TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಜಿ.ಫಾಸ್ಟ್: ಪ್ರಸ್ತುತ ಇಂಟರ್ನೆಟ್‌ಗಿಂತ 50 ಪಟ್ಟು ವೇಗದ ಇಂಟರ್ನೆಟ್
ಇಂಟರ್ನೆಟ್ ಬಳಸುವವರು ಲಕ್ಸುರಿ ಲೈಫ್ ಲೀಡ್ ಮಾಡುತ್ತಿದ್ದಾರೆ ಅಂತ ಎಷ್ಟೋ ಜನ ತಿಳಿಯುತ್ತಾರೆ. ಆದ್ರೆ ವಾಸ್ತವ ಇಂದು ಇಂಟರ್ನೆಟ್ ಹಲವಾರು ಕಾರಣಗಳಿಂದ ಅಗತ್ಯ ಎಂಬುದನ್ನ ಮಾತ್ರ ತಿಳಿದಿರೊಲ್ಲ. 2G, 3G, 4G ಇಂಟರ್ನೆಟ್ ಸೌಲಭ್ಯ ಸಿಕ್ಕರೂ ಸಹ ಇಂದಿಗೂ ಇಂಟರ್ನೆಟ್ ಬಳಕೆದಾರರು ವೆಬ್‌ಸೈಟ್‌ಗಳ ಮಾಹಿತಿ ಲೋಡಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ. ಜೊತೆಗೆ ವೈಫೈ ಬಳಸುವವರ ಗೋಳು ಇದೆ ಆಗಿದೆ. ಇದಕ್ಕೆಲ್ಲಾ ಇರುವ ಒಂದೇ ಒಂದು ಮಾರ್ಗ ಎಂದರೆ ಈಗಿರುವ ಇಂಟರ್ನೆಟ್‌ಗಿಂತ ಅತ್ಯಧಿಕ ವೇಗದ ಇಂಟರ್ನೆಟ್ ಟೆಕ್ನಾಲಜಿ ಅಭಿವೃದ್ದಿಪಡಿಸುವುದು. ಆ ಸೌಲಭ್ಯ ಪಡೆಯುವ ಸಮಯ ಬಹುದೂರವಿಲ್ಲ.
ಅಮೇರಿಕದಲ್ಲಿರುವ ಗೂಗಲ್ ಫೈಬರ್ ಇಂಟರ್ನೆಟ್‌ಗಿಂತಲೂ ಸೂಪರ್ ಫಾಸ್ಟ್ ವೇಗದ ಇಂಟರ್ನೆಟ್ ಸೌಲಭ್ಯವನ್ನು ಯಾವುದೇ ಫೈಬರ್ ಆಪ್ಟಿಕ್ ಕೇಬಲ್‌ಗಳು ಇಲ್ಲದೆ ನೀಡಲು ಕಂಪನಿಯೊಂದು ಯೋಜನೆ ರೂಪಸಿದೆ. ಅಂದಹಾಗೆ ಅದು ಇದು ಕೇವಲ ಪ್ರಯೋಗ ಮಾತ್ರವಲ್ಲ. ಪ್ರಯೋಗಾಲಯದಲ್ಲಿ ನಡೆಯುತ್ತಿರುವ ಯೋಜನೆಯಾಗಿದೆ. ಭಾರತದಲ್ಲಿನ ಇಂಟರ್ನೆಟ್ ಪ್ರಸ್ತು ಇಂಟರ್ನೆಟ್‌ಗಿಂತ 50 ಪಟ್ಟು ವೇಗದ ಇಂಟರ್ನೆಟ್ ಇದಾಗಿದೆ. ಈ ಇಂಟರ್ನೆಟ್ ವ್ಯವಸ್ಥೆಯನ್ನು ಈ ವರ್ಷದಲ್ಲೇ(2016) ಜನರು ದಿನನಿತ್ಯ ಬಳಸುವ ಮೊಬೈಲ್‌ಗಳಿಗೆ ನೀಡಲಾಗುತ್ತದೆ. ಸೂಪರ್ ಫಾಸ್ಟ್ ಇಂಟರ್ನೆಟ್ ನೀಡಲಿರುವ ಆ ಟೆಕ್ನಾಲಜಿ ಯಾವುದು, ವೇಗ ಎಷ್ಟು, ಅದರ ವಿಶೇಷತೆ ಏನು ಎಂದು ಲೇಖನದ ಸ್ಲೈಡರ್‌ನಿಂದ ತಿಳಿಯಿರಿ.
1
ಸೂಪರ್ ಫಾಸ್ಟ್ ಇಂಟರ್ನೆಟ್ ಅನ್ನು ಇದೇ ವರ್ಷ ದಿನನಿತ್ಯ ಬಳಸುವ ಮೊಬೈಲ್‌ಗಳಿಗೆ ನೀಡಲಿರುವ ಟೆಕ್ನಾಲಜಿ ಹೆಸರು "ಜಿ.ಫಾಸ್ಟ್ (G.Fast)". ಜಿ.ಫಾಸ್ಟ್ ಟೆಕ್ನಾಲಜಿಯು ಇಸ್ರೇಲ್‌ನ ಚಿಪ್ ತಯಾರಿಕ ಕಂಪನಿ "ಸ್ಕಿಪಿಯೋ(Sckipio)" ದಿಂದ ಬಂದಿದೆ.
2
ಸೂಪರ್ ಫಾಸ್ಟ್ ಎಂತಲೇ ಹೆಸರಾದ ಜಿ.ಫಾಸ್ಟ್ ಟೆಕ್ನಾಲಜಿ ಪ್ರಸ್ತುತದಲ್ಲಿ ಒಂದು ಸೆಕೆಂಡ್‌ಗೆ 750Mbps ಅಪ್‌ಲೋಡ್ ಮತ್ತು ಡೌನ್‌ಲೋಡ್ ಮಾಡುವ ಸಾಮರ್ಥ್ಯ ಹೊಂದಿದೆ.
3
ಜಿ.ಫಾಸ್ಟ್ ಟೆಕ್ನಾಲಜಿಯು ಪ್ರಸ್ತುತದಲ್ಲಿ ಭಾರತದಲ್ಲಿ ನೀಡುತ್ತಿರುವ ಇಂಟರ್ನೆಟ್ ವೇಗಕ್ಕಿಂತ 50 ಪಟ್ಟು ವೇಗವಾದ ಇಂಟರ್ನೆಟ್ ಒದಗಿಸುತ್ತದೆ.
4
ವಿಶೇಷ ಅಂದ್ರೆ ಮುಂದಿನ ವರ್ಷ ಜಿ.ಫಾಸ್ಟ್ ಟೆಕ್ನಾಲಜಿಯ ನ್ಯೂ ಜೆನೆರೇಷನ್ ಚಿಪ್ ಡಬಲ್ ವೇಗ ಪಡೆಯಲಿದ್ದು, ಒಂದು ಸೆಕೆಂಡ್‌ಗೆ 1.5Gbps ಅಪ್‌ಲೋಡ್ ಮತ್ತು ಡೌನ್‌ಲೋಡ್ ಮಾಡಬಹುದಾಗಿದೆ. ಅಲ್ಲದೇ ಗೂಗಲ್ ಫೈಬರ್‌ಗಿಂತಲೂ ಅತ್ಯಧಿಕ ವೇಗವಾಗಿದೆ.
5
ಜಿ.ಫಾಸ್ಟ್ ಟೆಕ್ನಾಲಜಿಯ ಉಪಯೋಗವೆಂದರೆ, ಜಿ.ಪಾಸ್ಟ್ ದಿನನಿತ್ಯ ಬಳಕೆಯ ಮೊಬೈಲ್ ಸಂಪರ್ಕಗಳಲ್ಲಿ ವರ್ಕ್ ಆಗಲಿದೆ.
6
ಜಿ.ಫಾಸ್ಟ್ ಟೆಕ್ನಾಲಜಿ ನಿಯೋಜಿಸಲು ಅಧಿಕ ಹಣವನ್ನು ವ್ಯಯಿಸಿ ಯಾವುದೇ ಬಿಲ್ಡಿಂಗ್, ಟವರ್‌ಗಳನ್ನು ನಿರ್ಮಿಸುವ ಅಗತ್ಯವಿಲ್ಲ. ಹಾಗೂ ಯಾವುದೇ ರಸ್ತೆಗಳನ್ನು ಅಗೆದು ಫೈಬರ್ ಮರು ವೈರಿಂಗ್ ಮಾಡುವ ಅಗತ್ಯವು ಇಲ್ಲ. ಬದಲಾಗಿ ಇಂಟರ್ನೆಟ್ ಸೇವೆ ಕಂಪನಿಗಳು ಜಿ.ಫಾಸ್ಟ್ ಟೆಕ್ನಾಲಜಿಯ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಅಂದರೆ ಹಳೆಯ ದೂರವಾಣಿ ಸಂಪರ್ಕ ಮತ್ತು ಸಾಮಾನ್ಯ ಕೇಬಲ್‌ಗಳನ್ನು ಬಳಸಿಕೊಳ್ಳಬಹುದಾಗಿದೆಯಂತೆ.
7
ಅಮೇರಿಕದಲ್ಲಿ ಜಿ.ಫಾಸ್ಟ್ ಟೆಕ್ನಾಲಜಿಯು ಈ ವರ್ಷದ ನಂತರ AT&T ಕಂಪನಿ ಮೂಲಕ ಇಂಟರ್ನೆಟ್ ಸೇವೆ ಒದಗಿಸಲಿದೆಯಂತೆ.
8
Sckipio, ಜಿ.ಫಾಸ್ಟ್ ಇಂಟರ್ನೆಟ್ ಸೇವೆಯನ್ನು ಪ್ರಸ್ತುತ ಎಲ್ಲಾ ಸಿಟಿಗಳಿಗೂ ಒದಗಿಸಲು ಸಾಧ್ಯವಾಗದಿದ್ದರೂ 4 ವರ್ಷಗಳಲ್ಲಿ ದೇಶದಾದ್ಯಂತ ಜಿ.ಫಾಸ್ಟ್ ಟೆಕ್ನಾಲಜಿಯ ಸೇವೆಯನ್ನು ವಿಸ್ತರಿಸುವುದಾಗಿ ಹೇಳಿದೆ.
9
ಜಿ.ಫಾಸ್ಟ್ ಯಾವುದೇ ಜನನಿಬಿಡ ಪ್ರದೇಶ ಮತ್ತು ಬಿಲ್ಡಿಂಗ್‌ಗಳ ಪ್ರದೇಶದಲ್ಲಿಯೂ ಸಹ ಸೂಪರ್ ಫಾಸ್ಟ್ ಇಂಟರ್ನೆಟ್ ವೇಗ ನೀಡುತ್ತದೆ. ಡಿಜಿಟಲ್ ಸಬ್‌ಸ್ಕ್ರೈಬರ್ ಲೈನ್ ಇಂಟರ್ನೆಟ್ ಸೇವೆಯು ಜನನಿಬಿಡ ಪ್ರದೇಶಗಳಲ್ಲಿ ಶೇಕಡ 90 ರಷ್ಟು ಇಂಟರ್ನೆಟ್ ವೇಗವನ್ನು ಕಳೆದುಕೊಳ್ಳುತ್ತದೆ. ಆದರೆ ಜಿ.ಫಾಸ್ಟ್ ಶೇಕಡ 5-10 ರಷ್ಟು ಇಂಟರ್ನೆಟ್ ವೇಗವನ್ನು ಕಳೆದುಕೊಳ್ಳುತ್ತದೆ.
ಗಿಜ್‌ಬಾಟ್
ಹೇಗೆ ನೋಡಿದ್ರು ಕನ್‌ಫ್ಯೂಸ್ ಮಾಡೋ ಫೋಟೋಗಳು
ಮೊಬೈಲ್ ಇಂಟರ್ನೆಟ್ ಇನ್ನು ಕಂಪ್ಯೂಟರ್‌ಗೂ
ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?
ಇಂಟರ್ನೆಟ್ ವೇಗ ದುಪ್ಪಟ್ಟುಗೊಳಿಸಲು ಈ ಟ್ರಿಕ್ಸ್
ಗಿಜ್‌ಬಾಟ್