ದಶಕದ ನಂತರ ಬದಲಾವಣೆ ಕಂಡ ವಿಕಿಪೀಡಿಯ; ಇನ್ಮುಂದೆ ಈ ಎಲ್ಲಾ ಕೆಲಸ ಬಹಳ ಸುಲಭ!

|

ಸಾಮಾನ್ಯವಾಗಿ ಯಾರಿಗೆ ಆದರೂ ಪ್ರಮುಖ ಮಾಹಿತಿ ಬೇಕೆಂದಾಗ ಅಥವಾ ತಮ್ಮದೇ ಊರಿನ ಮಾಹಿತಿ ಪಡೆದುಕೊಳ್ಳಬೇಕು ಎಂದರೆ ಮೊದಲು ಇಣುಕಿನೋಡುವುದು ವಿಕಿಪೀಡಿಯಗೆ. ವಿಕಿಪೀಡಿಯದಲ್ಲಿ ಬಹುಪಾಲು ಎಲ್ಲಾ ಮಾಹಿತಿಯೂ ಲಭ್ಯವಿದ್ದು, ಅದರಂತೆ ಬಳಕೆದಾರರು ಸಹ ಹೆಚ್ಚಾಗಿ ಇದರಿಂದ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ಜೊತೆಗೆ ಇದೀಗ ಬರೋಬ್ಬರಿ ಹತ್ತು ವರ್ಷಗಳ ನಂತರ ವಿಕಿಪೀಡಿಯದಲ್ಲಿ ಮಹತ್ವದ ಬದಲಾವಣೆಯೊಂದು ಕಂಡುಬಂದಿದೆ.

ದಶಕದ ನಂತರ ಬದಲಾವಣೆ ಕಂಡ ವಿಕಿಪೀಡಿಯ; ಇನ್ಮುಂದೆ ಈ ಎಲ್ಲಾ ಕೆಲಸ ಬಹಳ ಸುಲಭ!

ಹೌದು, ವಿಕಿಪೀಡಿಯ ಎಂದರೆ ಅದೊಂದು ದೊಡ್ಡ ಜ್ಞಾನ ಭಂಡಾರ. ಈ ಪ್ಲಾಟ್‌ಫಾರ್ಮ್‌ ನಲ್ಲಿ ಹತ್ತು ವರ್ಷಗಳ ನಂತರ ಮೊದಲ ಡೆಸ್ಕ್‌ಟಾಪ್ ನವೀಕರಣವನ್ನು ಪಡೆದುಕೊಳ್ಳುತ್ತಿದೆ. ಅಂತೆಯೇ ಇಂಟರ್‌ಫೇಸ್ ಅನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದ್ದು, ಬಳಕೆದಾರರು ಇನ್ಮುಂದೆ ಇನ್ನಷ್ಟು ಸುಲಭವಾಗಿ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ವಿಕಿಪೀಡಿಯದಲ್ಲಿ ಕಂಡುಬಂದ ಬದಲಾವಣೆ ಏನು?, ಇದರಿಂದ ಆಗುವ ಲಾಭ ಏನು ಎಂಬ ಮಾಹಿತಿಯನ್ನು ವಿವರಿಸಿದ್ದೇವೆ ಓದಿರಿ.

ವಿಶ್ವದಲ್ಲಿ ಕಂಡುಬರುವ ಉಚಿತ ವಿಶ್ವಕೋಶಗಳಲ್ಲಿ ಒಂದಾಗಿರುವ ವಿಕಿಪೀಡಿಯ ಹತ್ತು ವರ್ಷಗಳ ನಂತರ ತನ್ನ ಮೊದಲ ನವೀಕರಣವನ್ನು ಕಂಡುಕೊಂಡಿದೆ. ಇಂಗ್ಲಿಷ್ ವಿಕಿಪೀಡಿಯ ತನ್ನ 22 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಮಯದಲ್ಲಿ ಹೊಸ ಅಪ್‌ಡೇಟ್‌ ಕಂಡುಬಂದಿರುವುದು ವಿಶೇಷವಾದ ಸಂಗತಿ.

