ನಿಮ್ಮ ಫೋನ್‌ ಬ್ಯಾಟರಿ ಪದೇ ಪದೇ ಖಾಲಿ ಆಗುತ್ತಿದೆಯಾ?..ತಪ್ಪದೆ ಈ ಕೆಲಸ ಮಾಡಿ!

|

ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಇದ್ದರೂ, ಕೆಲವೊಮ್ಮೆ ಫೋನ್‌ ಬ್ಯಾಟರಿ ಸರಿಯಾಗಿ ಬ್ಯಾಕ್‌ಅಪ್ ಬರಲ್ಲ. ಸರಿಯಾಗಿ ಬ್ಯಾಟರಿ ಬ್ಯಾಕ್‌ಅಪ್‌ ಬರದಿರುವುದಕ್ಕೆ ಕಾರಣಗಳು ಹಲವು. ಆದ್ರೆ ಬಳಕೆದಾರರು ಕೆಲವು ಅಗತ್ಯ ಕ್ರಮಗಳನ್ನು ಅನುಸರಿಸಿದರೆ, ಮೊಬೈಲ್‌ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಸುಧಾರಿಸಬಹುದು.

ಬ್ಯಾಟರಿನೇ

ಹೌದು, ಮೊಬೈಲ್‌ಗೆ ಬ್ಯಾಟರಿನೇ ಜೀವಾಳ ಆಗಿದ್ದು, ಸರಿಯಾಗಿ ಬ್ಯಾಟರಿ ಬ್ಯಾಕ್‌ಅಪ್‌ ಇಲ್ಲದರಿದ್ದರೆ ಫೋನ್‌ ಖಾಲಿ ಡಬ್ಬದಂತೆ. ಹೀಗಾಗಿ ಇಂದಿನ ಬ್ಯುಸಿ ಜೀವನ ಶೈಲಿಯಲ್ಲಿ ಫೋನಿನ ಬ್ಯಾಟರಿಯನ್ನು ಮತ್ತೆ ಮತ್ತೆ ಚಾರ್ಜ್ ಮಾಡಲು ಯಾರಿಗೂ ಸಮಯವಿಲ್ಲ. ಅದಕ್ಕಾಗಿ ಫೋನಿನ ಬ್ಯಾಟರಿಯನ್ನು ಆರೋಗ್ಯಕರ ಸ್ಥಿತಿಯಲ್ಲಿ ಇಡುವುದು ಉತ್ತಮ. ಫೋನ್‌ ಹಳೆಯದಾಗುತ್ತ ಹೋದಂತೆ ಫೋನ್ ತಡವಾಗಿ ಚಾರ್ಜ್ ಆಗುತ್ತದೆ ಅಥವಾ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ.

ಮುಖ್ಯವಾಗಿದೆ

ಅಂತಹ ಪರಿಸ್ಥಿತಿಯಲ್ಲಿ, ಫೋನಿನ ಬ್ಯಾಟರಿ ಬಳಕೆ ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಆದ್ದರಿಂದ ಬಳಕೆದಾರರು ನಿಮ್ಮ ಬ್ಯಾಟರಿ ಬಾಳಿಕೆಯನ್ನು ತಿಳಿಯಬಹುದು. ಹಾಗೂ ಕೆಲವು ಅಗತ್ಯ ಕ್ರಮಗಳನ್ನು ಅನುಸರಿಸುವ ಮೂಲಕ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಸುಧಾರಿಸಬಹುದು. ಹಾಗಾದರೆ ನಿಮ್ಮ ಫೋನಿನ ಬ್ಯಾಟರಿ ಬಳಕೆ ಆಗಿರುವ ಬಗ್ಗೆ ತಿಳಿಯುವುದು ಹೇಗೆ ಹಾಗೂ ಬ್ಯಾಟರಿ ಲೈಫ್ ಹೆಚ್ಚಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೋನಿನ ಬ್ಯಾಟರಿ ಬಳಕೆಯನ್ನು ಪರಿಶೀಲಿಸಿ:

ಫೋನಿನ ಬ್ಯಾಟರಿ ಬಳಕೆಯನ್ನು ಪರಿಶೀಲಿಸಿ:

* ನಿಮ್ಮ ಫೋನ್‌ನಲ್ಲಿನ ಪರದೆಯ ಸಮಯವನ್ನು ಅದು ಮೊದಲಿನಂತೆಯೇ ಇದ್ದರೆ ಅಥವಾ ಮಬ್ಬಾಗಿಸಿದ್ದರೆ ಅದನ್ನು ಪರಿಶೀಲಿಸಿ.
* ಇದನ್ನು ಮಾಡಲು, ಸೆಟ್ಟಿಂಗ್‌ಗಳಿಗೆ ಹೋಗಿ, ನಂತರ ಬ್ಯಾಟರಿ ಟ್ಯಾಪ್ ಮಾಡಿ, ನಂತರ ಬ್ಯಾಟರಿ ಬಳಕೆಯನ್ನು ಟ್ಯಾಪ್ ಮಾಡಿ, ನಂತರ ಪೂರ್ಣ ಸಾಧನದ ಬಳಕೆಯನ್ನು ವೀಕ್ಷಿಸಿ.
* ಕೆಲವು ಸಾಧನಗಳಲ್ಲಿ, ಮೇಲಿನ ಬಲಭಾಗದಲ್ಲಿ ಗಡಿಯಾರದ ಐಕಾನ್ ಅನ್ನು ನೀವು ನೋಡಬಹುದು. ಅದನ್ನು ಒತ್ತಿರಿ. ಈಗ ನೀವು ಗ್ರಾಫ್ ಅನ್ನು ನೋಡುತ್ತೀರಿ, ಅಲ್ಲಿ ನಿಮ್ಮ ಬ್ಯಾಟರಿ ಎಷ್ಟು ವೇಗವಾಗಿ ಬರಿದಾಗುತ್ತಿದೆ ಎಂಬುದನ್ನು ನೀವು ನೋಡಬಹುದು.

ಥರ್ಡ್‌ ಪಾರ್ಟಿ ಆಪ್‌ನೊಂದಿಗೆ ಸಹ ಪರಿಶೀಲಿಸಬಹುದು

ಥರ್ಡ್‌ ಪಾರ್ಟಿ ಆಪ್‌ನೊಂದಿಗೆ ಸಹ ಪರಿಶೀಲಿಸಬಹುದು

ಬ್ಯಾಟರಿ ಆರೋಗ್ಯದ ಉತ್ತಮ ಕಲ್ಪನೆಯನ್ನು ಪಡೆಯಲು, ನೀವು AccuBattery (ಆಕ್ಯೂಬ್ಯಾಟರಿ) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.
* ಗೂಗಲ್‌ ಪ್ಲೇ ಸ್ಟೋರ್‌ನಿಂದ ಆಕ್ಯೂಬ್ಯಾಟರಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
* ಅಪ್ಲಿಕೇಶನ್ ತೆರೆಯಿರಿ ಮತ್ತು ಅದಕ್ಕೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ನೀಡಿ. ಈಗ ನೀವು ಅಪ್ಲಿಕೇಶನ್‌ನಲ್ಲಿ ನಾಲ್ಕು ಟ್ಯಾಬ್‌ಗಳನ್ನು ನೋಡುತ್ತೀರಿ.
* ಡಿಸ್ಚಾರ್ಜ್ ಟ್ಯಾಬ್‌ನಲ್ಲಿ, ನೀವು ಬ್ಯಾಟರಿ ಡಿಸ್ಚಾರ್ಜ್ ಪ್ರಸ್ತುತ ದರ ಮತ್ತು ವಿವಿಧ ಬಳಕೆಯ ಅಂಕಿಅಂಶಗಳನ್ನು ನೋಡಬಹುದು.
* ಕೆಳಗಿನ ಬಾರ್‌ನಲ್ಲಿರುವ ಆರೋಗ್ಯ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಆರೋಗ್ಯ ಟ್ಯಾಬ್ ಅನ್ನು ಪ್ರವೇಶಿಸಿ.
* ಆಕ್ಯೂಬ್ಯಾಟರಿ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಲು ಸಾಕಷ್ಟು ಸಮಯವನ್ನು ಹೊಂದಿದ್ದರೆ, ಫಲಕವು ನಿಮ್ಮ ಉಳಿದಿರುವ ಬ್ಯಾಟರಿಯ ಆರೋಗ್ಯವನ್ನು ತೋರಿಸುತ್ತದೆ.
* ವಿನ್ಯಾಸ ಸಾಮರ್ಥ್ಯದ ಕ್ಷೇತ್ರವು ನಿಮ್ಮ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನು ತೋರಿಸುತ್ತದೆ.

