ಬಿಡುಗಡೆಗೆ ಸಜ್ಜಾದ ವಿವೋ Y100 ಫೋನ್‌; ಹೊಸ ಟ್ರೆಂಡ್‌ ಸೃಷ್ಠಿಸುವುದು ಖಚಿತ!

|

ದೇಶದ ಮೊಬೈಲ್‌ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಥಾನ ಪಡೆದಿರುವ ವಿವೋ ಸಂಸ್ಥೆಯು ಈಗಾಗಲೇ ಹಲವು ಭಿನ್ನ ಶ್ರೇಣಿಯ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಸಂಸ್ಥೆಯು ಇದೀಗ Y ಸರಣಿಯಲ್ಲಿ ಹೊಸದಾಗಿ ಮತ್ತೊಂದು ಮೊಬೈಲ್‌ ಅನ್ನು ಲಾಂಚ್ ಮಾಡಲು ಸಜ್ಜಾಗಿದೆ. ಅದುವೇ ವಿವೋ Y100 (Vivo Y100) ಫೋನ್‌ ಆಗಿದ್ದು, ಈ ಫೋನ್‌ ಮೀಡಿಯಾ ಟೆಕ್‌ Dimensity 900 SoC ಪ್ರೊಸೆಸರ್‌ ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜಾದ ವಿವೋ Y100 ಫೋನ್‌; ಹೊಸ ಟ್ರೆಂಡ್‌ ಸೃಷ್ಠಿಸುವುದು ಖಚಿತ!

ಹೌದು, ವಿವೋ ಕಂಪನಿಯು ನೂತನವಾಗಿ ಸದ್ಯದಲ್ಲೇ ವಿವೋ Y100 (Vivo Y100) ಫೋನ್‌ ಪರಿಚಯಿಸಲು ತಯಾರಾಗಿದೆ. ಈ ಸ್ಮಾರ್ಟ್‌ಫೋನ್ ಪ್ರೀಮಿಯಂ ಶ್ರೇಣಿಯಲ್ಲಿ ಇರಬಹುದು ಎನ್ನಲಾಗಿದ್ದು, ಸಂಸ್ಥೆಯು ಭಾರತದಲ್ಲಿ ವಿವೋ Y100 ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಸಂಸ್ಥೆಯು ಫೋನ್ ಬಿಡುಗಡೆ ದಿನಾಂಕ ತಿಳಿಸಿಲ್ಲ.

ಟಿಪ್‌ಸ್ಟರ್ ಪರಾಸ್ ಗುಗ್ಲಾನಿ ಪ್ರಕಾರ ವಿವೋ Y100 ಫೋನ್‌ ದೇಶದಲ್ಲಿ ಬಿಡುಗಡೆ ಪ್ರಚಾರದ ಸಿದ್ಧತೆಗಳು ಪ್ರಾರಂಭವಾಗಿದೆ ಎಂದಿದ್ದಾರೆ. ಹಾಗೆಯೇ ಟಿಪ್‌ಸ್ಟರ್ ಹಂಚಿಕೊಂಡ ಸ್ಕ್ರೀನ್‌ಶಾಟ್ ಕಂಪನಿಯು ಫೋನ್‌ನ ಮಾರ್ಕೆಟಿಂಗ್ ವೀಡಿಯೊವನ್ನು ಶೀಘ್ರದಲ್ಲೇ ಲಾಂಚ್ ಮಾಡುತ್ತದೆ ಎಂದು ತಿಳಿಸುತ್ತದೆ. ಅಲ್ಲದೇ ಬಹುಶಃ ಈ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಬಿಡುಗಡೆಗೆ ಸಜ್ಜಾದ ವಿವೋ Y100 ಫೋನ್‌; ಹೊಸ ಟ್ರೆಂಡ್‌ ಸೃಷ್ಠಿಸುವುದು ಖಚಿತ!

ವಿವೋ Y100 ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ ಅನ್ನು ಒಳಗೊಂಡಿರುವುದು ಬಹುತೇಕ ಖಚಿತ ಆಗಿದೆ. ಈ ಚಿಪ್‌ಸೆಟ್ 2.4GHz ಗರಿಷ್ಠ ವೇಗ ಪಡೆದಿರುವ ಸಾಧ್ಯತೆ ಇವೆ ಎನ್ನಲಾಗಿದೆ. ಇದರೊಂದಿಗೆ ಆಂಡ್ರಾಯ್ಡ್‌ 13 (Android 13) ಓಎಸ್ ಜೊತೆಗೆ Funtouch OS 13 ಸಪೋರ್ಟ್‌ ಸಹ ಇರಲಿದೆ ಎಂದು ಹೇಳಲಾಗ್ತಿದೆ. ಇನ್ನು ಇದಕ್ಕೆ ಪೂರಕವಾಗಿ 8GB RAM ವೇರಿಯಂಟ್‌ ಆಯ್ಕೆ ಪಡೆದಿರಲಿದೆ.

ಕೆಲವು ಲೀಕ್ ಮಾಹಿತಿ ಪ್ರಕಾರ ವಿವೋ Y100 ಫೋನ್‌ 6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದೆ. ಹಾಗೆಯೇ ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯು 440 ಪಿಕ್ಸೆಲ್‌ ಆಗಿರಲಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಫೋನ್‌ ಬೆಲೆಯ ಬಗ್ಗೆ ಯಾವುದು ಮಾಹಿತಿ ಬಹಿರಂಗವಾಗಿಲ್ಲ. ಅದಾಗ್ಯೂ, ಭಾರತದಲ್ಲಿ ಸುಮಾರು 20,000ರೂ.ಗಳಿಂದ 25,000ರೂ.ಗಳ ಆಸುಪಾಸಿನಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ವಿವೋ Y100 ಫೋನ್‌; ಹೊಸ ಟ್ರೆಂಡ್‌ ಸೃಷ್ಠಿಸುವುದು ಖಚಿತ!

ವಿವೋ Y53t ಸ್ಮಾರ್ಟ್‌ಫೋನ್‌ ಫೀಚರ್ಸ್‌
ಇತ್ತೀಚಿಗೆ ಬಿಡುಗಡೆ ಆಗಿರುವ ವಿವೋ Y53t ಸ್ಮಾರ್ಟ್‌ಫೋನ್‌ ಅಧಿಕ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.51 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯು ವಾಟರ್‌ ಡ್ರಾಪ್‌ ನಾಚ್‌ ವಿನ್ಯಾಸವನ್ನ ಹೊಂದಿದ್ದು, 1500:1 ಡಿಸ್‌ಪ್ಲೇ ಕಾಂಟ್ರಾಸ್ಟ್‌ ಅನುಪಾತವನ್ನ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್‌ 4GB + 128GB ಮತ್ತು 6GB + 128GB ಸ್ಟೋರೇಜ್ ಆಂತರಿಕ ಸಂಗ್ರಹ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂಡಿದೆ.

ವಿವೋ Y53t ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇನ್ನು 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಅಲ್ಲದೇ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 15W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
Vivo Y100 with MediaTek Dimensity 900 SoC Tipped to Launch Soon in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X