ಈ ಸುಧಾರಿತ ಇಂಟರ್ಫೇಸ್ ಜ್ಞಾನ ಹಂಚಿಕೆ ಸುಲಭವಾಗಿ ಸಿಗುವಂತೆ ಮಾಡುತ್ತದೆ ಎನ್ನಲಾಗಿದೆ. ಅದರಂತೆ ಇಂಗ್ಲಿಷ್ ವಿಕಿಪೀಡಿಯದಲ್ಲಿ ಇತ್ತೀಚಿನ ನವೀಕರಣವನ್ನು ಲಭ್ಯಗೊಳಿಸಲಾಗಿದ್ದು, ಪೋರ್ಟಲ್‌ನ 318 ಭಾಷೆಯ ಆವೃತ್ತಿಗಳಲ್ಲಿ 94% ಎಲ್ಲಾ ಡೆಸ್ಕ್‌ಟಾಪ್ ಬಳಕೆದಾರರಿಗೆ ಇದು ಲಭ್ಯವಾಗಲಿದೆ ಎಂದು ವಿಕಿಪೀಡಿಯ ಸಂಸ್ಥೆ ಮಾಹಿತಿ ನೀಡಿದೆ.

ಮುಂದಿನ ಪೀಳಿಗೆಯ ಇಂಟರ್ನೆಟ್ ಬಳಕೆದಾರರ ಅಗತ್ಯಗಳನ್ನು ಪೂರೈಸಲು ಇದನ್ನು ಮಾಡಲಾಗಿದ್ದು, ಸರಳ ಮತ್ತು ಎಲ್ಲರಿಗೂ ಈ ಪ್ಲಾಟ್‌ಫಾರ್ಮ್‌ ಪ್ರವೇಶಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಜೊತೆಗೆ ವಿಕಿಪೀಡಿಯದ ಸಂಪಾದಕರು ಮತ್ತು ಓದುಗರೊಂದಿಗೆ ಸಮಾಲೋಚಿಸಿದ ನಂತರ ಈ ಹೊಸ ನವೀಕರಣವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಿಕಿಮೀಡಿಯಾ ಮಾಹಿತಿ ನೀಡಿದೆ.

ದಶಕದ ನಂತರ ಬದಲಾವಣೆ ಕಂಡ ವಿಕಿಪೀಡಿಯ; ಇನ್ಮುಂದೆ ಈ ಎಲ್ಲಾ ಕೆಲಸ ಬಹಳ ಸುಲಭ!

ವಿಕಿಮೀಡಿಯ ಫೌಂಡೇಶನ್‌ನ ಮುಖ್ಯ ಉತ್ಪನ್ನ ಮತ್ತು ತಂತ್ರಜ್ಞಾನ ಅಧಿಕಾರಿ ಸೆಲೆನಾ ಡೆಕೆಲ್‌ಮನ್ ಪ್ರತಿಕ್ರಿಯಿಸಿ, ಈ ಸೌಲಭ್ಯ ಪ್ರಪಂಚದಾದ್ಯಂತದ ಓದುಗರು ಮತ್ತು ಸಂಪಾದಕರ ಪ್ರತಿಕ್ರಿಯೆಯೊಂದಿಗೆ ರಚಿಸಲಾಗಿದೆ. ನಮ್ಮ ಹೆಚ್ಚುತ್ತಿರುವ ವೈವಿಧ್ಯಮಯ ಪ್ರೇಕ್ಷಕರ ಅಗತ್ಯತೆಗಳನ್ನು ಪೂರೈಸುವ ಗುರಿಯೊಂದಿಗೆ ಸರಳ ಮತ್ತು ನೇರವಾದ ಭಾವನೆಯನ್ನು ಕಾಪಾಡಿಕೊಳ್ಳಲಾಗುತ್ತದೆ. ಅದರಂತೆ ಕಳೆದ 22 ವರ್ಷಗಳಲ್ಲಿ ಲಕ್ಷಾಂತರ ಜನರು ವಿಶ್ವಾಸಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ಈ ಪ್ಲಾಟ್‌ಫಾರ್ಮ್‌ನಲ್ಲಿ ಕಂಡುಬರುವ ಹೊಸ ವಿಷಯಗಳೇನು?
ಚಿತ್ರಗಳು ಮತ್ತು ವಿವರಣೆಗಳನ್ನು ಸಂಯೋಜಿಸುವ ಹೊಸ ಸರ್ಚ್‌ ಅನುಭವವು ಈಗ ಬಳಕೆದಾರರಿಗೆ ಲಭ್ಯವಿರುತ್ತದೆ. ಹಾಗೆಯೇ ಇದು ಪ್ಲಾಟ್‌ಫಾರ್ಮ್‌ನಲ್ಲಿ ಲೇಖನಗಳನ್ನು ಪತ್ತೆಹಚ್ಚಲು ಸುಲಭ ಮಾರ್ಗ ಕಲ್ಪಿಸಿಕೊಡುತ್ತದೆ.

ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬಳಕೆ ಮಾಡುವ ಹಾಗೂ ಮಾತನಾಡುವ ಸಂಪಾದಕರು ಮತ್ತು ಓದುಗರಿಗೆ ಸಹಾಯ ಮಾಡಲಿದ್ದು, ಇದರಲ್ಲಿ ಭಾಷೆ ಬದಲಾಯಿಸುವ ಟೂಲ್ಸ್‌ಗಳ ಪ್ರಾಮುಖ್ಯತೆಗೆ ಹೆಚ್ಚಿನ ಮಾನ್ಯತೆ ನೀಡಿದೆ, ಈ ಮೂಲಕ 300 ಕ್ಕೂ ಹೆಚ್ಚು ಭಾಷೆಗಳು ಇದರಲ್ಲಿ ಲಭ್ಯ ಇರಲಿವೆ. ಜೊತೆಗೆ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯನ್ನು ತ್ವರಿತವಾಗಿ ಪ್ರವೇಶಿಸಬಹುದಾಗಿದೆ.

ದಶಕದ ನಂತರ ಬದಲಾವಣೆ ಕಂಡ ವಿಕಿಪೀಡಿಯ; ಇನ್ಮುಂದೆ ಈ ಎಲ್ಲಾ ಕೆಲಸ ಬಹಳ ಸುಲಭ!

ಬಳಕೆದಾರರು ಇನ್ಮುಂದೆ ಸರ್ಚ್‌ ವಿಷಯದಲ್ಲಿ ಲಿಂಕ್‌ಗಳೊಂದಿಗೆ ನವೀಕರಿಸಿದ ಜಿಗುಟಾದ ಹೆಡರ್ ಅನ್ನು ಸ್ವೀಕರಿಸುತ್ತಾರೆ. ಈ ಮೂಲಕ ಹೆಚ್ಚಿನ ಶ್ರಮದ ಸ್ಕ್ರೋಲಿಂಗ್‌ ಅನ್ನು ಕಡಿಮೆ ಮಾಡಬಹುದಾಗಿದೆ. ಹಾಗೆಯೇ ಲೇಖನದಲ್ಲಿ ಓದುಗರು ಯಾವ ವಿಭಾಗವನ್ನು ಓದುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡಲಿದೆ.

ಇನ್ನು ವಿಕಿಮೀಡಿಯ ಫೌಂಡೇಶನ್, ಯುನೈಟೆಡ್ ಸ್ಟೇಟ್ಸ್ ಮೂಲದ ಲಾಭರಹಿತ ಸಂಸ್ಥೆಯಾಗಿದ್ದು, ಪ್ರಾಥಮಿಕವಾಗಿ ದೇಣಿಗೆಗಳಿಂದ ಕಾರ್ಯನಿರ್ವಹಿಸುತ್ತಿದೆ. ಹಾಗೆಯೇ ಅನೇಕ ಲೇಖನಗಳನ್ನು ಉತ್ತಮ ಮೂಲಗಳಿಂದ ಸಂಪಾದಿಸಿ ಪ್ರಕಟ ಮಾಡಲಾಗುತ್ತಿದೆಯಾದರೂ ಇದರಲ್ಲಿ ಪ್ರಕಟವಾಗುವ ಎಲ್ಲಾ ವಿಷಯಗಳು ನಿಖರ ಎಂದು ಭಾವಿಸುವ ಹಾಗಿಲ್ಲ.

Best Mobiles in India

English summary
After a decade Wikipedia has changed its interface so that readers can easily use it from now on. Details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X