ಸೆಲ್ಫಿ ಕ್ಲಿಕ್ಕಿಸಿ ಜೈಲಿಗೆ ಹೋದ ಹುಡುಗ !! ಎಚ್ಚರ

Written By:

ನಮ್‌ ಯಂಗ್‌ಸ್ಟರ್‌ಗಳಿಗೆ ಇತ್ತೀಚೆಗೆ ಒಂದು ಕಯಾಲಿ ಏನಪ್ಪಾ ಅಂದ್ರೆ ಯಾವುದಾದರೂ ಒಂದು ಒಳ್ಳೆ ಸ್ಥಳ ಕಂಡ್ರೆ ಸಾಕು. ಸೆಲ್ಫಿ ಆನ್‌ ಮಾಡು ಫೋಟೋ ತಕೋ, ಸೆಲ್ಫಿ ಆನ್‌ ಮಾಡು ಫೋಟೋ ತಕೊ. ಇದೇ ಕಯಾಲಿ ಸಾವಿಗೆ, ಸಮಸ್ಯೆಗೆ ಕಾರಣವಾಗುತ್ತೆ ಎಚ್ಚರ ಕಂಡ್ರಪ್ಪ ಅಂದ್ರು ಹೂಹೂಂ.. ತಲೆಗೆ ಹಾಕಳಲ್ಲ. ಆದ್ರೆ ಈಗ ಈ ಸೆಲ್ಫಿ ಫೊಟೋ ತಗೊಂಡ್ರೆ ಜೈಲಿಗೂ ಹೋಗುತ್ತೀರಿ ಅಂತ ಹೇಳಿದ್ರೆ ಬಹುಶಃ ಸೆಲ್ಫಿ ತೆಗೆಯೋ ಮೊದ್ಲು ಎಚ್ಚರ ಗೊಳ್ಳಬಹುದೆನೋ. ಇದು ನಿಜವೂ ಹೌದು. ಅದಕ್ಕೆ ಉದಾಹರಣೆ ಒಂದು ಇಲ್ಲಿದೆ ಮುಂದೆ ಓದಿರಿ.

ಸೆಲ್ಫಿ ಕ್ಲಿಕ್ಕಿಸಿ ಜೈಲಿಗೆ ಹೋದ ಹುಡುಗ !! ಎಚ್ಚರ

ಪಾಪ ಆ ಹುಡುಗನನಿಗೂ ಸಹ ಸೆಲ್ಫಿ ಕ್ರೇಜ್‌ ಅಷ್ಟಿಷ್ಟಲ್ಲ. ಅಂಗೆ ಒಂದ್‌ ಸೆಲ್ಫಿ ಫೋಟೋನಾ ಜಿಲ್ಲಾಧಿಕಾರಿ ಜೊತೆ ಕ್ಲಿಕ್‌ ಮಾಡಿದ ಅಷ್ಟೆ. ಆದ್ರೆ ಜಿಲ್ಲಾಧಿಕಾರಿಗಳು ಹೋಗತಗೆ ಅಂತ 3 ದಿನ ಆ ಹುಡುಗನನ್ನ ಜೈಲಿಗೆ ಹಾಕಿಸಿಬಿಟ್ಟರು.ಹುಡುಗನ ಹೆಸರು ಫರಾಜ್‌ ಅಹ್ಮದ್. ಅಂದ ಹಾಗೆ ಜೈಲಿಗೆ ಹೋದ ಹುಡುಗ ಉತ್ತರ ಪ್ರದೇಶದ ಬುಲಾಂದ್‌ಶಾರ್‌ ಜಿಲ್ಲೆಯ ಜಿಲ್ಲಾಧಿಕಾರಿ 'ಬಿ ಚಂದ್ರಕಲಾ' ಅವರೊಂದಿಗೆ ಸೆಲ್ಫಿ ಕ್ಲಿಕ್‌ ಮಾಡಲು ತುಂಬಾ ಹತ್ತರಿ ಹೋಗಿ ಈ ಸಮಸ್ಯೆಗೆ ಸಿಕ್ಕಿಕೊಂಡಿದ್ದಾನೆ.


ಓದಿರಿ :ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಅಹ್ಮದ್‌ ನನ್ನು ಕಳೆದ ಸೋಮವಾರವಷ್ಟೆ ಬಂಧಿಸಿ ಮೂರು ದಿನಗಳ ನಂತರ ಬೇಲ್ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. ಚಂದ್ರಕಲಾ ರವರು ಜನತೆಯೊಂದಿಗೆ ಇತರೆ ಸಮಸ್ಯೆ ಬಗ್ಗೆ ಚರ್ಚೆ ನಡೆಸುತ್ತಿರುವ ವೇಳೆ ಈತನು "ತುಂಬಾ ಹತ್ತಿರಕ್ಕೆ ಹೋಗಿ, ಅನುಮತಿ ಇಲ್ಲದೇ ಸೆಲ್ಫಿ ಕ್ಲಿಕ್‌ ಮಾಡಿದ" ಕಾರಣಕ್ಕೆ ಬಂಧಿಸಲಾಗಿತ್ತು.

ಸೆಲ್ಫಿ ಕ್ಲಿಕ್ಕಿಸಿ ಜೈಲಿಗೆ ಹೋದ ಹುಡುಗ !! ಎಚ್ಚರ

ಎಲ್ಲವೂ ಪರ್ಫೆಕ್ಟ್‌ ಸೆಲ್ಫಿಗಾಗಿ
ಸ್ಥಳದಲ್ಲೇ ಇದ್ದ ಉಪಜಿಲ್ಲಾಧಿಕಾರಿ ವಿಶಾಲ್‌ ಕುಮಾರ್‌ ಸಾಕ್ಸಿಯಾಗಿ ಪ್ರಸ್ತುತದಲ್ಲಿದ್ದರು. ಅಂದಹಾಗೆ ಫರಾಜ್‌ ಅಹ್ಮದ್ ಸೆಲ್ಫಿ ತೆಗೆದ ಮೇಲೆ ಅದನ್ನು ಡಿಲೀಟ್‌ ಮಾಡಪ್ಪ ಅಂದ್ರೂ ಡಿಲೀಟ್‌ ಮಾಸಲಿಲ್ವಂತೆ. ಅದನ್ನು ಪೊಲೀಸರು ಇದ್ದರೂ ಸಹ ಅವರ ಮುಂದೆಯೇ ಡಿಲೀಟ್‌ ಮಾಡಲು ವಿರೋಧ ವ್ಯಕ್ತಪಡಿಸಿದನಂತೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದ್ದು, ಈ ಬೇಲ್‌ ಆಧಾರದಲ್ಲಿ ಅಹ್ಮದ್ ಹೊರಗೆ ಬಂಧಿದ್ದಾನೆ.


ಓದಿರಿ:ಸೆಲ್ಫಿ ತೆಗೆದು ಯಮಪುರಿಗೆ ಪ್ರಯಾಣಿಸಿದರು ಏನಿದು ಘಟನೆ?

"ಯುವಕರು ನೆನಪಿಟ್ಟುಕೊಳ್ಳಬೇಕಾದ ಒಂದು ವಿಷಯ ಅಂದ್ರೆ, ಮಹಿಳೆ ಅಧಿಕಾರಿಯಾಗಿದ್ದರು ಸಹ ಅವಳು ಮಹಿಳೆಯೇ. 'ಮಹಿಳೆಯರು ಅವರ ಸ್ವಂತ ಘನತೆಯನ್ನು ಹೊಂದಿರುತ್ತಾರೆ. ಅದಕ್ಕೆ ಪ್ರತಿಯೊಬ್ಬರು ಸಹ ಗೌರವ ಕೊಡಬೇಕು" ಎಂದು ಈ ಘಟನೆಯ ಸಮಯದಲ್ಲಿ ಬುಲಾಂದ್‌ಶಾರ್‌ ಜಿಲ್ಲಾಧಿಕಾರಿಯಾದ ಬಿ ಚಂದ್ರಕಲಾ ರವರು ಹೇಳಿದ್ದಾರೆ.

English summary
Teenager Tries To Take A Selfie With Woman District Magistrate, Goes To Jail For 3 Days. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot