ನಿಮ್ಮ ಮನೆಗೆ ಸ್ಮಾರ್ಟ್‌ ರೂಪ ನೀಡಲು ಈ ಡಿವೈಸ್‌ಗಳು ಅಗತ್ಯ!

|

ಇತ್ತೀಚಿಗೆ ಪ್ರತಿ ಕೆಲಸಕ್ಕೂ ಒಂದೊಂದು ಸಾಧನಗಳು ಲಭ್ಯ ಇವೆ. ಅದರಲ್ಲಿಯೂ ಬಹುತೇಕ ಸಾಧನಗಳು ಇಂಟರ್ನೆಟ್‌ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಮನೆಯಲ್ಲಿ ಬಳಸುವ ದೈನಂದಿನ ಸಾಧನಗಳು ಸಹ ಸ್ಮಾರ್ಟ್‌ ರೂಪ ಪಡೆಯುತ್ತಿದ್ದು, ಬಳಕೆದಾರರಿಗೆ/ ಗ್ರಾಹಕರಿಗೆ ಹೆಚ್ಚು ಅನುಕೂಲಕರ ಎನಿಸಿವೆ. ಆದ್ರೆ, ಸ್ಮಾರ್ಟ್ ಹೋಮ್ ಉತ್ಪನ್ನಗಳನ್ನು ಖರೀದಿಸುವುದು ಖಂಡಿತವಾಗಿಯೂ ಸಂಕೀರ್ಣ ಮತ್ತು ಗೊಂದಲಮಯವಾಗಿದೆ.

ಸಿಗುತ್ತವೆ

ಹೌದು, ಮನೆಗೆ ಸ್ಮಾರ್ಟ್‌ ಟಚ್ ನೀಡ ಬಯಸಿದರೇ, ಮಾರುಕಟ್ಟೆಯಲ್ಲಿ ಅನೇಕ ಸ್ಮಾರ್ಟ್‌ ಉತ್ಪನ್ನಗಳು ಸಿಗುತ್ತವೆ. ಸ್ಮಾರ್ಟ್ ಫ್ರಿಜ್‌ಗಳು, ಸ್ಮಾರ್ಟ್ ಏರ್ ಪ್ಯೂರಿಫೈಯರ್‌ಗಳು, ಸ್ಮಾರ್ಟ್‌ ಟಿವಿ, ಸ್ಮಾರ್ಟ್‌ ಬಲ್ಬ್ ಸೇರಿದಂತೆ ಸ್ಮಾರ್ಟ್ ಮ್ಯಾಟ್ರೆಸ್‌ಗಳೂ ಇವೆ. ಸಾಮಾನ್ಯವಾಗಿ ಪ್ರತಿಯೊಬ್ಬರು ಇತ್ತೀಚಿನ ಮನೆಯ ಅಗತ್ಯ ಸಾಧನಗಳನ್ನು ತಂತ್ರಜ್ಞಾನದೊಂದಿಗೆ ಅಪ್‌ಗ್ರೇಡ್ ಮಾಡಲು ಬಯಸುತ್ತಾರೆ. ಆದ್ರೆ, ಯಾವ ಸ್ಮಾರ್ಟ್ ಹೋಮ್ ಉತ್ಪನ್ನವನ್ನು ಖರೀದಿಸಬೇಕು? ಎನ್ನುವ ಗೊಂದಲ ಕೆಲವರಲ್ಲಿ ಇರುತ್ತದೆ.

ಗ್ರಾಹಕರು

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಹುತೇಕ ಸ್ಮಾರ್ಟ್‌ ಡಿವೈಸ್‌ಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಒಳಗೊಂಡಿದ್ದು, ಬ್ಲೂಟೂತ್ ಕಾರ್ಯವೈಖರಿ ಹೊಂದಿವೆ. ದೈನಂದಿನ ಅಗತ್ಯ ಉಪಕರಣಗಳ ಪಟ್ಟಿಯಲ್ಲಿ ಸ್ಮಾರ್ಟ್‌ ಡಿವೈಸ್‌ಗಳು ಸ್ಥಾನ ಪಡೆಯುತ್ತಿವೆ. ಗ್ರಾಹಕರು ಸ್ಮಾರ್ಟ್‌ಫೋನ್‌ ಮೂಲಕ ಸಹ ಮನೆಯ ಸ್ಮಾರ್ಟ್‌ ಡಿವೈಸ್‌ಗಳನ್ನು ನಿಯಂತ್ರಿಸಬಹುದಾದ ಆಯ್ಕೆಗಳನ್ನು ಅವು ಒಳಗೊಂಡಿವೆ. ಹಾಗಾದರೇ, ಮನೆಗೆ ಸ್ಮಾರ್ಟ್ ಟಚ್ ನೀಡುವ ಕೆಲವು ಅತ್ಯುತ್ತಮ ಸ್ಮಾರ್ಟ್ ಸಾಧನಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಸ್ಮಾರ್ಟ್ ಸ್ಪೀಕರ್‌ಗಳು (Smart Speakers)

ಸ್ಮಾರ್ಟ್ ಸ್ಪೀಕರ್‌ಗಳು (Smart Speakers)

ಸ್ಮಾರ್ಟ್ ಸ್ಪೀಕರ್‌ಗಳು, ಸ್ಮಾರ್ಟ್‌ ಹೋಮ್‌ ಸಾಧನಗಳ ಲಿಸ್ಟ್‌ನಲ್ಲಿ ಒಂದಾಗಿದೆ. ಆದ್ರೆ, ಉತ್ತಮ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೆ ಮಾತ್ರ ಸ್ಮಾರ್ಟ್ ಹೋಮ್ ಉತ್ಪನ್ನಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತವೆ. ಸಾಮಾನ್ಯವಾಗಿ ಬಳಸುವ ಸ್ಮಾರ್ಟ್ ಸ್ಪೀಕರ್‌ಗಳಿಗೆ ಶಕ್ತಿ ನೀಡುವ ಮೂರು ವರ್ಚುವಲ್ ಅಸಿಸ್ಟಂಟ್‌ಗಳು ಇವೆ. ಅವು ಅಮೆಜಾನ್‌ ಅಲೆಕ್ಸಾ, ಗೂಗಲ್‌ ಅಸಿಸ್ಟಂಟ್ ಮತ್ತು ಆಪಲ್‌ ಸಿರಿ ಆಗಿವೆ. ಆಪಲ್ ಸಿರಿ-ಚಾಲಿತ ಸ್ಪೀಕರ್‌ಗಳು ಸೀಮಿತ ಮತ್ತು ದುಬಾರಿಯಾಗಿದ್ದರೂ, ನಾವು ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಸ್ಪೀಕರ್‌ಗಳನ್ನು ಮಾತ್ರ ನೋಡುತ್ತಿದ್ದೇವೆ.

ಸ್ಮಾರ್ಟ್ ಟಿವಿ ಸ್ಟಿಕ್ (Smart TV Stick)

ಸ್ಮಾರ್ಟ್ ಟಿವಿ ಸ್ಟಿಕ್ (Smart TV Stick)

ನಿಮ್ಮ ಫ್ಲಾಟ್-ಸ್ಕ್ರೀನ್ ಟಿವಿಯನ್ನು ಅಪ್‌ಗ್ರೇಡ್ ಮಾಡಲು ನೀವು ಬಯಸಿದರೆ, ಅದಕ್ಕೆ ಪರಿಹಾರವಿದೆ. ಅಮೆಜಾನ್, ರಿಯಲ್‌ಮಿ ಮತ್ತು ಶಿಯೋಮಿ ನಿಂದ ಸ್ಮಾರ್ಟ್ ಟಿವಿ ಸ್ಟಿಕ್‌ಗಳಿವೆ. ಟಿವಿ ಹೆಚ್‌ಡಿಎಮ್‌ಐ (HDMI) ಪೋರ್ಟ್ ಅನ್ನು ಹೊಂದಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕಾಗಿರುವುದು. ಈ ಸಾಧನ ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯ ಸಹ ಪಡೆದುಕೊಂಡಿದೆ.

ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾಗಳು (Smart security cams)

ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾಗಳು (Smart security cams)

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾಗಳು ಸ್ಮಾರ್ಟ್ ಡಿವೈಸ್ ಎನಿಸಿವೆ. ಈಗ, ಭದ್ರತಾ ಕ್ಯಾಮೆರಾಗಳು ಎಲ್ಲಾ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತವೆ ಮತ್ತು ಕೆಲವು ಮೈಕ್‌ಗಳನ್ನು ಸಹ ಹೊಂದಿವೆ. ಆದ್ದರಿಂದ, ನೀವು ಒಳಾಂಗಣ ಕ್ಯಾಮೆರಾವನ್ನು ಬಯಸಿದರೆ, ನಿಮ್ಮ ಸಾಕುಪ್ರಾಣಿಗಳೊಂದಿಗೆ ಮನೆಯಿಂದ ದೂರದಲ್ಲಿ ಸಂವಹನ ನಡೆಸಲು ನಿಮಗೆ ಅನುಮತಿಸುವ ಮೈಕ್ರೊಫೋನ್ ಅನ್ನು ನೀವು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.

ಸ್ಮಾರ್ಟ್ ಪ್ಲಗ್‌ಗಳು (Smart plugs)

ಸ್ಮಾರ್ಟ್ ಪ್ಲಗ್‌ಗಳು (Smart plugs)

ಮನೆಗೆ ಸ್ಮಾರ್ಟ್‌ ಟಚ್ ನೀಡುವಾಗ ಬಹುತೇಕರಿಗೆ ಈ ಸ್ಮಾರ್ಟ್ ಪ್ಲಗ್‌ಗಳು ಸಾಧನಗಳು ಸಾಮಾನ್ಯವಾಗಿ ಗಮನಕ್ಕೆ ಬರುವುದಿಲ್ಲ. ಆದರೆ ಈ ಸಾಧನಗಳು ಅತ್ಯುತ್ತಮ ಆಗಿವೆ. ನೀವು ರಾತ್ರಿಯಲ್ಲಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಿದ್ದರೆ ಇವುಗಳು ತುಂಬಾ ಉಪಯುಕ್ತವಾಗಿವೆ. ಹಾಸಿಗೆಯಿಂದ ದೂರವಿರುವ ಲೈಟ್‌ಗಳನ್ನು ಸಹ ನೀವು ನಿರ್ವಹಿಸಬಹುದು. ಹಾಗೂ ಇವುಗಳಿಂದ ಕಾರ್ಯಕ್ಷಮತೆಯನ್ನು ನಿರೀಕ್ಷಿಸಬಹುದು.

ಸ್ಮಾರ್ಟ್ ಲೈಟ್‌ಗಳು (Smart Lights)

ಸ್ಮಾರ್ಟ್ ಲೈಟ್‌ಗಳು (Smart Lights)

ಮನೆಯನ್ನು ಸ್ಮಾರ್ಟ್‌ ಹೋಮ್ ಮಾಡಲು ಇರುವ ಸಾಧನಗಳಲ್ಲಿ ಸ್ಮಾರ್ಟ್ ಲೈಟ್‌ಗಳು ಸಹ ಪ್ರಮುಖವಾಗಿದೆ. ಇವು ಅಪ್ಲಿಕೇಶನ್‌ ಕನೆಕ್ಟ್ ಸೌಲಭ್ಯ ಪಡೆದಿವೆ. ಹಾಗೆಯೇ ಬಳಕೆದಾರರು ಈ ಸಾಧನಗಳನ್ನು ಧ್ವನಿ ಆಜ್ಞೆಗಳ ಮೂಲಕ ನಿಯಂತ್ರಿಸಬಹುದು. ಪ್ರಮುಖ ಕಂಪನಿಗಳು ಸ್ಮಾರ್ಟ್ ಲೈಟ್‌ಗಳು (Smart Lights) ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ, ಗ್ರಾಹಕರ ಗಮನ ಸೆಳೆದಿವೆ.

ಆಂಬ್ರೇನ್ ಸ್ಮಾರ್ಟ್‌ ಪ್ಲಗ್

ಆಂಬ್ರೇನ್ ಸ್ಮಾರ್ಟ್‌ ಪ್ಲಗ್

ಮನೆಯ ರೂಮಿನಲ್ಲಿ ವಿದ್ಯುತ್ ಸಾಕೆಟ್‌ಗಳಿಗೆ, ಬಾಹ್ಯವಾಗಿ ಸ್ಮಾರ್ಟ್‌ಪ್ಲಗ್‌ಗಳನ್ನು ಬಳಸಬಹುದು. ಸ್ಮಾರ್ಟ್‌ಪ್ಲಗ್‌ಗಳು ವಿವಿಧ ಅಗತ್ಯಗಳಿಗೆ ಅನುಸಾರವಾಗಿ ಭಿನ್ನ ವಿದ್ಯುತ್ ಸಾಮರ್ಥ್ಯದಲ್ಲಿ ಲಭ್ಯವಾಗಲಿವೆ. ಈ ಪೈಕಿ ಆಂಬ್ರೇನ್ ವೈಫೈ ಸ್ಮಾರ್ಟ್ ಪ್ಲಗ್ 10A ಡಿವೈಸ್‌ ಹೆಚ್ಚು ಗಮನ ಸೆಳೆದಿದ್ದು, ಈ ಡಿವೈಸ್‌ಗೆ ಯಾವುದೇ ಹಬ್‌ ಅಗತ್ಯ ಇಲ್ಲ. ಇನ್ನು ಈ ಡಿವೈಸ್‌ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಬೆಂಬಲ ಹೊಂದಿದೆ.

ಶಿಯೋಮಿ ಸ್ಮಾರ್ಟ್ LED ಬಲ್ಬ್

ಶಿಯೋಮಿ ಸ್ಮಾರ್ಟ್ LED ಬಲ್ಬ್

ಅಗ್ಗದ ಪ್ರೈಸ್‌ನಲ್ಲಿ ಶಿಯೋಮಿ ಸ್ಮಾರ್ಟ್ ಎಲ್ಇಡಿ ಬಲ್ಬ್ ಸಹ ಆಕರ್ಷಣೆ ಅನಿಸಿದೆ. ಇನ್ನು ಈ ಡಿವೈಸ್‌ನ ವೈಟ್‌ ಬಣ್ಣದ ವೇರಿಯಂಟ್‌ ಬೆಲೆಯು ಜಸ್ಟ್‌ 799 ರೂ. ಆಗಿದೆ. ಈ ಬಲ್ಬ್ 7.5W ಬಿ 22 ಬಲ್ಬ್ ಆಗಿದೆ. ಸಾಧನವು ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ನೊಂದಿಗೆ ಹೊಂದಿಕೊಳ್ಳುತ್ತದೆ. ಬಲ್ಬ್ 16 ಮಿಲಿಯನ್ ಬಣ್ಣಗಳನ್ನು ನೀಡುತ್ತದೆ.

ಶಿಯೋಮಿ ಆಟೋಮ್ಯಾಟಿಕ್ ಸೋಪ್ ಡಿಸ್‌ಪೆನ್ಸರ್‌

ಶಿಯೋಮಿ ಆಟೋಮ್ಯಾಟಿಕ್ ಸೋಪ್ ಡಿಸ್‌ಪೆನ್ಸರ್‌

ಮಿ ಆಟೋಮ್ಯಾಟಿಕ್ ಸೋಪ್ dispenser ಬೆಲೆಯು 999ರೂ. ಆಗಿದೆ. ಈ ಸಾಧನವು ಸಂಪರ್ಕ-ಮುಕ್ತ ನೈರ್ಮಲ್ಯವನ್ನು ನೀಡುತ್ತದೆ. ಹಾಗೆಯೇ ಅತಿಗೆಂಪು ಸಂವೇದಕಗಳನ್ನು ಹೊಂದಿದೆ. ಈ ಡಿವೈಸ್‌ ಗಟ್ಟಿಮುಟ್ಟಾದ ರಚನೆ ಪಡೆದಿದ್ದು, ಹೆಚ್ಚು ಬಾಳಿಕೆ ಬರುವುದು ಎಂದು ಕಂಪನಿಯು ಹೇಳಿಕೊಂಡಿದೆ.

ವಿಪ್ರೋ Wi-Fi ಸ್ಮಾರ್ಟ್ ಬಲ್ಬ್

ವಿಪ್ರೋ Wi-Fi ಸ್ಮಾರ್ಟ್ ಬಲ್ಬ್

ಪ್ರತಿಯೊಬ್ಬರ ಮನೆಯಲ್ಲಿ ಬೆಳಕಿಗೆ ಲೈಟ್‌ ಅತೀ ಅಗತ್ಯ ಡಿವೈಸ್‌ ಆಗಿದೆ. ಆದರೆ ಸದ್ಯ ಸ್ಮಾರ್ಟ್‌ ಲೈಟ್‌ಗಳು ಹೆಚ್ಚು ಗಮನ ಸೆಳೆಯುತ್ತಿವೆ. ಈ ಪೈಕಿ ಅಗ್ಗದ ದರದಲ್ಲಿ ವಿಪ್ರೋ Wi-Fi ಸ್ಮಾರ್ಟ್ ಬಲ್ಬ್ ಆಕರ್ಷಕ ಅನಿಸಿದ್ದು, ಈ ಡಿವೈಸ್‌ ವೈ-ಫೈ ಸೌಲಭ್ಯ ಪಡೆದಿದೆ. ಹಾಗೂ ಈ ಡಿವೈಸ್ ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟಂಟ್‌ ಸೌಲಭ್ಯವನ್ನು ಪಡೆದಿದೆ.

Best Mobiles in India

English summary
Buying smart products for home? we are looking at the most basic devices that everyone must check out to make life smarter.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X