ಸರಿಯಾಗಿ ಮೊಬೈಲ್‌ ಚಾರ್ಜ್ ಮಾಡಿ

ಸರಿಯಾಗಿ ಮೊಬೈಲ್‌ ಚಾರ್ಜ್ ಮಾಡಿ

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಬಹುತೇಕ ಬಳಕೆದಾರರು ಫೋನ್ ಬ್ಯಾಟರಿ ಪೂರ್ಣ 100% ಪರ್ಸೆಂಟ್ ಆಗುವವರೆಗೂ ಚಾರ್ಜ್ ತೆಗೆಯುವುದೇ ಇಲ್ಲ. ಇದು ಬ್ಯಾಟರಿ ಲೈಫ್ ದೃಷ್ಠಿಯಿಂದ ಉತ್ತಮ ನಿರ್ಧಾರವಲ್ಲ. ಸ್ಮಾರ್ಟ್‌ಫೋನ್ ಸಂಪೂರ್ಣ 100% ಚಾರ್ಜ್ ಮಾಡಲೇಬಾರದು. ಹೆಚ್ಚೆಂದರೇ ಶೇ.90 ಪರ್ಸೆಂಟ್ ದಾಟಿದ್ದರೇ ಚಾರ್ಜ್‌ ನಿಲ್ಲಿಸುವುದು ಬೆಸ್ಟ್‌. ಇದರಿಂದ ಬ್ಯಾಟರಿ ಲೈಫ್‌ಗೂ ಉತ್ತಮ.

ಲೈವ್ ವಾಲ್‌ಪೇಪರ್‌ಗಳು ಬ್ಯಾಟರಿ ಕಬಳಿಸುತ್ತವೆ

ಲೈವ್ ವಾಲ್‌ಪೇಪರ್‌ಗಳು ಬ್ಯಾಟರಿ ಕಬಳಿಸುತ್ತವೆ

ಲೈವ್ ವಾಲ್‌ಪೇಪರ್‌ಗಳು ಅಥವಾ ವಿಜೆಟ್‌ಗಳು ಬಳಕೆಯಲ್ಲಿದ್ದಾಗ ಅವುಗಳು ಹೆಚ್ಚಿನ ಆವರ್ತನದಲ್ಲಿ ಡಿಸ್‌ಪ್ಲೇ ಅನ್ನು ಅಪ್‌ಡೇಟ್ ಮಾಡಲು ಕಾರಣವಾಗುತ್ತವೆ, ಹೀಗಾಗಿ ಸುಗಮ ಹರಿವನ್ನು ಇರಿಸಿಕೊಳ್ಳಲು ಸಾಕಷ್ಟು ಬ್ಯಾಟರಿ ಅವಧಿಯನ್ನು ತೆಗೆದುಕೊಳ್ಳುತ್ತದೆ. ಹೆಚ್ಚಿನ ದರದಲ್ಲಿ ಸ್ಕ್ರೀನ್ ಅನ್ನು ರಿಫ್ರೆಶ್ ಮಾಡುವುದರ ಹೊರತಾಗಿ, ವಿಜೆಟ್‌ಗಳು ಮತ್ತು ಲೈವ್ ವಾಲ್‌ಪೇಪರ್‌ಗಳು ಫೋನ್‌ನ ಸಂಪನ್ಮೂಲಗಳನ್ನು ಬಳಸುತ್ತವೆ ಮತ್ತು ಇದು ಅಪ್‌ಡೇಟ್ ಆಗಿರಲು ಸಹಾಯ ಮಾಡುತ್ತದೆ, ಹೀಗಾಗಿ ಬ್ಯಾಟರಿಯಲ್ಲಿ ವೇಗವಾಗಿ ಕಬಳಿಸುತ್ತವೆ.

