ಶೀಘ್ರವೇ ಹಳೆ ಪೋನುಗಳಲ್ಲಿ ವಾಟ್ಸಪ್ ಸ್ಥಗಿತಗೊಳ್ಳಲಿದೆ..!

Written By:

ಸೋಶಿಯಲ್ ಮೇಸೆಂಜಿಗ್ ಆಪ್ ಗಳಲ್ಲಿ ಹೊಸ ಇತಿಹಾಸವನ್ನೇ ಬರೆದಿದ್ದ ವಾಟ್ಸಪ್ ಇನ್ನು ಕೆಲವೇ ದಿನಗಳಲ್ಲಿ ಹಳೆಯ ಆಂಡ್ರಾಯ್ಡ್, ಐಪೋನ್ ಮತ್ತು ವಿಂಡೋಸ್ ಪೋನುಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಕಂಪನಿ ಘೋಷಣೆ ಮಾಡಿದೆ.

ಶೀಘ್ರವೇ ಹಳೆ ಪೋನುಗಳಲ್ಲಿ ವಾಟ್ಸಪ್ ಸ್ಥಗಿತಗೊಳ್ಳಲಿದೆ..!

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಕುರಿತ ಸಂಪೂರ್ಣ ವಿವರ

ಹೊಸ ವರ್ಷದ ಆರಂಭದಿಂದಲೇ ಹಲವು ಹಳೆಯ ಪೋನ್ ಗಳಲ್ಲಿ ವಾಟ್ಸಪ್ ಕಾರ್ಯಚರಣೆ ಸ್ಥಗಿತಗೊಂಡಿದ್ದು, ನೋಕಿಯಾ ಮತ್ತು ಬ್ಲಾಕ್ ಬೆರಿಯ ಸಿಂಬಿಯನ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಪೋನುಗಳು ಮಾತ್ರ ಜೂನ್ 2017 ವರೆಗೆ ಕಾರ್ಯ ನಿರ್ವಹಿಸಲಿವೆ ನಂತರ ಅವುಗಳಲ್ಲೂ ವಾಟ್ಸಪ್ ವರ್ಕ್ ಆಗುವುದಿಲ್ಲ ಎನ್ನಲಾಗಿದೆ.

ಈ ಕುರಿತು ಹಿಂದೆಯೇ ಎಚ್ಚರಿಕೆ ನೀಡಿದ್ದ ವಾಟ್ಸಪ್, ಹಳೆಯ ಸ್ಮಾರ್ಟ್‌ಪೋನುಗಳಲ್ಲಿ ಕಾರ್ಯಚರಣೆಯನ್ನು ನಿಲ್ಲಿಸುವುದಾಗಿ ತಿಳಿಸಿತ್ತು. ಒಂದು ತಮ್ಮ ಸ್ಮಾರ್ಟ್‌ಪೋನಿನ ಕಾರ್ಯಚರಣಾ ವ್ಯವಸ್ಥೆ ಅಂದರೆ ಆಂಡ್ರಾಯ್ಡ್, ಐಎಸ್ಓ, ವಿಂಡೋಸ್ ಸಾಫ್ಟ್‌ವೇರ್ ಗಳನ್ನು ಅಪ್ಡೇಟ್ ಮಾಡಿ ಇಲ್ಲವೇ ಹೊಸ ಪೋನುಗಳನ್ನು ಖರೀದಿಸಿ ಎಂದು ತನ್ನ ಗ್ರಾಹಕರಲ್ಲಿ ಮನವಿ ಮಾಡಿತ್ತು.

ಶೀಘ್ರವೇ ಹಳೆ ಪೋನುಗಳಲ್ಲಿ ವಾಟ್ಸಪ್ ಸ್ಥಗಿತಗೊಳ್ಳಲಿದೆ..!

ಶೀಘ್ರವೇ ಟ್ವೀಟ್ ಎಡಿಟ್ ಮಾಡುವ ಅವಕಾಶ?

ಈ ಹಿನ್ನಲೆಯಲ್ಲಿ ಸದ್ಯ ಆಂಡ್ರಾಯ್ಡ್ 2.2 ಸೇರಿದಂತೆ ಅದಕ್ಕಿಂತ ಕಳೆಗಿನ ವರ್ಷನ್ ನಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಪೋನುಗಳು, ಐಪೋನ್ 3GS ಮತ್ತು ಐಎಸ್ಓ 6 ಗಿಂತ ಕಳಗಿನ ವರ್ಷನ್ ಐಪೋನುಗಳು ಮತ್ತು ವಿಡೋಸ್ 7 ಬಳಸುತ್ತಿರುವ ವಿಂಡೋಸ್ ಪೋನುಗಳಲ್ಲಿ ವಾಟ್ಸಪ್ ಕಾರ್ಯಚರಣೆಯನ್ನು ನಿಲ್ಲಿಸಲಿದೆ.

ಫೇಸ್‌ಬುಕ್ ತೆಕ್ಕೆಗೆ ಸೇರಿದ ಮೇಲೆ ಸಾಕಷ್ಟು ಬದಲಾವಣೆ ಕಂಡಿರುವ ವಾಟ್ಸಪ್ ಹಳೆಯ ಮಾದರಿಯ ಪೋನುಗಳಿಗೆ ಆಪ್ಡೇಟ್ ನೀಡಲು ಕಷ್ಟ ಅನುಭವಿಸಿತ್ತು, ಹೊಸ ಮಾದರಿಯ ವೈಶಿಷ್ಟಗಳು ಹಳೆ ಪೋನಿನಲ್ಲಿ ಬಳಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಶೀಘ್ರವೇ ಹಳೆ ಪೋನುಗಳಲ್ಲಿ ವಾಟ್ಸಪ್ ಸ್ಥಗಿತಗೊಳ್ಳಲಿದೆ..!

ಭೀಮ್ ಆಪ್ ಬಳಸುವುದು ಹೇಗೆ..? ಯಾವ ಬ್ಯಾಂಕುಗಳು ಸಪೋರ್ಟ್ ಮಾಡುತ್ತವೆ..?

ಒಟ್ಟಿನಲ್ಲಿ ವಾಟ್ಸಪ್ ಬಳಕೆಯ ಚಟ ಹತ್ತಿಸಿಕೊಂಡ ಹಳೆಯ ಸ್ಮಾರ್ಟ್‌ಪೋನ್ ಬಳಕೆದಾದರು ಸದ್ಯ ಹೊಸ ಸ್ಮಾರ್ಟ್‌ಪೋನ್ ಗಳ ಕಡೆ ಮುಖ ಮಾಡಲೇ ಬೇಕಿದೆ.

Read more about:
English summary
Popular instant messaging app WhatsApp has stopped working in older smartphones to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot