ಫೋನ್ ಸಂರಕ್ಷಣೆಗಾಗಿ 15 ವಿಧಾನಗಳು ಜಸ್ಟ್ ಟ್ರೈ ಮಾಡಿ!!!

By Shwetha
|

ನೀವು ಬಳಸುವ ನಿಮ್ಮ ಫೋನ್ ನಿಮ್ಮ ಪರಮಾಪ್ತ ಎಂಬುದನ್ನು ಎಂದಿಗೂ ಮರೆಯದಿರಿ. ನಿಮ್ಮ ಎಷ್ಟೋ ಗೌಪ್ಯ ಮಾಹಿತಿಗಳನ್ನು ಜತನದಿಂದ ಕಾಪಾಡಿಕೊಂಡು ಬರುತ್ತಿರುವ ಗುಪ್ತಚರನಂತೆ ವರ್ತಿಸುವ ಡಿವೈಸ್‌ನ ಭದ್ರತೆಯನ್ನು ನೀವು ಹೆಚ್ಚು ಎಚ್ಚರಿಂದ ಮಾಡಲೇಬೇಕು. ಇದಕ್ಕಾಗಿ ನೀವು ಹೆಚ್ಚು ಚಿಂತೆ ಮಾಡಬೇಕೆಂದೇನಿಲ್ಲ. ಹೌದು ಇತ್ತೀಚಿನ ತಂತ್ರಜ್ಞಾನಗಳು ಒದಗಿಸುತ್ತಿರುವ ಸವಲತ್ತುಗಳನ್ನೇ ಬಳಸಿಕೊಂಡು ನಿಮ್ಮ ಫೋನ್‌ನ ಸುರಕ್ಷತೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.

ಓದಿರಿ: ನೀವು ತಿಳಿದುಕೊಳ್ಳಲೇಬೇಕಾದ ಗ್ಯಾಜೆಟ್‌ ಪ್ರಥಮ ಚಿಕಿತ್ಸೆ

ಹಾಗಿದ್ದರೆ ಆ ಸುರಕ್ಷತಾ ವ್ಯವಸ್ಥೆಗಳೇನು ಎಂಬುದನ್ನು ಅರಿಯುವ ಕಾತರ ನಿಮ್ಮದು ಎಂದಾದಲ್ಲಿ ಇಂದಿನ ಲೇಖನದಲ್ಲಿ ಆ ಮಾರ್ಗದರ್ಶನಗಳನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ. ಆ ಮಾಹಿತಿಗಳೇನು ಎಂಬುದನ್ನು ಇಲ್ಲಿ ನೋಡಿ.

ಸ್ಕ್ರೀನ್ ಲಾಕ್ ಮಾಡಲು ಮರೆಯದಿರಿ

ಸ್ಕ್ರೀನ್ ಲಾಕ್ ಮಾಡಲು ಮರೆಯದಿರಿ

ನಿಮ್ಮ ಫೋನ್ ಅನ್ನು ಜಾಗರೂಕತೆಯಿಂದ ನೋಡಿಕೊಳ್ಳಲು ಇರುವ ಒಂದು ವಿಧಾನವೆಂದರೆ ಅದನ್ನು ಲಾಕ್ ಮಾಡುವುದಾಗಿದೆ. ಆಂಡ್ರಾಯ್ಡ್‌ನಲ್ಲಿ ನಿಮ್ಮ ಫೋನ್ ಅನ್ನು ಲಾಕ್ ಮಾಡುವ ಅಪ್ಲಿಕೇಶನ್‌ಗಳಿಗೆ ಏನೂ ಭರವಿಲ್ಲ, ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ಗೆ ಉತ್ತಮ ಭದ್ರತೆಯನ್ನು ಒದಗಿಸುತ್ತದೆ.

ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರಿ

ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರಿ

ಗೂಗಲ್ ಪ್ಲೇನಲ್ಲಿ ನಿಮಗೆ ಆಂಡ್ರಾಯ್ಡ್‌ನ ಹೊಸ ಹೊಸ ನವೀಕರಣಗಳು ದೊರೆಯುತ್ತಿರುತ್ತವೆ. ಆದ್ದರಿಂದ ನಿಮ್ಮ ಫೋನ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರಿ.

ಯುಎಸ್‌ಬಿ ಮೂಲಕ ಚಾರ್ಜ್ ಮಾಡದಿರಿ

ಯುಎಸ್‌ಬಿ ಮೂಲಕ ಚಾರ್ಜ್ ಮಾಡದಿರಿ

ಕಂಪ್ಯೂಟರ್‌ನ ಯುಎಸ್‌ಬಿ ಪೋರ್ಟ್‌ಗೆ ನಿಮ್ಮ ಫೋನ್‌ನ ಚಾರ್ಜರ್ ಅನ್ನು ಅಳವಡಿಸುವುದು ಚಾರ್ಜಿಂಗ್‌ನ ಸರಿಯಾದ ವಿಧಾನವಲ್ಲ ಎಂಬುದನ್ನು ಅರಿತುಕೊಳ್ಳಿ.

ಬ್ಯಾಕಪ್ ಮಾಡಲು ಮರೆಯದಿರಿ

ಬ್ಯಾಕಪ್ ಮಾಡಲು ಮರೆಯದಿರಿ

ನಿಮ್ಮ ಜೀವನ ನಿಮ್ಮ ಫೋನ್‌ನಲ್ಲಿದೆ. ನಿಮ್ಮ ಅತ್ಯಮೂಲ್ಯ ಫೋಟೋಗಳು, ರಹಸ್ಯವಾದ ದಾಖಲೆಗಳುಳ್ಳ ಫೋನ್ ಅನ್ನು ನೀವು ಕಳೆದುಕೊಂಡಿರಿ ಎಂದಲ್ಲಿ ಅದು ನಿಮ್ಮ ಜೀವನದ ಪ್ರಮುಖ ಸೋಲಾಗುತ್ತದೆ. ಆದ್ದರಿಂದ ಫೋನ್‌ನಲ್ಲಿರುವ ದಾಖಲೆಗಳನ್ನು ಬ್ಯಾಕಪ್ ಮಾಡಲು ಮರೆಯದಿರಿ.

ಆನ್‌ಲೈನ್‌ನಲ್ಲಿ ಸಂಗ್ರಹಿಸದಿರಿ

ಆನ್‌ಲೈನ್‌ನಲ್ಲಿ ಸಂಗ್ರಹಿಸದಿರಿ

ಕ್ಲೌಡ್ ಪ್ರೊವೈಡರ್‌ಗೆ ಏನಾದರೂ ಸಂಭವಿಸಿದಲ್ಲಿ ನಿಮ್ಮ ಡೇಟಾದ ಗತಿ ಏನಾಗಬಹುದು ಎಂಬುದನ್ನು ಯೋಚಿಸಿದ್ದೀರಾ? ಆದ್ದರಿಂದ ಆನ್‌ಲೈನ್‌ನಲ್ಲಿ ಸಂಗ್ರಹಿಸುವಾಗ ಹೆಚ್ಚಿನ ಮುತುವರ್ಜಿಯನ್ನು ಕಾಪಾಡಿಕೊಳ್ಳಿ.

ಹೆಚ್ಚು ಬಿಸಿ ಮಾಡದಿರಿ

ಹೆಚ್ಚು ಬಿಸಿ ಮಾಡದಿರಿ

ನಿಮ್ಮ ಫೋನ್‌ ಅನ್ನು ಹೆಚ್ಚು ಕಾಲ ಚಾರ್ಜ್ ಮಾಡುವುದು ಫೋನ್‌ನ ಬಿಸಿಯನ್ನು ಏರಿಸಬಹುದು. ಆದ್ದರಿಂದ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವಾಗ ಅದನ್ನು ತಣ್ಣಗಿನ ಸ್ಥಳದಲ್ಲಿ ಇರಿಸುವುದು ಮುಖ್ಯವಾಗುತ್ತದೆ. ಸೊನ್ನೆ ತನಕ ಫೋನ್ ಬ್ಯಾಟರಿಯನ್ನು ಖಾಲಿಯಾಗಿಸುವುದು ಇಲ್ಲವೇ ಪೂರ್ಣ ಚಾರ್ಜ್ ಆದ ನಂತರ ಕೂಡ ಸಾಕೆಟ್‌ನಿಂದ ಫೋನ್ ಅನ್ನು ಬೇರ್ಪಡಿಸದೇ ಇರುವುದು ಫೋನ್‌ನ ಜೀವನವನ್ನು ನಾಶಪಡಿಸಬಹುದು.

ಪರದೆಗೆ ಸುರಕ್ಷತೆ ಇರಲಿ

ಪರದೆಗೆ ಸುರಕ್ಷತೆ ಇರಲಿ

ಗೋರಿಲ್ಲಾ ಗ್ಲಾಸ್ ಅತ್ಯುತ್ತಮ ಆದರೆ ಇದಕ್ಕೆ ಸರಿಯಾದ ರಕ್ಷಣೆಯನ್ನು ನೀವು ಮಾಡಿಲ್ಲ ಎಂದಾದಲ್ಲಿ ನಿಮ್ಮ ಫೋನ್‌ನ ಪರದೆಯನ್ನು ಆಗಾಗ್ಗೆ ರಿಪೇರಿ ಮಾಡಿಸುವುದೇ ಕೆಲಸವಾಗಿಬಿಡುತ್ತದೆ.

ಮಳೆಯಿಂದ ರಕ್ಷಿಸಿ

ಮಳೆಯಿಂದ ರಕ್ಷಿಸಿ

ನಿಮ್ಮ ಫೋನ್ ಜಲಪ್ರತಿರೋಧಕ ಶಕ್ತಿಯನ್ನು ಹೊಂದಿಲ್ಲ ಎಂದಾದಲ್ಲಿ ಫೋನ್ ಹಾಳಾಗುವುದು ಖಚಿತವಾಗಿದೆ.

ಇಎಮ್‌ಐ ಆಯ್ಕೆ ಕಡಿಮೆ ಮಾಡಿ

ಇಎಮ್‌ಐ ಆಯ್ಕೆ ಕಡಿಮೆ ಮಾಡಿ

ಫೋನ್ ಅನ್ನು ಇಎಮ್‌ಐ ಆಯ್ಕೆಯನ್ನು ಬಳಸಿ ಖರೀದಿಸುವುದನ್ನು ನಿಲ್ಲಿಸಿ. ಫೋನ್‌ಗಳು ಲಾಂಚ್ ಆಗಿ ಕೆಲವು ತಿಂಗಳುಗಳ ನಂತರ ಕಡಿಮೆ ಬೆಲೆಗೆ ಇಳಿಯುತ್ತವೆ. ಈ ಸಂದರ್ಭವನ್ನು ಬಳಸಿಕೊಂಡು ಫೋನ್ ಖರೀದಿಸಿ.

ವಿಪರೀತ ಅಪ್ಲಿಕೇಶನ್ ಇನ್‌ಸ್ಟಾಲ್ ಬೇಡ

ವಿಪರೀತ ಅಪ್ಲಿಕೇಶನ್ ಇನ್‌ಸ್ಟಾಲ್ ಬೇಡ

ನಿಮ್ಮ ಫೋನ್‌ಗೆ ಪರವಾನಗಿ ಇಲ್ಲದ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳದಿರಿ. ಇಂತಹ ಕಾರ್ಯಗಳನ್ನು ಮಾಡುವಾಗ ಆದಷ್ಟು ಜಾಗರೂಕರಾಗಿರಿ. ಅಪ್ಲಿಕೇಶನ್‌ಗಳ ಸುರಿಮಳೆ ನಿಮ್ಮ ಫೋನ್‌ನ ಜೀವಿತವನ್ನು ಹಾಳುಗೆಡವಬಹುದು.

ನಿಮ್ಮ ಡಿವೈಸ್ ಎನ್‌ಕ್ರಿಪ್ಟ್ ಮಾಡಿ

ನಿಮ್ಮ ಡಿವೈಸ್ ಎನ್‌ಕ್ರಿಪ್ಟ್ ಮಾಡಿ

ನಿಮ್ಮ ಡಿವೈಸ್‌ನಲ್ಲಿರುವ ಎಲ್ಲಾ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲು ಆಂಡ್ರಾಯ್ಡ್ ನಿಮ್ಮನ್ನು ಅನುಮತಿಸುತ್ತದೆ. ಇದನ್ನು ಮಾಡಲು ನಿಮಗೆ ಪಾಸ್‌ವರ್ಡ್ ಅಥವಾ ಪಿನ್ ಅಗತ್ಯವಿರುತ್ತದೆ.

ಕಚೇರಿ ಕೆಲಸಕ್ಕಾಗಿ ವೈಯಕ್ತಿಕ ಡಿವೈಸ್ ಬಳಕೆ

ಕಚೇರಿ ಕೆಲಸಕ್ಕಾಗಿ ವೈಯಕ್ತಿಕ ಡಿವೈಸ್ ಬಳಕೆ

ನೀವು ಕಚೇರಿಯಲ್ಲಿ ಬಳಸುತ್ತಿರುವ ಡಿವೈಸ್ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳುವುದು ಅತೀ ಅಗತ್ಯವಾಗಿದೆ. ಇದರಲ್ಲಿ ತೀರಾ ವೈಯಕ್ತಿಕವಾದ ಮಾಹಿತಿಯನ್ನು ಹೊಂದಿರದಿರಿ.

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್

ನಿಮ್ಮ ಮೊಬೈಲ್ ಕಳುವಾದಲ್ಲಿ ಆಂಡ್ರಾಯ್ಡ್ ಡಿವೈಸ್ ಅನ್ನು ಬಳಸಿಕೊಂಡು ಫೋನ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಬಹುದು.

ಎಸ್‌ಡಿ ಕಾರ್ಡ್‌ನಲ್ಲಿ ಸೂಕ್ಷ್ಮ ದಾಖಲೆಗಳನ್ನು ಹೊಂದದಿರಿ

ಎಸ್‌ಡಿ ಕಾರ್ಡ್‌ನಲ್ಲಿ ಸೂಕ್ಷ್ಮ ದಾಖಲೆಗಳನ್ನು ಹೊಂದದಿರಿ

ಕ್ರೆಡಿಟ್ ಕಾರ್ಡ್ ಕಾಪಿಗಳು ವೈಯಕ್ತಿಕ ಐಡಿಯನ್ನು ನಿಮ್ಮ ಫೋನ್‌ನಲ್ಲಿ ಹೊಂದದಿರುವುದು ಅತೀ ಅಗತ್ಯವಾಗಿದೆ.

ಬೇರೆ ಮೂಲದಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡದಿರಿ

ಬೇರೆ ಮೂಲದಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡದಿರಿ

ನಿಯಮ ಷರತ್ತುಗಳಿಲ್ಲದ ಬೇರೆಯದೇ ಮೂಲದಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ನಿಮಗೆ ಹಾನಿಯನ್ನುಂಟು ಮಾಡಬಹುದು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಅರಿತುಕೊಳ್ಳಲೇಬೇಕಾದ ಫೇಸ್‌ಬುಕ್ ಮೆಸೆಂಜರ್ 10 ಟ್ರಿಕ್ಸ್</a><br />ಓದಿರಿ: <a href=2016ರ ಹೆಚ್ಚು ಬೇಡಿಕೆ ಇರುವ ಟಾಪ್‌ ಉದ್ಯೋಗಗಳು
ಓದಿರಿ: ಏಲಿಯನ್‌ಗಳು ನಾಶ : ಸಂಶೋಧನೆಯಿಂದ ಸ್ಪಷ್ಟ ಉತ್ತರ
ಓದಿರಿ: ಎಚ್ಚರ! ನಿಮ್ಮ ವಾಟ್ಸಾಪ್ ಪೋಸ್ಟ್‌ನಿಂದ ನೀವು ಜೈಲು ಪಾಲು" title="ಅರಿತುಕೊಳ್ಳಲೇಬೇಕಾದ ಫೇಸ್‌ಬುಕ್ ಮೆಸೆಂಜರ್ 10 ಟ್ರಿಕ್ಸ್
ಓದಿರಿ: 2016ರ ಹೆಚ್ಚು ಬೇಡಿಕೆ ಇರುವ ಟಾಪ್‌ ಉದ್ಯೋಗಗಳು
ಓದಿರಿ: ಏಲಿಯನ್‌ಗಳು ನಾಶ : ಸಂಶೋಧನೆಯಿಂದ ಸ್ಪಷ್ಟ ಉತ್ತರ
ಓದಿರಿ: ಎಚ್ಚರ! ನಿಮ್ಮ ವಾಟ್ಸಾಪ್ ಪೋಸ್ಟ್‌ನಿಂದ ನೀವು ಜೈಲು ಪಾಲು" loading="lazy" width="100" height="56" />ಅರಿತುಕೊಳ್ಳಲೇಬೇಕಾದ ಫೇಸ್‌ಬುಕ್ ಮೆಸೆಂಜರ್ 10 ಟ್ರಿಕ್ಸ್
ಓದಿರಿ: 2016ರ ಹೆಚ್ಚು ಬೇಡಿಕೆ ಇರುವ ಟಾಪ್‌ ಉದ್ಯೋಗಗಳು
ಓದಿರಿ: ಏಲಿಯನ್‌ಗಳು ನಾಶ : ಸಂಶೋಧನೆಯಿಂದ ಸ್ಪಷ್ಟ ಉತ್ತರ
ಓದಿರಿ: ಎಚ್ಚರ! ನಿಮ್ಮ ವಾಟ್ಸಾಪ್ ಪೋಸ್ಟ್‌ನಿಂದ ನೀವು ಜೈಲು ಪಾಲು

Best Mobiles in India

English summary
In this article we are giving you some tips for mobile protection. These steps help you to protect your phone from each danger. If u are really caring your phone means these tips help you to go through of any danger.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X