ವಾಟ್ಸಾಪ್‌ನಲ್ಲಿ ಸ್ವೀಕರಿಸಿದ ವೀಡಿಯೊ ಡೌನ್‌ಲೋಡ್‌ ಆಗುವ ಮೊದಲೇ ನೋಡುವುದು ಹೇಗೆ?

ವಾಟ್ಸಾಪ್‌ ವೀಡಿಯೊ ಕರೆ ಫೀಚರ್‌ ಅನ್ನು ಬಿಡುಗಡೆ ಮಾಡಿ ಇನ್ನೂ ಒಂದು ವಾರವು ಕಳೆದಿಲ್ಲ. ಆದರೆ ಈಗಾಗಲೇ ಇನ್ನೊಂದು ಫೀಚರ್‌ ಅನ್ನು ತನ್ನ ಬೀಟಾ ವರ್ಸನ್‌ ಆಪ್‌ನಲ್ಲಿ ಬಿಡುಗಡೆ ಮಾಡಿದೆ.

By Suneel
|

ವಾಟ್ಸಾಪ್‌ ಒಂದಾದನಂತರ ಒಂದು ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಮೆಸೇಜಿಂಗ್ ಆಪ್‌ಗಳ ಅನುಭವ ಶೈಲಿಯನ್ನು ಹೆಚ್ಚು ಹೆಚ್ಚು ಬದಲಾವಣೆ ಮಾಡುವಲ್ಲಿ ವಾಟ್ಸಾಪ್ ಇತರೆ ಆಪ್‌ಗಳಿಗಿಂತ ಮುಂಚೂಣಿಯಲ್ಲಿದೆ. ಆದ್ದರಿಂದ ಇಂದು ಪ್ರಪಂಚದಲ್ಲೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಿಶಾಲ ಆಪ್‌ ವಾಟ್ಸಾಪ್ ಆಗಿದೆ.

ವಾಟ್ಸಾಪ್‌ನಲ್ಲಿ ಸ್ವೀಕರಿಸಿದ ವೀಡಿಯೊ ಡೌನ್‌ಲೋಡ್‌ ಆಗುವ ಮೊದಲೇ ನೋಡುವುದು ಹೇಗೆ?

ವಾಟ್ಸಾಪ್ ಇತ್ತೀಚೆಗೆ ತಾನೆ ತನ್ನ ಬಳಕೆದಾರರ ಬಹುನಿರೀಕ್ಷಿತ ವೀಡಿಯೊ ಕಾಲಿಂಗ್ ಫೀಚರ್ ಅನ್ನು ಬಿಡುಗಡೆ ಮಾಡಿದೆ. ವಾಟ್ಸಾಪ್‌ ಈ ಫೀಚರ್‌ ಅನ್ನು ಬಿಡುಗಡೆ ಮಾಡಿ ಇನ್ನೂ ಒಂದು ವಾರವು ಕಳೆದಿಲ್ಲ. ಆದರೆ ಈಗಾಗಲೇ ಇನ್ನೊಂದು ಫೀಚರ್‌ ಅನ್ನು ತನ್ನ ಬೀಟಾ ವರ್ಸನ್‌ ಆಪ್‌ನಲ್ಲಿ ಬಿಡುಗಡೆ ಮಾಡಿದೆ.

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಲಾಂಚ್: ಒಂದೇ ಕ್ಲಿಕ್‌ನಿಂದ ಫೀಚರ್ ಪಡೆಯಿರಿ!

