೆ. ಇನ್ನು ಈ ಸ್ಯಾಮ್‌ಸಂಗ್ ಫ್ಲೆಕ್ಸ್ ಹೈಬ್ರಿಡ್ OLEDಪ್ಯಾನೆಲ್ ಅನ್ನು ಭವಿಷ್ಯದ ಡಿವೈಸ್‌ಗಳಾದ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬಳಕೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಫೋಲ್ಡ್‌ ಮಾಡಲು ಹಾಗೂ ಸ್ಲೈಡ್ ಮಾಡಲು ಅನುವು ಮಾಡಿಕೊಡುವುದರಿಂದ ಹೆಚ್ಚಿನ ಅನುಕೂಲ ಆಗಲಿದೆ.

ಸೆಕೆಂಡುಗಳಲ್ಲಿಯೇ ಗಾತ್ರ ಬದಲಾಯಿಸಿಕೊಳ್ಳಬಹುದು

ಸೆಕೆಂಡುಗಳಲ್ಲಿಯೇ ಗಾತ್ರ ಬದಲಾಯಿಸಿಕೊಳ್ಳಬಹುದು

ಇನ್ನು ಈ ಡಿಸ್‌ಪ್ಲೇ ಗಾತ್ರವನ್ನು ಕೆಲವೇ ಸೆಕೆಂಡುಗಳಲ್ಲಿ ಸಣ್ಣ ಡಿಸ್‌ಪ್ಲೇಯಿಂದ ದೊಡ್ಡ ಡಿಸ್‌ಪ್ಲೇಗೆ ಬದಲಾಯಿಸಿಕೊಳ್ಳಬಹುದಾಗಿದೆ. ಡಿವೈಸ್‌ಗಳಲ್ಲಿನ ಸಾಮರ್ಥ್ಯಕ್ಕೆ ಇದು ಅನುಗುಣವಾಗಿ ಹೊಂದಿಕೊಳ್ಳುತ್ತದೆ. ಈ ಡಿಸ್‌ಪ್ಲೇ 10.5' ಇಂಚಿನ ಫ್ಲೆಕ್ಸ್ ಹೈಬ್ರಿಡ್ OLED ಸ್ಕ್ರೀನ್ ಜೊತೆಗೆ 4:3 ಆಕಾರ ಅನುಪಾತವನ್ನು ಹೊಂದಿದೆ. ಹಾಗೆಯೇ ಇದು 16:10 ಆಕಾರ ಅನುಪಾತದೊಂದಿಗೆ 12.4' ಇಂಚಿನ ಡಿಸ್‌ಪ್ಲೇ ಬಳಕೆ ಮಾಡಲು ಅನುಮತಿಸುತ್ತದೆ.

ಗೇಮ್ ಚೇಂಜರ್ ಆದ ಫ್ಲೆಕ್ಸಿಬಲ್ ಡಿಸ್‌ಪ್ಲೇ

ಗೇಮ್ ಚೇಂಜರ್ ಆದ ಫ್ಲೆಕ್ಸಿಬಲ್ ಡಿಸ್‌ಪ್ಲೇ

ಸ್ಯಾಮ್‌ಸಂಗ್‌ನ ಈ ಫ್ಲೆಕ್ಸಿಬಲ್ ಡಿಸ್‌ಪ್ಲೇ ಗೇಮ್ ಚೇಂಜರ್ ಆಗಿ ಮಾರ್ಪಟ್ಟಿದ್ದು, ಚಲನಚಿತ್ರ ವೀಕ್ಷಿಸುವುದು ಅಥವಾ ಕಚೇರಿ ಡಾಕ್ಯುಮೆಂಟ್‌ನಲ್ಲಿ ಕೆಲಸ ಮಾಡುವಂತಹ ಕೆಲವು ಕಾರ್ಯಗಳಿಗಾಗಿ ದೊಡ್ಡ ಡಿಸ್‌ಪ್ಲೇ ಅಗತ್ಯ. ಆದರೆ, ಈ ಡಿವೈಸ್‌ಗಳಿಗೆ ಈ ತಂತ್ರಜ್ಞಾನವು ಗೇಮ್ ಚೇಂಜರ್ ಆಗುವುದರಲ್ಲಿ ಎರಡು ಮಾತಿಲ್ಲ.

OLED

ಇದಿಷ್ಟೇ ಅಲ್ಲದೆ ಸ್ಯಾಮ್‌ಸಂಗ್ ಇನ್ನೂ ಎರಡು OLED ಪ್ಯಾನೆಲ್‌ಗಳನ್ನು ಸಹ ಪ್ರದರ್ಶಿಸುತ್ತದೆ. ಫ್ಲೆಕ್ಸ್ ಸ್ಲೈಡಬಲ್ ಸೋಲೋ 14 ಇಂಚಿನ OLED ಪ್ಯಾನೆಲ್ ಆಗಿದ್ದು ಅದು ಒಂದು ಬದಿಯಿಂದ ಸ್ಲಿಡ್ ತೆರೆದಾಗ 17.3 ಇಂಚಿನ ಡಿಸ್‌ಪ್ಲೇಯಾಗಿ ಬದಲಾಗುತ್ತದೆ.

ಈ ಡಿಸ್‌ಪ್ಲೇ ಯಾವಾಗ ಬಳಕೆಗೆ ಲಭ್ಯ?

ಈ ಡಿಸ್‌ಪ್ಲೇ ಯಾವಾಗ ಬಳಕೆಗೆ ಲಭ್ಯ?

ಸದ್ಯಕ್ಕೆ ಲ್ಯಾಪ್‌ಟಾಪ್‌ಗಳಂತಹ ಡಿವೈಸ್‌ಗಳಿಗೆ ಈ ತಂತ್ರಜ್ಞಾನವು ವಿಶೇಷವಾಗಿ ಉಪಯುಕ್ತವಾಗಲಿದ್ದು, ಪ್ರತ್ಯೇಕ ಮಾನಿಟರ್‌ನ ಅಗತ್ಯವಿಲ್ಲದೇ ದೊಡ್ಡ ಡಿಸ್‌ಪ್ಲೇ ಮೂಲಕ ವೀಕ್ಷಣೆ ಮಾಡಬಹುದಾಗಿದ್ದು, ಸ್ಯಾಮ್‌ಸಂಗ್ ಪರಿಚಯಿಸಿರುವ ಈ ಹೊಸ ಡಿಸ್‌ಪ್ಲೇಯನ್ನು ಯಾವಾಗ ಮತ್ತು ಯಾವ ಡಿವೈಸ್‌ನಲ್ಲಿ ಪರಿಚಯಿಸಲಾಗುತ್ತದೆ ಎಂಬ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಿಲ್ಲವಾದರೂ ಕೆಲವು ದಿನಗಳಲ್ಲಿ ಈ ಬಗ್ಗೆ ಮಾಹಿತಿ ಬಹಿರಂಗಪಡಿಸುವ ಸಾಧ್ಯತೆ ಇದೆ.

Best Mobiles in India

English summary
Samsung unveils Flex Hybrid OLED screen that can fold and slide.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X