Subscribe to Gizbot

"ವಾಟ್ಸಾಪ್‌ ಗೋಲ್ಡ್‌" ಸ್ಕ್ಯಾಮ್: ವಾಟ್ಸಾಪ್‌ ಪ್ರಿಯರೇ ಎಚ್ಚರ!!

Written By:

ವಾಟ್ಸಾಪ್‌ ಪ್ರಿಯರಿಗೆಲ್ಲಾ ಒಂದು ಕಹಿ ಸುದ್ದಿ. ವಾಟ್ಸಾಪ್‌ನ ಇತ್ತೀಚಿನ 'ವಿಶೇಷ' ಅಪ್ಲಿಕೇಶನ್‌ ಆವೃತ್ತಿಯೊಂದು ಮಾಲ್‌ವೇರ್‌ ಹೊಂದಿದ್ದು, ಸೈಬರ್‌ ಅಪರಾಧಿಗಳು ಅಪ್ಲಿಕೇಶನ್‌ ಮೂಲಕ ಬಳಕೆದಾರರ ಡೇಟಾ ಕದ್ದಾಲಿಸಬಹುದಂತೆ. ಇದರಲ್ಲೂ ಚಾಣಕ್ಯ ಬುದ್ದಿ ತೋರಿಸಿರುವ ಸೈಬರ್‌ ಅಪರಾಧಿಗಳು ವಿಶೇಷ ಫೀಚರ್‌ಗಳನ್ನು ನೀಡುವ ಭರವಸೆಯೊಂದಿಗೆ ಆಪ್‌ ಡೌನ್‌ಲೋಡ್‌ ಮಾಡಲು ಆಕರ್ಷಿಸುತ್ತಿದ್ದಾರೆ.

ಹೆಚ್ಚು ವೀಕ್ಷಣೆ ಪಡೆದ ವಾಟ್ಸಾಪ್‌ ವೈರಲ್‌ ವೀಡಿಯೋ!

ಅಂದಹಾಗೆ ಬಹುಸಂಖ್ಯಾತ ವಾಟ್ಸಾಪ್‌(WhatsApp) ಬಳಕೆದಾರರು ಮೊಬೈಲ್‌ ಡಿವೈಸ್‌ಗಳನ್ನು ರೀಸೆಟ್‌ ಮಾಡಿದಾಗ, ಹೊಸ ಡಿವೈಸ್‌ ತೆಗೆದುಕೊಂಡವರು ಸಹ ವಂಚಿತ ವಾಟ್ಸಾಪ್ ಆಪ್‌ ಇನ್‌ಸ್ಟಾಲ್‌ ಮಾಡುವ ಸಾಧ್ಯತೆಗಳಿದ್ದು, ವಾಟ್ಸಾಪ್‌ ಪ್ರಿಯುರು ಈ ಆಪ್‌ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಎಲ್ಲರ ಸ್ಟೇಟಸ್ ಚೇಂಜ್‌ ಮಾಡೋ 12 ವಾಟ್ಸಾಪ್‌ ಸ್ಟೇಟಸ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್‌ ಗೋಲ್ಡ್‌

1

ವಾಟ್ಸಾಪ್‌ ಬಳಕೆದಾರರ ಗಮನಸೆಳೆಯಲು ಸೈಬರ್ ಮೋಸಗಾರರರು "ವಾಟ್ಸಾಪ್‌ ಗೋಲ್ಡ್‌" ಅಪ್ಲಿಕೇಶನ್‌ ವಿಶೇಷವಾಗಿದ್ದು ಇದನ್ನು ಡೌನ್‌ಮಾಡಿಕೊಳ್ಳಿ ಎಂದು ನಂಬಿಸುತ್ತಿದ್ದಾರೆ. ಅಂತು ಹೆಸರಲ್ಲೇ ಗೋಲ್ಡ್‌ ತೋರಿಸುತ್ತಿರುವುದರಿಂದ ಕೆಲವರು ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳುವಲ್ಲಿ ಸಂಶಯವಿಲ್ಲ. ಆದರೆ ಎಚ್ಚರ.