ವಾಟ್ಸಾಪ್‌ನಲ್ಲಿ ಪ್ರಸ್ತುತದಲ್ಲಿ ಯಾವುದೇ ವೀಡಿಯೊಗಳನ್ನು ನಿಮ್ಮ ಸ್ನೇಹಿತರಿಂದ ಸ್ವೀಕರಿಸಿದಲ್ಲಿ ಅಥವಾ ವಾಟ್ಸಾಪ್‌ನಲ್ಲಿ ಹಲವು ಗ್ರೂಪ್‌ಗಳಿಂದ ಸ್ವೀಕರಿಸಿದಲ್ಲಿ ಕೇವಲ ಥಂಬ್ನೇಲ್ ಮತ್ತು ವೀಡಿಯೊಗಳನ್ನು ಡೌನ್‌ಲೋಡ್‌ ಮಾಡಲು ಆಪ್ಶನ್‌ ಅನ್ನು ಪಡೆಯುತ್ತೀರಿ. ಈ ಆಪ್ಶನ್‌ಗಳು ನೀವು ಮೀಡಿಯಾಗಳ ಆಟೋ-ಡೌನ್‌ಲೋಡ್‌ ಆಯ್ಕೆ ಮಾಡಿಲ್ಲದಿದ್ದಲ್ಲಿ ಪ್ರದರ್ಶನವಾಗುತ್ತವೆ. ವೀಡಿಯೊ ಸಂಪೂರ್ಣ ಡೌನ್‌ಲೋಡ್ ಆದ ನಂತರ ಮಾತ್ರ ವೀಡಿಯೊ ನೋಡಲು ಸಾಧ್ಯ. ವೀಡಿಯೊ ಡೌನ್‌ಲೋಡ್‌ ಮಾಡಿದ ಮೇಲೆ ಪುನಃ ಅದೇ ವೀಡಿಯೊ ಡಿಲೀಟ್ ಮಾಡಲು ಗ್ಯಾಲರಿಗೆ ಹೋಗಿ ಹುಡುಕಾಡಿ ಡಿಲೀಟ್ ಮಾಡಬೇಕು. ಸ್ವಲ್ಪ ಎಲ್ಲರಿಗೂ ರಿಸ್ಕ್‌ ಆದ ಕೆಲಸವಿದು. ಆದ್ರೆ ಇನ್ಮುಂದೆ ಬಹುಬೇಗ ತೀರ್ಮಾನ ಕೈಗೊಳ್ಳಬಹುದು.

ವಾಟ್ಸಾಪ್‌ನಲ್ಲಿ ಸ್ವೀಕರಿಸಿದ ವೀಡಿಯೊ ಡೌನ್‌ಲೋಡ್‌ ಆಗುವ ಮೊದಲೇ ನೋಡುವುದು ಹೇಗೆ?

ವಾಟ್ಸಾಪ್‌ನ ಲೇಟೆಸ್ಟ್ ಬೀಟಾ ವರ್ಸನ್‌ ಪ್ರಕಾರ, ವಾಟ್ಸಾಪ್‌ನಲ್ಲಿ ಸ್ವೀಕರಿಸಿದ ವೀಡಿಯೊಗಳು ಡೌನ್‌ಲೋಡ್ ಆಗುವ ಮೊದಲೇ ವೈಫೈ ಅಥವಾ ಡಾಟಾ ಸಹಾಯದಿಂದ ನೋಡಬಹುದು. ಅಲ್ಲದೇ ವಾಟ್ಸಾಪ್ ವೀಡಿಯೊ ಬ್ಯಾಗ್ರೌಂಡ್‌ನಲ್ಲಿ ಡೌನ್‌ಲೋಡ್ ಆಗುತ್ತಿರುತ್ತದೆ. ಇದೊಂದು ಕುತೂಹಲಕಾರಿ ಫೀಚರ್ ಆಗಿದ್ದು, ವೀಡಿಯೊವನ್ನು ಪೂರ್ಣವಾಗಿ ಡೌನ್‌ಲೋಡ್ ಮಾಡಬೇಕೆ ಅಥವಾ ಬೇಡವೇ ಎಂದು ಶೀಘ್ರದಲ್ಲಿ ತೀರ್ಮಾನಿಸಬಹುದು.

ವಾಟ್ಸಾಪ್‌ನಲ್ಲಿ ಸ್ವೀಕರಿಸಿದ ವೀಡಿಯೊ ಡೌನ್‌ಲೋಡ್‌ ಆಗುವ ಮೊದಲೇ ನೋಡುವುದು ಹೇಗೆ?

ಪ್ರಸ್ತುತದಲ್ಲಿ ವಾಟ್ಸಾಪ್‌ನಲ್ಲಿ ಸ್ವೀಕರಿಸಿದ ವೀಡಿಯೊ ಮೇಲೆ ಡೌನ್‌ಲೋಡ್‌ ಬಟನ್ ಪ್ರದರ್ಶನವಾಗುತ್ತದೆ. ಆದರೆ ಬೀಟಾ ಆಪ್‌ನಲ್ಲಿ ವೀಡಿಯೊ ಪ್ಲೇ ಐಕಾನ್ ಪ್ರದರ್ಶನವಾಗುತ್ತದೆ. ವೀಡಿಯೊ ಪ್ಲೇ ಐಕಾನ್ ಟ್ಯಾಪ್ ಮಾಡುವುದರಿಂದ ವಾಟ್ಸಾಪ್‌ನಲ್ಲಿಯೇ ವೀಡಿಯೊ ಪ್ಲೇ ಆಗುತ್ತದೆ ಹಾಗೂ ಜೊತೆಯಲ್ಲೇ ಬ್ಯಾಗ್ರೌಂಡ್‌ನಲ್ಲಿ ವೀಡಿಯೊ ಡೌನ್‌ಲೋಡ್‌ ಆಗುತ್ತದೆ. ವೀಡಿಯೊ ಬಫರ್ ಆಗುವುದನ್ನು ಯೂಟ್ಯೂಬ್‌ನಲ್ಲಿ ಬಫರ್ ಆಗುವಂತೆ ನೋಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಟ್ಸಾಪ್‌ನಲ್ಲಿ ಸ್ವೀಕರಿಸಿದ ವೀಡಿಯೊ ಡೌನ್‌ಲೋಡ್‌ ಆಗುವ ಮೊದಲೇ ನೋಡುವುದು ಹೇಗೆ?

ಈ ಫೀಚರ್ ಪ್ರಸ್ತುತದಲ್ಲಿ ಕೇವಲ ಆಂಡ್ರಾಯ್ಡ್ ಬೀಟಾ ಬಿಲ್ಡ್ ಡಿವೈಸ್‌ಗಳಿಗೆ ಲಭ್ಯ. ಈ ಫೀಚರ್ ಕೇವಲ ವಾಟ್ಸಾಪ್ ಬೀಟಾ ಟೆಸ್ಟರ್‌ಗಳಿಂದ ಸ್ವೀಕರಿಸಿದ ವೀಡಿಯೊಗಳಲ್ಲಿ ಮಾತ್ರ ವರ್ಕ್‌ ಆಗುತ್ತದೆ. ಸಾಮಾನ್ಯ ವಾಟ್ಸಾಪ್ ಆಪ್ ಬಳಕೆದಾರರಿಂದ ವೀಡಿಯೊ ಸ್ವೀಕರಿಸಿದಲ್ಲಿ , ಪ್ಲೇ ಆಪ್ಶನ್‌ ಬದಲು, ಎಂದಿನಂತೆ ಡೌನ್‌ಲೋಡ್ ಆಪ್ಶನ್ ಮಾತ್ರ ಕಾಣುತ್ತದೆ.

ವಾಟ್ಸಾಪ್‌ನಲ್ಲಿ ಹಣ ಸೆಂಡ್ ಮಾಡುವುದು ಹೇಗೆ?

ರೆಗ್ಯೂಲರ್ ವಾಟ್ಸಾಪ್ ಬಳಕೆದಾರರಿಗೆ ಈ ಫೀಚರ್‌ ಅನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಅಧಿಕೃತವಾಗಿ ತಿಳಿದುಬಂದಿಲ್ಲ.

ವಾಟ್ಸಾಪ್‌ನಲ್ಲಿ ಸ್ವೀಕರಿಸಿದ ವೀಡಿಯೊ ಡೌನ್‌ಲೋಡ್‌ ಆಗುವ ಮೊದಲೇ ನೋಡುವುದು ಹೇಗೆ?

ವಾಟ್ಸಾಪ್‌ನ ಲೇಟೆಸ್ಟ್ ಬೀಟಾ ವರ್ಸನ್ ಆಪ್‌ ಡೌನ್‌ಲೋಡ್‌ ಹೇಗೆ?
ವಾಟ್ಸಾಪ್‌ನ ಲೇಟೆಸ್ಟ್ ಬೀಟಾ ವರ್ಸನ್ ಆಪ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಲು, ವಾಟ್ಸಾಪ್‌ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡಿ, ವಾಟ್ಸಾಪ್‌ ಆಪ್‌ ಆಯ್ಕೆ ಮಾಡಿ. ಆಪ್‌'ನಲ್ಲಿ 'Update' ಆಪ್ಶನ್ ಪ್ರದರ್ಶನವಾದರೆ ಅದನ್ನು ಟ್ಯಾಪ್‌ ಮಾಡಿ. ನಿಮ್ಮ ಡಿವೈಸ್ ಆಂಡ್ರಾಯ್ಡ್ ಬೀಟಾ ಬಿಲ್ಡ್ ಆಗಿದ್ದಲ್ಲಿ, ಲೇಟೆಸ್ಟ್ ವರ್ಸನ್‌ ಡೌನ್‌ಲೋಡ್‌ ಆಗುತ್ತದೆ. ನಂತರ ಇನ್‌ಸ್ಟಾಲ್‌ ಆಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
WhatsApp Android beta’s latest feature lets you stream shared video, as it is downloading. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X