Subscribe to Gizbot

ಫೆಸ್‌ಬುಕ್‌ನಲ್ಲಿ ಲೈಕ್ ಒತ್ತಿದಕ್ಕೆ 2,50,000 ರೂ. ದಂಡ !!..ಎಲ್ಲಿ ಗೊತ್ತಾ?

Written By:

ಫೆಸ್‌ಬುಕ್‌ನಲ್ಲಿ ಕಾಣಿಸುವ ಎಲ್ಲಾ ಪೋಸ್ಟ್‌ಗಳಿಗೂ ನೀವು ಲೈಕ್ ಮಾಡುತ್ತಿದ್ದರೆ ಈಗಲೇ ಸ್ಟಾಪ್ ಮಾಡಿ.!! ನಂಬಿದರೆ ನಂಬಿ ಬಿಟ್ಟರೆ ಬಿಡಿ ಫೇಸ್‌ಬುಕ್ ನಲ್ಲಿ ವಿವಾದಾತ್ಮಕ ಬರಹಕ್ಕೆ ಲೈಕ್ ಒತ್ತಿದರೆ ಸಾವಿರಾರು ರೂಪಾಯಿ ಹಣವನ್ನು ದಂಡವಾಗಿ ತೆರಬೇಕಾಗುತ್ತದೆ.!!

ಹೌದು, ವಿಶ್ವದಲ್ಲಿಯೇ ಇಂತಹದೊಂದು ಮೊದಲ ಪ್ರಕರಣ ಸ್ವಿಜ್ಜರ್‌ಲ್ಯಾಂಡ್ ದೇಶದಲ್ಲಿ ನಡೆದಿದೆ. ನಿಂದನಾತ್ಮಕ ಎಂದು ಪರಿಗಣಿಸಿದ ಫೇಸ್ಬುಕ್ ಬರಹಕ್ಕೆ ಮೆಚ್ಚಿ ಲೈಕ್ ಒತ್ತಿದ ವ್ಯಕ್ತಿಗೆ 4000 (2,50,000 ರೂಪಾಯಿ) ಡಾಲರ್ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.!!

ಓದಿರಿ: ಆಧಾರ್, ಪಾನ್‌ಕಾರ್ಡ್ ಲಿಂಕ್ ಮಾಡಲು ಒಂದು ಮೆಸೇಜ್ ಸಾಕು..!!

ಫೆಸ್‌ಬುಕ್‌ನಲ್ಲಿ ಲೈಕ್ ಒತ್ತಿದಕ್ಕೆ 2,50,000 ರೂ. ದಂಡ !!..ಎಲ್ಲಿ ಗೊತ್ತಾ?

ಫಾರ್ಚುನ್ ಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ಪ್ರಾಣಿ ಹಕ್ಕುಗಳ ಸಂಘವನ್ನು ಮುನ್ನಡೆಸುವ ಎರ್ವಿನ್ ಕೆಸ್ಲರ್ ಎಂಬುವವರ ಬರಹಕ್ಕೆ ನೀಡಿದ್ದ ಪ್ರತಿಕ್ರಿಯೆಗಳು ಜನಾಂಗೀಯ ನಿಂದನೆಯಿಂದ ಕೂಡಿದ್ದವು. ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಆ ಪೋಸ್ಟ್ ಪ್ರತಿಕ್ರಿಯೆಗಳ ಮೇಲೆ ಲೈಕ್ ಒತ್ತಿದ್ದನ್ನು ನ್ಯಾಯಾಲಯ ಖಂಡಿಸಿ ಶಿಕ್ಷೆಗೆ ಒಳಪಡಿಸಿದೆ.!!

ಫೆಸ್‌ಬುಕ್‌ನಲ್ಲಿ ಲೈಕ್ ಒತ್ತಿದಕ್ಕೆ 2,50,000 ರೂ. ದಂಡ !!..ಎಲ್ಲಿ ಗೊತ್ತಾ?

ಲೈಕ್ ಒತ್ತುವ ಮೂಲಕ ನಿಂದನಾತ್ಮಕ ಬರಹವನ್ನು ಈ ವ್ಯಕ್ತಿ ಅನುಮೋದಿಸಿರುವುದಾಗಿ ನ್ಯಾಯಾಲಯ ಹೇಳಿದ್ದು, ದಂಡ ಹಾಕಿಸಿಕೊಂಡ ಆ ವ್ಯಕ್ತಿಯ ಹೆಸರನ್ನು ಕೋರ್ಟ್ ಬಹಿರಂಗಗೊಳಿಸಿಲ್ಲ. ಪ್ರತಿಕ್ರಿಯೆಗಳ ಮೇಲೆ ಲೈಕ್ ಒತ್ತಿದ್ದಕ್ಕೆ ಈವರೆಗೂ ಯಾರಿಗೂ ದಂಡ ಹಾಕಿಲ್ಲ ಎಂದು ಆಪಾದಿತನ ಪರ ವಕೀಲ ವಾದ ಮಾಡಿದರೂ ಕೋರ್ಟ್ ದಂಡ ಕಟ್ಟಿಸಿದೆ.!!

ಓದಿರಿ: ಮಕ್ಕಳಿಂದ ಸ್ಮಾರ್ಟ್‌ಫೋನ್ ಬಳಕೆ ಹೇಗೆ ಬಿಡಿಸುವುದು ಹೇಗೆ? ಇಲ್ಲಿದೆ ಉತ್ತರ!!

Read more about:
English summary
beware as even 'liking' a controversial post on Facebook can land you in trouble.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot