ಹಳೆ ಆಂಡ್ರಾಯ್ಡ್ ಫೋನ್‌ಗಳ ಉಪಯೋಗಗಳು

By Suneel
|

ನಿಮ್ಮಲ್ಲಿ ಒಂದು ಹಳೆಯ ಆಂಡ್ರಾಯ್ಡ್ ಮೊಬೈಲ್ ಫೋನ್ ಇದೆ. ಅದನ್ನು ಮಾರಾಟ ಮಾಡಿ ಹೊಸ ಆಂಡ್ರಾಯ್ಡ್ ಮೊಬೈಲ್ ಖರೀದಿಸಲು ಚಿಂತಿಸಿದ್ದೀರಿ. ಹಾಗೆ ನಿಮ್ಮಲ್ಲಿ ಹಳೆಯ ಮೊಬೈಲ್ ಇಟ್ಟುಕೊಂಡು ಹೊಸದೊಂದು ಹೇಗೆ ಖರೀದಿಸುವುದು ಎಂಬ ಚಿಂತೆಯೂ ಇದೆ. ನಿಮ್ಮ ಮೊಬೈಲ್ ಗೆ ಪ್ರಸ್ತುತ ಬೆಲೆಗಿಂತ ಕಡಿಮೆ ಬೆಲೆಯು ಆಗಬಹದು. ಮೊಬೈಲ್ ಮಾರಾಟ ಮಾಡುವ ಬದಲು ನಿಮ್ಮ ಹಳೆಯ ಆಂಡ್ರಾಯ್ಡ್ ಮೊಬೈಲ್ ನೊಂದಿಗೆ ನೀವು ಯೋಚಿಸದಷ್ಟು ಹಲವು ಉತ್ತಮ ಕೆಲಸಗಳನ್ನು ಮಾಡಬಹುದು. ಆ ಉಪಯುಕ್ತ ಕೆಲಸಗಳು ಈ ಕೆಳಗಿನಂತಿವೆ.

ಓದಿರಿ: ಭಾರತದ 400 ರೈಲು ನಿಲ್ದಾಣಗಳಲ್ಲಿ ಶೀಘ್ರವೇ ಉಚಿತ ವೈಫೈ

ನಿಮ್ಮ ಮನೆಯ ಮಾಧ್ಯಮ ನಿಯಂತ್ರಣ

ನಿಮ್ಮ ಮನೆಯ ಮಾಧ್ಯಮ ನಿಯಂತ್ರಣ

ನಿಮ್ಮ ಮೊಬೈಲ್‌ಗೆ ಸರಿಯಾದ ಆಪ್ಸ್ ಗೊತ್ತಿದ್ದಲ್ಲಿ ಅದು ಉತ್ತಮವಾದ ಹಲವು ಕೆಲಸಗಳನ್ನು ನಿರ್ವಹಿಸುತ್ತದೆ. ಹಲವು ವಿಧಾನಗಳಲ್ಲಿ ಮನೆಯೊಳಗೆ ಮನರಂಜನೆಗಾಗಿ ಬಳಸಬಹುದಾಗಿದೆ.

ಗೂಗಲ್ ಕ್ರೋಮ್‌ ಕಾಸ್ಟ್ ಸ್ಟಿಕ್‌

ಗೂಗಲ್ ಕ್ರೋಮ್‌ ಕಾಸ್ಟ್ ಸ್ಟಿಕ್‌

ನಿಮ್ಮ ಮೊಬೈಲ್‌ಗೆ ಗೂಗಲ್ ಕ್ರೋಮ್‌ ಕಾಸ್ಟ್ ಸ್ಟಿಕ್‌ ಅಳವಡಿಸಿ ವೈಫೈ ನೆಟ್‌ವರ್ಕ್‌ ಮೂಲಕ ಯೂಟೂಬ್, ನೆಟ್‌ಪ್ಲಿಕ್ಸ್, ಗೂಗಲ್‌ ಪ್ಲೇ ಮೂವೀಸ್‌, ವಿಂಕ್, ಯುಪ್ ಟಿವಿ(yuup tv), ಮತ್ತು ಎರೋಸ್ ನೌ(erros now) ಆಪ್‌ಗಳಿಂದ ಸ್ಟ್ರೀಮಿಂಗ್ ಕಂಟೆಂಟ್ ಪಡೆಯಬಹದು. ಗೂಗಲ್‌ ಕ್ರೋಮ್ ಕಾಸ್ಟ್‌ ಸಾಧನ ಅಮೇಜಾನ್. ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್ ಗಳಲ್ಲಿ ಲಭ್ಯವಿದೆ. ಅಲ್ಲದೆ ನಿಮ್ಮ ಮೊಬೈಲ್ ಅನ್ನು ಮನೆಯ ಮಾಧ್ಯಮ ನಿಯಂತ್ರಣವನ್ನಾಗಿ ಮಾಡಲು ಫ್ಲೆಕ್ಸ್ ಆಪ್‌ ಡೌನ್‌ಲೋಡ್‌ ಮಾಡುವುದು. ಈ ಆಪ್‌ ಉಚಿತವಾಗಿದ್ದು ನಿಮ್ಮ ಟಿವಿಯು ಸ್ಟ್ರೀಮಿಂಗ್ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ಕಾರಿನ ಶಾಶ್ವತ ಜಿಪಿಎಸ್

ನಿಮ್ಮ ಕಾರಿನ ಶಾಶ್ವತ ಜಿಪಿಎಸ್

ಹಳೆ ಆಂಡ್ರಾಯ್ಡ್ ಮೊಬೈಲ್ ಇದ್ದಲ್ಲಿ ನಿಮ್ಮ ಕಾರಿಗೆ ಹೆಚ್ಚು ಹಣ ವ್ಯಯಿಸಿ ಹೊಸ ಜಿಪಿಎಸ್ ಸಾಧನ ಕೊಳ್ಳುವ ಅಗತ್ಯವಿಲ್ಲ (ಡಾಟಾ ರೀಚಾರ್ಜ್‌ ಹೊರತು ಪಡಿಸಿ). ಈಗಲೇ ನಿಮ್ಮ ಕಾರಿನ ಡ್ಯಾಸ್ ಬೋರ್ಡ್‌ಗೆ ಅಳವಡಿಸಿ ಉತ್ತಮ ಜಿಪಿಎಸ್ ಸಾಧನವಾಗಿ ಬಳಸಲು ಪ್ರಾರಂಭಿಸಿ.

ವೇರ್ ಮೈ ಡ್ರಾಯಿಡ್

ವೇರ್ ಮೈ ಡ್ರಾಯಿಡ್

ನಿಮ್ಮ ಮೊಬೈಲ್ ಶಾಶ್ವತವಾಗಿ ಕಾರಿನಲ್ಲಿ ಅಳವಡಿಸಿ "ವೇರ್ ಮೈ ಡ್ರಾಯಿಡ್" ಆಪ್ ಬಳಸಿ ಟ್ರ್ಯಾಕರ್ ಆಗಿ ಬಳಸಬಹುದಾಗಿದೆ. ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ನಿಮ್ಮ ಕಾರು ಹುಡುಕಲು ಸಹಾಯವಾಗುತ್ತದೆ.