ಅಧಿಕ ಬ್ರೈಟ್ನೆಸ್‌ ಮಾಡದಿರುವುದು ಸೂಕ್ತ

ಅಧಿಕ ಬ್ರೈಟ್ನೆಸ್‌ ಮಾಡದಿರುವುದು ಸೂಕ್ತ

ಸ್ಮಾರ್ಟ್‌ಫೋನ್‌ನಲ್ಲಿ ಕೆಲವರು ಅಧಿಕ ಬ್ರೈಟ್ನೆಸ್‌ ನಲ್ಲಿ ಬಳಕೆ ಮಾಡುತ್ತಾರೆ ಇದರಿಂದ ಬ್ಯಾಟರಿ ಬಳಕೆ ಸಹ ಅಧಿಕವಾಗುತ್ತದೆ. ಆಟೋ ಬ್ರೈಟ್ನೆಸ್‌ ಆಯ್ಕೆ ಇಡುವುದು ಉತ್ತಮ. ಹಾಗೆಯೇ ವೈ ಫೈ ಬಳಕೆ ಮಾಡುವುದು ಸಹ ಬ್ಯಾಟರಿ ಕಬಳಿಸಲು ದಾರಿ ಮಾಡಿಕೊಟ್ಟಂತೆ ಆಗುತ್ತದೆ.

ಡಾರ್ಕ್ ಮೋಡ್ ಆಯ್ಕೆ ಮಾಡೋದು ಉತ್ತಮ

ಡಾರ್ಕ್ ಮೋಡ್ ಆಯ್ಕೆ ಮಾಡೋದು ಉತ್ತಮ

ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ಸಂರಕ್ಷಿಸಲು ಸಹಾಯ ಮಾಡಲು ಅನೇಕ ಅಪ್ಲಿಕೇಶನ್‌ಗಳು ಹೊಸದಾಗಿ ಡಾರ್ಕ್ ಮೋಡ್ ಅನ್ನು ಹೊರತಂದಿವೆ. ನಿಮ್ಮ ಡಿವೈಸ್‌ನಲ್ಲಿ ಡಾರ್ಕ್ ಥೀಮ್ ಅನ್ನು ಅನ್ವಯಿಸುವುದರಿಂದ ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಇತ್ಯಾದಿಗಳಂತಹ ವೈಶಿಷ್ಟ್ಯಗಳು ಲಭ್ಯವಿರುವ ಅಪ್ಲಿಕೇಶನ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡಿ.

ಬ್ಯಾಕ್‌ಗ್ರೌಂಡ್‌ ಅಪ್ಲಿಕೇಶನ್‌ ಕ್ಲೋಸ್ ಮಾಡಿರಿ

ಬ್ಯಾಕ್‌ಗ್ರೌಂಡ್‌ ಅಪ್ಲಿಕೇಶನ್‌ ಕ್ಲೋಸ್ ಮಾಡಿರಿ

ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆಪ್ಸ್‌ಗಳನ್ನು ಬಳಕೆ ಮಾಡಿ ಮಿನಿಮೈಸ್‌ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ನ ಆಗುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್‌ ರನ್ನ ಆಗುವ ಆಪ್ಸ್‌ಗಳಿಗೆ ಬ್ರೇಕ್‌ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

ಮೊಬೈಲ್‌ ಬ್ಯಾಟರಿ ಸಂಪೂರ್ಣ ಡ್ರೈ ಮಾಡಬೇಡಿ

ಮೊಬೈಲ್‌ ಬ್ಯಾಟರಿ ಸಂಪೂರ್ಣ ಡ್ರೈ ಮಾಡಬೇಡಿ

ಸ್ಮಾರ್ಟ್‌ಫೋನಿನ ಜೀವ ಒದಗಿಸುವ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಸ್ಮಾರ್ಟ್‌ಫೋನ್ ಬ್ಯಾಟರಿ ಕಡಿಮೆ ಇದ್ದಾಗ ಬಳಕೆ ಸಹ ಕಡಿಮೆ ಮಾಡುವುದು ಅತೀ ಉತ್ತಮ. ಸಂಪೂರ್ಣ ಖಾಲಿ ಆಗುವವರೆಗೂ ಫೋನ್ ಬಳಕೆ ಮಾಡುವುದನ್ನು ಮಾಡಲೇಬೇಡಿ. ಇದರಿಂದ ಬ್ಯಾಟರಿ ಲೈಫ್‌ ಹಾಳಾಗುವ ಸಾಧ್ಯತೆ ಅಧಿಕ. ಶೇ.20%ನಷ್ಟು ಇದ್ದಾಗ ಫೋನ್ ಚಾರ್ಜ್ ಮಾಡುವುದು ಲೇಸು.

Best Mobiles in India

English summary
Why Your Mobile Battery Drain Again and Again? Know The Reason.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X