ಮನೆಯ ವೈಫೈ ವೇಗಗೊಳಿಸುವ ಟಾಪ್ 10 ಸಲಹೆಗಳು

By Shwetha
|

ಮನೆಯಲ್ಲಿ ವೈಫೈ ಬಳಕೆಯನ್ನು ಮಾಡುವವರು ನೀವಾಗಿದ್ದಲ್ಲಿ ಕನೆಕ್ಶನ್ ಸಮಸ್ಯೆ, ವೈಫೈ ನಿಧಾನವಾಗುವಿಕೆ ಮೊದಲಾದ ಸಮಸ್ಯೆಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ. ಇಂದು ಇಂಟರ್ನೆಟ್ ಎಂಬುದು ಪ್ರಮುಖ ಆಧಾರವಾಗಿದ್ದು ಎಲ್ಲದಕ್ಕೂ ಅದನ್ನೇ ಅನುಸರಿಸುವಂತಹ ಸ್ಥಿತಿ ಎದುರಾಗಿದೆ. ಮನೆಯಲ್ಲೂ ಒಂದಿಲ್ಲೊಂದು ಅವಶ್ಯಕತೆಗಳಿಗೆ ವೈಫೈ ಅಗತ್ಯವಿದೆ. ಹಾಗಿದ್ದರೆ ಇದನ್ನು ವೇಗವಾಗಿಸುವ ಸಲಹೆಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಇದು ಅತ್ಯಂತ ಸರಳ ಕ್ರಮಗಳಾಗಿವೆ.

ಓದಿರಿ: ಲ್ಯಾಪ್‌ಟಾಪ್ ಬಳಸಿ ವೈಫೈ ಹಾಟ್‌ಸ್ಪಾಟ್ ರಚನೆ ಹೇಗೆ?

ಬನ್ನಿ ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಮನೆಯ ವೈಫೈಯನ್ನು ವೇಗವಾಗಿಸುವ ಕೆಲವೊಂದು ಅದ್ಭುತ ಪರಿಹಾರಗಳನ್ನು ನಾವು ನೀಡುತ್ತಿದ್ದು ಇವುಗಳ ಅಳವಡಿಕೆಯಿಂದ ಮನೆಯ ವೈಫೈ ವೇಗವಾಗುವುದು ಖಂಡಿತ. ಹಾಗಿದ್ದರೆ ಬನ್ನಿ ಇಲ್ಲಿದೆ ಆ ಸಲಹೆಗಳು

ಅತ್ಯಾಧುನಿಕ ವೈಫೈ

ಅತ್ಯಾಧುನಿಕ ವೈಫೈ

ನವೀಕೃತ ಹಾರ್ಡ್‌ವೇರ್ ಅನ್ನು ಆದಷ್ಟು ಬಳಸಿ. ವೈರ್‌ಲೆಸ್ ಎ, ಬಿ, ಮತ್ತು ಜಿ ಹಳೆಯದು ಹಾಗೂ ನಿಧಾನವಾಗಿರುತ್ತದೆ. ವೈರ್‌ಲೆಸ್ ಎನ್ ಹೆಚ್ಚು ವೇಗವಾಗಿರುತ್ತದೆ. ವೈರ್‌ಲೆಸ್ ಎನ್ ರೂಟರ್ ಮತ್ತು ವೈರ್‌ಲೆಸ್ ಎನ್ ಕಾರ್ಡರ್ ಅನ್ನು ನೀವು ಹೊಂದಿರುವುದು ಅಗತ್ಯವಾಗಿದೆ. ಇದರಿಂದ ಹೆಚ್ಚು ವೇಗ ನಿಮಗೆ ದೊರೆಯುತ್ತದೆ.

ಸ್ಪಾಟ್

ಸ್ಪಾಟ್

ನಿಮಗೆ ಉತ್ತಮ ಸಿಗ್ನಲ್ ದೊರೆಯಬೇಕು ಎಂದಾದಲ್ಲಿ, ಇದನ್ನು ತೆರೆದ ಗೋಡೆಗಳಿಲ್ಲದ ಮತ್ತು ಅಡೆತಡೆಗಳಿಲ್ಲದಲ್ಲಿ ರೂಟರ್ ಅನ್ನು ಇರಿಸಬೇಕು. ನಿಮ್ಮ ಮನೆಯ ಮಧ್ಯದಲ್ಲಿ ಇದು ಇದೆ ಎಂಬುದನ್ನು ಖಾತ್ರಿಪಡಿಸಿ. ಇದರಿಂದ ಮನೆಯಲ್ಲೆಲ್ಲಾ ಉತ್ತಮ ಕವರೇಜ್ ನಿಮಗೆ ದೊರೆಯುತ್ತದೆ.

ವೈರ್‌ಲೆಸ್ ಚಾನಲ್

ವೈರ್‌ಲೆಸ್ ಚಾನಲ್

ನಿಮ್ಮ ಅಕ್ಕಪಕ್ಕದ ಮನೆಯವರ ರೂಟರ್‌ಗಳು ನಿಮಗೆ ಅಡ್ಡವಾಗಿರಬಹುದು ಮತ್ತು ಸಿಗ್ನಲ್‌ಗಳಿಗೆ ತೊಂದರೆಯನ್ನುಂಟು ಮಾಡುತ್ತಿರಬಹುದು. ವೈಫೈ ಸ್ಟಂಬ್ಲರ್ ಅಥವಾ ವೈಫೈ ಅನಲೈಜರ್ ಪರಿಕರಗಳನ್ನು ಬಳಸಿ.

ಅಪ್ಲಿಯನ್ಸ್‌ಗಳ ಒಳಗೊಳ್ಳುವಿಕೆ

ಅಪ್ಲಿಯನ್ಸ್‌ಗಳ ಒಳಗೊಳ್ಳುವಿಕೆ

ಕೋರ್ಡ್‌ಲೆಸ್ ಫೋನ್‌ಗಳು, ಮೈಕ್ರೋವೇವ್ಸ್ ಮತ್ತು ಇತರ ಅಪ್ಲಿಯನ್ಸ್‌ಗಳು ನಿಮ್ಮ ರೂಟರ್‌ಗೆ ತೊಂದರೆಯನ್ನುಂಟು ಮಾಡುತ್ತಿರಬಹುದು. ಡ್ಯುಯಲ್ ಬ್ಯಾಂಡ್ ರೂಟರ್ ಅನ್ನು ಖರೀದಿಸುವುದು ಸೂಕ್ತ.

ವೈಫೈ ಕಳ್ಳ

ವೈಫೈ ಕಳ್ಳ

ನಿಮ್ಮ ರೂಟರ್ ಪಾಸ್‌ವರ್ಡ್ ಅನ್ನು ಹೊಂದಿದ್ದಲ್ಲಿ, ಹ್ಯಾಕ್ ಮಾಡಲು ಇದು ಅತಿ ಸರಳ ಮಾರ್ಗವಾಗಿದೆ. ನಿಮ್ಮ ವೈಫೈ ಅನ್ನು ಯಾರಾದರೂ ಬಳಸುತ್ತೀದ್ದೀರಾ ಎಂಬುದನ್ನು ಪತ್ತೆಹಚ್ಚಲು ಇದು ಸುಲಭವಾಗಿದೆ. ಡಬ್ಲ್ಯೂಪಿಎ ಪಾಸ್‌ವರ್ಡ್ ಅನ್ನು ಹೊಂದಿರುವುದು ಅತ್ಯಗತ್ಯವಾಗಿದೆ.

ಕ್ವಾಲಿಟಿ ಆಫ್ ಸರ್ವೀಸ್

ಕ್ವಾಲಿಟಿ ಆಫ್ ಸರ್ವೀಸ್

ನಿಮ್ಮ ಮನೆಯಲ್ಲಿ ಯಾರಾದರೂ ನಿಯಮಿತವಾಗಿ ವೀಡಿಯೊ ಚಾಟ್ ಮಾಡುತ್ತಿದ್ದಲ್ಲಿ, ಆನ್‌ಲೈನ್ ಗೇಮ್ಸ್‌ಗಳನ್ನು ಆಡುತ್ತಿದ್ದಲ್ಲಿ, ನೆಟ್‌ಫ್ಲಿಕ್ಸ್‌ನಂತಹ ಸೇವೆಯನ್ನು ಬಳಸುತ್ತಿದ್ದಲ್ಲಿ ಇವರುಗಳು ಇಂಟರ್ನೆಟ್‌ನ ನಿಧಾನಕ್ಕೆ ಕಾರಣವಾಗಿದ್ದಾರೆ. ಕ್ವಾಲಿಟಿ ಆಫ್ ಸರ್ವೀಸ್ ಅನ್ನು ಬಳಸಿಕೊಂಡು ಈ ತೊಡಕಿನ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ.

ರೇಂಜ್ ಹೆಚ್ಚಿಸುವುದು

ರೇಂಜ್ ಹೆಚ್ಚಿಸುವುದು

ನಿಮ್ಮ ರೂಟರ್ ಹೆಚ್ಚಿನ ದೂರವನ್ನು ಕ್ರಮಿಸುತ್ತಿಲ್ಲ ಎಂದಾದಲ್ಲಿ, ಡಿಐವೈ ಟ್ರಿಕ್‌ಗಳನ್ನು ಬಳಸಿಕೊಂಡು ಅದರ ರೇಂಜ್ ಅನ್ನು ವಿಸ್ತರಿಸಬಹುದಾಗಿದೆ.

ಸಿಗ್ನಲ್‌ಗಳನ್ನು ಬೂಸ್ಟ್ ಮಾಡುವುದು

ಸಿಗ್ನಲ್‌ಗಳನ್ನು ಬೂಸ್ಟ್ ಮಾಡುವುದು

DD-WRT ಫರ್ಮ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ರೂಟರ್ ಹ್ಯಾಕ್ ಮಾಡಿ. ಇದು ಟ್ರಾನ್ಸ್‌ಮೀಟಿಂಗ್ ಪವರ್ ಅನ್ನು ಹೆಚ್ಚಿಸುತ್ತದೆ.

ವೈಫೈ ರಿಪೀಟರ್‌

ವೈಫೈ ರಿಪೀಟರ್‌

ಇದು ನಿಮಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ, ಹಳೆಯ ವೈರ್‌ಲೆಸ್ ರೂಟರ್ ಅನ್ನು ಎಕ್ಸ್‌ಟೆಂಡರ್‌ನಂತೆ ಬಳಸಿಕೊಳ್ಳಬಹುದಾಗಿದೆ.

ರೂಟರ್ ರೀಬೂಟ್

ರೂಟರ್ ರೀಬೂಟ್

ದಿನಕ್ಕೆ ಒಂದು ಬಾರಿ ಅಥವಾ ಆಗಾಗ್ಗೆ ಸ್ವಯಂಚಾಲಿತವಾಗಿ ರೀಬೂಟ್ ಮಾಡಿ. ಹಳೆಯ ಔಟ್‌ಲೆಟ್ ಟೈಮರ್ ಅನ್ನು ಬಳಸಿಕೊಂಡು ಇದನ್ನು ನಿಮಗೆ ಮಾಡಬಹುದಾಗಿದೆ.

ಗಿಜ್‌ಬಾಟ್ ಫೇಸ್‌ಬುಕ್ ಪುಟ

ಗಿಜ್‌ಬಾಟ್ ಫೇಸ್‌ಬುಕ್ ಪುಟ

ಹೆಚ್ಚಿನ ಮಾಹಿತಿಗೆ ಗಿಜ್‌ಬಾಟ್ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡುತ್ತಿರಿhttps://www.facebook.com/GizBotKannada/?ref=hl

Best Mobiles in India

English summary
If you’re plagued by slow speeds, bad reception, and other Wi-Fi issues, here are 10 ways you can power up the Wi-Fi in your home.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X