ಐಫೋನ್‌ನಲ್ಲೂ ವಾಟ್ಸಾಪ್ ವೆಬ್!

By Shwetha
|

ಆಂಡ್ರಾಯ್ಡ್‌ಗಾಗಿ ವೆಬ್ ಬ್ರೌಸರ್ ಅನ್ನು ಲಾಂಚ್ ಮಾಡಿದ ಆರು ತಿಂಗಳ ನಂತರ ಜನಪ್ರಿಯ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಆಪಲ್‌ನ ಐಫೋನ್‌ಗೆ ಬೆಂಬಲವನ್ನು ಒದಗಿಸುತ್ತಿದೆ.

ಐಫೋನ್‌ನಲ್ಲೂ ವಾಟ್ಸಾಪ್ ವೆಬ್!

ಈ ಸೇವೆಯನ್ನು ಐಫೋನ್‌ನಲ್ಲಿ ಬಳಸಲು, ನೀವು ಸೆಟ್ಟಿಂಗ್ಸ್‌ಗೆ ಹೋಗಿ ವಾಟ್ಸಾಪ್ ವೆಬ್ ಆಯ್ಕೆಯನ್ನು ಸ್ಪರ್ಶಿಸಿದ ನಂತರ ಅಲ್ಲಿ ಕ್ಯುಆರ್ ಕೋಡ್ ಮೂಲಕ ಫೋನ್‌ಗೆ ಪೇರ್ ಮಾಡಬೇಕು. ಸಕ್ರಿಯ ಸೆಶನ್‌ಗಳನ್ನು ಪರದೆಯು ಪ್ರದರ್ಶಿಸಲಿದೆ ಮತ್ತು ಎಲ್ಲಾ ಕಂಪ್ಯೂಟರ್‌ಗಳಿಂದ ಬಳಕೆದಾರರು ಲಾಗ್ ಔಟ್ ಆಗಬಹುದು.

ಓದಿರಿ: ಅಪಘಾತಕ್ಕೆ ಅಂತ್ಯ ಹಾಡುವ ಸ್ಯಾಮ್‌ಸಂಗ್ ಸೇಫ್ಟಿ ಟ್ರಕ್

ಗೂಗಲ್ ಕ್ರೋಮ್‌ ಅಲ್ಲದೆಯೂ ಬ್ರೌಸರ್‌ಗಳಿಗೆ ವಾಟ್ಸಾಪ್ ಸೇವೆಯು ಇದೀಗ ಬೆಂಬಲವನ್ನು ಒದಗಿಸಲಿದೆ. ಎಲ್ಲಾ ಫೀಚರ್‌ಗಳು ಒಪೇರಾ ಮತ್ತು ಫೈರ್‌ಫಾಕ್ಸ್‌ನಲ್ಲಿ ಬೆಂಬಲವನ್ನು ಒದಗಿಸಲಿದ್ದು ಕೆಲವೊಂದು ಫೀಚರ್‌ಗಳು ಆಪಲ್‌ನ ಸಫಾರಿ ಬ್ರೌಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಆದರೆ ಫೋಟೋ ಸೆರೆಹಿಡಿಯುವಿಕೆ ಮತ್ತು ವಾಯ್ಸ್ ಮೆಸೇಜ್ ಸಫಾರಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಐಫೋನ್‌ನಲ್ಲೂ ವಾಟ್ಸಾಪ್ ವೆಬ್!

ಓದಿರಿ: ಉಪ್ಪಿ 2 ವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ: ಗೇಮ್

ಇನ್ನು ಸೇವೆಯು ಇದೀಗ ವಿಂಡೋಸ್ ಫೋನ್, ಬ್ಲ್ಯಾಕ್‌ಬೆರ್ರಿ 10, ನೋಕಿಯಾ ಎಸ್60 ಪ್ಲಾಟ್‌ಫಾರ್ಮ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

Best Mobiles in India

English summary
More than six months after launching a web browser-based mirroring interface for Android, popular instant messaging app WhatsApp has added support for Apple's iPhone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X