ಸ್ಮಾರ್ಟ್‌ಫೋನಲ್ಲಿ ಅರ್ಜಿ ತುಂಬಿ: ಚುನಾವಣಾ ನೋಂದಣಿ ಪ್ರಕ್ರಿಯೆ ಸುಲಭವಾಗಿಸಿ

Posted By:


ಇನ್ನು ಮುಂದೆ ಸ್ಮಾರ್ಟ್‌ಫೋನಲ್ಲೇ ಮತದಾರರ ಪಟ್ಟಿಯ ಅರ್ಜಿಯನ್ನು ತುಂಬಿ, ಸುಲಭವಾಗಿ ಚುನಾವಣೆಯ ನೋಂದಣಿ ಪ್ರಕ್ರಿಯೆಯನ್ನು ಮುಗಿಸಬಹುದು. ಆಂಡ್ರಾಯ್ಡ್‌ ಬಳಕೆದಾರರಿಗೆ ಚುನಾವಣಾ ಕೇಂದ್ರದಲ್ಲಿ ನೋಂದಣಿ ಕೆಲಸವನ್ನು ಕಡಿಮೆ ಮಾಡಲು ಹೊಸ ಆಪ್‌‌ ಆಂಡ್ರಾಯ್ಡ್‌ ಸ್ಟೋರ್‌ನಲ್ಲಿ ಲಭ್ಯವಿದೆ.

ಹೊಸ ಮತದಾರರ ನೋಂದಣಿ ಸಮಯದಲ್ಲಿ ಬಳಕೆದಾರರು ಒಂದು ಅರ್ಜಿ‌ಯ ಫಾರ್ಮ್‌ನಲ್ಲಿ ತಮ್ಮ ಎಲ್ಲಾ ಮಾಹಿತಿಗಳನ್ನು ತುಂಬಿ ನೋಂದಣಿ ಕಚೇರಿಗೆ ಆ ಆರ್ಜಿಯನ್ನು ಸಲ್ಲಿಸಬೇಕಾಗಿತ್ತು. ಅದೇ ಅರ್ಜಿ‌ ತುಂಬುವ ಕೆಲಸವನ್ನು ಈ ಆಪ್‌ನಲ್ಲಿ ಮಾಡಬಹುದು. ಈ ಆಪ್‌ ಇನ್‌ಸ್ಟಾಲ್‌ ಮಾಡಿಕೊಂಡು ಎಲ್ಲಾ ಮಾಹಿತಿಗಳು ದಾಖಲಿಸಿ,ಕೊನೆಗೆ ನಿಮ್ಮ ಇ ಮೇಲ್‌ ಐಡಿಯನ್ನು ದಾಖಲಿಸಿದ್ದರೆ, ನಿಮ್ಮ ಇ ಮೇಲ್‌ಗೆ ನೀವು ದಾಖಲಿಸಿದ ಚುನಾವಣೆಯ ಮಾಹಿತಿಯ ಅರ್ಜಿ‌ ಮೇಲ್‌ ಬರುತ್ತದೆ.ಈ ಮೇಲ್‌ನ್ನು ಪ್ರಿಂಟ್‌ ತೆಗೆದು ನಿಮ್ಮ ಕ್ಷೇತ್ರದ ಚುನಾವಣಾ ನೋಂದಣಿ ಕಚೇರಿಗೆ ನೀಡಿ ಕಡಿಮೆ ಸಮಯದಲ್ಲಿ ಮತದರಾರರ ನೋಂದಣಿ ಕೆಲಸ ಮುಗಿಸಬಹುದಾಗಿದೆ.

 ಸ್ಮಾರ್ಟ್‌ಫೋನಲ್ಲಿ ಅರ್ಜಿ ತುಂಬಿ: ಚುನಾವಣಾ ನೋಂದಣಿ ಪ್ರಕ್ರಿಯೆ ಸುಲಭವಾಗಿಸಿ

ಒವಿಬಿಐ(Overseas Volunteers For Better India) ಸಂಘಟನೆಯವರು ಈ ಆಪ್‌ನ್ನು ಸಿದ್ದಪಡಿಸಿದ್ದು, ಈ ಆಪ್‌ಗೆ ಬಳಕೆದಾರರಿಂದು ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.

2014ರ ಲೋಕಸಭಾ ಚುನಾವಣೆ ಇಂಟರ್‌ನೆಟ್‌ ಭಾರೀ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಈಗಾಗಲೇ ಗೂಗಲ್‌ ಮತ್ತು ಫೇಸ್‌ಬುಕ್‌ ಜನರಲ್ಲಿ ಚುನಾವಣಾ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದೆ. ಗೂಗಲ್‌ ಕ್ಷಣ ಕ್ಷಣದ ಚುನಾವಣಾ ಮಾಹಿತಿಗಾಗಿ ಹಿಂದಿ ಮತ್ತು ಇಂಗ್ಲಿಷ್‌‌ ಭಾಷೆಯಲ್ಲಿರುವ ಹೊಸ ವೆಬ್‌ಸೈಟ್‌ನ್ನು ಆರಂಭಿಸಿದ್ದರೆ, ಫೇಸ್‌ಬುಕ್‌ ಅಭ್ಯರ್ಥಿ‌ಗಳ ಸಂಪೂರ್ಣ ಮಾಹಿತಿಯನ್ನು ಜನರ ಮೊಬೈಲ್‌ಗೆ ಮೆಸೇಜ್‌ ರೂಪದಲ್ಲಿ ಉಚಿತವಾಗಿ ತಲುಪಿಸುವುದಾಗಿ ಹೇಳಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot