ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್‌ ಬಗ್ಗೆ ತಿಳಿದ್ರೆ, ನೀವು ಕೂಡಲೇ ರೀಚಾರ್ಜ್ ಮಾಡ್ತೀರಾ?

|

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆಯು ಕೆಲವು ಆಕರ್ಷಕ ಪ್ಲ್ಯಾನ್‌ಗಳ ಮೂಲಕ ತನ್ನದೇ ಗ್ರಾಹಕ ಬಳಗವನ್ನು ಪಡೆದುಕೊಂಡಿದೆ. ಇದಲ್ಲದೇ ಬಿಎಸ್‌ಎನ್‌ಎಲ್‌ ಸಂಸ್ಥೆಯು ಕೆಲವು ಡೇಟಾ ಮತ್ತು ವ್ಯಾಲಿಡಿಟಿ ಯೋಜನೆಗಳ ಮೂಲಕ ಖಾಸಗಿ ಟೆಲಿಕಾಂಗಳಿಗೆ ನೇರ ಸೆಡ್ಡು ಹೊಡೆಯುವ ಪ್ರಯತ್ನ ನಡೆಸುತ್ತಾ ಮುಂದೆ ಸಾಗಿದೆ. ಇನ್ನು ಬಿಎಸ್‌ಎನ್‌ಎಲ್‌ ಸಂಸ್ಥೆಯ 1000ರೂ. ಒಳಗಿರುವ ಈ ಪ್ರೀಪೇಯ್ಡ್‌ ಪ್ಲ್ಯಾನ್‌ ಭರ್ಜರಿ ಪ್ರಯೋಜನಗಳ ಮೂಲಕ ಗ್ರಾಹಕರನ್ನು ಸೆಳೆದಿದೆ.

997ರೂ. ಪ್ರೀಪೇಯ್ಡ್‌

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂನ 997ರೂ. ಪ್ರೀಪೇಯ್ಡ್‌ ಯೋಜನೆಯು ಅಧಿಕ ಡೇಟಾ, ಹೆಚ್ಚಿನ ವ್ಯಾಲಿಡಿಟಿ ಎರಡನ್ನು ಬಯಸುವ ಗ್ರಾಹಕರಿಗೆ ಹೇಳಿ ಮಾಡಿಸಿದಂತಹ ಯೋಜನೆ ಆಗಿ ಕಾಣಿಸಿಕೊಂಡಿದೆ. ಈ ಬಿಎಸ್ಎನ್‌ಎಲ್‌ನ ಯೋಜನೆಯಲ್ಲಿ ಗ್ರಾಹಕರಿಗೆ ದೈನಂದಿನ ಡೇಟಾ, ಅನಿಯಮಿತ ವಾಯಿಸ್‌ ಕರೆ ಹಾಗೂ ಬಿಗ್ ವ್ಯಾಲಿಡಿಟಿ ಸೌಲಭ್ಯ ದೊರೆಯುತ್ತದೆ. ಹಾಗಾದರೆ ಬಿಎಸ್‌ಎನ್‌ಎಲ್‌ ಟೆಲಿಕಾಂನ 997ರೂ. ಪ್ರೀಪೇಯ್ಡ್‌ ಯೋಜನೆ ಇತರೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 997ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 997ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ ಈ ಯೋಜನೆಯು ಒಟ್ಟು 160 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಹಾಗೂ ಪ್ರತಿದಿನ 100 ಎಸ್ಎಮ್‌ಎಸ್‌ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಹೆಚ್ಚುವರಿ ಎರಡು ತಿಂಗಳವರೆಗೆ ಉಚಿತ PRBT ಸೇವೆ ಮತ್ತು ಉಚಿತ ಲೋಕಧುನ್ ಸೇವೆ ಸಹ ಲಭ್ಯವಾಗಲಿದೆ. ಈ ಯೋಜನೆಯಲ್ಲಿ ಒಟ್ಟು 320GB ಡೇಟಾ ಪ್ರಯೋಜನ ಸಿಗಲಿದೆ. ಒಮ್ಮೆ ಈ ಪ್ಲ್ಯಾನ್ ರೀಚಾರ್ಜ್ ಮಾಡಿದರೆ, ಹೆಚ್ಚು ಕಡಿಮೆ ಅರ್ಧ ವರ್ಷ ಚಿಂತೆ ಇರಲ್ಲ.

ಬಿಎಸ್‌ಎನ್‌ಎಲ್‌ 1198ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 1198ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ 1198ರೂ. ರೀಚಾರ್ಜ್ ಯೋಜನೆಯಲ್ಲಿ ಪ್ರತಿ ತಿಂಗಳು 3 GB ಡೇಟಾ, ಇದರೊಂದಿಗೆ ಪ್ರತಿ ತಿಂಗಳು 300 ನಿಮಿಷಗಳ ಉಚಿತ ವಾಯಿಸ್‌ ಕರೆ ಪ್ರಯೋಜನ ಲಭ್ಯವಿದೆ. ಇನ್ನು ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ 36GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಮುಖ್ಯವಾಗಿ ಅಧಿಕ ವ್ಯಾಲಿಡಿಟಿ ನಿರೀಕ್ಷಿಸುವ ಗ್ರಾಹಕರಿಗೆ ಅತ್ಯುತ್ತಮ ಪ್ಲ್ಯಾನ್ ಎನಿಸುತ್ತದೆ.

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ 599ರೂ. ಪ್ರೀಪೇಯ್ಡ್‌ ಯೋಜನೆಯಲ್ಲಿ ಪ್ರತಿದಿನ 5 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450 GB ಡೇಟಾ ಪ್ರಯೋಜನ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಂಗ್ ಸೇವೆ ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್‌ 769ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 769ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್ ಟೆಲಿಕಾಂನ 769 ರೂ. ಪ್ಲ್ಯಾನ್, ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಪ್ರತಿದಿನ 2 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಹೆಚ್ಚುವರಿಯಾಗಿ ಎರೋಸ್ ನೌ ಎಂಟರ್‌ಟೈನ್‌ಮೆಂಟ್, ಲಿಸ್ಟ್ನ್ ಪಾಡ್‌ಕ್ಯಾಸ್ಟ್ ಸೇವೆ ಗಳು ಲಭ್ಯ.

ಬಿಎಸ್‌ಎನ್‌ಎಲ್‌ 269ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 269ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್ ಟೆಲಿಕಾಂನ 269 ರೂ. ಪ್ಲ್ಯಾನ್ ಅಲ್ಪಾವಧಿಯ ಯೋಜನೆ ಆಗಿದ್ದು, ಒಟ್ಟು 30 ದಿನಗಳ ವ್ಯಾಲಿಡಿಟಿ ಯನ್ನು ಒಳಗೊಂಡಿದೆ. ಪ್ರತಿದಿನ 2 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಹೆಚ್ಚುವರಿ ಯಾಗಿ ಎರೋಸ್ ನೌ ಎಂಟರ್‌ಟೈನ್‌ಮೆಂಟ್, ಲಿಸ್ಟ್ನ್ ಪಾಡ್‌ಕ್ಯಾಸ್ಟ್ ಸೇವೆಗಳು ಲಭ್ಯ.

Best Mobiles in India

English summary
BSNL Rs 997 plan from BSNL is the validity it ships with. There are hardly any plans in the industry that come with 160 days of validity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X