ನಗರದಲ್ಲಿ ಹೆಚ್ಚಾಗುತ್ತಿದ್ದಾರೆ ಸೋಶಿಯಲ್‌ ನೆಟ್‌ವರ್ಕ್ ಬಳಕೆದಾರರು

By Ashwath
|

ಭಾರತದ ನಗರ ಪ್ರದೇಶದಲ್ಲಿ ಸೋಶಿಯಲ್‌ ನೆಟ್‌ವರ್ಕ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ.ನಗರ ಪ್ರದೇಶದಲ್ಲಿ ಡಿಸೆಂಬರ್‌ನಲ್ಲಿ 62 ಮಿಲಿಯನ್ ಜನರ ಸೋಶಿಯಲ್‌ ನೆಟ್‌ವರ್ಕ್ ಬಳಸುತ್ತಿದ್ದು ಈ ಸಂಖ್ಯೆ ಮುಂದಿನ ಜೂನ್‌ಗೆ 66 ಮಿಲಿಯನ್‌ಗೆ ತಲುಪುವ ಸಾಧ್ಯತೆ ಇದೆ ಎಂದು ನೂತನ ವರದಿ ತಿಳಿಸಿದೆ.

ಸೋಶಿಯಲ್‌ ಮೀಡಿಯಾದ ಬಗ್ಗೆ Internet and Mobile Association of India(IAMAI)ದವರು ನಡೆಸಿದ ಸಂಶೋಧನಾ ವರದಿ ಪ್ರಕಾರ ನಗರದ ಶೇ. 74ರಷ್ಟು ಮಂದಿ ಸಕ್ರೀಯವಾಗಿ ಸೋಶಿಯಲ್‌ ನೆಟ್‌ವರ್ಕ್ ಬಳಸುತ್ತಿದ್ದು,ಇಮೇಲ್‌ ನಂತ್ರ ಹೆಚ್ಚು ಜನ (ಶೇ. 80)ಸೋಶಿಯಲ್‌ ನೆಟ್‌ವರ್ಕ್‌ಗಾಗಿ ಇಂಟರ್‌ನೆಟ್‌ ಬಳಸುತ್ತಿದ್ದಾರೆ ಎಂದು ವರದಿ ನೀಡಿದೆ.

ನಗರದಲ್ಲಿ ಹೆಚ್ಚಾಗುತ್ತಿದ್ದಾರೆ ಸೋಶಿಯಲ್‌ ನೆಟ್‌ವರ್ಕ್ ಬಳಕೆದಾರರು

ಸೋಶಿಯಲ್‌ ನೆಟ್‌ವರ್ಕ್‌ ಬಳಸುವ ಗ್ರಾಹಕರ ಸಂಖ್ಯೆ ಏರಿಕೆಯಾಗಲು ಸ್ಮಾರ್ಟ್‌ಫೋನ್‌ ಮುಖ್ಯ ಕಾರಣ ಎಂದು IAMAI ವರದಿಯಲ್ಲಿ ತಿಳಿಸಿದೆ. ವರದಿ ಪ್ರಕಾರ ಫೇಸ್‌ಬುಕ್‌ನ್ನು ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ್ದರೆ, ಲಿಂಕ್ಡಿನ್‌ ಫೇಸ್‌ಬುಕ್‌ ನಂತರದ ಸ್ಥಾನದಲ್ಲಿದೆ ಎಂದು ಹೇಳಿದೆ.

ವಾರಂತ್ಯ ಹೊರತು ಪಡಿಸಿದ ದಿನದಲ್ಲಿ ಜನರು 29.6 ನಿಮಿಷಗಳಷ್ಟು ಸಮಯವನ್ನು ಉಪಯೋಗಿಸಿದರೆ, ವಾರಂತ್ಯದಲ್ಲಿ 28.8 ನಿಮಿಷಗಳಷ್ಟು ಕಾಲ ಸೋಶಿಯಲ್‌ ನೆಟ್‌ವರ್ಕ್‌ನಲ್ಲೇ ಬ್ಯೂಸಿಯಾಗಿರುತ್ತಾರೆ ಎಂದು ವರದಿಯಲ್ಲಿ ತಿಳಿಸಿದೆ.

ಲಿಂಕ್‌ : ಮೊಬೈಲ್‌ ಒಳಗಡೆ ಹೇಗಿರುತ್ತೆ ಗೊತ್ತಾ ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X