ದೀಪಾವಳಿ ಉಡುಗೊರೆಗೆ ಇವು ಬೆಸ್ಟ್‌ 5G ಫೋನ್: ಬೆಲೆ ಎಷ್ಟು?, ಫೀಚರ್ಸ್‌ ಏನು?

|

ದೀಪಾವಳಿ ಹಿನ್ನೆಲೆ ಹಲವಾರು ಇ-ಕಾಮರ್ಸ್‌ ತಾಣಗಳು ಹಾಗೂ ಪ್ರಮುಖ ರಿಟೇಲ್‌ ಸ್ಟೋರ್‌ಗಳು ಭರ್ಜರಿ ಆಫರ್‌ನೊಂದಿಗೆ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ ಹಾಗೂ ಇನ್ನಿತರೆ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಮಾರಾಟ ಮಾಡುತ್ತಿವೆ. ಇದರ ನಡುವೆ ನೀವೇನಾದರೂ ದೊಡ್ಡ ಮೊತ್ತದ ಉಡುಗೊರೆಯನ್ನು ನಿಮ್ಮ ಪ್ರೀತಿ ಪಾತ್ರರಿಗೆ ನೀಡಲು ಇಚ್ಚಿಸಿದರೆ 5G ಸ್ಮಾರ್ಟ್‌ಫೋನ್‌ ಬೆಸ್ಟ್‌ ಆಯ್ಕೆಯಾಗಿವೆ. ಈಗಾಗಲೇ ಸ್ಯಾಮ್‌ಸಂಗ್, ಗೂಗಲ್, ರಿಯಲ್‌ಮಿ ಹಾಗೂ ಒನ್‌ಪ್ಲಸ್ ಸೇರಿದಂತೆ ಇನ್ನಿತರೆ ಬ್ರಾಂಡ್‌ಗಳು ಕಳೆದ ಎರಡು ವರ್ಷಗಳಿಂದಲೂ ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ.

ದೀಪಾವಳಿ

ಹೌದು, ಈ ದೀಪಾವಳಿ ಸಂದರ್ಭದಲ್ಲಿ ನಿಮ್ಮ ಆತ್ಮೀಯರನ್ನು ಇನ್ನಷ್ಟು ಹತ್ತಿರವಾಗಿಸಿಕೊಳ್ಳುವ ಕಾಲ ಬಂದಿದೆ. ಹಾಗೆಯೇ ಉಡುಗೊರೆ ನೀಡಲು ಯಾವ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂಬ ಗೊಂದಲ ನಿಮಗಿದ್ದರೆ ಇಲ್ಲಿ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ಗಳನ್ನು ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳು 5G ಬೆಂಬಲಿಸಲಿದ್ದು, ಅವುಗಳ ಬೆಲೆ ಹಾಗೂ ಫೀಚರ್ಸ್‌ ಸೇರಿದಂತೆ ಇನ್ನಿತರೆ ವಿವರವನ್ನು ನೀಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ M15 5G

ಸ್ಯಾಮ್‌ಸಂಗ್ M15 5G

ಸ್ಯಾಮ್‌ಸಂಗ್ M15 5G ಸ್ಮಾರ್ಟ್‌ಫೋನ್‌ ನಿಮಗೆ 13,000 ರೂ. ಗಳಿಗೆ ಲಭ್ಯವಾಗಲಿದೆ. ಈ ಫೋನ್ HD+ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಡಿಸ್‌ಪ್ಲೇ ಜೊತೆಗೆ 720×1,440 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಹೊಂದಿದೆ. ಇದರ ಜೊತೆಗೆ 2.2Ghz ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6GB RAM ಹಾಗೂ 128GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಡ್ಯುಯಲ್ ಕ್ಯಾಮೆರಾ ರಚನೆ ಇದರಲ್ಲಿದ್ದು, 50MP ಪ್ರಾರ್ಥಮಿಕ ಹಾಗೂ 2MP ಸೆಕೆಂಡರಿ ಸೆನ್ಸಾರ್ ಇದ್ದು, 5000 ಸಾಮರ್ಥ್ಯದ ಬ್ಯಾಟರಿಯೊಂದಿಗೆ ಫಾಸ್ಟ್‌ ಚಾರ್ಜಿಂಗ್‌ ಬೆಂಬಲಿಸಲಿದೆ.

ರಿಯಲ್‌ಮಿ 9 ಪ್ರೊ 5G

ರಿಯಲ್‌ಮಿ 9 ಪ್ರೊ 5G

ರಿಯಲ್‌ಮಿ 9 ಪ್ರೊ 5G ಸ್ಮಾರ್ಟ್‌ಫೋನ್ 20,999ರೂ. ಗಳಿಗೆ ಲಭ್ಯವಿದೆ. ಈ ಫೋನ್ 6.6 ಇಂಚಿನ ಫುಲ್ HD+ LCD ಡಿಸ್‌ಪ್ಲೇ ಹೊಂದಿದ್ದು, ಇದು 2412x1080 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ 120Hz ರಿಫ್ರೆಶ್ ರೇಟ್‌ ನೀಡಲಿದ್ದು, ಈ ಡಿವೈಸ್ ಆಂಡ್ರಾಯ್ಡ್ 12 ನಿಂದ ರನ್ ಆಗಲಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, 8GB RAM ಹಾಗೂ 128GB ಇಂಟರ್ನಲ್ ಸ್ಟೋರೇಜ್‌ ಆಯ್ಕೆ ಇದರಲ್ಲಿದೆ. ಇದರೊಂದಿಗೆ ಟ್ರಿಪಲ್‌ ಕ್ಯಾಮೆರಾ ರಚನೆಯಲ್ಲಿ 64MP ಪ್ರಾರ್ಥಮಿಕ ಕ್ಯಾಮೆರಾ, 8MP ವೈಡ್-ಆಂಗಲ್ ಕ್ಯಾಮೆರಾ ಹಾಗೂ 2MP ಮ್ಯಾಕ್ರೋ ಲೆನ್ಸ್‌ ಪಡೆದಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ವೇಗದ ಚಾರ್ಜಿಂಗ್‌ ಆಯ್ಕೆಯನ್ನು ಬೆಂಬಲಿಸಲಿದೆ.

ವಿವೋ V25 ಪ್ರೊ 5G

ವಿವೋ V25 ಪ್ರೊ 5G

ವಿವೋ V25 ಪ್ರೊ 5G ಸ್ಮಾರ್ಟ್‌ಫೋನ್ ನಿಮಗೆ 35,990ರೂ. ಗಳಲ್ಲಿ ಲಭ್ಯ ಇದೆ. 6.56 ಇಂಚಿನ 3D ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ಹಾಗೂ 1300nits ಬ್ರೈಟ್‌ನೆಸ್‌ ನೀಡಲಿದೆ. ಇದರ ಜೊತೆಗೆ ಮೀಡಿಯಾಟೆಕ್ ಡೈಮೆನ್ಸಿಟಿ 1300 ನಿಂದ ಕಾರ್ಯನಿರ್ವಹಿಸಲಿದ್ದು, 8GB RAM ಹಾಗೂ 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ. ಇನ್ನುಳಿದಂತೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, 4830mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಫಾಸ್ಟ್‌ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.

ಒನ್‌ಫ್ಲಸ್ 10T

ಒನ್‌ಫ್ಲಸ್ 10T

ಒನ್‌ಫ್ಲಸ್ 10T ಸ್ಮಾರ್ಟ್‌ಫೋನ್‌ ಅನ್ನು 49,999ರೂ. ಗಳಿಗೆ ಖರೀದಿ ಮಾಡಬಹುದು. ಈ ಡಿವೈಸ್ 6.7 ಇಂಚಿನ ಫುಲ್ HD+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 ಸಿಸ್ಟಂ ನಿಂದ ಕಾರ್ಯನಿರ್ವಹಿಸಲಿದ್ದು, 16GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯವಿರಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 50MP ಮುಖ್ಯ ಕ್ಯಾಮೆರಾ ಹೊಂದಿದ್ದು, ಫಾಸ್ಟ್‌ ಚಾರ್ಜಿಂಗ್ ಬೆಂಬಲ ಇರುವ 4,800mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಗೂಗಲ್‌ ಪಿಕ್ಸೆಲ್ 7

ಗೂಗಲ್‌ ಪಿಕ್ಸೆಲ್ 7

ಗೂಗಲ್‌ ಪಿಕ್ಸೆಲ್ 7 ಸ್ಮಾರ್ಟ್‌ಫೋನ್‌ ಅನ್ನು 59,999ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಫೋನ್ 6.3 ಇಂಚಿನ 1080 x 2400 ಪಿಕ್ಸೆಲ್‌ ರೆಸಲ್ಯೂಶನ್‌ ಇರುವ ಡಿಸ್‌ಪ್ಲೇ ಹೊಂದಿದ್ದು, 416 PPI ಸಾಂದ್ರತೆ ಹಾಗೂ 90Hz ರಿಫ್ರೆಶ್ ರೇಟ್ ನೀಡಲಿದೆ. ಇದು ಗೂಗಲ್‌ನ ಇಂಟರ್ನಲ್ ಟೆನ್ಸರ್ G2 ಚಿಪ್‌ನಿಂದ ಕಾರ್ಯನಿರ್ವಹಿಸಲಿದ್ದು, 8GB RAM ಹಾಗೂ 128 GB ಇಂಟರ್ನಲ್‌ ಸ್ಟೋರೇಜ್ ಆಯ್ಕೆ ಪಡೆದಿದೆ. ಇದರ ಜೊತೆಗೆ 50MP ವೈಡ್ ಆಂಗಲ್ ಮುಖ್ಯ ಕ್ಯಾಮೆರಾ ಪಡೆದಿದ್ದು, 4355mAh ಸಾಮರ್ಥ್ಯದ ಬ್ಯಾಟರಿ ಪಡೆದಿದೆ.

Best Mobiles in India

English summary
If you are looking for gifts for Diwali, we have listed the top smartphones here. Their price and features are given.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X