ಕಾರಿನಲ್ಲಿ ಎಂಪಿ3 ಪ್ಲೇಯರ್ ಆಗಿ ಬಳಕೆ

ಕಾರಿನಲ್ಲಿ ಎಂಪಿ3 ಪ್ಲೇಯರ್ ಆಗಿ ಬಳಕೆ

ನಿಮ್ಮ ಆಂಡ್ರಾಯ್ಡ್ ಮೊಬೈಲ್ ಅನ್ನು ಒಂದು ವೇಳೆ ಶಾಶ್ವತ ಜಿಪಿಎಸ್ ಸಿಸ್ವಮ್‌ ಆಗಿ ಅಳವಡಿಸಿದಲ್ಲಿ ಅದನ್ನೇ ಆಕ್ಸ್ ಕೇಬಲ್ ಸೇರಿಸುವುದರ ಮೂಲಕ ಅಥವಾ ಕಾರಿಗೆ ಬ್ಲೂಟೂತ್‌ ಮೂಲಕ ಫೋನ್ ಕನೆಕ್ಟ್ ಮಾಡಿ ಎಂಪಿ3 ಪ್ಲೇಯರ್ ಆಗಿ ಉಪಯೋಗಿಸಬಹುದಾಗಿದೆ. ಮೊಬೈಲ್‌ಗೆ ನಿಮ್ಮ ನೆಚ್ಚಿನ ಎಲ್ಲಾ ಹಾಡುಗಳನ್ನು ತುಂಬಿ ಸಿಡಿ ಮತ್ತು ರೇಡಿಯೋಗಳ ಬಗ್ಗೆ ಚಿಂತೆ ಬಿಟ್ಟುಬಿಡಿ.

ಮನೆಯ ಭದ್ರತೆ ಕ್ಯಾಮೆರಾ

ಮನೆಯ ಭದ್ರತೆ ಕ್ಯಾಮೆರಾ

ನಿಮ್ಮ ಸ್ಮಾಟ್ ಫೋನ್ ಈಗ ಉತ್ತಮ ಕ್ಯಾಮೆರಾ ಆಗಿಯೂ ಕೆಲಸ ಮಾಡುತ್ತದೆ. ನಿಮ್ಮ ಆಫೀಸ್ ಹಾಗೂ ಮನೆಗೆ ಭದ್ರತೆ ಭೇಕಾದಲ್ಲಿ ಸೆಕ್ಯೂರಿಟಿ ಕ್ಯಾಮೆರಾ ಆಗಿಯೂ ಬಳಸಬಹದು. ಹೀಗೆ ಮಾಡಲು IP Webcam ಆಪ್ ಡೌನ್‌ಲೋಡ್‌ ಮಾಡಿ ಅದರ ಸಲಹೆಗಳನ್ನು ಫಾಲೋ ಮಾಡಿ ವ್ಯವಸ್ಥೆ ಮಾಡಿಕೊಳ್ಳಿ. ನಂತರ ನೀವು ವಿಎಲ್‌ಸಿ ಪ್ಲೇಯರ್ ಅಥವಾ ವೆಬ್‌ ಬ್ರೌಸರ್‌ ಉಪಯೋಗಿಸಿ ನಿಮ್ಮ ಮನೆಯ ಯಾವುಧೇ ಪ್ಲಾಟ್‌ಫಾಂ ನೋಡಬಹುದು.

ಮಕ್ಕಳ ಸ್ನೇಹಿ ಆಟಿಕೆಯಾಗಿ

ಮಕ್ಕಳ ಸ್ನೇಹಿ ಆಟಿಕೆಯಾಗಿ

ಇಂದು ಸ್ಮಾರ್ಟ್ ಫೋನ್‌ಗಳು ಕೇವಲ ಆಟಿಕೆವಸ್ತುಗಳು ಮಾತ್ರವಲ್ಲ ಶಿಕ್ಷಣ ಕೊಡುವ ಸಾಧನಗಳು ಕೂಡ ಆಗಿವೆ. ನಿಮ್ಮ ಮಗು ತೊಂದರೆ ನೀಡುವ ವೇಳೆ ಅವರ ಗಮನ ಬೇರೆಡೆ ಸೆಳೆಯಲು ಮಕ್ಕಳಿಗೆಂದೇ ರೂಪಿಸಲಾದ ಆಪ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿ ಅವರಿಗೆ ಕೊಡಿ.

Most Read Articles
Best Mobiles in India

English summary
So, before you plan on selling your old phone for a price much lower than what your phone is still worth, here are the things you can do instead.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more