ಆಂಡ್ರಾಯ್ಡ್‌ ಫೋನ್‌ಗಳಿಗೂ ಬಂತು ಈ ಹೊಸ ಸೌಲಭ್ಯ; ತುರ್ತು ಸಂದರ್ಭದಲ್ಲಿ ಬಳಕೆಗೆ ಯೋಗ್ಯ!

|

ಸ್ಮಾರ್ಟ್‌ ಡಿವೈಸ್‌ನಲ್ಲಿ ಹೊಸ ತಂತ್ರಜ್ಞಾನ ಪರಿಚಯವಾಗುತ್ತಿವೆ. ಇದರ ಭಾಗವಾಗಿಯೇ ಇಂದು ಸ್ಮಾರ್ಟ್‌ಫೋನ್‌ ಕೇವಲ ಕರೆ ಮಾಡಲು ಮಾತ್ರವಲ್ಲದೆ ವಿವಿಧ ರೀತಿಯ ಬಳಕೆಗೆ ಅತ್ಯಾನುಕೂಲ ವಾಗಿದೆ. ಅದರಲ್ಲೂ ಫೋನ್‌ ಹಲವರ ಪ್ರಾಣ ರಕ್ಷಣೆ ಮಾಡಿರುವುದೂ ಉಂಟು, ಹಾಗೆ ಮತ್ತಷ್ಟು ಜನರ ಜೀವನವನ್ನು ಹಾಳು ಮಾಡಿರುವುದೂ ಉಂಟು. ಇದೆಲ್ಲದರ ನಡುವೆ ಹೊಸ ರೀತಿಯ ಫೀಚರ್ಸ್‌ಗಳು ಕಾಲಕಾಲಕ್ಕೆ ಬಳಕೆದಾರರಿಗೆ ಲಭ್ಯವಾಗುತ್ತಿದ್ದು, ಈ ಫೀಚರ್ಸ್‌ ಮಾತ್ರ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ.

ಕ್ವಾಲ್ಕಾಮ್

ಹೌದು, ಕ್ವಾಲ್ಕಾಮ್ ಪ್ರಕಾರ ಹೈ ಎಂಡ್ ಫೋನ್‌ಗಳಲ್ಲಿ ಸಿಪಿಯುಗಳು ಉಪಗ್ರಹ ಫೀಚರ್ಸ್‌ ನೀಡಲಾಗಿದ್ದು, ಈ ಮೂಲಕ ಯಾವುದೇ ನೆಟ್‌ವರ್ಕ್‌ ಸೇವೆ ಪಡೆದುಕೊಳ್ಳದೆ ಬೇಕಾದವರ ಜೊತೆ ಸಂಪರ್ಕ ಸಾಧಿಸಬಹುದು ಎಂದು ತಿಳಿಸಿದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡಲಿದೆ?, ಇದರಿಂದ ಆಗುವ ಪ್ರಯೋಜನ ಏನು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಕ್ವಾಲ್ಕಮ್

ಈ ಸಂಬಂಧ ಕ್ವಾಲ್ಕಮ್ ಪ್ರತಿಕ್ರಿಯಿಸಿದ್ದು, ಹೊಸ ಸಿಪಿಯುಗಳು ಮತ್ತು ಮೋಡೆಮ್‌ಗಳು ಉಪಗ್ರಹ ಫೀಚರ್ಸ್‌ಅನ್ನು ಹೊಂದಿದ್ದು, ಯಾವುದೇ ನೆಟ್‌ವರ್ಕ್ ಇಲ್ಲದಿದ್ದರೂ ಸಹ, ತುರ್ತು ಪರಿಸ್ಥಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಇರಿಡಿಯಮ್ ಉಪಗ್ರಹ ಜಾಲವು ಇದನ್ನು ಸಾಧಿಸಲು ಚಿಪ್ ತಯಾರಕರನ್ನು ಶಕ್ತಗೊಳಿಸುತ್ತದೆ. ಈ ಸೌಲಭ್ಯವು ಆಪಲ್‌ನ ತುರ್ತು SOS ಫೀಚರ್ಸ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ತಿಳಿಸಿದೆ.

ಚಿಪ್

ಇನ್ನು ಚಿಪ್ ತಯಾರಕರ ಪ್ರಕಾರ ಯಾವುದೇ ಸೆಲ್ ಕವರೇಜ್ ಇಲ್ಲದಿದ್ದರೂ ಸಹ ಆಂಡ್ರಾಯ್ಡ್‌ ಫೋನ್ ಮಾಲೀಕರು ಮೆಸೆಜ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಸಹಾಯಕವಾಗುವುದರ ಜೊತೆಗೆ, ಎಸ್‌ಎಮ್‌ಎಸ್‌ ಟೆಕ್ಟ್ಸ್‌ ಮೆಸೆಜ್‌ ಹಾಗೂ ಇತರ ಮೆಸೆಜ್‌ ಕಳುಹಿಸುವುದನ್ನು ಇದು ಸಕ್ರಿಯಗೊಳಿಸುತ್ತದೆ. ಇದಿಷ್ಟೇ ಅಲ್ಲದೆ, ಪ್ರತ್ಯೇಕವಾದ ಗ್ರಾಮೀಣ ಮತ್ತು ಕಡಲಾಚೆಯ ಸ್ಥಳಗಳಲ್ಲಿನ ಬಳಕೆಗೆ ಇದು ಹೆಚ್ಚಿನ ಅನುವು ಮಾಡಿಕೊಡುತ್ತದೆ.

ಆಂಡ್ರಾಯ್ಡ್

ಇದರೊಂದಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಅದರಲ್ಲೂ ಆಪಲ್‌ ಡಿವೈಸ್‌ಗಳಲ್ಲಿ ಇರುವ ಈ ಫೀಚರ್ಸ್‌ ಅನ್ನೇ ಅಂಡ್ರಾಯ್ಡ್‌ನಲ್ಲೇ ನೀಡುತ್ತಿರುವುದು ಮತ್ತಷ್ಟು ವಿಶೇಷ ಸಂಗತಿಯಾಗಿದೆ. ಈ ಮೂಲಕ ಬಳಕೆದಾರರು ಸಂಕಷ್ಟಕ್ಕೆ ಸಿಲುಕಿದಾಗ ಆ ಸಮಸ್ಯೆ ಎದುರಿಸಲು ಇದು ಸಹಕಾರಿಯಾಗಲಿದೆ.

ಹೊಸ ಉಪಗ್ರಹ ಫೀಚರ್ಸ್‌ ಯಾವಾಗ ಲಭ್ಯ?

ಹೊಸ ಉಪಗ್ರಹ ಫೀಚರ್ಸ್‌ ಯಾವಾಗ ಲಭ್ಯ?

ಈ ಹೊಸ ಫೀಚರ್ಸ್‌ ಕ್ವಾಲ್‌ಕಾಮ್‌ನ ಪ್ರಮುಖ ಸ್ನಾಪ್‌ಡ್ರಾಗನ್ 8 ಜನ್ 2 SoC ಹೊಂದಿರುವ ಡಿವೈಸ್‌ಗಳಲ್ಲಿ ಪಾತ್ರ ಲಭ್ಯವಿರಲಿದೆ ಎನ್ನುವುದು ನಿಮ್ಮ ಗಮನಕ್ಕಿರಲಿ. . ಸ್ನಾಪ್‌ಡ್ರಾಗನ್ ಉಪಗ್ರಹ ಕಾರ್ಯವು ಆರಂಭದಲ್ಲಿ ತೊಂದರೆ ಸಂದರ್ಭಗಳಲ್ಲಿ ಮಾತ್ರ ಲಭ್ಯವಿತ್ತು. ಅಂದರೆ ನೀವು ಮೊಬೈಲ್ ಕವರೇಜ್ ಇಲ್ಲದೆ ದೂರದ ಸ್ಥಳದಲ್ಲಿದ್ದಾಗ ಮತ್ತು ಸಹಾಯಕ್ಕಾಗಿ ಯಾರನ್ನಾದರೂ ಸಂಪರ್ಕಿಸಬೇಕು ಎಂದಾಗ ಮಾತ್ರ ಆದರೆ. ಈ ಹೊಸ ಫೀಚರ್ಸ್‌ ಟೆಕ್ಸ್ಟ್‌ ಸಂದೇಶ ಕಳುಹಿಸಲು ನಿಮಗೆ ಅನುಮತಿಸುತ್ತದೆ. ವಿಶೇಷ ಎಂದರೆ ಈ ಮೆಸೆಜ್‌ ಸೇವೆಯನ್ನು ಆಪಲ್‌ ಸಹ ಇನ್ನೂ ಪಡೆದುಕೊಂಡಿಲ್ಲ.

ಸೇವೆಯ ವೆಚ್ಚ ಎಷ್ಟು?

ಸೇವೆಯ ವೆಚ್ಚ ಎಷ್ಟು?

ಈ ಸೇವೆಯು ಉಚಿತವಾಗಿರುವುದಿಲ್ಲ ಎಂಬುದು ಸಹ ಪ್ರಮುಖವಾದ ವಿಷಯ. ಈ ಫೀಚರ್ಸ್‌ ಬಳಕೆ ಮಾಡಲು ಕಡಿಮೆ ಹಣವನ್ನು ವಿನಿಯೋಗಿಸಬೇಕಿದೆ. ಉಪಗ್ರಹ ಆಧಾರಿತ ಸಂದೇಶ ಸೇವೆ ಮತ್ತು ಅವಲಂಬಿತ ಸೇವೆಗಳ ವೆಚ್ಚವು ಓಎಮ್‌ಇ ಗಳು ಮತ್ತು ಸೇವಾ ಪೂರೈಕೆದಾರರ ಮೇಲೆ ಅವಲಂಬಿತವಾಗಿರುತ್ತದೆ. ಇದರಲ್ಲಿ ತುರ್ತು ಸಂದೇಶ ಕಳುಹಿಸುವಿಕೆಯು ಉಚಿತವಾಗಿರಬಹುದು ಅಥವಾ ಸ್ವಲ್ಪ ವೆಚ್ಚವಾಗಬಹುದು. ಆದರೆ, ಬಳಕೆದಾರರು ಪ್ರೀಮಿಯಂ ಮೆಸೇಜಿಂಗ್ ಫೀಚರ್ಸ್‌ಗಾಗಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

ಈ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಹ ಕಂಪೆನಿಯು ವಿವರಿಸಿದೆ. ಅದರಂತೆ ಸ್ನಾಪ್‌ಡ್ರಾಗನ್ ಉಪಗ್ರಹವು ಗಾರ್ಮಿನ್ ಪ್ರತಿಕ್ರಿಯೆಯನ್ನು ನಿಯಂತ್ರಿಸುತ್ತದೆ. ನೀವು SOS ಅನ್ನು ಕಳುಹಿಸಿದಾಗ, ಪ್ರತಿಕ್ರಿಯೆ ಸಂಯೋಜಕರು ತಕ್ಷಣವೇ ಗ್ರಾಹಕರ ಅಕ್ಷಾಂಶ/ರೇಖಾಂಶವನ್ನು ತಮ್ಮ ಸ್ವಾಮ್ಯದ ಮ್ಯಾಪಿಂಗ್ ಮತ್ತು ಪ್ರತಿಕ್ರಿಯೆ ಸಮನ್ವಯ ಸಾಫ್ಟ್‌ವೇರ್‌ನಲ್ಲಿ ನೋಡುತ್ತಾರೆ ಮತ್ತು ರಕ್ಷಣೆಯನ್ನು ಸಂಘಟಿಸಲು ಸೂಕ್ತವಾದ ಏಜೆನ್ಸಿಯನ್ನು ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದೆ.

Best Mobiles in India

English summary
Satellite Connectivity Coming to High End Android Phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X