ಹಲವರಿಗೆ ಮೆಸೇಜ್‌

2

ಬಹುಸಂಖ್ಯಾತ ಅಪ್ಲಿಕೇಶನ್‌ ಬಳಕೆದಾರರು ಮೆಸೇಜ್‌ ಸ್ವೀಕರಿಸುತ್ತಿದ್ದು. ಮೆಸೇಜ್‌ನಲ್ಲಿ 'ವಾಟ್ಸಾಪ್‌ ಗೋಲ್ಡ್‌" ಸೇವೆಗಾಗಿ ವಾಟ್ಸಾಪ್‌ ಗೋಲ್ಡ್‌ ವೆಬ್‌ಸೈಟ್‌ಗೆ ಬೇಟಿ ನೀಡಿ ಎಂದು ವೆಬ್‌ಸೈಟ್‌ ಲಿಂಕ್‌ ಅನ್ನು ಸಹ ನೀಡಲಾಗುತ್ತಿದೆ ಎಂದು ಅಪ್ಲಿಕೇಶನ್‌ ಬಳಕೆದಾರರು ಹೇಳಿದ್ದಾರೆ.

ವಾಟ್ಸಾಪ್‌ ಗೋಲ್ಡ್‌ ಫೀಚರ್‌ಗಳು

3

ಸೈಬರ್‌ ಮೋಸಗಾರರು 'ವಾಟ್ಸಾಪ್‌ ಗೋಲ್ಡ್‌' ಇನ್‌ಸ್ಟಾಲ್‌ ಮಾಡಿಕೊಳ್ಳುವಂತೆ ಪ್ರೇರೇಪಿಸಲು "ಈ ಆಪ್ ಈ ಹಿಂದೆ ಕೇವಲ ಟಾಪ್‌ ಸೆಲೆಬ್ರಿಟಿಗಳಿಗೆ ಮಾತ್ರ ಇತ್ತು. ಈಗ ಇತರರಿಗೂ ನೀಡಲಾಗತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ವಿಶೇಷ ಎಮೋಜಿ, ವೀಡಿಯೋ ಕರೆ, 100 ಚಿತ್ರಗಳನ್ನು ಒಮ್ಮೆಯೇ ಕಳುಹಿಸುವ ಫೀಚರ್‌, ಸೆಕ್ಯೂರಿಟಿ ಫೀಚರ್‌, ಇತರೆ ಹಲವು ವಿಶೇಷ ಆಯ್ಕೆಗಳನ್ನು ನೀಡಲಾಗುತ್ತಿದೆ ಎಂದಿದ್ದಾರೆ.

ಸೈಬರ್‌ ಅಪರಾಧಿಗಳು

4

ಅಂದಹಾಗೆ ವಾಟ್ಸಾಪ್‌ನ ಹುಚ್ಚು ಪ್ರಿಯರು ಎನಾದರೂ ಇದ್ದರೆ ಇದನ್ನು ನಂಬಬೇಡಿ. 'ವಾಟ್ಸಾಪ್‌ ಗೋಲ್ಡ್‌' ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವುದರಿಂದ ಸಂಪೂರ್ಣ ಮೊಬೈಲ್‌ಗೆ ಸಮಸ್ಯೆ ಆಗುವುದರ ಜೊತೆಗೆ ಸೈಬರ್‌ ಅಪರಾಧಿಗಳು ನಿಮ್ಮ ಡೇಟಾ ಕದ್ದಾಲಿಸಬಹುದು ಹಾಗೂ ನಿಮ್ಮ ಚಟುವಟಿಕೆಗಳನ್ನು ಹಿಂಬಾಲಿಸಬಹುದು ಅಥವಾ ಬ್ಯಾಂಕ್‌ ಮಾಹಿತಿಗಳನ್ನು ಸಹ ಪಡೆಯಬಹುದಾಗಿದೆ.

ಇತರೆ ಹೆಸರು

5

ಇತ್ತೀಚೆಗೆ 'ವಾಟ್ಸಾಪ್‌ ಗೋಲ್ಡ್‌' ಎಂದು ಮೆಸೇಜ್‌ ಪ್ರವಾಹ ಇದ್ದದ್ದು, ಈಗ ವಿವಿಧ ರೂಪಗಳನ್ನು ಸ್ಕ್ಯಾಮ್‌ ತೆಗೆದುಕೊಂಡಿದೆ. ಕೆಲವು ವೇಳೆ "ವಾಟ್ಸಾಪ್‌ ಪ್ಲಸ್" ಎಂದು ಸಹ ಮೆಸೇಜ್‌ ಬರಬಹುದು ಎಚ್ಚರ.

ವಾಟ್ಸಾಪ್‌

6

ವಾಸ್ತವ ವಾಟ್ಸಾಪ್ ಬಳಕೆದಾರರು ಡಿವೈಸ್‌ನಲ್ಲಿ ಅನಧಿಕೃತ ಮಾಲ್‌ವೇರ್‌ ಸಾಫ್ಟ್‌ವೇರ್‌ಗಳೇನಾದರೂ ಇದ್ದರೆ ಸ್ವಯಂಚಾಲಿತವಾಗಿ ವಾಟ್ಸಾಪ್‌ ಆ ಬಳಕೆದಾರರನ್ನ ಬ್ಯಾನ್‌ ಮಾಡುತ್ತದಂತೆ. ಅಲ್ಲದೇ " 'ವಾಟ್ಸಾಪ್‌ ಪ್ಲಸ್‌" ಒಂದು ಅಪ್ಲಿಕೇಶನ್‌ ಇರಬಹುದು, ಆದರೆ ಅದನ್ನು ವಾಟ್ಸಾಪ್ ಅಭಿವೃದ್ದಿ ಪಡಿಸಿಲ್ಲ" ಎಂದು ವಾಟ್ಸಾಪ್‌ ಹೇಳಿದೆ.

 ಎಚ್ಚರ ನೀಡಿದ ವಾಟ್ಸಾಪ್‌

7

"ವಾಟ್ಸಾಪ್‌ ನೊಂದಿಗೆ "ವಾಟ್ಸಾಪ್‌ ಪ್ಲಸ್‌" ಅಭಿವೃದ್ದಿಗಾರರ ಯಾವುದೇ ಸಂಬಂಧ ಇಲ್ಲ. ಅಲ್ಲದೇ ವಾಟ್ಸಾಪ್‌ ಪ್ಲಸ್‌ ಅನ್ನು ನಾವು ಪ್ರೇರೇಪಿಸುವುದಿಲ್ಲ" ಎಂದು ವಾಟ್ಸಾಪ್‌ ಹೇಳಿದೆ.

ನಿಮ್ಮ ವಯಕ್ತಿಕ ಮಾಹಿತಿ ಬಯಲು

8

ಸ್ಕ್ಯಾಮ್‌ "ವಾಟ್ಸಾಪ್‌ ಗೋಲ್ಡ್‌" ಅಪ್ಲಿಕೇಶನ್‌ ಬಳಕೆದಾರರ ಎಲ್ಲಾ ವಯಕ್ತಿಕ ಮಾಹಿತಿಗಳನ್ನು ಮೂರನೇ ವ್ಯಕ್ತಿಗೆ ಅರಿವಿಲ್ಲದಂತೆ ನೀಡಬಹಹುದು ಎನ್ನಲಾಗಿದೆ.

ಗೂಗಲ್‌ ಪ್ಲೇ ಸ್ಟೋರ್‌

9

"ವಾಟ್ಸಾಪ್‌ ಗೋಲ್ಡ್‌' ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿರುವವರು ತಕ್ಷಣ ಅದನ್ನು ಅನ್‌ಇನ್‌ಸ್ಟಾಲ್‌ ಮಾಡಿ. ಎಲ್ಲಾ ಮಸೇಜ್‌ಗಳನ್ನು ಡಿಲೀಟ್‌ ಮಾಡಿ. ಇನ್ನುಮುಂದೆ ವಾಟ್ಸಾಪ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವವರು ಕೇವಲ 'ಗೂಗಲ್‌ ಪ್ಲೇ ಸ್ಟೋರ್‌'ನಿಂದ ಮಾತ್ರ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿರಿ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

ಎಲ್ಲರ ಸ್ಟೇಟಸ್ ಚೇಂಜ್‌ ಮಾಡೋ 12 ವಾಟ್ಸಾಪ್‌ ಸ್ಟೇಟಸ್‌ಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
WhatsApp Gold: Scammers trick mobile phone users into downloading malware. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot