ವಿವೋ Y35 5G ಸ್ಮಾರ್ಟ್‌ಫೋನ್ ಲಾಂಚ್; ಮೂರು ವೇರಿಯಂಟ್‌ನಲ್ಲಿ ಲಭ್ಯ
ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪೆನಿಗಳಲ್ಲಿ ಒಂದಾದ ವಿವೋ ಕೈಗೆಟಕುವ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಾ ಬರುತ್ತಿದೆ. ಅದರಲ್ಲೂ ಈ ಫೋನ್ ವಿನ್ಯಾಸ ಹಾಗೂ ಅಧಿಕ ಸಾಮರ್ಥ್ಯದ ಬ್ಯಾಟರಿಯಿಂದಾಗಿ ಭಾರತದಲ್ಲಿ ಬಹುಪಾಲು ಜನರು ಈ ಕಂಪೆನಿಯ ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ. ಇದರ ನಡುವೆ ಈಗ ವಿವೋ ಹೊಸ ವಿವೋ Y35 5G ಸ್ಮಾರ್ಟ್‌ಫೋನ್ (Vivo Y35 5G ) ಅನ್ನು ಅನಾವರಣ ಮಾಡಿದೆ.

ಹೌದು, ವಿವೋ ಕಂಪೆನಿಯು ಈ ವರ್ಷದ ಆರಂಭದಲ್ಲಿ ಭಾರತವೂ ಸೇರಿದಂತೆ ಜಾಗತಿಕವಾಗಿ ವಿವೋ Y35 ನ 4G ವೆರಿಯಂಟ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿತ್ತು. ಇದೀಗ 5G ವೇರಿಯಂಟ್‌ನಲ್ಲಿ ಈ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 700 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಜೊತೆಗೆ 8GB RAM ನೊಂದಿಗೆ ಒಟ್ಟಾರೆ ಮೂರು ವೇರಿಯಂಟ್‌ನಲ್ಲಿ ಲಭ್ಯವಾಗಲಿದೆ. ಹಾಗಿದ್ರೆ, ಇದರ ಬೆಲೆ ಹಾಗೂ ಇನ್ನಿತರೆ ಫೀಚರ್ಸ್ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ
ಈ ಹೊಸ ವಿವೋ Y35 5G ಸ್ಮಾರ್ಟ್‌ಫೋನ್ ಟಿಯರ್‌ಡ್ರಾಪ್ ನಾಚ್‌ನೊಂದಿಗೆ 6.51 ಇಂಚಿನ IPS ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 720 x 1600 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ 60Hz ರಿಫ್ರೆಶ್ ರೇಟ್ ಹಾಗೂ 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಈ ಫೋನ್ ನೀಡಲಿದೆ. ಜೊತೆಗೆ 20: 9 ಆಕಾರ ಅನುಪಾತ, 1500: 1 ಕಾಂಟ್ರಾಸ್ಟ್ ಅನುಪಾತ, 269 ppi ಪಿಕ್ಸೆಲ್ ಸಾಂದ್ರತೆ ಈ ಡಿಸ್‌ಪ್ಲೇನಲ್ಲಿದೆ.

ಡೈಮೆನ್ಸಿಟಿ 700 ಚಿಪ್‌ಸೆಟ್ ಪ್ರೊಸೆಸರ್
ವಿವೋ Y35 5G ಫೋನ್ ಆಕ್ಟಾ ಕೋರ್ ಡೈಮೆನ್ಸಿಟಿ 700 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್ ಆಧಾರಿತ ಒರಿಜಿನ್ಓಎಸ್ ಓಷನ್ ಯುಐ ನಲ್ಲಿ ರನ್ ಆಗಲಿದೆ. ಇನ್ನು 4GB RAM, 6 GB RAM ಹಾಗೂ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಮೂರು ವೇರಿಯಂಟ್ ಆಯ್ಕೆ ಇದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಇಂಟರ್ನಲ್ ಸ್ಟೋರೇಜ್ ಅನ್ನು ಇನ್ನೂ ಹೆಚ್ಚಿಗೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಡ್ಯುಯಲ್ ಕ್ಯಾಮೆರಾ ರಚನೆ
ವಿವೋದ ಈ ಹೊಸ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2MP ಮ್ಯಾಕ್ರೋ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಶ್ ಆಯ್ಕೆ ಇದ್ದು, ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಹಾಗೂ ಇತರೆ
ವಿವೋ Y35 ಸ್ಮಾರ್ಟ್‌ಫೋನ್ 18W ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ವೈ-ಫೈ, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್, ಯುಎಸ್‌ಬಿ-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜಾಕ್ ಕನೆಕ್ಟಿವಿಟಿ ಆಯ್ಕೆಯ ಜೊತೆಗೆ ಸೆಕ್ಯೂರಿಟಿಗಾಗಿ ಸೈಡ್ ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಹೊಂದಿದೆ.

ಬೆಲೆ ಹಾಗೂ ಲಭ್ಯತೆ
ಈ 5G ಸ್ಮಾರ್ಟ್‌ಫೋನ್ ಅನ್ನು ಮೂರು ವಿಭಿನ್ನ RAM ವೇರಿಯಂಟ್‌ನಲ್ಲಿ ಚೀನಾದಲ್ಲಿ ಮಾತ್ರ ಲಾಂಚ್ ಮಾಡಲಾಗಿದೆ. ಅದರಲ್ಲಿ 4GB RAM ಹೊಂದಿರುವ ಫೋನ್‌ಗೆ ಸುಮಾರು 14,000 ರೂ. ಗಳಾಗಿದ್ದು, 6 GB RAM ಫೋನ್‌ಗೆ 16,500 ರೂ. ಹಾಗೂ 8 GB RAM ಫೋನ್‌ಗೆ 17,700 ರೂ. ಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಈ ಫೋನ್ ಕಪ್ಪು, ನೀಲಿ ಮತ್ತು ಚಿನ್ನದ ಬಣ್ಣದ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಭಾರತವೂ ಸೇರಿದಂತೆ ಜಾಗತಿಕವಾಗಿ ಈ ಫೋನ್ ಯಾವಾಗ ಜನರ ಕೈ ಸೇರಲಿದೆ ಎಂಬುದನ್ನು ಕಂಪೆನಿ ಇನ್ನೂ ಬಹಿರಂಗಪಡಿಸಿಲ್ಲ.


Click it and Unblock the Notifications








